• Home
  • »
  • News
  • »
  • jobs
  • »
  • Moral Education: ಪಠ್ಯ ಪುಸ್ತಕದಲ್ಲಿ ನೈತಿಕ ಶಿಕ್ಷಣ ಅಳವಡಿಕೆ; ಸರ್ಕಾರದಿಂದ ಮಹತ್ವದ ಸಭೆ

Moral Education: ಪಠ್ಯ ಪುಸ್ತಕದಲ್ಲಿ ನೈತಿಕ ಶಿಕ್ಷಣ ಅಳವಡಿಕೆ; ಸರ್ಕಾರದಿಂದ ಮಹತ್ವದ ಸಭೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾದಕ ವಸ್ತು ಈಗ ಪಕ್ಕದ ರಾಜ್ಯಗಳಲ್ಲಿ ದೊಡ್ಡ ಸಮಸ್ಯೆ ಆಗಿದೆ. ನಮ್ಮ ರಾಜ್ಯದಲ್ಲಿ ಈಗ ಅಷ್ಟೊಂದು ಸಮಸ್ಯೆ ಇಲ್ಲವಾದರೂ ಸಿಲಿಕಾನ್ ಸಿಟಿಯಂತಹ ದೊಡ್ಡ ನಗರದಲ್ಲಿ ಈ ತರಹ ಸಮಸ್ಯೆ ಉದ್ಭವ ಆಗುತ್ತಿದೆ. ಇಂತಹ ದುಶ್ಚಟಗಳಿಗೆ ಶಿಕ್ಷಕರು ಬ್ರೇಕ್ ಹಾಕಬೇಕು ಎಂದು ಹೇಳುತ್ತಾ ಹೊಸ ಶಿಕ್ಷಣ ವ್ಯವಸ್ಥೆ ತುಂಬಾ ಒಳ್ಳೆಯದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮುಂದೆ ಓದಿ ...
  • Share this:

ಅತೀ ಮುಖ್ಯವಾದ ಹೆಜ್ಜೆ ನಮ್ಮ ರಾಜ್ಯ ಸರ್ಕಾರ ಕೈ ಗೊಂಡಿದೆ. ಶಿಕ್ಷಕರಿಗೆ (Teachers) ವ್ಯಕ್ತಿತ್ವ ನಿರ್ಮಾಣ ಮಾಡೋಕೆ ಅವಕಾಶ ಕಲ್ಪಿಸಬೇಕು. ಜರ್ಮನಿಯಲ್ಲಿ ಇಡೀ ದೇಶದಲ್ಲಿ 40 ಪರ್ಸೆಂಟ್ ಸ್ಕೂಲ್ ಟೀಚರ್ ಖಿನ್ನತೆಗೆ ಒಳಗಾಗಿದ್ದಾರೆ. ಇಡೀ ಪ್ರಪಂಚದಲ್ಲಿ ಶೈಕ್ಷಣಿಕ  ಪದ್ಧತಿಯಲ್ಲಿ (Education System) ಬದಲಾವಣೆ ಅವಶ್ಯಕತೆ ಇದೆ ಎಂದು ರವಿ ಶಂಕರ್ ಗುರೂಜಿ ಹೇಳಿದ್ದಾರೆ. ಈ ಸಮಯದಲ್ಲಿ ನಾವು ನೈತಿಕ ಶಿಕ್ಷಣ ಅಳವಡಿಕೆ ಮಾಡಲು ಹೊರಟಿರೋದು ಹೆಮ್ಮೆಯ ವಿಚಾರ ಈ ಸಂದರ್ಭದಲ್ಲಿ ನಾವು ಶಿಕ್ಷಕರ ತರಬೇತಿ (Training) ಹೆಚ್ಚಿಸಬೇಕು ಎಂದು ಅವರು ಹೇಳಿದ್ದಾರೆ.


ಮಕ್ಕಳ ಜೊತೆಗೆ ಹೇಗೆ ಆತ್ಮೀಯತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸುವ ಪ್ರಯತ್ನ ಮಾಡಬೇಕು. ಇಂಟರ್ನೆಟ್ ಸೋಷಿಯಲ್ ಮೀಡಿಯಾ ಮೂಲಕ ಮಕ್ಕಳು ಬೇಡದ ವಿಚಾರ ಕಲಿತಾರೆ ಅದನ್ನು ತಪ್ಪಿಸಬೇಕು ಮತ್ತು ಮಕ್ಕಳನ್ನು ಹೇಗೆ ಉತ್ತಮವಾಗಿ ಶೈಕ್ಷಣಿಕ ಸಾಧನೆ ಮಾಡುವಂತೆ ನೋಡಿಕೊಳ್ಳುವುದು ಎಂದು ಅವರು ಹೇಳಿದ್ದಾರೆ. ಮೊಬೈಲ್​ ಶಿಕ್ಷಣದಿಂದ ಬೇಡದ ವಿಚಾರಗಳನ್ನು ಕಲಿಯುವುದನ್ನು ತಪ್ಪಿಸಬೇಕು.


ಮಾದಕ ವಸ್ತು ಈಗ ಪಕ್ಕದ ರಾಜ್ಯಗಳಲ್ಲಿ ದೊಡ್ಡ ಸಮಸ್ಯೆ ಆಗಿದೆ. ನಮ್ಮ ರಾಜ್ಯದಲ್ಲಿ ಈಗ ಅಷ್ಟೊಂದು ಸಮಸ್ಯೆ ಇಲ್ಲವಾದರೂ ಸಿಲಿಕಾನ್ ಸಿಟಿಯಂತಹ ದೊಡ್ಡ ನಗರದಲ್ಲಿ ಈ ತರಹ ಸಮಸ್ಯೆ ಉದ್ಭವ ಆಗುತ್ತಿದೆ. ಇಂತಹ ದುಶ್ಚಟಗಳಿಗೆ ಶಿಕ್ಷಕರು ಬ್ರೇಕ್ ಹಾಕಬೇಕು ಎಂದು ಹೇಳುತ್ತಾ ಹೊಸ ಶಿಕ್ಷಣ ವ್ಯವಸ್ಥೆ ತುಂಬಾ ಒಳ್ಳೆಯದಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Punjab: ಟಾಪ್ ಸ್ಕೋರ್ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ವಿಮಾನ ಪ್ರಯಾಣ!


ಶಿಕ್ಷಕರ ಪ್ರಶಿಕ್ಷಣ ಜೊತೆಗೆ ಪೋಷಕರ ಜೊತೆಗೂ ಸೆಮಿನಾರ್ ಅವಶ್ಯಕವಾಗಿರುತ್ತದೆ. ಪೋಷಕರಿಗೂ ಕೂಡಾ ಮಗುವಿನಲ್ಲಿ ನೈತಿಕತೆ ತುಂಬಲು ಸಲಹೆ ಕೊಡಬೇಕು. ಪೋಷಕರಿಂದ ಮಕ್ಕಳು ಪ್ರಭಾವಿತರಾಗುತ್ತಾರೆ. ಆ ಕಾರಣದಿಂದ ಪ್ರತಿಯೊಬ್ಬ ಪಾಲಕರೂ ಸಹ ತಮ್ಮ ಮಕ್ಕಳ ವಿಚಾರದಲ್ಲಿ ತುಂಬಾ ಜವಾಬ್ಧಾರಿಯುತವಾಗಿ ನೆಡೆದುಕೊಳ್ಳುವ ಅವಶ್ಯಕಥೆ ಎಂದು ಹೇಳಿದ್ದಾರೆ.


  ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಕ್ಷ ಕಸ್ತೂರಿ ರಂಗನ್ ಹೇಳಿಕೆ


ಇಂದು ಜರುಗಿದ ನೈತಿಕ ಶಿಕ್ಷಣ ಸಭೆಯಲ್ಲಿ ಹಲವಾರು ಜನರು ಹೊಸ ಶಿಕ್ಷಣ ನೀತಿಯನ್ನು ಮೆಚ್ಚಿಕೊಂಡಿದ್ದಾರೆ.  ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಕ್ಷ ಕಸ್ತೂರಿ ರಂಗನ್ ಹೇಳಿಕೆ
ರಾಜ್ಯದಲ್ಲಿ NEP ಜಾರಿಯಲ್ಲಿ ಶಿಕ್ಷಣ ಸಚಿವರ ಪಾತ್ರದ ಬಗ್ಗೆ ಶ್ಲಾಘಿಸಿದ ಕಸ್ತೂರಿ ರಂಗನ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಬಿಸಿ ನಾಗೇಶ್ ಶ್ರಮದ ಬಗ್ಗೆ ಹೊಗಳಿದ್ದಾರೆ. ಒಬ್ಬ ಗುರು ಯಾವ ರೀತಿ ಪ್ರಮುಖ ಪಾತ್ರ ವಹಿಸುತ್ತಾರೆ ಅಂತ ವಿವರಣೆ ನೀಡಿದ್ದಾರೆ. ಸರ್ವ ಧರ್ಮದ ಮುಖಂಡರು ಸಮಾಜದ ಅಭಿವೃದ್ಧಿಗೆ ಸಹಾಯಕ, ದೇಶದ ಸಂಸ್ಕೃತಿಗೆ ಗುರುಗಳ ಪಾತ್ರ ಪ್ರಧಾನವಾಗಿರುತ್ತದೆ ಎಂದು ಹೇಳಿದ್ದಾರೆ.


ಫಾದರ್ ಫ್ರಾನ್ಸಿನ್ ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಇವತ್ತು ನೈತಿಕ ಶಿಕ್ಷಣ ಅವಶ್ಯಕತೆ ಇದೆ. NEP ಉತ್ತಮವಾಗಿ ಇದೆ. ಅದನ್ನ ಇಟ್ಟುಕೊಂಡು ನೈತಿಕ ಶಿಕ್ಷಣ ಜಾರಿ ಮಾಡಿ. ಒಂದು ಅಂಕ ಕಡಿಮೆ ಸಿಕ್ರೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಇದು ಅವರ ಮನಸ್ಥಿತಿ ತಿಳಿಸುತ್ತೆ. ಇದಕ್ಕಾಗಿ ನೈತಿಕ ಶಿಕ್ಷಣ ಅವಶ್ಯಕತೆ ಇದೆ. ಧರ್ಮಾತೀತವಾದ ಮೌಲ್ಯಗಳನ್ನು ಕಲಿಸೋದು ಇವತ್ತು ಮುಖ್ಯ ಆಗಿದೆ. ಪ್ರೀತಿ, ವಿಶ್ವಾಸ, ನಂಬಿಕೆ, ಬ್ರಾತೃತ್ವದ ಬಗ್ಗೆ ಕಲಿಸಬೇಕಾಗಿದೆ. ಪಠ್ಯ ಕ್ರಮದಲ್ಲಿ ನೈತಿಕ ಶಿಕ್ಷಣ ಅಳವಡಿಕೆ ಮಾಡಬೇಕು.ಇದಕ್ಕಾಗಿ ವಿಶೇಷ ಸಮಿತಿ ರಚನೆ ಮಾಡಿ ಶಿಕ್ಷಣ ತಜ್ಞರ ರನ್ನು ಸಮಿತಿಯಲ್ಲಿ ಸೇರಿಸಬೇಕು. ಬಿಎಡ್ ಶಿಕ್ಷಣ ದಲ್ಲಿ ನೈತಿಕ ಶಿಕ್ಷಣ ಜಾರಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

First published: