• ಹೋಂ
  • »
  • ನ್ಯೂಸ್
  • »
  • Jobs
  • »
  • ICAI CA 2022 ಫೌಂಡೇಶನ್ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ಇಲ್ಲಿ ಚೆಕ್​ ಮಾಡಿ

ICAI CA 2022 ಫೌಂಡೇಶನ್ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ಇಲ್ಲಿ ಚೆಕ್​ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ಕೆಲವೊಂದು ಹಂತಗಳನ್ನು ಫಾಲೋ ಮಾಡಬೇಕಾಗುತ್ತದೆ. ನಿಮ್ಮ ಐಡಿ ನಂಬರ್​ ಮತ್ತು ಡೇಟ್​​ ಆಫ್​ ಬರ್ತ್​ ನೀಡಿ ನಂತರ ನಿಮ್ಮ ಖಾತೆ ತೆರೆಯುತ್ತದೆ. ಇದನ್ನು ಹೇಗೆ ಚೆಕ್ ಮಾಡಬಹುದು ಎಂದು ಕೆಲವು ಹಂತಗಳ ಮೂಲಕ ವಿವರಿಸಿದ್ದೇವೆ ನೋಡಿ.

  • News18 Kannada
  • 2-MIN READ
  • Last Updated :
  • New Delhi, India
  • Share this:

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ICAI CA ಫೌಂಡೇಶನ್ ಡಿಸೆಂಬರ್ 2022 ರ ಫಲಿತಾಂಶವನ್ನು ಇಂದು ಫೆಬ್ರವರಿ 3 ರಂದು ಬಿಡುಗಡೆ ಮಾಡಲಿದೆ. ಫೌಂಡೇಶನ್ ಪರೀಕ್ಷೆಗೆ (Exam) ಹಾಜರಾದ ಅಭ್ಯರ್ಥಿಗಳು icai ನಲ್ಲಿ ICAI ನ ಅಧಿಕೃತ ವೆಬ್‌ಸೈಟ್‌ನಿಂದ ಫಲಿತಾಂಶಗಳನ್ನು (Result) ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ನಾವು ಇಲ್ಲಿ ನೀಡಿರುವ ಮಾಹಿತಿಯನ್ನು (Information) ಅನುಸರಿಸಿ. ಇಲ್ಲಿ ನಾವು ಅಧಿಕೃತ ಜಾಲತಾಣದ (Website) ಮಾಹಿತಿಯನ್ನೂ ನೀಡಿದ್ಧೇವೆ ಇಲ್ಲಿ ಕ್ಲಿಕ್ (Click) ಮಾಡುವ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು. 


ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ಕೆಲವೊಂದು ಹಂತಗಳನ್ನು ಫಾಲೋ ಮಾಡಬೇಕಾಗುತ್ತದೆ. ನಿಮ್ಮ ಐಡಿ ನಂಬರ್​ ಮತ್ತು ಡೇಟ್​​ ಆಫ್​ ಬರ್ತ್​ ನೀಡಿ ನಂತರ ನಿಮ್ಮ ಖಾತೆ ತೆರೆಯುತ್ತದೆ. ಇದನ್ನು ಹೇಗೆ ಚೆಕ್ ಮಾಡಬಹುದು ಎಂದು ಕೆಲವು ಹಂತಗಳ ಮೂಲಕ ವಿವರಿಸಿದ್ದೇವೆ ನೋಡಿ.


ICAI CA ಫೌಂಡೇಶನ್ ಡಿಸೆಂಬರ್ ಫಲಿತಾಂಶ 2022: ಡೌನ್‌ಲೋಡ್ ಮಾಡುವುದು ಹೇಗೆ? 
ಹಂತ 1: icai.org ನಲ್ಲಿ ICAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ


ಹಂತ 2: CA ಫೌಂಡೇಶನ್ ಡಿಸೆಂಬರ್ ಫಲಿತಾಂಶಕ್ಕಾಗಿ ಗೊತ್ತುಪಡಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ.


ಇದನ್ನೂ ಓದಿ: UGC Guidelines: UGC Guidelines: ಭಾರತದಲ್ಲಿ ವಿದೇಶಿ ವಿಶ್ವವಿದ್ಯಾನಿಲಯದ ಸ್ಥಾಪನೆ; ಗಡುವು ವಿಸ್ತರಿಸಿದ ಯುಜಿಸಿ


ಹಂತ 3: ಹೊಸ ಪುಟದಲ್ಲಿ ಲಾಗಿನ್ ಮಾಡಿ


ಹಂತ 4: CA ಫೌಂಡೇಶನ್ ಡಿಸೆಂಬರ್ ಫಲಿತಾಂಶವನ್ನು ಡಿಸ್ಪ್ಲೇ ಮಾಡಲಾಗುತ್ತದೆ


ಹಂತ 5: CA ಫೌಂಡೇಶನ್ ಫಲಿತಾಂಶಗಳನ್ನು ಪರಿಶೀಲಿಸಿ ಮತ್ತು ಡೌನ್​​ಲೋಡ್​ ಮಾಡಿಕೊಳ್ಳಿ


ಹಂತ 6:  ICAI CA ಫೌಂಡೇಶನ್ ಫಲಿತಾಂಶದ ಹಾರ್ಡ್ ಪ್ರತಿಯನ್ನು ಇರಿಸಿಕೊಳ್ಳಿ. ಇದು ನಿಮಗೆ ಮುಂದಿನ ದಿನದಲ್ಲಿ ಅವಶ್ಯವಾಗಿರುತ್ತದೆ.


ಡಿಸೆಂಬರ್ 2022 ರ ಸಿಎ ಫೌಂಡೇಶನ್ ಪರೀಕ್ಷೆಯನ್ನು ಡಿಸೆಂಬರ್ 14 ರಿಂದ ಡಿಸೆಂಬರ್ 20 ರ ನಡುವೆ ಐಸಿಎಐ ನಡೆಸಿತು. ಇದು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲು ನಿರ್ಧರಿಸಲಾಗಿತ್ತು. ಪರೀಕ್ಷೆಯು ನಾಲ್ಕು ಪತ್ರಿಕೆಗಳನ್ನು ಒಳಗೊಂಡಿತ್ತು. ಪೇಪರ್ 1 ಮತ್ತು 2 ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆದರೆ, 3 ಮತ್ತು 4 ನೇ ಪತ್ರಿಕೆಗಳು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಡೆದಿತ್ತು. ಹಿಂದಿನ ವರ್ಷ ನಡೆದ ಈ ಪರೀಕ್ಷೆಯ ಫಲಿತಾಂಶವನ್ನು ಇದೀಗ ಬಿಡುಗಡೆ ಮಾಡಲಾಗಿದೆ.




2023 ರ ಐಸಿಎಐ ಮಧ್ಯಂತರ ಪರೀಕ್ಷೆಯು ಮೇ 3 ರಿಂದ 18 ರವರೆಗೆ ನಡೆಯಲಿದೆ ಮತ್ತು ಅಂತಿಮ ಪರೀಕ್ಷೆಯು ಮೇ 2 ರಿಂದ 17 ರವರೆಗೆ ನಡೆಯಲಿದೆ. ಸಿಎ ಅಂತಿಮ ಮತ್ತು ಮಧ್ಯಂತರ ಫಲಿತಾಂಶಗಳನ್ನು ಜನವರಿ 10 ರಂದು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಸಿಎ ಅಂತಿಮ ಮತ್ತು ಇಂಟರ್ ಪರೀಕ್ಷೆಗಳಲ್ಲಿ ಕನಿಷ್ಠ 40 ಪ್ರತಿಶತ ಅಂಕಗಳನ್ನು ಗಳಿಸಬೇಕಾಗಿತ್ತು ಮತ್ತು ಶೇಕಡಾ 50 ರಷ್ಟು ಅಂಕಗಳನ್ನು ಗಳಿಸಬೇಕಾಗಿತ್ತು.


ICAI CA ಇಂಟರ್ ಪರೀಕ್ಷೆಗಳನ್ನು ನವೆಂಬರ್ 2 ರಿಂದ 17 ರವರೆಗೆ ನಡೆಸಲಾಗಿತ್ತು


ICAI CA ಇಂಟರ್ ಪರೀಕ್ಷೆಗಳನ್ನು ನವೆಂಬರ್ 2 ರಿಂದ 17 ರವರೆಗೆ ನಡೆಸಲಾಯಿತು, ಆದರೆ CA ಅಂತಿಮ ಪರೀಕ್ಷೆಯನ್ನು ನವೆಂಬರ್ 1 ರಂದು ನಡೆಸಲಾಯಿತು. ಒಟ್ಟು 11.09 ರಷ್ಟು ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು 12.72 ರಷ್ಟು ವಿದ್ಯಾರ್ಥಿಗಳು ಇಂಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.


ಈ ಬಾರಿ 12,825 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ


ಸಿಎ ಪರೀಕ್ಷೆಯಲ್ಲಿ 12,825 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಹರ್ಷ ಚೌಧರಿ ಸಿಎ ಅಂತಿಮ ಪರೀಕ್ಷೆಯಲ್ಲಿ 800 ಅಂಕಗಳಿಗೆ 618 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದೀಕ್ಷಾ ಗೋಯಲ್ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು