ಬೆಂಗಳೂರು: ಪರೀಕ್ಷೆ (Exam) ನಡೆಯುವುದಕ್ಕಿಂತ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಘಟನೆ ಬೆಂಗಳೂರು ವಿವಿಯಲ್ಲಿ ನಡೆದಿದೆ. ಇದರಿಂದಾಗಿ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಬೆಂಗಳೂರು ನಗರ ವಿವಿ ವ್ಯಾಪ್ತಿಯ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ (Question Paper Leaked) ಎಂಬ ಮಾಹಿತಿ ಹೊರಬಿದ್ದಿದೆ. ಹಾಗಾದರೆ ಈ ಪರೀಕ್ಷೆಯನ್ನು ಮತ್ತೊಮ್ಮೆ ಮಾಡ್ತಾರಾ? ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ (Students) ಉದ್ಭವವಾಗಿದೆ. ಇದರಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಈ ಘಟನೆ ನಡೆದದ್ದು ಯಾವಾಗ, ಈ ಕೃತ್ಯ ಮಾಡಿದವರು ಯಾರು ಎಂಬೆಲ್ಲಾ ವಿವರಕ್ಕಾಗಿ ಇದನ್ನು ಓದಿ.
ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಲೀಕ್!
ಬೆಂಗಳೂರು ನಗರ ವಿವಿ ವ್ಯಾಪ್ತಿಯ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಕಾಲೇಜು ಆಡಳಿತ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದೆ ಎಂಬ ಆರೋಪ ಕೂಡಾ ಕೇಳಿ ಬರ್ತಿದೆ. ಈ ಆರೋಪಕ್ಕೆ ಕಾಲೇಜು ಹೊಣೆಯಾಗುತ್ತದೆ. ಒಂದು ವಾರದ ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿರೋ ಆರೋಪ ಕೇಳಿ ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವೊಂದು ಫೋಟೋಗಳು ಲಭ್ಯವಾಗಿದೆ.
27 ರಂದು ನಡೆಯುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ 22ಕ್ಕೆ ವಾಟ್ಸ್ಆಪ್ ಖಾತೆಗಳಲ್ಲಿ ಹರಿದಾಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: CBSE ಬೋರ್ಡ್ ಪರೀಕ್ಷೆ 2023ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ನಿಜಾನಾ? ಇಲ್ಲಿದೆ ಮಾಹಿತಿ
ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಕಳ್ಳಾಟ ಆಡ್ತಿರೋ ಖಾಸಗಿ ಕಾಲೇಜು ಪ್ರತಿ ವಿಧ್ಯಾರ್ಥಿಗಳಿಂದ ಒಂದು ವರ್ಷಕ್ಕೆ 3 ಲಕ್ಷ ಹಣ ವಸೂಲಿ ಮಾಡಿದ ಆರೋಪ ಕೇಳಿ ಬರುತ್ತಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರೂ ಸಹ ಇದಕ್ಕೆ ಒತ್ತು ನೀಡಿರುವ ಕಾರಣ ಅವರದ್ದೂ ತಪ್ಪಿದೆ. ವಿದ್ಯಾರ್ಥಿಗಳು ನಿಯತ್ತಾಗಿ ಪರೀಕ್ಷೆ ಬರೆದಿದ್ದರೆ ಹೀಗಾಗುತ್ತಿರಲಿಲ್ಲ. ಅಡ್ಡದಾರಿ ಹಿಡಿದು ಪಾಸ್ ಆದರೂ ಅದರಿಂದ ಪ್ರಯೋಜನವಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನಪಟ್ಟು ಪರೀಕ್ಷೆ ಬರೆದಿರುತ್ತಾರೆ. ಅಂತವರಿಗೆ ಇದರಿಂದ ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿದೆ.
IDeA World Collegeನ ಫ್ಯಾಷನ್ ಡಿಸೈನ್ ಮತ್ತು ಇಂಟೀರಿಯರ್ ಪೇಪರ್ ನಲ್ಲಿ ಅಕ್ರಮ ಆಗಿದೆ ಎಂದು ಹೇಳಲಾಗುತ್ತಿದೆ. ನಗರದ ಕನ್ನಿಂಗ್ ಹ್ಯಾಮ್ ರಸ್ತೆ ಬಳಿ ಇರುವ ಖಾಸಗಿ ಕಾಲೇಜು ಇದಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಶೇ.100% ಫಲಿತಾಂಶ ಗಳಿಸಲು ಅಡ್ಡದಾರಿ ಹಿಡಿದಿರುವ ಕಾಲೇಜು ಆಡಳಿತ ಮಂಡಳಿ ಪ್ರಾಯೋಗಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನ ವಿದ್ಯಾರ್ಥಿಗಳಿಗೆ ಮೊದಲೇ ನೀಡಿರುವುದ ತಿಳಿದು ಬಂದಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ ಅಂತ ಆರೋಪ ಕೇಳಿ ಬಂದಿದೆ.
ತುಮಕೂರಿನಲ್ಲೂ ಇದೇ ರೀತಿಯಾಗಿತ್ತು
ತುಮಕೂರಿನಲ್ಲೂ ಇದೇ ರೀತಿಯಾಗಿತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಈಗಾಗಲೇ ಆರಂಭವಾಗಿತ್ತು ಆದರೆ ತುಮಕೂರಿನ ಕಾಲೇಜೊಂದರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ತಿಳಿದು ಬಂದಿದೆ.ಪ್ರಥಮ ಪಿಯುಸಿ ಆಂಗ್ಲ ಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಇಂದು ನಡೆಯಬೇಕಿದ್ದ ಆಂಗ್ಲ ಭಾಷೆ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.ಜಿಲ್ಲೆಯಲ್ಲಿ ಆರಂಭವಾಗಿದ್ದ ಪ್ರಥಮ ಪಿಯುಸಿ ಪರೀಕ್ಷೆಗಳಲ್ಲಿ ಮೊದಲನೇ ದಿನವೇ ಈ ರೀತಿಯ ಘಟನೆ ಜರುಗಿದೆ. ಎಷ್ಟೇ ಹೇಳಿದರೂ ಈ ಪ್ರಶ್ನೆ ಪತ್ರಿಕೆ ಸೋರಿಕೆಯಂತು ನಿಂತಿಲ್ಲ.ಇಂದಿನ ಆಂಗ್ಲ ಭಾಷೆ ಪರೀಕ್ಷೆಯನ್ನು ಮಾ.6ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಶ್ನೆ ಪತ್ರಿಕೆಯ ಸೋರಿಕೆಯಾಗಿ ವಾಟ್ಸಪ್ಗಳಲ್ಲಿ ಹರಿದಾಡುತ್ತಿರುವುದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ