ನೀವು ಪರೀಕ್ಷೆಯಲ್ಲಿ (Exam) ಹತ್ತು ಅಂಕಕ್ಕೆ ಪತ್ರಲೇಖನ ಬರೆಯುವ ಪ್ರಶ್ನೆಯನ್ನು ಹೊಂದಿರುತ್ತೀರಿ. ಆದರೆ ಅದನ್ನು ಹೇಗೆ ಬರೆಯುವುದು ಎಂಬ ಗೊಂದಲ (Confusion) ಹೊಂದಿದ್ದರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ (Read). ಪತ್ರಲೇಖನದಲ್ಲಿ ಎರಡು ವಿಧ ಒಂದು ಔಪಚಾರಿಕ ಪತ್ರ (Letter) ಇನ್ನೊಂದು ಅನೌಪಚಾರಿಕ ಪತ್ರ. ನಾವು ಸಾಮಾನ್ಯವಾಗಿ ಇನ್ನೊಬ್ಬರ ಜೊತೆ ಮಾತಿನ ಮೂಲಕ ವಿಷಯ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಪತ್ರದ ಮೂಲಕ ಅದನ್ನು ತಿಳಿಸುವುದೇ ಪತ್ರಲೇಖನ.
ಮೊದಲನೇಯದಾಗಿ ನೀವು ಯಾರಿಗೆ ಪತ್ರ ಬರೆಯುತ್ತಿದ್ದೀರಾ ಎಂಬುದನ್ನು ಬರೆಯಬೇಕು ಅದಕ್ಕೆ ಸಂಬೋಧನೆ ಎಂದು ಕರೆಯುತ್ತಾರೆ. ನಾವು ಇಲ್ಲಿ ಕೆಲವು ಉದಾಹರಣೆಗಳನ್ನು ನೀಡಿದ್ದೇವೆ ನೋಡಿ. ತಂದೆಗೆ – ತೀರ್ಥರೂಪು, ತಾಯಿಗೆ – ಮಾತೃಶ್ರೀ, ಗುರುಗಳಿಗೆ – ಪೂಜ್ಯ, ಗೆಳೆಯ/ಗೆಳತಿಗೆ ಆತ್ಮೀಯ, ನಲ್ಮೆಯ, ಪ್ರೀತಿಯ, ಚಿಕ್ಕಪ್ಪ ದೊಡ್ಡಪ್ಪನಿಗೆ – ತೀರ್ಥರೂಪು ಸಮಾನ, ಈ ಎಲ್ಲಾ ಸಂಬೋಧನೆಗಳನ್ನು ಅನೌಪಚಾರಿಕ ಪತ್ರದಲ್ಲಿ ಬಳಸಲಾಗುತ್ತದೆ.
ಇನ್ನು ಔಪಚಾರಿಕ ಪತ್ರದಲ್ಲಿ ಶಾಲೆ, ಕಚೇರಿ, ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿ ಅಥವಾ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳು ಅಥವಾ ಅಧಿಕಾರಿಗಳಿಗೆ ಔಪಚಾರಿಕ ಪತ್ರವನ್ನು ಬರೆಯಲಾಗುತ್ತದೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ಅಪರಿಚಿತರಾಗಿರುತ್ತಾರೆ. ಈ ಪತ್ರಗಳು ಸಂಪೂರ್ಣವಾಗಿ ವಾಣಿಜ್ಯ ಅಥವಾ ಅಧಿಕೃತ ಅಥವಾ ಸರ್ಕಾರಿ ಕೆಲಸಗಳಿಗಾಗಿ ಬರೆಯುವ ಪತ್ರ ಇದಾಗಿರುತ್ತದೆ. ಈ ಪತ್ರಗಳಲ್ಲಿ ಮಾನ್ಯ ಎಂಬ ಸಂಬೋಧನೆಯಿಂದ ಆರಂಭಿಸಬೇಕಾಗುತ್ತದೆ.
ಇದನ್ನೂ ಓದಿ: Fellowship: ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ ಕೊಟ್ಟ UGC! ಫೆಲೋಶಿಪ್ನಲ್ಲಿ 16 ಪಟ್ಟು ಹೆಚ್ಚಳ
ಇಂದ,
ಅ.ಬ.ಕ
8ನೇ ತರಗತಿ
ಸರ್ಕಾರಿ ಪ್ರೌಢಶಾಲೆ (ನಿಮ್ಮ ಶಾಲೆ ಹೆಸರು)
ನಿಮ್ಮ ಗ್ರಾಮ, ಊರಿನ ಹೆಸರು
ಗೆ,
ಶ್ರೀ, / ಮಾನ್ಯ ಪ್ರಾಂಶುಪಾಲರು
ಅವರ ಊರು
ಅವರ ಶಾಲೆ
ವಿಷಯ: ಒಂದು ಸಾಲಿನಲ್ಲಿ (ರಜೆ ನೀಡುವ ಕುರಿತು)
ಮಾನ್ಯರೇ, ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ನಾನು ನಿಮ್ಮ ಶಾಲೆಯಲ್ಲಿ8ನೇ ತರಗತಿಯಲ್ಲಿ ಓದುತ್ತಿದ್ದೇನೆ. ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿಯಿಲ್ಲದ ಕಾರಣ ನಾನು 3 ದಿನಗಳ ಕಾಲ ರಜೆ ಪಡೆಯಲು ಬಯಸುತ್ತಿದ್ದೇನೆ. ನಾನು ರಜೆಯನ್ನು ಮನ್ನಿಸಿ ಅನುಮತಿ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ನೀವು ರಜೆ ನೀಡುತ್ತೀರಿ ಎಂದು ಭಾವಿಸಿರುತ್ತೇನೆ.
ಧನ್ಯವಾದ
ದಿನಾಂಕ
ನಿಮ್ಮ ವಿಶ್ವಾಸಿ ( ಸಹಿ)
2. ನಿಮ್ಮ ಊರಿನಲ್ಲಿ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವಂತೆ ಕೋರಿ ಆರೋಗ್ಯ ಸಚಿವರಿಗೆ ಪತ್ರವನ್ನು ಬರೆಯಿರಿ.
ಈ ರೀತಿ ಪ್ರಶ್ನೆಯನ್ನು ನೀಡಿದ್ದರೆ ನೀವು ಮೇಲೆ ನೀಡಿರುವ ರೀತಿಯೇ ಪತ್ರ ಬರೆಯಬೇಕಾಗುತ್ತದೆ.
ಇಂದ,
ಅ.ಬ.ಕ
8ನೇ ತರಗತಿ
ಸರ್ಕಾರಿ ಪ್ರೌಢಶಾಲೆ (ನಿಮ್ಮ ಶಾಲೆ ಹೆಸರು)
ನಿಮ್ಮ ಗ್ರಾಮ, ಊರಿನ ಹೆಸರು
ಗೆ,
ಶ್ರೀ, / ಮಾನ್ಯ
ಅ.ಬ.ಕ
ನಂ-೪೬, ೧ನೇ ಮುಖ್ಯರಸ್ತೆ
ಜಯನಗರ
ಮಂಡ್ಯ
ವಿಷಯ: ಒಂದು ಸಾಲಿನಲ್ಲಿ ( ಆರೋಗ್ಯ ಕೇಂದ್ರ ಸ್ಥಾಪಿಸಲು ಕೋರಿ ಮನವಿ)
ಮಾನ್ಯರೇ, ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ಜಯನಗರದ ವಾಸಿಯಾದ ನಾನು ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುವುದೇನೆಂದರೆ, ನಮ್ಮ ಊರಿನಲ್ಲಿ ಸುಮಾರು 800 ಜನರಿದ್ದು ಆರೋಗ್ಯ ಸಮಸ್ಯೆ ಉಂಟಾದರೆ ಅದನ್ನು ಹತ್ತಿರದಲ್ಲಿ ಯಾವುದೇ ಆರೋಗ್ಯ ಕೇಂದ್ರವಿಲ್ಲ ಆ ಕಾರಣ ತುಂಬಾ ಜನರಿಗೆ ತೊಂದರೆಯಾಗುತ್ತಿದೆ. ನಮ್ಮ ಕೋರಿಕೆಯನ್ನು ಒಪ್ಪಿ ಜನರಿಗೆ ಅನುಕೂಲವನ್ನು ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಧನ್ಯವಾದ
ದಿನಾಂಕ
ನಿಮ್ಮ ವಿಶ್ವಾಸಿ ( ಸಹಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ