• ಹೋಂ
  • »
  • ನ್ಯೂಸ್
  • »
  • Jobs
  • »
  • IIT Madras: ಐಐಟಿಎಂ ಟೆಕ್ನೋ ಸೆಂಟ್ರಲ್ ಕಾರ್ಯಕ್ರಮಕ್ಕೆ ಅದ್ದೂರಿ ಯಶಸ್ಸು, 2,500 ವಿದ್ಯಾರ್ಥಿಗಳ ನೋಂದಣಿ

IIT Madras: ಐಐಟಿಎಂ ಟೆಕ್ನೋ ಸೆಂಟ್ರಲ್ ಕಾರ್ಯಕ್ರಮಕ್ಕೆ ಅದ್ದೂರಿ ಯಶಸ್ಸು, 2,500 ವಿದ್ಯಾರ್ಥಿಗಳ ನೋಂದಣಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

HackerKID, DIYA Labs, Time2Chess ನಂತಹ ಪ್ಲಾಟ್‌ಫಾರ್ಮ್‌ಗಳು ಈ ಮೆಗಾ ಈವೆಂಟ್‌ಗೆ ಬೆಂಬಲವನ್ನು ಒದಗಿಸಿವೆ. ಆನ್‌ಲೈನ್ ಕೋಡಿಂಗ್ ಗೇಮ್​ಗಳ ಮೂಲಕ, ರೋಬೋಟಿಕ್ ಪ್ರಾಜೆಕ್ಟ್‌ಗಳು, ಚೆಸ್, ಇತ್ಯಾದಿಗಳ ಮೂಲಕ, ಈ ಸಂಸ್ಥೆಗಳು ಮಕ್ಕಳಿಗೆ ಸಮಸ್ಯೆ-ಪರಿಹರಿಸುವುದು, ಸೃಜನಶೀಲತೆ ಮತ್ತು ನಾವೀನ್ಯತೆಗಳಂತಹ ಪ್ರಮುಖ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

ಐಐಟಿ ಮದ್ರಾಸ್ ದೇಶದ (Nation) ಉನ್ನತ ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ಸ್ಟಿಟ್ಯೂಟ್ನ ರಿಸರ್ಚ್ ಪಾರ್ಕ್ ಇತ್ತೀಚೆಗೆ ಟೆಕ್ನೋ ಸೆಂಟ್ರಲ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಮೆಗಾ ಈವೆಂಟ್ ಮೂಲಕ ಮಕ್ಕಳಿಗಾಗಿ ಆರು ಗೇಮಿಫೈಡ್ ಕಲಿಕಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೈಥಾನ್ ಕೋಡಿಂಗ್, ರೋಬೋಟಿಕ್ಸ್ (Robotics), ಚೆಸ್, ಕ್ವಿಜ್, ಪೋಸ್ಟರ್ ಮೇಕಿಂಗ್ ಮತ್ತು ಸ್ಪೀಚ್ ಮುಂತಾದ ಆರು ವಿಷಯಗಳ ಮೇಲೆ ಸ್ಪರ್ಧೆಗಳನ್ನು ಮುಖ್ಯವಾಗಿ ಆಯೋಜಿಸಲಾಗಿತ್ತು. ಐಐಟಿ ಮದ್ರಾಸ್ (IIT Madras) ರಿಸರ್ಚ್ ಪಾರ್ಕ್, ಇನ್ಕ್ಯುಬೇಷನ್ (Incubation) ಸೆಲ್ ಅಧ್ಯಕ್ಷ ಡಾ ಅಶೋಕ್ ಜುಂಜುನ್ವಾಲಾ ಮತ್ತು ಬಿಎನ್ಐ ಚೆನ್ನೈ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಸೇಥಿಯಾ ಸ್ಪರ್ಧೆಗಳನ್ನು ಉದ್ಘಾಟಿಸಿದ್ದರು.


HackerKID, DIYA Labs, Time2Chess ನಂತಹ ಪ್ಲಾಟ್‌ಫಾರ್ಮ್‌ಗಳು ಈ ಮೆಗಾ ಈವೆಂಟ್‌ಗೆ ಬೆಂಬಲವನ್ನು ಒದಗಿಸಿವೆ. ಆನ್‌ಲೈನ್ ಕೋಡಿಂಗ್ ಗೇಮ್​ಗಳ ಮೂಲಕ, ರೋಬೋಟಿಕ್ ಪ್ರಾಜೆಕ್ಟ್‌ಗಳು, ಚೆಸ್, ಇತ್ಯಾದಿಗಳ ಮೂಲಕ, ಈ ಸಂಸ್ಥೆಗಳು ಮಕ್ಕಳಿಗೆ ಸಮಸ್ಯೆ-ಪರಿಹರಿಸುವುದು, ಸೃಜನಶೀಲತೆ ಮತ್ತು ನಾವೀನ್ಯತೆಗಳಂತಹ ಪ್ರಮುಖ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ.


* ಪ್ರಾದೇಶಿಕ ಭಾಷೆಗಳಲ್ಲಿ ಕೋಡಿಂಗ್ ತರಗತಿಗಳು


ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್‌ನ ಇನ್‌ಕ್ಯುಬೇಷನ್ ಸೆಲ್ ಅಧ್ಯಕ್ಷ ಡಾ.ಅಶೋಕ್ ಜುಂಜುನ್‌ವಾಲಾ ಮಾತನಾಡಿ, ಮಕ್ಕಳು ಕೋಡಿಂಗ್ ಕಲಿಯುವುದು, ರೋಬೋಟ್ ಪ್ರಾಜೆಕ್ಟ್‌ಗಳನ್ನು ತಯಾರಿಸುವುದು ಮತ್ತು ಚೆಸ್ ಗೆಲ್ಲುವಂತಹ ಚಟುವಟಿಕೆಗಳನ್ನು ಆನಂದಿಸುತ್ತಾರೆ. GUVI ಯಲ್ಲಿನ ಕೋರ್ಸ್​​ಗಳಲ್ಲಿ ಈ ಗೇಮ್​ ಹೆಚ್ಚು ಆಕರ್ಷಿಸಿತು ಎಂದು ಅವರು ಹೇಳಿದ್ದಾರೆ. ಮಕ್ಕಳಿಗೆ ಪ್ರೋಗ್ರಾಮಿಂಗ್ ಮತ್ತು ಭಾಷೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು GUVI ಪ್ರಾದೇಶಿಕ ಭಾಷೆಗಳಲ್ಲಿ ಕೋಡಿಂಗ್ ತರಗತಿಗಳನ್ನು ತಂದಿದೆ ಎಂದು ಅವರು ಹೇಳಿದರು. ದೇಶದ ಮೊದಲ ಗೇಮಿಫೈಡ್ ಕೋಡಿಂಗ್ ಇದಾಗಿತ್ತು.


ಪೈಥಾನ್ ಕೋಡಿಂಗ್ ಸ್ಪರ್ಧೆ ಆಯೋಜನೆ


ಪೈಥಾನ್ ಕೋಡಿಂಗ್ ಸ್ಪರ್ಧೆಯನ್ನು HackerKID ವೆಬ್‌ಸೈಟ್ ಬೆಂಬಲಿಸುತ್ತದೆ. ಇದು GUVI ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. GUVI ಒಂದು IIT ಮದ್ರಾಸ್-IIM ಅಹಮದಾಬಾದ್ ಇನ್ಕ್ಯುಬೇಟರ್ EdTech ಕಂಪನಿಯಾಗಿದೆ. HackerKID ಭಾರತದ ಮೊದಲ ಗೇಮಿಫೈಡ್ ಕೋಡಿಂಗ್ ಮತ್ತು ಮಕ್ಕಳಿಗಾಗಿ ಕಲಿಕೆಯ ವಾತಾವರಣವಾಗಿದೆ. ಈ ಬಗ್ಗೆ ಅಲ್ಲಿ ಮಾಹಿತಿ ಹಂಚಿಕೆ ಮಾಡಿಕೊಳ್ಳಲಾಗಿತ್ತು.


ಇದನ್ನೂ ಓದಿ: Half Day School: ಮಾರ್ಚ್​​ 15ರಿಂದ ಅರ್ಧ ದಿನ ಶಾಲೆಗೆ ರಜಾ


* ಹೆಚ್ಚಿನ ಪ್ರಭಾವಿ ಕೋಡಿಂಗ್ ಗೇಮ್​ಗಳು


GUVI ಸಂಸ್ಥಾಪಕ ಅರುಣ್ ಪ್ರಕಾಶ್, "ಚಿಕ್ಕ ಮಕ್ಕಳು  ಗೇಮಿಂಗ್ ಪ್ರಾಬ್ಲ್ಂ ಪರಿಹರಿಸಲು ಪೈಪೋಟಿ ನಡೆಸುವುದು ಮತ್ತು ಈ ಮೋಜಿನ ಸವಾಲುಗಳ ಮೂಲಕ ಸಂತೋಷದಿಂದ ಕಲಿಯುವುದನ್ನು ನೋಡುವುದು ತುಂಬಾ ಸಂತೋಷವಾಗಿದೆ" ಎಂದು ಹೇಳಿದರು. ಮಕ್ಕಳು ಹೆಚ್ಚಿನ ಶಕ್ತಿಯ ಮಟ್ಟವನ್ನು ಉಪಯೋಗಿಸಿ ಕೋಡಿಂಗ್ ಮಾಡುವುದನ್ನು ನೋಡಿ ಆಶ್ಚರ್ಯವಾಯಿತು ಎಂದು ಅವರು ಹೇಳಿದರು. ಟೆಕ್ನೋ-ಸೆಂಟ್ರಲ್ ಈವೆಂಟ್ಸ್ ತನ್ನ ಧ್ಯೇಯವನ್ನು ಪೂರೈಸಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.




* ಸ್ಪರ್ಧೆಗಳಿಗೆ 2,500 ಮಂದಿ ನೋಂದಣಿ


ಏಳರಿಂದ ಹದಿನೇಳು ವರ್ಷದ ಮಕ್ಕಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲತೆ ಮತ್ತು ಆವಿಷ್ಕಾರಗಳನ್ನು ಹೊರತರುವತ್ತ ಗಮನ ಹರಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ 100 ಮಕ್ಕಳಿಗೆ CUIC-ಅನ್ನಾ ವಿಶ್ವವಿದ್ಯಾಲಯದ ಮಾಜಿ ಹೆಚ್ಚುವರಿ ನಿರ್ದೇಶಕ ಡಾ.ಕಲೈಸೆಲ್ವನ್, ZOHO ಕಾರ್ಪ್‌ನ ಉತ್ಪನ್ನ ನಿರ್ವಹಣಾ ನಿರ್ದೇಶಕರಾದ ಶ್ರೀಮತಿ ರಾಜಲಕ್ಷ್ಮಿ ಶ್ರೀನಿವಾಸನ್ ಮತ್ತು ಸ್ಟಾರ್ ಇನ್ಶೂರೆನ್ಸ್‌ನ ಮುಖ್ಯ ಇನ್ನೋವೇಶನ್ ಅಧಿಕಾರಿ ಚಿಟ್ಟಿಬಾಬು ಬಹುಮಾನಗಳನ್ನು ನೀಡಿದರು. ಈ ಸ್ಪರ್ಧೆಗಳಿಗೆ ಸುಮಾರು 2,500 ಮಕ್ಕಳು ನೋಂದಾಯಿಸಿಕೊಂಡಿದ್ದರು.

First published: