ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲೇ ಮುಂದಿನ ದಿನಗಳಲ್ಲಿ ಯಾವಾಗ ಫಲಿತಾಂಶ (Result) ಪ್ರಕಟವಾಗಬಹುದು ಎಂಬ ಮಾಹಿತಿ ಕೂಡಾ ಬಿಡುಗಡೆಯಾಗಿದೆ. ಆದಷ್ಟು ಬೇಗ ಫಲಿತಾಂಶ ಬಂದರೆ ವಿದ್ಯಾರ್ಥಿಗಳಿಗೇ ಒಳ್ಳೆಯದು. ಪಿಯುಸಿ ಪರೀಕ್ಷೆಯಲ್ಲಿ (Exam) ಉತ್ತೀರ್ಣರಾಗಲು ವಿದ್ಯಾರ್ಥಿಗಳು ಒಟ್ಟು ಶೇಕಡಾ 35 ಅಂಕಗಳನ್ನು ಗಳಿಸಬೇಕು. ವಿದ್ಯಾರ್ಥಿಗಳು ಭಾಷಾ ಪತ್ರಿಕೆಗಳಲ್ಲಿ ಕನಿಷ್ಠ 70 ಅಂಕಗಳನ್ನು ಗಳಿಸಬೇಕಾಗುತ್ತದೆ, ಆದರೆ ವೈಯಕ್ತಿಕ ವಿಷಯಗಳಲ್ಲಿ ತಲಾ 30 ಅಂಕಗಳನ್ನು (Marks) ಒಟ್ಟು 600 ಅಂಕಗಳಿಗೆ 210 ಅಂಕಗಳನ್ನು ಗಳಿಸಬೇಕು.
ಇಷ್ಟು ಅಂಕಗಳನ್ನು ಗಳಿಸಿದ್ದರೆ ನೀವು ಖಂಡಿತ ಪಾಸ್ ಆಗ್ತೀರಾ ಇನ್ನು ಎಷ್ಟೋ ಜನ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯಲು ಕಾತುರರಾಗಿರುತ್ತಾರೆ. ಹಿಂದಿನ ಸಾರಿ ತುಂಬಾ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಷ ಪೂರ್ತಿ ಶ್ರಮಪಟ್ಟು ಓದಿದ ವಿದ್ಯಾರ್ಥಿಗಳಿಗೆ ಫಲಿತಾಂಶ ಎನ್ನುವುದು ಒಂದು ಪ್ರಮುಖ ಹಂತವಾಗಿರುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಪಟ್ಟ ಅಷ್ಟೂ ಪರಿಶ್ರಮದ ಫಲಿತಾಂಶ ಸಿಗುತ್ತದೆ. ಮುಂದಿನ ಭವಿಷ್ಯದ ನಿರ್ಣಾಯಕ ಹಂತ ಇದಾಗಿರುತ್ತದೆ.
ಇದನ್ನೂ ಓದಿ: PUC Exam: ಕಾಪಿ ಮಾಡಲು ಹೋಗಿ ತಗ್ಲಾಕ್ಕೊಂಡ ವಿದ್ಯಾರ್ಥಿಗಳು; ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಬ್ಬರು ಡಿಬಾರ್!
ಈ ಬಾರಿ ಅಂದರೆ 2023ರ ದ್ವಿತೀಯ ಪಿಯುಸಿ ಫಲಿತಾಂಶ ಮೇ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಇನ್ನು ಕೆಲವು ಮಾಹಿತಿ ಪ್ರಕಾರ ಜೂನ್ ತಿಂಗಳು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಆದಷ್ಟು ಬೇಗ ಫಲಿತಾಂಶ ಪ್ರಕಟವಾಗುತ್ತದೆ. ಯಾಕೆಂದರೆ ಪದವಿ ಕಾಲೇಜುಗಳಿಗೆ ದಾಖಲಾತಿ ಪಡೆದುಕೊಳ್ಳಬೇಕಾದರೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ತುಂಬಾ ಮುಖ್ಯವಾಗಿರುತ್ತದೆ.
ಆ ಕಾರಣದಿಂದ ಆದಷ್ಟು ಬೇಗ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ. ಕಾತುರದಿಂದ ಕಾಯುತ್ತಿರುವ ವಿದ್ಯಾರ್ಥಿಗಳು ಇದೀಗ ತಾನೇ ಪರೀಕ್ಷೆ ಬರೆಯುತ್ತಿದ್ದಾರೆ. ಪ್ರತಿನಿತ್ಯ ತನಗೆಷ್ಟು ಅಂಕ ಬರಬಹುದು ಎಂದು ಎಣಿಸುತ್ತಾ ಕೂರುವುದೇ ಅವರ ಕಾಯಕ ಎಂಬಂತಾಗಿದೆ. ಆದ್ದರಿಂದ ಆದಷ್ಟು ಬೇಗ ನೀವು ಇದರ ನಿರೀಕ್ಷೆಯಲ್ಲಿರಬಹುದು.
ಮೋಸದಿಂದ ಪಾಸಾಗಲು ಪ್ರಯತ್ನ
ರಾಜ್ಯದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗೆ ಸರಿಯಾದ ರೀತಿಯಲ್ಲಿ ತಯಾರಿ ನಡೆಸಿ ಅಭ್ಯಾಸ ಮಾಡಿ ಪರೀಕ್ಷೆ ಬರೆಯುತ್ತಿದ್ದಾರೆ. ಅಂದುಕೊಂಡಷ್ಟು ಅಂಕ ಪಡೆಯಲು ಹರ ಸಾಹಸ ಪಡುತ್ತಿದ್ದಾರೆ. ಇದರ ನಡುವೆ ಇನ್ನೂ ಕೆಲವು ವಿದ್ಯಾರ್ಥಿಗಳು ಮೋಸದಿಂದ ಪಾಸಾಗಲು ಪ್ರಯತ್ನ ಪಟ್ಟ ಘಟನೆ ಜರುಗಿದೆ. ಅದೂ ಕೂಡ ಬೆಳಗಾವಿ ಹಾಗೂ ಯಾದಗಿರಿಯಲ್ಲಿ.
ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ
ಬೆಳಗಾವಿ ಹಾಗೂ ಯಾದಗಿರಿಯಲ್ಲಿ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಮಾರ್ಚ್ 9 ರಿಂದ 29 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, 1,109 ಪರೀಕ್ಷಾ ಕೇಂದ್ರಗಳಲ್ಲಿ 7,26,196 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನವೇ ಇಬ್ಬರು ಡಿಬಾರ್ ಆಗಿದ್ದಾರೆ.
ಪರೀಕ್ಷೆ ಎಂಬುದು ಭವಿಷ್ಯದ ಒಂದು ಪ್ರಮುಖ ಹಂತವಾಗಿರುತ್ತದೆ
ಪರೀಕ್ಷೆ ಎಂಬುದು ಭವಿಷ್ಯದ ಒಂದು ಪ್ರಮುಖ ಹಂತವಾಗಿರುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ನಿರ್ಧಾರವನ್ನು ತಾವೂ ಸ್ವತಃ ತೆಗೆದುಕೊಳ್ಳುವಷ್ಟು ಸಮರ್ಥರಾಗಿರುತ್ತಾರೆ. ಆದರೂ ಸಹ ಈ ರೀತಿ ವರ್ತನೆ ತೋರಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬುದೇ ಬೇಸರದ ಸಂಗತಿಯಾಗಿದೆ. ಈ ರೀತಿಯಾದರೆ ಫಲಿತಾಂಶ ಬರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ