• Home
  • »
  • News
  • »
  • jobs
  • »
  • Social Learning: ಇ-ಲರ್ನಿಂಗ್ ಗೊತ್ತು, ಇದೇನು ಸೋಶಿಯಲ್ ಲರ್ನಿಂಗ್? ಶಿಕ್ಷಣದಲ್ಲಿ ಇದರ ಮಹತ್ವವೇನು?

Social Learning: ಇ-ಲರ್ನಿಂಗ್ ಗೊತ್ತು, ಇದೇನು ಸೋಶಿಯಲ್ ಲರ್ನಿಂಗ್? ಶಿಕ್ಷಣದಲ್ಲಿ ಇದರ ಮಹತ್ವವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಜಿಟಲ್ ಕಲಿಕೆಯು ವಿದ್ಯಾರ್ಥಿಗಳಲ್ಲಿ ಕಲಿತ ವಿಷಯವನ್ನು 50% ದಷ್ಟು ಉಳಿಸಿಕೊಳ್ಳಲು ನೆರವಾಗಿದೆ ಎಂಬುದಾಗಿ ಡೇಟಾ (Data) ತಿಳಿಸಿದೆ. ಈಗ ಇದೇ ಸಾಲಿಗೆ ಸಾಮಾಜಿಕ ಕಲಿಕೆ (Social Learning) ಕೂಡ ಸೇರ್ಪಡೆಗೊಂಡಿದೆ.

  • Share this:



    ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಕಲಿಕೆ (digital learning) ಎಂಬುದು ಶೈಕ್ಷಣಿಕ ಕ್ಷೇತ್ರದಲ್ಲಿ (education) ಹೊಸ ಕ್ರಾಂತಿಯಾಗಿ ಮೂಡಿಬಂದಿದೆ. ವಿಶೇಷವಾಗಿ ಕೋವಿಡ್-19 (Covid 19) ಸಮಯದಲ್ಲಿ, ಇ-ಲರ್ನಿಂಗ್‌ನಲ್ಲಿ (E-Learning) ವಿಡಿಯೋ (Video) ಮತ್ತು ಆಡಿಯೋಗಳು (Audio) ಉತ್ತಮ ಕಲಿಕೆಯ ಅನುಭವವನ್ನು ಸೃಷ್ಟಿಸುವ ಅತ್ಯಂತ ಶಕ್ತಿಶಾಲಿ ವಿಧಾನಗಳು ಎಂದೆನಿಸಿವೆ. ಡಿಜಿಟಲ್ ಕಲಿಕೆಯು ವಿದ್ಯಾರ್ಥಿಗಳಲ್ಲಿ ಕಲಿತ ವಿಷಯವನ್ನು 50% ದಷ್ಟು ಉಳಿಸಿಕೊಳ್ಳಲು ನೆರವಾಗಿದೆ ಎಂಬುದಾಗಿ ಡೇಟಾ (Data) ತಿಳಿಸಿದೆ. ಈಗ ಇದೇ ಸಾಲಿಗೆ ಸಾಮಾಜಿಕ ಕಲಿಕೆ (Social Learning) ಕೂಡ ಸೇರ್ಪಡೆಗೊಂಡಿದೆ. ಈ ಸಾಮಾಜಿಕ ಕಲಿಕೆ ಎಂಬುದು ಡಿಜಿಟಲ್ ಯುಗದ ಇನ್ನೊಂದು ಅಂಶವಾಗಿದೆ ಹಾಗೂ ಶೈಕ್ಷಣಿಕ ವಲಯದಲ್ಲಿ ಹೊಸ ಮೈಲಿಗಲ್ಲು ಎಂಬ ಸಾಧನೆಯನ್ನು ಸೃಷ್ಟಿಸಿದೆ. ವೀಕ್ಷಣೆ, ಅನುಕರಣೆ ಹಾಗೂ ಮಾಡೆಲ್‌ಗಳನ್ನು ಅನುಸರಿಸಿರುವ ಶಿಕ್ಷಣ ಪದ್ಧತಿ ಎಂಬುದು ಸಾಮಾಜಿಕ ಕಲಿಕೆಯ ಸಿದ್ಧಾಂತವನ್ನು ಆಧರಿಸಿದೆ. ಅಸೋಸಿಯೇಷನ್ ಫಾರ್ ಟ್ಯಾಲೆಂಟ್ ಡೆವಲಪ್‌ಮೆಂಟ್ ಪ್ರಕಾರ-ವಿಶ್ವದ ಅತಿದೊಡ್ಡ ಪ್ರತಿಭೆ ಅಭಿವೃದ್ಧಿಯಾದ ಸಂಘ-ಸಾಮಾಜಿಕ ಕಲಿಕೆಯ ವಿಧಾನಗಳು ವೆಬ್ ಆಧಾರಿತ ತರಬೇತಿಯ ಮೇಲೆ 75:1 ROI ಅನುಪಾತವನ್ನು ಹೊಂದಿವೆ ಎಂದು ತಿಳಿಸಿದೆ.


    ಸಾಮಾಜಿಕ ಕಲಿಕೆ ಹೇಗೆ ಕೆಲಸ ಮಾಡುತ್ತದೆ?


    ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಾಗ ಇತರರು ಅದರೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತಾರೆ ಹಾಗೆಯೇ ಸಾಮಾಜಿಕ ಕಲಿಕೆಯೂ ಅದೇ ರೀತಿ ಕೆಲಸ ಮಾಡುತ್ತದೆ. ಯಾವುದೇ ಒಂದು ಮಾಹಿತಿಯನ್ನು ಸಂದರ್ಭ ಹಾಗೂ ಭಾವನೆಗಳೊಂದಿಗೆ ಮಿಶ್ರಮಾಡಿ ಕಲಿತಾಗ ಅದು ಇನ್ನಷ್ಟು ಹೆಚ್ಚು ನೆನಪಿನಲ್ಲಿಳಿಯುತ್ತದೆ ಹೀಗೆ ಸಾಮಾಜಿಕ ಕಲಿಕೆ ಕಾರ್ಯರೂಪಕ್ಕೆ ಬರುತ್ತದೆ.


    ಇದು ಡಿಜಿಟಲ್ ಕಲಿಕೆಗೆ ಪೂರಕ


    ಡಿಜಿಟಲ್ ಕಲಿಕೆಯು ಕಲಿಕೆಗೆ ಅಗತ್ಯವಿರುವ ಇನ್ನಷ್ಟು ಚುರುಕಾದ ವಿಧಾನಗಳನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಕಲಿಕೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮೈಕ್ರೊಲರ್ನಿಂಗ್ ಅನ್ನು ಸಕ್ರಿಯಗೊಳಿಸಲಾಗಿದೆ. ಇದು ಮಾಹಿತಿ ಹಂಚಿಕೊಳ್ಳುವ ಹಾಗೂ ತದನಂತರ ಚರ್ಚಿಸಬಹುದಾದ ಸಣ್ಣ ವಿಡಿಯೋಗಳನ್ನು ಒಳಗೊಂಡಿರುತ್ತದೆ. ಮೊಬೈಲ್‌ಗಳಲ್ಲಿ ಈ ವಿಡಿಯೋಗಳನ್ನು ಸೇರಿಸುವುದು ಕಲಿಯುವುದನ್ನು ಇನ್ನಷ್ಟು ಸರಳಗೊಳಿಸುತ್ತದೆ.


    ಇದನ್ನೂ ಓದಿ: School Timings: ಶಾಲಾ ಸಮಯ ಬೆಳಗ್ಗೆ 10 ರಿಂದ 12.30ಕ್ಕೆ ಬದಲಾಗಲಿ- ಡಾ.ಸಿ.ಎನ್.ಮಂಜುನಾಥ್


    ಸಾಮಾಜಿಕ ಕಲಿಕೆಯ ತಂತ್ರಗಳು


    ಸಾಮಾಜಿಕ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ಉತ್ಪಾದಕವನ್ನಾಗಿಸಲು ಬೋಧನೆ, ಪ್ರಸ್ತುತಿಗಳು, ಪ್ರಶ್ನೋತ್ತರ ಅವಧಿಗಳು ಮತ್ತು ಗುಂಪು ಮತ್ತು ಪ್ಯಾನಲ್ ಚರ್ಚೆಗಳ ವಿಧಾನಗಳನ್ನು ಬಳಸಬಹುದಾಗಿದೆ.


    ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಪ್ರಯೋಗ


    HBX, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಸಾಮಾಜಿಕ ಕಲಿಕಾ ಅಂಶಗಳನ್ನು ಅಳವಡಿಸಿಕೊಂಡಿದೆ. ಕಲಿಕೆಯ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಸಕ್ರಿಯ ಕಲಿಕೆಯ ಮೂಲಕ ಈ ಶಾಲೆಯು ಕೋರ್ಸ್ ಪೂರ್ಣಗೊಳಿಸುವ ಪ್ರಮಾಣದಲ್ಲಿ 85% ಏರಿಕೆಯನ್ನು ಕಂಡಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದರು ಹಾಗೂ ಕೋರ್ಸ್ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಹೀಗೆ ಸಕ್ರಿಯ ಕಲಿಕೆಯನ್ನು ಸಾಮಾಜಿಕ ಕಲಿಕೆಯಲ್ಲಿ ತೊಡಗಿಸುವ ಮೂಲಕ ಶಾಲೆಯು ಉನ್ನತ ಅಂಕಗಳನ್ನು ಗಳಿಸಿಕೊಂಡಿದೆ.


    ಸಾಮಾಜಿಕ ಕಲಿಕೆಯು ವಿದ್ಯಾರ್ಥಿಗಳಲ್ಲಿರುವ ಕ್ಷೀಣತೆಯನ್ನು ತಡೆಗಟ್ಟುತ್ತದೆ. ಡಿಜಿಟಲೀಕರಣದ ಭಾಗವಾಗಿರುವ ಸಾಮಾಜಿಕ ಕಲಿಕೆಯು ವಿದ್ಯಾರ್ಥಿಗಳಲ್ಲಿರುವ ಆಂತರಿಕ ಖಿನ್ನತೆಯನ್ನು ನಿವಾರಿಸುತ್ತದೆ. ಇಂತಹ ಕಲಿಕೆಯಲ್ಲಿ ಗಮನಿಸುವಿಕೆ, ಅನುಕರಣೆ ಹಾಗೂ ಮಾಡೆಲ್‌ಗಳನ್ನು ನಿರ್ವಹಿಸುವುದು ಇವು ಮೂರು ಮುಖ್ಯ ಪದ್ಧತಿಗಳಾಗಿವೆ.


    ಸ್ಟಾರ್ಟಪ್‌ಗಳಿಂದ ಸಾಮಾಜಿಕ ಕಲಿಕೆಯ ಆರಂಭ


    ಲಂಡನ್ ಮೂಲದ ಎಜ್ಯುಟೆಕ್ ಸ್ಟಾರ್ಟ್-ಅಪ್ ಕೂಲ್‌ಸ್ಟೋರೀಸ್ ವೀಡಿಯೊ/ಆಡಿಯೋ ಕಲಿಕೆಯ ತುಣುಕುಗಳು, ಮೈಕ್ರೋ-ಕೋರ್ಸ್‌ಗಳು, ಇ-ಲರ್ನಿಂಗ್ ಮತ್ತು ಸಾಮಾಜಿಕ ಅನುಭವಗಳನ್ನು ವಿಲೀನಗೊಳಿಸುವ ಮೂಲಕ ಸಾಮಾಜಿಕ ಕಲಿಕೆಯ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. 30 ಜಾಗತಿಕ ಸಮುದಾಯ ಹಬ್ ಅನ್ನು ಸಂಸ್ಥೆ ರಚಿಸಿದ್ದು ಸಮರ್ಥವಾಗಿ ಕಲಿಯುವವರು ಹಾಗೂ ಪ್ರತಿಭಾವಂತರ ನಡುವೆ ಸಂವಹನ ನಡೆಸಲು ವೇದಿಕೆ ಕಲ್ಪಿಸಿದೆ.


    ಇದನ್ನೂ ಓದಿ: Karnataka: ವಿದ್ಯಾರ್ಥಿಗಳೇ ಗಮನಿಸಿ- UG, PG ಪರೀಕ್ಷಾ ಕ್ರಮದಲ್ಲಿ ಮಹತ್ತರ ಬದಲಾವಣೆ


    ಜೋಶ್ ಟಾಕ್ಸ್ ಕೂಡ UPSC ಗಾಗಿ ತಯಾರಿ ನಡೆಸುತ್ತಿರುವ ಜನರಿಗೆ ಅಥವಾ ಚಾಟ್ ಮೂಲಕ ಪರಸ್ಪರ ಸಂಪರ್ಕಿಸಲು, ಪರಸ್ಪರ ಕರೆ ಮಾಡಲು ಮತ್ತು ಸಂಪರ್ಕಗಳನ್ನು ಹೆಚ್ಚುಗೊಳಿಸಲು, ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಸಮುದಾಯಗಳು ಹಾಗೂ ನಿಕಟ ಗುಂಪುಗಳು, ಚಾಟ್‌ಗಳು ಕೂಡ ಇವೆ. ಹೀಗೆ ಸಾಮಾಜಿಕ ಕಲಿಕೆ ಒಂದು ಸರಪಳಿಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.


    Published by:Annappa Achari
    First published: