ಶಾಲೆಯಲ್ಲಿ (School) ಎರಡನೇ ತರಗತಿ ಓದುತ್ತಿದ್ದ ಮಗುವೊಂದರ ನಡವಳಿಕೆ ಬದಲಾಗಿತ್ತು. ಮಗು ಇದ್ದಕ್ಕಿದ್ದಂತೆ ತನ್ನ ಅಪ್ಪ-ಅಮ್ಮನನ್ನು (Fateger - Mother) ಅಬ್ಬು-ಅಮ್ಮಿ ಎಂದು ಕರೆಯಲು ಶುರು ಮಾಡಿತ್ತು. ಆ ಮಗು ಈ ರೀತಿ ಕರೆಯುವುದಕ್ಕೆ ಕಾರಣ ಏನು ಎಂದು ಹುಡುಕಿ ಹೊರಟ ಪೋಷಕರಿಗೆ ತಿಳಿದಿದ್ದೇನೆಂದರೆ ಇದಕ್ಕೆ ಕಾರಣ ಶಾಲೆಯ ಪುಠ್ಯ ಪುಸ್ತಕ (Note Book) ಎಂಬುದು. ಸದ್ಯ ಈ ಕುರಿತು ಆ ಪೋಷಕರು ಮ್ಯಾಜಿಸ್ಟ್ರೇಟ್‌ನಲ್ಲಿ ದೂರನ್ನು ದಾಖಲಿಸಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?
ಡೆಹ್ರಾಡೂನ್‌ನಲ್ಲಿ ವಾಸವಿರುವ ಮನೀಷ್ ಮಿತ್ತಲ್‌ಗೆ ಅವತ್ತೊಂದು ದಿನ ಆಶ್ಚರ್ಯ ಕಾದಿತ್ತು. ಏಕೆಂದರೆ ಎರಡನೇ ತರಗತಿ ಓದುತ್ತಿದ್ದ ಮಗು ಅವರನ್ನು ಅಬ್ಬು ಎಂದು ಸಂಬೋಧಿಸಿತ್ತು. ಹಾಗೆಯೇ ಅಮ್ಮನನ್ನು ಅಮ್ಮಿ ಎಂದು ಕರೆಯತೊಡಗಿತ್ತು. ಇದನ್ನು ಕೇಳಿದ ಮನೀಶ್ ಹಾಗೂ ಅವರ ಪತ್ನಿಗೆ ಆಶ್ಚರ್ಯ ದ ಜೊತೆ ಆಘಾತವೂ ಆಯಿತು. ಇದೇನಿದು ನಮ್ಮ ಮಗುವಿಗೆ ಇದನ್ನು ಹೇಳಿಕೊಟ್ಟಿಲ್ಲವಲ್ಲ ಆದರೂ ಹೀಗೆ ಕರೆಯುತ್ತಿದೆ ಎಂಬುದಾಗಿ ಚಿಂತಿತರಾದರು. ಈ ಬಗ್ಗೆ ವಿಚಾರಿಸಲಾಗಿ ಮಗು ಇಂಗ್ಲೀಷ್ ಪುಸ್ತಕವನ್ನು ತೋರಿಸಿದೆ.
ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ದೂರು ಸಲ್ಲಿಕೆ!
ಪಠ್ಯ ಪುಸ್ತಕದಿಂದಾಗಿ ಮಗು 'ಅಬ್ಬು' ಮತ್ತು 'ಅಮ್ಮಿ' ಎಂದು ಸಂಬೋಧಿಸಿದ ನಂತರ ಆಘಾತಕ್ಕೊಳಗಾದ ಮಿತ್ತಲ್ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಔಪಚಾರಿಕವಾಗಿ ದೂರು ಸಲ್ಲಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅವರ ಶಾಲೆಯ ಇಂಗ್ಲಿಷ್ ಪಠ್ಯಪುಸ್ತಕ - ಗುಲ್ ಮೊಹರ್ ಭಾಗ II ಪಠ್ಯಪುಸ್ತಕದ ಅಧ್ಯಾಯವನ್ನು ಓದಿದ ನಂತರದಲ್ಲಿ ತಮ್ಮನ್ನು ಅಬ್ಬು ಹಾಗೂ ಪತ್ನಿಯನ್ನು 'ಅಮ್ಮಿ' ಎಂದು ಕರೆಯಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಕಾರಣದಿಂದಾಗಿ ಮನೀಶ್ ಮಿತ್ತಲ್ ಅವರು ಜಿಲ್ಲೆಯ 2 ನೇ ತರಗತಿ ವಿದ್ಯಾರ್ಥಿಗಳಿಗೆ ‘ಗುಲ್ ಮೊಹರ್ ಭಾಗ II’ ಪಠ್ಯಪುಸ್ತಕವನ್ನು ನಿಷೇಧಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಹುಡುಗನ ತಂದೆ ಹೇಳಿದರು, "ಇಂದು, ನನ್ನ ಮಗ ನನ್ನನ್ನು ಅಬ್ಬು ಮತ್ತು ನನ್ನ ಹೆಂಡತಿಯನ್ನು ಅಮ್ಮಿ ಎಂದು ಕರೆಯಲು ಪ್ರಾರಂಭಿಸಿದ್ದಾನೆ. ಅದು ನಮಗೆ ತುಂಬಾ ಆಘಾತಕಾರಿಯಾಗಿದೆ.
ಇದನ್ನೂ ಓದಿ: Goonj: ತಿಂಗಳಿಗೆ 20 ಸಾವಿರ ಸಿಗುವ ಈ ಫೆಲೋಶಿಪ್ಗೆ ನೀವೂ ಅಪ್ಲೈ ಮಾಡಿ
ನಾವು ಅವನನ್ನು ಕೇಳಿದಾಗ ಅವನು ತನ್ನ ಇಂಗ್ಲಿಷ್ ಪಠ್ಯಪುಸ್ತಕವನ್ನು ತೋರಿಸಿದನು. ಓರಿಯಂಟ್ ಬ್ಲ್ಯಾಕ್ ಸ್ವಾನ್, ಹೈದರಾಬಾದ್ ಪ್ರಕಟಿಸಿದ ಗುಲ್ ಮೊಹರ್ 2 ಮೊದಲ ಅಧ್ಯಾಯದಲ್ಲಿ ಕ್ರಮವಾಗಿ 'ಅಮ್ಮಿ' ಮತ್ತು 'ಅಬ್ಬು' ಅನ್ನು ತಾಯಿ ಮತ್ತು ತಂದೆಗೆ ಬಳಸಲಾಗಿದೆ. ಇದರಲ್ಲಿ ತಂದೆಯನ್ನು ಅಬ್ಬು ಎಂದು, ತಾಯಿಯನ್ನು ಅಮ್ಮಿ ಎಂದು ವಿವರಿಸಲಾಗಿದೆ ಎಂದು ಹೇಳಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ
ವರದಿಗಳ ಪ್ರಕಾರ, “ಹಿಂದಿ ಪುಸ್ತಕಗಳಲ್ಲಿ ‘ಮಾತಾ’, ‘ಪಿತಾ’ ಮತ್ತು ಉರ್ದು ಪುಸ್ತಕಗಳಲ್ಲಿ ‘ಅಮ್ಮಿ’ ಮತ್ತು ‘ಅಬ್ಬು’ ಬಳಸಬೇಕು. ಆದರೆ ಇಂಗ್ಲಿಷ್ ಪುಸ್ತಕದಲ್ಲಿ ಪೋಷಕರನ್ನು ಉಲ್ಲೇಖಿಸಲು ‘ಅಮ್ಮಿ’ ಮತ್ತು ‘ಅಬ್ಬು’ ಬಳಕೆ ಯಾವಾಗಲೂ ಅನುಚಿತವಾಗಿದೆ.
ಗುಲ್ ಮೊಹರ್ 2 ಪುಸ್ತಕವನ್ನು ಕೇವಲ ಡೆಹ್ರಾಡೂನ್‌ನಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಎಲ್ಲಾ ಐಸಿಎಸ್‌ಇ ಶಾಲೆಗಳಲ್ಲಿ ಶಿಫಾರಸು ಮಾಡಲಾಗಿದೆ” ಎಂದು ಮಿತ್ತಲ್ ತಿಳಿಸಿದ್ದಾರೆ.
“ಇಂಗ್ಲಿಷ್ ಶಾಲೆಗಳ ಪಠ್ಯಕ್ರಮದ ಭಾಗವಾಗಿದೆ ಮತ್ತು ಅಂತಹ ತಪ್ಪು ಅಭ್ಯಾಸಗಳನ್ನು ನಿಲ್ಲಿಸಬೇಕು. ಇದು ಗಂಭೀರವಾದ ವಿಷಯವಾಗಿದ್ದು, ನಮ್ಮ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ತೀವ್ರ ದಾಳಿಯಾಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಇದನ್ನು ತಡೆಯಲು ತ್ವರಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಮಿತ್ತಲ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೋನಿಕಾ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ. ಈ ಕುರಿತು ಮಾತನಾಡಿದ ಉತ್ತರಾಖಂಡದ ಶಾಲಾ ಶಿಕ್ಷಣ ವಿಭಾಗದ ಡಿಜಿ ಬನ್ಸಿಧರ್ ತಿವಾರಿ, ಈ ಸಂಬಂಧ ಸಮಗ್ರ ಅಭಿಪ್ರಾಯವನ್ನು ಆಲಿಸಿ ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ