• Home
  • »
  • News
  • »
  • jobs
  • »
  • NEP 2020ರ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ ಮಹತ್ವದ ಮಾಹಿತಿ ಇಲ್ಲಿದೆ

NEP 2020ರ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ ಮಹತ್ವದ ಮಾಹಿತಿ ಇಲ್ಲಿದೆ

ಧರ್ಮೇಂದ್ರ ಪ್ರಧಾನ್

ಧರ್ಮೇಂದ್ರ ಪ್ರಧಾನ್

NEP ಅನ್ನು ಎಲ್ಲರೂ ಖುಷಿಯಿಂದ ಸ್ವಾಗತಿಸಬೇಕು. ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಹೊಸ ಆಲೋಚನೆಗಳು ಮತ್ತು ಹೊಸ ವಿಧಾನಗಳ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಕೇಂದ್ರ ಸಿದ್ಧವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರಿಂದಲೂ ಅಗತ್ಯ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ನಾನು ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Karnataka, India
  • Share this:

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ಘೋಷಿಸಿದೆ. ಅದರ ಭಾಗವಾಗಿ, ಪ್ರಸ್ತುತ ನೈಜ ಪ್ರಪಂಚದ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಸ ಕೋರ್ಸ್‌ಗಳನ್ನು(Course) ಪರಿಚಯಿಸಲಾಗುತ್ತದೆ. ನಮ್ಯತೆ, ಕ್ರೆಡಿಟ್ ಪಾಯಿಂಟ್‌ಗಳು, ಮಲ್ಟಿಪಲ್ ಎಂಟ್ರಿ ಎಕ್ಸಿಟ್‌ಗಳು, ಡ್ಯುಯಲ್ ಡಿಗ್ರಿ (Degree) ಕೋರ್ಸ್‌ಗಳಂತಹ ಹೊಸ ವೈಶಿಷ್ಟ್ಯಗಳನ್ನು ಕೋರ್ಸ್‌ಗಳಲ್ಲಿ ಪರಿಚಯಿಸಲಾಗುತ್ತದೆ. ಯುಜಿಸಿ ಈಗಾಗಲೇ ಈ ವಿಷಯಗಳನ್ನು ಅಧ್ಯಯನ ಮಾಡುತ್ತಿದೆ ಎಂದು ಕೇಂದ್ರ ಶಿಕ್ಷಣ (Education) ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 


ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಷ್ಟ್ರೀಯ ಶಿಕ್ಷಣ ನೀತಿ (NEP)-2020 ಕುರಿತು ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಎನ್‌ಇಪಿ ಕೆಲವು ಪುಟಗಳ ದಾಖಲೆಯಲ್ಲ ಅದು ವಿದ್ಯಾರ್ಥಿಗಳ ಭವಿಷ್ಯ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹೊಸ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ಅವರು ಸೂಚಿಸಿದ್ದಾರೆ.


ಕಳೆದ ಶನಿವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ಅವಿನಾಶಿಲಿಂಗಂ ಇನ್ಸ್ಟಿಟ್ಯೂಟ್ ಫಾರ್ ಹೋಮ್ ಸೈನ್ಸ್ ಅಂಡ್ ಹೈಯರ್ ಎಜುಕೇಶನ್ ಫಾರ್ ವುಮೆನ್ ನ 34ನೇ ಪದವಿ ಪ್ರದಾನ ಸಮಾರಂಭದಲ್ಲಿ ಧರ್ಮೇಂದ್ರ ಪ್ರಧಾನ್ ಭಾಗವಹಿಸಿದ್ದರು. ಆಗ NEP ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Teaching Tricks: ಮಕ್ಕಳಿಗೆ ನೀವು ಈ ರೀತಿ ಪಾಠ ಮಾಡಿದ್ರೆ ತುಂಬಾ ಇಷ್ಟ ಆಗುತ್ತೆ


NEP ಅನ್ನು ಎಲ್ಲರೂ ಖುಷಿಯಿಂದ ಸ್ವಾಗತಿಸಬೇಕು. ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಹೊಸ ಆಲೋಚನೆಗಳು ಮತ್ತು ಹೊಸ ವಿಧಾನಗಳ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಕೇಂದ್ರ ಸಿದ್ಧವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರಿಂದಲೂ ಅಗತ್ಯ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ನಾನು ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.


ಧರ್ಮೇಂದ್ರ ಪ್ರಧಾನ್ ಮಾತನಾಡಿ, ಮಕ್ಕಳು ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದರೆ ಅವರ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಇನ್ನು ಮುಂದೆ ದೇಶದ ಶಿಕ್ಷಣವು ಉದ್ಯೋಗ, ಸಬಲೀಕರಣ ಮತ್ತು ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತದೆ. ಪ್ರತಿಯೊಬ್ಬರೂ ಮಾತೃಭಾಷೆಯನ್ನು ಕಲಿಯಬೇಕು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿರುವುದಾಗಿ ಮಾತನಾಡಿದ್ದಾರೆ.




ಚಿಕ್ಕ ವಯಸ್ಸಿನಲ್ಲಿ ಮಾತೃಭಾಷೆಯಲ್ಲಿ ಕಲಿಯಲು, ಓದಲು ಮತ್ತು ಬರೆಯಲು ಎನ್ಇಪಿ ಸಹಾಯ ಮಾಡುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು. ಈ ಶೈಕ್ಷಣಿಕ ವರ್ಷದಿಂದ ಎಲ್ಲಾ ಭಾರತೀಯ ಭಾಷೆಗಳಲ್ಲಿ ಪುಸ್ತಕಗಳನ್ನು ಮುದ್ರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಪ್ರಧಾನಮಂತ್ರಿ ಸೂಚಿಸಿದ್ದಾರೆ ಎಂದು ಅವರು ಹೇಳಿದರು.


ಕರ್ನಾಟಕದಲ್ಲಿ ಅಂಗನವಾಡಿಗಳಿಗೂ ಸಹ NEP ಜಾರಿಯಾಗಲಿದೆ


ಇವಿಷ್ಟು ಮಾಹಿತಿಯನ್ನು ಅವರು ತಮಿಳು ನಾಡಿನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಅಂಗನವಾಡಿಗಳಿಗೂ ಸಹ NEP ಜಾರಿಯಾಗಲಿದೆ ಎಂದು ಅಂಗನವಾಡಿ ಕಾರ್ಯರ್ತೆಯರ ಒತ್ತಾಯದ ಮೇಲೆ ಆಶ್ವಾಸನೆ ನೀಡಿದ್ದಾರೆ. 400 ಕೆಲವು ಆಯ್ದ ಶಾಲೆಗಳಲ್ಲಿ ಮಾತ್ರ ಮೊದಲಿಗೆ ಇದನ್ನು ಅಳವಡಿಸಲಾಗುತ್ತದೆ. ಪಠ್ಯಪುಸ್ತಕಗಳು ಈಗಾಗಲೇ ಸಿದ್ಧವಾಗಿವೆ ಅದರ ಪ್ರಕಾರ NEP ಚಟುವಟಿಕೆ ಆಧಾರಿತ ಕಲಿಕೆ ಮತ್ತು ನಿಯಮಿತ ಪಠ್ಯ ಕ್ರಮವನ್ನು ಆದಷ್ಟು ಬೇಗ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗಿದೆ.


400 ಆಯ್ದ ಶಾಲೆಗಳಲ್ಲಿ NEP


ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಲವಾರು ಹೊಸತನದೊಂದಿಗೆ ಜಾರಿಯಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಲ್ಲಿ ಸಾಂಸ್ಕೃತಿಕ ಚಡುವಟಿಕೆಗಳ ಜತೆಗೆ ದೈಹಿಕ ಶಿಕ್ಷಣ, ಡಿಜಿಟಲ್ ಮತ್ತು ಹಣಕಾಸು ಜಾಗೃತಿ ಕಲಿಕೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಡ್ಡಾಯಗೊಳಿಸಲಾಗಿದೆ

First published: