• ಹೋಂ
 • »
 • ನ್ಯೂಸ್
 • »
 • Jobs
 • »
 • CBSE Board Result: ನಿಮಗೆ ಈ ವಿಷಯಗಳಲ್ಲಿ ಆಸಕ್ತಿ ಇದ್ದರೆ ಆರ್ಟ್ಸ್ ಬೆಸ್ಟ್!

CBSE Board Result: ನಿಮಗೆ ಈ ವಿಷಯಗಳಲ್ಲಿ ಆಸಕ್ತಿ ಇದ್ದರೆ ಆರ್ಟ್ಸ್ ಬೆಸ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಲಾ ವಿಭಾಗ ಈಗ ಹತ್ತಾರು ವಿಷಯಗಳ ಜತೆ ವ್ಯಾಪ್ತಿಯನ್ನ ಹೆಚ್ಚಿಸಿಕೊಂಡಿದೆ. ಅದ್ರಲ್ಲೂ ಮಕ್ಕಳಿಗೆ ಬರವಣಿಗೆ, ದೃಶ್ಯ, ಹಾಡು, ಸಂಗೀತ, ಗ್ರಾಫಿಕ್ಸ್ ಡಿಸೈನಿಂಗ್, ಕ್ರಿಯಾತ್ಮಕ ನಿರೂಪಣೆ ಕಡೆ ಆಸಕ್ತಿ ಇದ್ದರೆ, ಆರ್ಟ್ಸ್ ಸಬ್ಜೆಕ್ಟ್ ತೆಗೆದುಕೊಳ್ಳುವುದು ಉತ್ತಮ.

 • Share this:
 • published by :

ಸೈನ್ಸ್, ವಾಣಿಜ್ಯ ವಿಭಾಗ ಎರಡೇ ಅಲ್ಲ. ಕೆಲವೊಂದು ವಿಷಯಗಳಲ್ಲಿ ಆಸಕ್ತಿ ಇದ್ದರೆ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ (Students) ಆರ್ಟ್ಸ್ ಅಂದ್ರೆ ಕಲಾ ವಿಷಯದಲ್ಲೂ ಹತ್ತಾರು ದಾರಿಗಳಿವೆ. ಸಿಬಿಎಸ್‌ಇ ಪರೀಕ್ಷೆ ಫಲಿತಾಂಶ (Result) ಈ ತಿಂಗಳು ಪ್ರಕಟವಾಗಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಈಗಾಗಲೇ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಪಾಸ್ ಆದ ವಿದ್ಯಾರ್ಥಿಗಳ ಬಗ್ಗೆ ಪೋಷಕರು ಚಿಂತೆ ಮಾಡ್ತಿದ್ದಾರೆ. ಕಾಲೇಜು ಅಂದ ತಕ್ಷಣ ಎಲ್ರೂ ಸೈನ್ಸ್, Commerceನತ್ತ ಗಮನ ಹರಿಸ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಕೆಲ ವಿಷಯಗಳಲ್ಲಿ ಅಭಿರುಚಿ ಇದ್ದರೆ ಅವರಿಗೆ ಕಲಾ ವಿಭಾಗ ಅತ್ಯುತ್ತಮ. ಹಾಗಾದರೆ ಆ ವಿಷಯಗಳಾವುವು ಒಮ್ಮೆ ಕಣ್ಣು ಹಾಯಿಸೋಣ ಬನ್ನಿ.


ಕಲಾ ವಿಭಾಗ ಈಗ ಹತ್ತಾರು ವಿಷಯಗಳ ಜತೆ ವ್ಯಾಪ್ತಿಯನ್ನ ಹೆಚ್ಚಿಸಿಕೊಂಡಿದೆ. ಅದ್ರಲ್ಲೂ ಮಕ್ಕಳಿಗೆ ಬರವಣಿಗೆ, ದೃಶ್ಯ, ಹಾಡು, ಸಂಗೀತ, ಗ್ರಾಫಿಕ್ಸ್ ಡಿಸೈನಿಂಗ್, ಕ್ರಿಯಾತ್ಮಕ ನಿರೂಪಣೆ ಕಡೆ ಆಸಕ್ತಿ ಇದ್ದರೆ, ಆರ್ಟ್ಸ್ ಸಬ್ಜೆಕ್ಟ್ ತೆಗೆದುಕೊಳ್ಳುವುದು ಉತ್ತಮ ಎನ್ನಲಾಗ್ತಿದೆ. ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ, ಭಾಷೆ ಅಧ್ಯಯನ ಸೇರಿದಂತೆ ಹತ್ತಾರು ವಿಷಯಗಳು ಆರ್ಟ್ಸ್ನಲ್ಲಿ ಬರುತ್ತದೆ. ಮಾನವಿಕ ವಿಷಯ ಹಾಗೂ ಕಲಾ ವಿಭಾಗಕ್ಕೆ ಒಂದಕ್ಕೊಂದು ಸಂಬಂಧವಿದೆ.


ಹೀಗಾಗಿ, ದೃಶ್ಯ ಮಾಧ್ಯಮ, ವ್ಯಕ್ತಿತ್ವ ವಿಕಸನ, ಜಾಣ್ಮೆಯನ್ನ ಹೆಚ್ಚಿಸುವ ವಿಷಯಗಳನ್ನು ಕೂಡ ಆರ್ಟ್ಸ್ನಲ್ಲಿ ಪರಿಗಣಿಸಲಾಗುತ್ತದೆ. ಇದರಿಂದಾಗಿ, ಚಿತ್ರಕಲೆ, ಶಿಲ್ಪ ಕಲೆ, ಹಾಡು, ನೃತ್ಯ, ರಂಗ ಶಿಕ್ಷಣವನ್ನೂ ಕಲೆಯ ವ್ಯಾಪ್ತಿಯಲ್ಲಿ ಪರಿಗಣಿಸಿದ್ದು, ವಿದ್ಯಾರ್ಥಿಗಳು ಈ ವಿಷಯವನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.


ಸಾಮಾನ್ಯವಾಗಿ ಚಿತ್ರಕಲೆ, ಶಿಲ್ಪಕಲೆ, ಹಾಡು, ನೃತ್ಯ, ನಾಟಕವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಹೆಚ್ಚಾಗಿ ವೃತ್ತಿಪರರಾಗಿ ತೊಡಗಿಸಿಕೊಳ್ಳುತ್ತಾರೆ. ಹಾಗೇ, ಸಾಹಿತ್ಯ, ತತ್ವಶಾಸ್ತ್ರ, ಇತಿಹಾಸದಂತಹ ಸಬ್ಜೆಕ್ಟ್ ಓದುವವರು ಶೈಕ್ಷಣಿಕ ವಲಯದಲ್ಲೇ ವೃತ್ತಿಯನ್ನ ಆಯ್ಕೆಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ: UGC NET 2023: ಜೂನ್​ 13ರಿಂದ ನೋಂದಣಿ ಆರಂಭ; ಅಪ್ಲೈ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


ಅಷ್ಟಕ್ಕೂ, ಕಲಾ ವಿಭಾಗದ ಮೇಲೆ ಆಸಕ್ತಿ ಇರೋರಿಗೆ ಇದೆ ಹತ್ತಾರು ಅವಕಾಶಗಳು


ದೃಶ್ಯ ಕಲಾ ವಿಭಾಗ: ಕಲಾ ವಿಭಾಗದಲ್ಲಿ ದೃಶ್ಯ ಮಾಧ್ಯಮ ಪ್ರಮುಖವಾದದ್ದು. ದೃಶ್ಯ ಕಲೆಯತ್ತ ಆಸಕ್ತಿ ಇರೋರು ಹತ್ತಾರು ವಿಷಯಗಳನ್ನ ಕಲಿಯಬಹುದು.


ಕಲೆ, ಚಿತ್ರಕಲೆ, ಶಿಲ್ಪಕಲೆ, ಫೋಟೋಗ್ರಫಿ ಕುರಿತು ಓದಬಹುದು. ಈ ವಿಷಯಗಳ ಬಗ್ಗೆ ಕಲಿಯೋರಿಗೆ ಕ್ರಿಯಾಶೀಲತೆ, ಪ್ರತಿ ವಿಷಯದಲ್ಲೂ ಹೊಸತನ ಹುಡುಕುವ ಹಂಬಲ ಇರಬೇಕು.


ಕಲೆ ಪ್ರದರ್ಶನ: ಹಾಡು, ನೃತ್ಯ, ನಟನೆ ಕೂಡ ಆರ್ಟ್ಸ್ ಸಬ್ಜೆಕ್ಟ್ ನಲ್ಲಿ ಬರುತ್ತವೆ. ವೇದಿಕೆಯಲ್ಲಿ ಮಿಂಚುವ ಆಸೆ ಇದ್ದವರು, ಅಭಿನಯ, ಹಾಡು, ನೃತ್ಯದತ್ತ ಆಸಕ್ತಿ ಇದ್ದವರು ಈ ವಿಷಯಗಳನ್ನ ಆಯ್ಕೆ ಮಾಡಿಕೊಳ್ಳಬಹುದು.


ಸಾಹಿತ್ಯ ಮತ್ತು ಬರವಣಿಗೆ: ಬರವಣಿಗೆಯ ವ್ಯಾಪ್ತಿ ಈಗ ಬಹಳ ಹೆಚ್ಚಾಗಿದೆ. ಬರಹದತ್ತ ಆಸಕ್ತಿ ಇದ್ದವರು, ಪತ್ರಿಕೋದ್ಯಮ ಹಾಗೂ ಸಾಹಿತ್ಯವನ್ನ ಅಭ್ಯಾಸ ಮಾಡಬಹುದು.


ಎರಡರಲ್ಲೂ ಈಗ ಅವಕಾಶಗಳ ಮಹಾಪೂರವೇ ಇದೆ. ಪತ್ರಿಕೋದ್ಯಮದಲ್ಲಿ ಪತ್ರಿಕೆಗಳು, ಟಿವಿ, ರೆಡಿಯೋ, ಜಾಹೀರಾತು, ಡಿಜಿಟಲ್ ಮೀಡಿಯಾದಂತಹ ಸಾವಿರಾರು ಅವಕಾಶಗಳಿವೆ. ಸಾಹಿತ್ಯದಲ್ಲೂ ನೂರೆಂಟು ಅವಕಾಶಗಳಿವೆ.
ಕಲಾ ಇತಿಹಾಸ; ದೃಶ್ಯ ಮಾಧ್ಯಮದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಕಲಾ ಇತಿಹಾಸವನ್ನ ಆಯ್ಕೆ ಮಾಡಿಕೊಳ್ಳಬಹುದು. ಇತಿಹಾಸವನ್ನ ದೃಶ್ಯದ ಮೂಲಕ ಕಟ್ಟಿಕೊಡುವುದು, ದೃಶ್ಯಗಳ ಮೂಲಕ ನಿರೂಪಣೆ ಮಾಡುವ ವಿಧಾನ ಇದಾಗಿದೆ. ಇತಿಹಾಸದಲ್ಲಿ ನಡೆದು ಹೋಗಿರುವ ಘಟನೆಗಳು, ಅತ್ಯಂತ ಪ್ರಮುಖ ವಿಷಯಗಳನ್ನ ಕಲಾ ಇತಿಹಾಸ ವಿಭಾಗದಲ್ಲಿ ಕಲಿಯಬಹುದು.

top videos


  ಗ್ರಾಫಿಕ್ಸ್ ಡಿಸೈನಿಂಗ್: ಇತ್ತೀಚಿನ ದಿನಗಳಲ್ಲಿ ಗ್ರಾಫಿಕ್ಸ್ ಡಿಸೈನಿಂಗ್‌ಗೆ ಅವಕಾಶಗಳು ಹೆಚ್ಚಿವೆ. ತಂತ್ರಜ್ಞಾನದ ತಿಳಿವಳಿಕೆಯೊಂದಿಗೆ ಕಲೆಯನ್ನು ಕಲಿಯುವ ಈ ವಿಷಯದ ಬಗ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ದೃಶ್ಯ ಮಾಧ್ಯಮದಲ್ಲಿ ಗ್ರಾಫಿಕ್ ಡಿಸೈನರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇದಿಷ್ಟೇ ಅಲ್ಲ, ಮಾನವಿಕ ವಿಭಾಗದಲ್ಲಿ ಇತಿಹಾಸ, ತರ್ಕ, ಭಾಷಾ ಅಧ್ಯಯನ, ಸಾಹಿತ್ಯ, ಧರ್ಮ ಮತ್ತು ಮಾನವಶಾಸ್ತ್ರದಂತಹ ಅನೇಕ ವಿಷಯಗಳಿವೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು