• Home
 • »
 • News
 • »
 • jobs
 • »
 • IIT ಖರಗ್​ಪುರದ ಮತ್ತೊಂದು ದಿಟ್ಟ ಹೆಜ್ಜೆ-ಮಲೇಷ್ಯಾದಲ್ಲಿ ಇಂಟರ್​ನ್ಯಾಷನಲ್ ಕ್ಯಾಂಪಸ್ ಓಪನ್

IIT ಖರಗ್​ಪುರದ ಮತ್ತೊಂದು ದಿಟ್ಟ ಹೆಜ್ಜೆ-ಮಲೇಷ್ಯಾದಲ್ಲಿ ಇಂಟರ್​ನ್ಯಾಷನಲ್ ಕ್ಯಾಂಪಸ್ ಓಪನ್

IIT Kharagpur

IIT Kharagpur

ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸುವ ಭಾಗವಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ ತನ್ನ ಮೊದಲ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಮಲೇಷ್ಯಾದಲ್ಲಿ ತೆರೆಯಲು ಸಿದ್ಧವಾಗಿದೆ ಎಂದು ಪ್ರೀಮಿಯರ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಿಕೆ ತಿವಾರಿ ಹೇಳಿದ್ದಾರೆ.

 • Trending Desk
 • 4-MIN READ
 • Last Updated :
 • New Delhi, India
 • Share this:

ಈಗ ಭಾರತದಲ್ಲಿ(India) ಉನ್ನತ ಶಿಕ್ಷಣ ಸಾಕಷ್ಟು ಅಭ್ಯುದಯವಾಗುತ್ತಿದೆ. ಭಾರತದಲ್ಲಿರುವ ಐಐಟಿ ಶಿಕ್ಷಣ ಸಂಸ್ಥೆಗಳು ಕೇವಲ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ತಮ್ಮಲ್ಲಿರುವ ಉತ್ತಮ ಗುಣಮಟ್ಟ ಶಿಕ್ಷಣಕ್ಕಾಗಿ ಪ್ರಸಿದ್ಧಿಪಡೆದಿವೆ. ಇದೀಗ ಐಐಟಿ ಖರಗ್‍ಪುರ ಮತ್ತೊಂದು ಅದ್ಭುತ ಸಾಧನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಅಂತ ಹೇಳಬಹುದು.


ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸುವ ಭಾಗವಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ ತನ್ನ ಮೊದಲ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಮಲೇಷ್ಯಾದಲ್ಲಿ ತೆರೆಯಲು ಸಿದ್ಧವಾಗಿದೆ ಎಂದು ಪ್ರೀಮಿಯರ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಿಕೆ ತಿವಾರಿ ಹೇಳಿದ್ದಾರೆ.


ಐಐಟಿ ಖರಗ್‌ಪುರದ 68 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸ್ಥೆಯು ವಿಶ್ವದ ಅಗ್ರ 10 ಸಂಸ್ಥೆಗಳಲ್ಲಿ ಸೇರುವ ಗುರಿಯನ್ನು ಹೊಂದಿದೆ.


ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಜಾಗತಿಕ ಛಾಪು ಮೂಡಿಸಲು ಐಐಟಿ ಮಲೇಷ್ಯಾ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ನಿರ್ದೇಶಕ ವಿಕೆ ತಿವಾರಿ ಹೇಳಿದ್ದಾರೆ.


“ಶಿಕ್ಷಣದ ಗುಣಮಟ್ಟದಲ್ಲಿ ನಾವು ಮಾನದಂಡವಾಗಬೇಕು”


ಶಿಕ್ಷಣದ ಗುಣಮಟ್ಟದಲ್ಲಿ ಐಐಟಿ ಖರಗ್‌ಪುರವು ಮಾನದಂಡವಾಗಬೇಕೆಂಬ ಉದ್ದೇಶವಿದೆ. ʼಬ್ರಾಂಡ್ ಇಂಡಿಯಾ'ವನ್ನು ಪ್ರಚಾರ ಮಾಡುವುದು ಮತ್ತು ವಿದೇಶದಲ್ಲಿ ಭಾರತೀಯ ಸಂಸ್ಥೆಗಳನ್ನು ತೆರೆಯುವುದು ಹೇಗೆ ಉತ್ತೇಜನಕಾರಿಯಾಗಿದೆ ಎಂಬುದನ್ನು ಅವರು ವಿವರಿಸಿದರು.


ಅಲ್ಲದೇ ಆತ್ಮ ನಿರ್ಭರ ಭಾರತ್ ಕಾರ್ಯತಂತ್ರವನ್ನು ಅಳವಡಿಸಿಕೊಂಡಂತೆ ಶಿಕ್ಷಣ ಕ್ಷೇತ್ರವನ್ನು ಪ್ರೋತ್ಸಾಹಿಸಲು ಮತ್ತು ಮರುರೂಪಿಸುವ ಬಗ್ಗೆ ಕೇಂದ್ರದ ನೀತಿಗಳ ಬಗ್ಗೆ ಮಾತನಾಡಿದರು.


ಇದನ್ನೂ ಓದಿ: Top Skills for 2023: ಮುಂದಿನ ವರ್ಷ ಉದ್ಯೋಗ ಭದ್ರತೆ ಇರಬೇಕೆಂದರೆ, ಈ ಕೌಶಲ್ಯಗಳನ್ನು ಕಲಿಯಬೇಕಂತೆ


ಅಲ್ಲದೇ, ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಅಂತರ್ಗತವಾಗಿರುವ ಶ್ರೇಷ್ಠತೆಯ ದ್ಯೋತಕವಾಗಿದೆ. ಕ್ರಿಯಾತ್ಮಕ ಶಿಕ್ಷಣದ ಆವಿಷ್ಕಾರಗಳನ್ನು ಬಳಸಿಕೊಳ್ಳಲು ಸರ್ಕಾರ ಮತ್ತು ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿವಾರಿ ಅವರು ಹೇಳಿದರು.


ಸಂಸ್ಥೆಯ ಸಾಧನೆಗಳನ್ನು ವಿವರಿಸಿದ ತಿವಾರಿ


ಇನ್ನು, ಸಂಸ್ಥೆಯು ತನ್ನ ಸಿಬ್ಬಂದಿ ಮತ್ತು ಸಂಶೋಧಕರು ರಚಿಸಿದ 75 ಆವಿಷ್ಕಾರಗಳ ಪಟ್ಟಿಯನ್ನು ಅವರು ಉಲ್ಲೇಖಿಸಿದರು. ಕಳೆದ ಎರಡು ವರ್ಷಗಳಲ್ಲಿ ಐಐಟಿ ಖರಗ್‌ಪುರ ಮಾಡಿದ ಸಾಧನೆಗಳ ಬಗ್ಗೆ ವಿವರಿಸಿದ ತಿವಾರಿ, "ಕೊರೊನಾ ವೈರಸ್‌ಗಾಗಿ ಕೋವಿರಾಪ್ ಡಯಾಗ್ನೋಸ್ಟಿಕ್ ಕಿಟ್ ಅನ್ನು ₹ 6.7 ಕೋಟಿಗೆ ಮಾರಾಟ ಮಾಡಿದ್ದರೆ, ಇತರ ಅನೇಕ ಯಶಸ್ವಿ ಹೊಸ ಸಾಧನಗಳನ್ನು ಒಂದು ಕೋಟಿಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗಿದೆ" ಎಂದು ತಿಳಿಸಿದರು.


ಅಲ್ಲದೇ, ಎಂಜಿನಿಯರಿಂಗ್ ಸಂಸ್ಥೆಯು 260 ಹಾಸಿಗೆಗಳ ಶ್ಯಾಮ ಪ್ರಸಾದ್ ಮುಖರ್ಜಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಸಹ ಸ್ಥಾಪಿಸಿದೆ.


ವಿನೋದ್ ಗುಪ್ತಾರಿಂದ ಸುಂದರ್ ಪಿಚೈವರೆಗೆ, ಸಾವಿರಾರು ಸಂಖ್ಯೆಯ ಮಾಜಿ ಐಐಟಿ ವಿದ್ಯಾರ್ಥಿಗಳು ಸಂಸ್ಥೆಗೆ ಪ್ರಶಸ್ತಿಗಳನ್ನು, ಹೆಸರನ್ನು ತಂದಿದ್ದಾರೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.


ಇದೇ ವೇಳೆ ಘಟಿಕೋತ್ಸವದಲ್ಲಿ 40 ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯ್ತು. ಅವರ ನಿರ್ದಿಷ್ಟ ಅಧ್ಯಯನ ಕ್ಷೇತ್ರಗಳಲ್ಲಿ, ಒಂಭತ್ತು ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.


ಇನ್ನು, ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಲ್ಲಿನ ಶಿಫಾರಸುಗಳನ್ನು ಅನುಸರಿಸಿ, UK, ಸೌದಿ ಅರೇಬಿಯಾ, UAE, ಮಲೇಷ್ಯಾ, ಈಜಿಪ್ಟ್, ಕತಾರ್, ಥೈಲ್ಯಾಂಡ್ 'ಇಂಡಿಯನ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಕಡಲಾಚೆಯ ಕ್ಯಾಂಪಸ್‌ಗಳಿಗೆ ಸಂಭಾವ್ಯ ಸ್ಥಳಗಳಾಗಿವೆ.


ಇನ್ನು, ದೆಹಲಿ ಮತ್ತು ಮದ್ರಾಸ್‌ನಲ್ಲಿರುವ ಐಐಟಿಗಳು ಅಬುಧಾಬಿ ಮತ್ತು ತಾಂಜಾನಿಯಾದಲ್ಲಿ ಆಫ್‌ಶೋರ್ ಕ್ಯಾಂಪಸ್‌ಗಳನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿವೆ ಎನ್ನಲಾಗಿದೆ.


ಈ ಮಧ್ಯೆ, IIT ಖರಗ್‌ಪುರದ ಮೊದಲ ಜಾಗತಿಕ ಕ್ಯಾಂಪಸ್‌ನ ಆರಂಭಿಕ ದಿನಾಂಕವನ್ನು ಇನ್ನೂ ಅಧಿಕೃತವಾಗಿ ತಿಳಿಸಲಾಗಿಲ್ಲ. ಕೆಲವು ವರದಿಗಳು ಸೆಪ್ಟೆಂಬರ್ 2023 ರ ವೇಳೆಗೆ ಹೊಸ ಕ್ಯಾಂಪಸ್ ಸಿದ್ಧವಾಗಬಹುದು ಎಂದು ಹೇಳಿವೆ.


ಇದನ್ನೂ ಓದಿ: Going Digital: ಡಿಜಿಟಲ್ ರುಜುವಾತುಗಳು ಎಂದರೇನು? ಗುಣಮಟ್ಟದ ಶಿಕ್ಷಣಕ್ಕೆ ಇವು ಹೇಗೆ ಸಹಕಾರಿ?


ಮುಂದಿನ ವರ್ಷದ ಅಂತ್ಯದ ವೇಳೆಗೆ ಮೂರು IIT ಆಫ್‌ಶೋರ್ ಕ್ಯಾಂಪಸ್‌ಗಳು ಮಲೇಷ್ಯಾ, ಅಬುಧಾಬಿ ಮತ್ತು ತಾಂಜಾನಿಯಾದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

Published by:Latha CG
First published: