ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಡಿಸೆಂಬರ್ 1, 2022 ರಂದು ICSE 10 ನೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. CISCE 10 ನೇ ತರಗತಿ ಪರೀಕ್ಷೆಗಳನ್ನು (Exam) 27 ಫೆಬ್ರವರಿ, 2023 ರಿಂದ ಮಾರ್ಚ್ 29, 2023 ರವರೆಗೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ICSE ಬೋರ್ಡ್ ಪರೀಕ್ಷೆ 2023ರ ದಿನಾಂಕ (Date) ಈಗಾಗಲೆ ಪ್ರಕಟಗೊಂಡಿದೆ. ಈ ಕುರಿತು ಇನ್ನಷ್ಟು ಮಾಹಿತಿ ನಿಮಗೆ ಅಧಿಕೃತ ಜಾಲತಾಣದಲ್ಲಿ (Website) ಲಭ್ಯವಿದೆ.
ICSE ಬೋರ್ಡ್ ಪರೀಕ್ಷೆ 2023 ದಿನಾಂಕವನ್ನು ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೋಡಬಹುದು. ಟೈಮ್ ಟೇಬಲ್ 2023 PDF, ಪರೀಕ್ಷೆಯ ದಿನಾಂಕಗಳು, ಸಮಯ ಮತ್ತು ICSE ಬೋರ್ಡ್ ಪರೀಕ್ಷೆಗಳ ಸ್ಥಳದ ಬಗ್ಗೆ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ.
ಬೋರ್ಡ್ | CISCE |
ಅಧಿವೇಶನ | 2022-2023 |
ಪ್ರವೇಶ | ಜನವರಿ 2023 |
ಪರೀಕ್ಷೆಯ ದಿನಾಂಕ | ಫೆಬ್ರವರಿ 2023 |
ವರ್ಗ | 10ನೇ ತರಗತಿ |
ಅಧಿಕೃತ ಜಾಲತಾಣ | www.cisce.org |
25-ಫೆಬ್ರವರಿ-2023 | ಇಂಗ್ಲಿಷ್ ಭಾಷೆ- ಇಂಗ್ಲಿಷ್ ಪತ್ರಿಕೆ- 1 |
28-ಫೆಬ್ರವರಿ-2023 | ಇಂಗ್ಲಿಷ್ ಸಾಹಿತ್ಯ- ಇಂಗ್ಲಿಷ್ ಪೇಪರ್ 2 |
3-ಮಾರ್ಚ್-2023 | ಪರಿಸರ ವಿಜ್ಞಾನ (Group II ) |
4-ಮಾರ್ಚ್-2023 | ಗಣಿತ |
6 ಮಾರ್ಚ್-2023 | ವಾಣಿಜ್ಯ ಅಧ್ಯಯನ |
7-ಮಾರ್ಚ್-2023 | ಇತಿಹಾಸ ಮತ್ತು ನಾಗರಿಕಶಾಸ್ತ್ರ – HCG ಪೇಪರ್ 1 |
11-ಮಾರ್ಚ್-2023 | ಭೌತಶಾಸ್ತ್ರ - ವಿಜ್ಞಾನ ಪತ್ರಿಕೆ 1 |
13-ಮಾರ್ಚ್-2023 | ರಸಾಯನಶಾಸ್ತ್ರ - ವಿಜ್ಞಾನ ಪತ್ರಿಕೆ 2 |
16-ಮಾರ್ಚ್-2023 | ಎರಡನೇ ಭಾಷೆಗಳು, ಆಧುನಿಕ ವಿದೇಶಿ ಭಾಷೆಗಳು |
18-ಮಾರ್ಚ್-2023 | ಭೂಗೋಳ- HCG ಪೇಪರ್ - 2 |
21-ಮಾರ್ಚ್-2023 | ಕರ್ನಾಟಕ ಸಂಗೀತ, ಮಾರ್ಕೆಟಿಂಗ್ ಅಪ್ಲಿಕೇಶನ್ಗಳು ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಗಳು ಗುಂಪು III ಆಯ್ಕೆಗಳ ಭಾಗವಾದ. ಪಾಕಶಾಲೆ, ರಂಗಭೂಮಿ, ಅರ್ಥಶಾಸ್ತ್ರ, ಪರಿಸರ ವಿಜ್ಞಾನ, ಫ್ಯಾಷನ್ ವಿನ್ಯಾಸ ಗೃಹ ವಿಜ್ಞಾನ, ಆತಿಥ್ಯ ನಿರ್ವಹಣೆ, ಭಾರತೀಯ ನೃತ್ಯ, ಸಮೂಹ ಮಾಧ್ಯಮ ಮತ್ತು ಸಂವಹನ, ದೈಹಿಕ ಶಿಕ್ಷಣ, ಸ್ಪ್ಯಾನಿಷ್, ಪಾಶ್ಚಾತ್ಯ ಸಂಗೀತ, ಯೋಗ, ಜರ್ಮನ್, ಫ್ರೆಂಚ್ ಮತ್ತು ಹಿಂದೂಸ್ತಾನಿ ಸಂಗೀತ, ಡ್ರಾಯಿಂಗ್ ಅಪ್ಲಿಕೇಶನ್ಗಳು |
23-ಮಾರ್ಚ್-2023 | ಹಿಂದಿ |
27-ಮಾರ್ಚ್-2023 | ಅರ್ಥಶಾಸ್ತ್ರ, ಸಂಸ್ಕೃತ/ಫ್ರೆಂಚ್ (ಗ್ರೂಪ್ II ಐಚ್ಛಿಕ) |
30-ಮಾರ್ಚ್-2023 | ಜೀವಶಾಸ್ತ್ರ- ವಿಜ್ಞಾನ ಪತ್ರಿಕೆ 3 |
ಇದನ್ನೂ ಓದಿ: Radio Lesson: ಶಾಲಾ ಮಕ್ಕಳಿಗೆ ಮತ್ತೆ ಆರಂಭವಾಗಲಿದೆ ರೇಡಿಯೋ ಪಾಠ!
ಪರೀಕ್ಷಾ ದಿನಕ್ಕೆ ಸಂಬಂಧಿಸಿದ ಮಾಹಿತಿ
ಪರೀಕ್ಷಾ ಹಾಲ್ ಪ್ರವೇಶ - 9:30 AM
ಉತ್ತರ ಪತ್ರಿಕೆಗಳ ವಿತರಣೆ - 10 ರಿಂದ 10:15 AM ನಡುವೆ
ಪೇಪರ್ ಓದುವ ಸಮಯ - 10:15 ರಿಂದ 10:30 AM
ಪರೀಕ್ಷೆಯು ಬೆಳಿಗ್ಗೆ 10:30 ಕ್ಕೆ ಪ್ರಾರಂಭವಾಗುತ್ತದೆ
ಪರೀಕ್ಷೆ ಮುಕ್ತಾಯ ಸಮಯ - 1:30 AM
ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯವಾಗಲಿದೆ ವೇಳಾಪಟ್ಟಿ
ಶಾಲಾ ಅವಧಿಯ ಕೊನೆಯಲ್ಲಿ ಪ್ರೌಢಶಾಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವಿದ್ಯಾರ್ಥಿಗಳು ತಮ್ಮ ಮೂಲಭೂತ ಶಿಕ್ಷಣ ಅಥವಾ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ನಂತರ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಇಲ್ಲಿ ಗಳಿಸಿದ ಅಂಕಗಳೂ ಸಹ ಮುಖ್ಯವಾಗುತ್ತದೆ. ಆದ್ದರಿಂದ ಈ ಪರೀಕ್ಷೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಅಂಕಗಳನ್ನು ಗಳಿಸಲು ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ