ICSI CS ಡಿಸೆಂಬರ್ 2022ರ ಪರೀಕ್ಷಾ ಫಲಿತಾಂಶ (Exam Result) ಪ್ರಕಟವಾಗಲಿದೆ. ಇದರ ಫಲಿತಾಂಶವನ್ನು ನೀವು ನೋಡಲು ಬಯಸಿದ್ದರೆ ನಾವು ಇಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡಿ. ಇನ್‌ಸ್ಟಿಟ್ಯೂಟ್ ಆಫ್ ಕಂಪನಿ (Company) ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ಇಂದು CS ವೃತ್ತಿಪರ ಮತ್ತು ಕಾರ್ಯಕಾರಿ ಕಾರ್ಯಕ್ರಮದ ಫಲಿತಾಂಶಗಳನ್ನು ಫೆಬ್ರವರಿ 25 ರಂದು ಘೋಷಿಸಲಾಗುವುದು ಎಂದು ಘೋಷಿಸಿದೆ. ಒಮ್ಮೆ ಬಿಡುಗಡೆಯಾದ ನಂತರ ಡಿಸೆಂಬರ್ 2022 ರ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ಪರಿಶೀಲಿಸಲು ಸಾಧ್ಯವಾಗುತ್ತದೆ ಅಧಿಕೃತ ICSI ವೆಬ್‌ಸೈಟ್‌ನಲ್ಲಿ ನಿಮ್ಮ ಸ್ಕೋರ್ ನೋಡಿಕೊಳ್ಳಬಹುದು.
ಅಧಿಕೃತ ಸೂಚನೆಯ ಪ್ರಕಾರ , ICSI CS ವೃತ್ತಿಪರ ಕೋರ್ಸ್ ಫಲಿತಾಂಶವನ್ನು ಬೆಳಿಗ್ಗೆ 11 ಗಂಟೆಗೆ ಮತ್ತು ಕಾರ್ಯನಿರ್ವಾಹಕ ಕಾರ್ಯಕ್ರಮದ ಫಲಿತಾಂಶವನ್ನು ಫೆಬ್ರವರಿ 25 ರಂದು ಮಧ್ಯಾಹ್ನ 2 ಗಂಟೆಗೆ ಘೋಷಿಸಲಾಗುತ್ತದೆ ಎಂಬುದು ತಿಳಿದು ಬಂದಿದೆ.
ಫಲಿತಾಂಶವನ್ನು ಘೋಷಿಸಿದ ನಂತರ ಫಲಿತಾಂಶವು, ವೈಯಕ್ತಿಕ ಅಭ್ಯರ್ಥಿಯ ವಿಷಯವಾರು ಅಂಕಗಳ ವಿಂಗಡಣೆಯೊಂದಿಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ನೀವು ನಿಮ್ಮ ಹಾಲ್ ಟಿಕೆಟ್ ನಂಬರ್ ಹಾಗೂ ಜನ್ಮ ದಿನಾಂಕವನ್ನು ಹಾಕಿದಾಗ ಓಪನ್ ಆಗುತ್ತದೆ. ಆ ನಂತರ ನಿಮ್ಮ ಹೆಸರಿನ ಅಡಿಯಲ್ಲಿ ಎಷ್ಟು ಅಂಕ ಬಂದಿದೆ ಎಂಬ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ: BCA College: ಭಾರತದ ಟಾಪ್ 5 ಬಿಸಿಎ ಕಾಲೇಜ್ಗಳ ಲಿಸ್ಟ್ ಇಲ್ಲಿದೆ
ಎಕ್ಸಿಕ್ಯೂಟಿವ್ ಪ್ರೋಗ್ರಾಂ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈ ಫಲಿತಾಂಶವನ್ನು ಡೌನ್‌ಲೋಡ್ ಕೂಡಾ ಮಾಡಬಹುದು. ಡೌನ್‌ಲೋಡ್ ಮಾಡಲು ಫಲಿತಾಂಶ ಬಿಡುಗಡೆಯಾದ ನಂತರ ಇ-ಫಲಿತಾಂಶ ಅಂದರೆ ಆನ್ಲೈನ್ ಮೂಲಕ ಬಿಡುಗಡೆಯಾದಾಗ ನೀವು ಈ ಆಪ್ಶನ್ ಪಡೆಯುತ್ತೀರಿ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಫಲಿತಾಂಶವನ್ನು ನೀವು ಪಡೆಯಬಹುದು. ಫಲಿತಾಂಶ ಮತ್ತು ಅಂಕಗಳ ಹೇಳಿಕೆಯ ಯಾವುದೇ ಭೌತಿಕ ಪ್ರತಿಯನ್ನು ನೀಡಲಾಗುವುದಿಲ್ಲ. ಅಂದರೆ ಯಾವುದೇ ಹಾರ್ಡ್ ಕಾಪಿಯನ್ನೂ ಸಹ ನೀಡಲಾಗುವುದಿಲ್ಲ. ಆದ್ದರಿಂದ ನೀವೆ ಸರಿಯಾಗಿ ರಿಸಲ್ಟ್ ನೋಡಿ ನಂತರ ಅದನ್ನು ಸೇವ್ ಮಾಡಿಕೊಳ್ಳಬೇಕಾಗುತ್ತದೆ.
ಅಧಿಕೃತ ಜಾಲತಾಣದ ಮಾಹಿತಿ
ನೀವು ಅಧಿಕೃತ ಜಾಲತಾಣದ ಮಾಹಿತಿ ಪಡೆಯಬೇಕಾದರೆ ಖಂಡಿತವಾಗಿ ನಾವು ಇಲ್ಲಿ ನೀಡಿದ ಲಿಂಕ್ ಕ್ಲಿಕ್ ಮಾಡಿ ಫಲಿತಾಂಶ ಪಡೆಯಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಬೇಕಾದರೆ ಇಲ್ಲಿ ಕ್ಲಿಕ್ ಮಾಡಿ
ಇದಾದ ನಂತರ ಫಲಿತಾಂಶದ ಮಾಹಿತಿಯನ್ನು ವಿದ್ಯಾರ್ಥಿಗಳ ವಿಳಾಸಕ್ಕೆ ಕಳಿಸಿಕೊಡಲಾಗುತ್ತದೆ. ಕಾರ್ಯನಿರ್ವಾಹಕ ಮತ್ತು ವೃತ್ತಿಪರ ಕೋರ್ಸ್ನ ಮುಂದಿನ ಪರೀಕ್ಷೆಯನ್ನು ಜೂನ್ 1 ಮತ್ತು 10, 2023 ರ ನಡುವೆ ನಡೆಸಲಾಗುವುದು ಎಂಬ ಮಾಹಿತಿ ಕೂಡಾ ಇದೇ ಸಂದರ್ಭದಲ್ಲಿ ಹೊರ ಬಿದ್ದಿದೆ.
ಈ ಬಾರಿ ನಡೆಯಲಿರುವ ಪರೀಕ್ಷಾ ವೇಳಾಪಟ್ಟಿ
ಜೂನ್ 2023ರ ಪರೀಕ್ಷೆಗಳಿಗೆ ನೋಂದಣಿ ಫಾರ್ಮ್‌ಗಳು ಫೆಬ್ರವರಿ 26 ರವರೆಗೆ ಲಭ್ಯವಿರುತ್ತವೆ. ನೀವು ಈ ವರ್ಷ ಪರೀಕ್ಷೆ ಬರೆಯಲು ಇಷ್ಟ ಪಟ್ಟರೆ ಈ ದಿನಾಂಕದ ಒಳಗೆ ಅಪ್ಲೈ ಮಾಡಿಕೊಳ್ಳಿ. ಪರೀಕ್ಷೆ ಬರೆಯಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲೂ ಸಹ ಈ ಲಿಂಕ್ ಕ್ಲಿಕ್ ಮಾಡಿದರೆ ಸಾಕು. ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ICSI CS ಜೂನ್ 2023ರ ಪರೀಕ್ಷೆಗಳ ದಿನಾಂಕ ಬಿಡುಗಡೆಯಾಗಿದೆ ಎಂಬ ಮಾಹಿತಿ ಆಧಾರದ ಮೇರೆಗೆ ನೀವು ಇಲ್ಲಿ ಚೆಕ್ ಮಾಡಬಹುದು. ಪರೀಕ್ಷಾ ಅಭ್ಯರ್ಥಿಗಳು ಟೈಮ್ ಟೇಬಲ್ ಪರಿಶೀಲಿಸಿ ಪರೀಕ್ಷಾ ಸಿದ್ಧತೆ ಆರಂಭಿಸುತ್ತಾರೆ. ಟೈಮ್ ಟೇಬಲ್ಗಾಗಿ ಕಾದು ಕುಳಿತಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ತುಂಬಾ ಸಹಕಾರಿಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ