• Home
  • »
  • News
  • »
  • jobs
  • »
  • Freelancer: ಫ್ರಿಲ್ಯಾನ್ಸಿಂಗ್ ಕ್ಷೇತ್ರದಲ್ಲಿ ಹೊಸಬರು ಎದುರಿಸಬೇಕಾದ ಸವಾಲುಗಳೇನು?

Freelancer: ಫ್ರಿಲ್ಯಾನ್ಸಿಂಗ್ ಕ್ಷೇತ್ರದಲ್ಲಿ ಹೊಸಬರು ಎದುರಿಸಬೇಕಾದ ಸವಾಲುಗಳೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉದ್ಯೋಗಿಗಳು ಧೃತಿಗೆಡದೆ ತಮ್ಮ ಬದುಕನ್ನು ಅಂತ್ಯಗೊಳಿಸದೇ ಬದುಕುವ ಹಲವಾರು ವಿಧಾನಗಳತ್ತ ಮುಖಮಾಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ.

  • Share this:

ಟೆಕ್ ತಂತ್ರಜ್ಞಾನದಲ್ಲಿ (Technical ) ಇಂದು ಉದ್ಯೋಗಿ ವಜಾಗೊಳಿಸುವಿಕೆ ಬರಸಿಡಿಲಿನಂತೆ ಬಂದೆರಗಿದೆ. ಉತ್ತಮ ವೇತನಗಳು, ಉಚಿತ ಆಹಾರ ಕಂಪನಿಯ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡಿದ್ದ ಅದೆಷ್ಟೋ ಉದ್ಯೋಗಿಗಳು ಮುಂದೇನು ಎಂಬ ಗೊಂದಲದಲ್ಲಿದ್ದಾರೆ. ಅವರ ಅದೆಷ್ಟೋ ಕನಸುಗಳನ್ನು ಈ ವಜಾಗೊಳಿಸುವಿಕೆ ಧೂಳೀಪಟ ಮಾಡಿದೆ. ಅದಾಗ್ಯೂ ಉದ್ಯೋಗಿಗಳು ಧೃತಿಗೆಡದೆ ತಮ್ಮ ಬದುಕನ್ನು ಅಂತ್ಯಗೊಳಿಸದೇ ಬದುಕುವ ಹಲವಾರು ವಿಧಾನಗಳತ್ತ ಮುಖಮಾಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಜೀವನದಲ್ಲಿ ಏರುಪೇರುಗಳುಂಟಾಗುವುದು ಸಹಜ ಅಂತೆಯೇ ಈ ವಜಾಗೊಳಿಸುವಿಕೆ ಕೂಡ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಪರೀಕ್ಷಿಸುವ ಒಂದು ಸವಾಲು ಎಂದು ಪರಿಗಣಿಸಿ ಮುಂದೆ ಭವಿಷ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ನಿರ್ಮಿಸಬಹುದು ಎಂಬುದಕ್ಕೆ ಮಹತ್ವ ನೀಡಿ ಎಂದೇ ನುರಿತ ವ್ಯಕ್ತಿಗಳು ಕಿವಿಮಾತು ನೀಡಿದ್ದಾರೆ. ಫ್ರಿಲ್ಯಾನ್ಸಿಂಗ್ (Freelanching) ವೃತ್ತಿ ಇಂತಹುದೇ ದಾರಿತೋರಿಸುವ ವಿಧಾನವಾಗಿ ಇಂದು ಹಲವಾರು ಉದ್ಯೋಗಿಗಳ ಕೈಹಿಡಿದಿದೆ.


ಅನುಭವ ಇಲ್ಲದವರು ಫ್ರಿಲ್ಯಾನ್ಸಿಂಗ್ ವೃತ್ತಿಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ


ಯಾವುದೇ ಹೆಚ್ಚಿನ ಅನುಭವ ಇಲ್ಲದೆಯೇ ಇಂದು ಅದೆಷ್ಟೋ ಉದ್ಯೋಗಿಗಳು ಫ್ರಿಲ್ಯಾನ್ಸಿಂಗ್‌ನಲ್ಲಿ ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಇನ್ನು ಫ್ರಿಲ್ಯಾನ್ಸಿಂಗ್‌ನಲ್ಲಿ ಅನುಭವ ಹೊಂದಿದವರು ಹೆಚ್ಚು ಆಶಾವಾದಿಗಳಾಗಿದ್ದು ಹೆಚ್ಚು ಉತ್ಸಾಹಭರಿತರಾಗಿದ್ದಾರೆ ಎಂಬುದಕ್ಕೆ ಹಲವಾರು ಸಮೀಕ್ಷೆಗಳು ಅಂಕಿಅಂಶಗಳನ್ನು ನೀಡಿವೆ. ಆಶಾವಾದಿಗಳೆಂದು ತಮ್ಮನ್ನು ಕರೆದುಕೊಳ್ಳುವ ಫ್ರಿಲ್ಯಾನ್ಸರ್‌ಗಳ ಪ್ರಮಾಣ 65% ದಷ್ಟಿದ್ದು ಹೆಚ್ಚು ಬದ್ಧತೆಯುಳ್ಳವರು ಎಂದು ತಮ್ಮನ್ನು ಪರಿಗಣಿಸುವವರು 66% ಅಂತೆಯೇ ಹೊಣೆಗಾರಿಕೆಯುಳ್ಳವರು ಎಂದು ಪರಿಗಣಿಸುವವರು 70% ಎಂಬುದಾಗಿ ತಿಳಿದುಬಂದಿದೆ.


ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಸಮತೋಲನ


ಈ ಸಮೀಕ್ಷೆಗಳು ತಿಳಿಸಿರುವ ಅಂಶಗಳೆಂದರೆ ಮೂರನೇ ಎರಡರಷ್ಟು ಫ್ರಿಲ್ಯಾನ್ಸರ್‌ಗಳು ತಮ್ಮ ವೃತ್ತಿಯನ್ನು ಆನಂದಿಸುತ್ತಿದ್ದು ಹಣಕಾಸಿನ ಫಲಿತಾಂಶಗಳಿಂದ ತೃಪ್ತರಾಗಿದ್ದಾರೆ ಅಂತೆಯೇ ತಮ್ಮ ವೃತ್ತಿಯಲ್ಲಿ ಹೆಚ್ಚು ಕಾರ್ಯತತ್ಪರರಾಗಲು ಮತ್ತು ಆರಾಮದಾಯಕ ವೇತನವನ್ನು ಗಳಿಸಲು ಹೆಚ್ಚಿನ ಅವಕಾಶ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕೆಲಸ, ಕೆಲಸದ ವೇಳೆ, ಉದ್ಯೋಗ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ನಿಯಂತ್ರಣ ಹಾಗೂ ಸಾಮರಸ್ಯವನ್ನು ಗಳಿಸಿದ್ದಾರೆ ಎಂಬುದಾಗಿ ಈ ಅಂಕಿಅಂಶ ತಿಳಿಸಿದೆ.


ಆರಂಭದಲ್ಲಿ ಫ್ರಿಲ್ಯಾನ್ಸರ್‌ಗಳಿಗೆ ಸವಾಲು ಹೆಚ್ಚು


ಅನೇಕ ವೃತ್ತಿಪರರು ಫ್ರಿಲ್ಯಾನ್ಸಿಂಗ್ ಆಕರ್ಷಕ ವೃತ್ತಿಯೆನಿಸಿದ್ದು ಮೊದಲಿಗೆ ಆರಂಭಿಸುವುದು ಹಾಗೂ ಅಂದುಕೊಂಡ ಯಶಸ್ಸು ಗಳಿಸುವುದು ಕೊಂಚ ಸವಾಲಿನಿಂದ ಕೂಡಿರಬಹುದು ಅದಾಗ್ಯೂ ನಿಧಾನಗತಿಯಲ್ಲಿ ಇವುಗಳ ಮೇಲೆ ಹಿಡಿತ ಸಾಧಿಸಬಹುದು ಎಂಬುದು ಪರಿಣಿತರ ಹಾಗೂ ಫ್ರಿಲ್ಯಾನ್ಸಿಂಗ್ ವೃತ್ತಿಪರರ ಮಾತಾಗಿದೆ.


ಇದನ್ನೂ ಓದಿ: ಪೇಪರ್​ ಸೈನ್ಸ್​ ಇಂಜಿನಿಯರಿಂಗ್​ ಎಂದರೇನು? ಈ ಕೋರ್ಸ್​ ಮಾಡಿದರೆ ಏನು ಲಾಭ ಇದೆ ನೋಡಿ


ಫ್ರಿಲ್ಯಾನ್ಸಿಂಗ್ ವೃತ್ತಿಯಲ್ಲಿ ಹೊಸಬರಾಗಿರುವ ಹೆಚ್ಚಿನವರು ತಮ್ಮ ಮೊದಲ ವರ್ಷದ ಫ್ರಿಲ್ಯಾನ್ಸಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ ಎಂಬುದಾಗಿ ಜಾಗತಿಕ ಸಮೀಕ್ಷೆ ಕಂಡುಹಿಡಿದಿದೆ. ಏಕೆಂದರೆ ಈ ಸಮೀಕ್ಷೆಯು ಕೆಲವೊಂದು ವಿಭಾಗಗಳಲ್ಲಿ ಫ್ರಿಲ್ಯಾನ್ಸರ್‌ಗಳು ಎದುರಿಸುವ ಸವಾಲುಗಳನ್ನು ಪಟ್ಟಿಮಾಡಿದ್ದು ಅದರಿಂದ ಹೊರಬರಲು ಹೇಗೆ ಕಷ್ಟಪಟ್ಟರು ಎಂಬುದನ್ನು ವಿವರಿಸಿದೆ.


ಫ್ರಿಲ್ಯಾನ್ಸರ್‌ಗಳು ಎದುರಿಸಿದ ಸವಾಲುಗಳು, ಕಲಿತ ಪಾಠಗಳು


ಫ್ರಿಲ್ಯಾನ್ಸರ್‌ಗಳೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಕೆಲಸ, ಟೈಮ್‌ಲೈನ್‌ಗಳು ಸಾಮಾನ್ಯವಾಗಿ ನ್ಯಾಯೋಚಿತ ಮತ್ತು ವಾಸ್ತವಿಕವಾಗಿರುತ್ತವೆ ಎಂಬದನ್ನು ಅರಿತುಕೊಳ್ಳುವುದು ಈ ಕ್ಲೈಂಟ್‌ಗೆ ಫ್ರಿಲ್ಯಾನ್ಸರ್‌ಗಳಿಂದ ಉತ್ತಮ ಗುಣಮಟ್ಟದ ಕೆಲಸದ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳುವುದು, ಕ್ಲೈಂಟ್‌ಗೆ ಫ್ರಿಲ್ಯಾನ್ಸರ್‌ಗಳೊಂದಿಗೆ ಹೇಗೆ ಕೆಲಸ ಮಾಡಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಮೊದಲಾದ ಅಂಶಗಳನ್ನು ಅರಿತುಕೊಂಡರು ಇನ್ನಿತರು ಸವಾಲಾಗಿ ಕಂಡರು.


ಈ ವೃತ್ತಿಯಲ್ಲಿರುವ ಹೊಸ ಫ್ರಿಲ್ಯಾನ್ಸರ್‌ಗಳನ್ನು ಸವಾಲುಗಳು ಬೆಂಬಿಡದೆ ಹಿಂಬಾಲಿಸಿವೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. 44% ದಷ್ಟು ಫ್ರಿಲ್ಯಾನ್ಸರ್‌ಗಳಿಗೆ ತಕ್ಕಮಟ್ಟಿಗಿನ ಸಂಭಾವನೆ ದೊರಕಿದೆ ಎಂಬುದು ಸಮೀಕ್ಷೆ ತಿಳಿಸಿದ್ದರೆ ಇನ್ನು ಕೆಲವರಿಗೆ ಯಾವುದೇ ವೇತನ ದೊರೆತಿಲ್ಲ ಎಂಬುದು ವರದಿಯಾಗಿದೆ. ಈ ಕ್ಷೇತ್ರದಲ್ಲಿ ಹೊಸದಾಗಿ ಕೆಲಸ ಪಡೆದುಕೊಳ್ಳುವವರು ಸ್ಪರ್ಧಾತ್ಮಕ ದರ ಅಥವಾ ತಮ್ಮ ಉದ್ಯೋಗಕ್ಕೆ ಸೂಕ್ತವಾದ ಬೆಲೆಯನ್ನು ನಿಶ್ಚಯಿಸಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ.


ಹೊಸದಾಗಿ ಫ್ರಿಲ್ಯಾನ್ಸಿಂಗ್ ವೃತ್ತಿಯನ್ನು ಆರಂಭಿಸುವವರಿಗೆ ಮುಖ್ಯ ಸಲಹೆಗಳು ಹೀಗಿವೆ: 


ಯಶಸ್ಸಿನ ಮೆಟ್ಟಿಲುಗಳನ್ನು ನಿರ್ಮಿಸಿಕೊಳ್ಳುವುದು ಹೇಗೆ


ಆದಷ್ಟು ಪ್ರಾಜೆಕ್ಟ್‌ಗಳ ಕುರಿತು ಮಾಹಿತಿ ಕಲೆಹಾಕಿ ಹಿರಿಯ ಫ್ರಿಲ್ಯಾನ್ಸಿಂಗ್ ವ್ಯಕ್ತಿಗಳೊಂದಿಗೆ ಸಮಾಲೋಚಿಸಿ. ಇನ್ನು ಕಂಪನಿಗಳು ಕೂಡ ಹೊಸ ಫ್ರಿಲ್ಯಾನ್ಸಿಂಗ್ ತಂಡಗಳೊಂದಿಗೆ ನೇರವಾಗಿರಿ ಎಂದು ಪರಿಣಿತರ ಸಲಹೆ ನೀಡಿದ್ದಾರೆ. ಹೊಸ ಸ್ವತಂತ್ರೋದ್ಯೋಗಿಗಳೊಂದಿಗೆ ಜಾಗತಿಕ ಸಮೀಕ್ಷೆಯಿಂದ ಡೇಟಾವನ್ನು ಹಂಚಿಕೊಳ್ಳಿ. ಫ್ರಿಲ್ಯಾನ್ಸರ್‌ಗಳು ಮುಖ್ಯವಾಗಿ ಸಂಪರ್ಕವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ವ್ಯಾಪಾರ ಅಭಿವೃದ್ಧಿ ಕ್ಲೈಂಟ್ ಯಶಸ್ಸಿನ ನಿರ್ವಹಣೆಯ ಅಂಶಗಳನ್ನು ಅರಿತುಕೊಂಡಿರಬೇಕು.


Which topic is best for freelancing, What are the best freelancing skills in 2022, What are the most important things you need for freelancing, Which skill is best in freelancer, kannada News, Karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಫ್ರೀಲ್ಯಾನ್ಸಿಂಗ್ ಮಾಡುವಾಗ ಈ ಟಿಪ್ಸ್​ ಫಾಲೋ ಮಾಡಿ, ಸಹಾಯದ ಅಗತ್ಯವಿರುವವರಿಗೆ ಗಮನ ನೀಡುವುದು
ಸಾಂಕೇತಿಕ ಚಿತ್ರ


ಕೆಲಸಕ್ಕೆ ಸೂಕ್ತ ಪಾವತಿ


ಆರಂಭದಲ್ಲಿ ದೊರೆತ ಫ್ರಿಲ್ಯಾನ್ಸಿಂಗ್‌ನಲ್ಲಿ ಕೊಂಚವಾದರೂ ಹಣಗಳಿಸುವುದು ಯಾರಿಗಾದರೂ ಮುಂದೆ ಕೆಲಸ ಮಾಡುವುದಕ್ಕೆ ಪ್ರೇರೇಪಣೆಯನ್ನು ಒದಗಿಸುತ್ತದೆ ಹಾಗೂ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಭಯ ಅನಿಶ್ಚತತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಮುಂದಿನ ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳಲು ಹುರಿದುಂಬಿಸುತ್ತದೆ. ಇನ್ನು ಕೆಲವು ಫ್ರಿಲ್ಯಾನ್ಸಿಂಗ್ ಕಂಪನಿಗಳು ಕೂಡ ತಮ್ಮ ಫ್ರಿಲ್ಯಾನ್ಸರ್‌ಗಳಿಗೆ ಮುಂದೆ ಬರುವ ಅವಕಾಶವನ್ನು ಒದಗಿಸಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. Hoxby.com ಮತ್ತು Contra.com ನಂತಹ ಫ್ರಿಲ್ಯಾನ್ಸಿಂಗ್ ಕಂಪನಿಗಳು ತಮ್ಮ ಸ್ವತಂತ್ರ ಉದ್ಯೋಗಿಗಳಿಗೆ ಮೊದಲ ಪ್ರಾಜೆಕ್ಟ್‌ನಲ್ಲಿ ವೇತನವನ್ನು ನೀಡುತ್ತವೆ. ಕೆಲಸಕ್ಕೆ ಪಾವತಿ ಮುಖ್ಯ ಆದ್ಯತೆಯಾದಾಗ ಹೆಚ್ಚಿನ ಸಂಸ್ಥೆಗಳು ತಮ್ಮ ಫ್ರಿಲ್ಯಾನ್ಸರ್‌ಗಳಿಗೆ ವೇತನ ನೀಡುವ ಪ್ರಕ್ರಿಯೆಗೆ ಮುಂದಾಗುತ್ತವೆ


ಪ್ರಾಜೆಕ್ಟ್‌ಗಳ ಆಯ್ಕೆಯತ್ತ ಗಮನಹರಿಸಿ


ಯಾವುದೇ ಸಂಸ್ಥೆಯ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಮೊದಲು ಆ ಸಂಸ್ಥೆಗಳ ಬೇಡಿಕೆ ಏನು ಎಂಬುದನ್ನು ಅರಿತುಕೊಳ್ಳಿ. ಯೋಜನೆಗಳ ಆಯ್ಕೆ ನಿಮ್ಮಲ್ಲಿರಲಿ. ಪ್ರಾಜೆಕ್ಟ್ ಕಷ್ಟ ಎಂಬುದು ನಿಮಗನ್ನಿಸಿದಲ್ಲಿ ಅದನ್ನು ಕಷ್ಟಪಟ್ಟು ಮುಗಿಸಬೇಕಾದ ಅನಿವಾರ್ಯತೆ ಇಲ್ಲ. ಸುಲಭವಾಗಿರುವ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಿ. ಈ ಪ್ರಾಜೆಕ್ಟ್ ನಿಮ್ಮಲ್ಲಿರುವ ಕ್ರಿಯಾತ್ಮಕತೆಗೆ ಸೂಕ್ತವಾಗಿದೆಯೇ ಎಂಬ ಅಂಶವನ್ನು ಕಂಡುಕೊಳ್ಳಿ. ಫ್ರಿಲ್ಯಾನ್ಸರ್‌ಗಳು ಬರೇ ವೇತನಕ್ಕೆ ಮಾತ್ರವೇ ಗಮನ ನೀಡಿ ಪ್ರಾಜೆಕ್ಟ್‌ಗಳ ಆಯ್ಕೆಯಲ್ಲಿ ರೇಸ್‌ನಂತೆ ಭಾಗವಹಿಸಬಾರದು ಎಂಬುದು ಪರಿಣಿತರ ಅಭಿಪ್ರಾಯವಾಗಿದೆ


ಆಕರ್ಷಕ ರೆಸ್ಯೂಮೆ ನಿರ್ಮಿಸಿ


ಹೆಚ್ಚು ವೇತನ ಗಳಿಸಬೇಕೆಂಬ ಹುಮ್ಮಸ್ಸಿನಲ್ಲಿ ಕೈಗೆ ಸಿಕ್ಕಾ ಎಲ್ಲಾ ಪ್ರಾಜೆಕ್ಟ್‌ಗಳನ್ನು ಮಾಡದಿರಿ ಎಂಬುದು ಅವರ ಸಲಹೆಯಾಗಿದೆ. ಪ್ರಾಜೆಕ್ಟ್‌ಗಳು ಹೇಗಿದೆ ಇದನ್ನು ಮಾಡಲು ಎಷ್ಟು ಸಮಯ ತಗಲುತ್ತದೆ ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುತ್ತದೆಯೇ ಮೊದಲಾದ ಲೆಕ್ಕಾಚಾರಗಳನ್ನು ನಡೆಸಿ ಎಂಬುದು ಪರಿಣಿತರ ಸಲಹೆಯಾಗಿದೆ.


ಫ್ರಿಲ್ಯಾನ್ಸರ್‌ಗಳು ರೆಸ್ಯೂಮೆಯನ್ನು ನಿರ್ಮಿಸುವ ಸಮಯದಲ್ಲಿ ಕೂಡ ಅವರ ಬಗೆಗಿನ ಮಾಹಿತಿಗಳನ್ನು ಸರಿಯಾಗಿ ನಮೂದಿಸಿರಬೇಕು ಎಂಬುದಾಗಿ ಪರಿಣಿತರು ತಿಳಿಸಿದ್ದಾರೆ. ಸಂದರ್ಶಕರು ನಿಮ್ಮನ್ನು ಏಕೆ ಈ ಪ್ರಾಜೆಕ್ಟ್‌ಗಾಗಿ ನೇಮಿಸಿಕೊಳ್ಳುತ್ತಿದ್ದಾರೆ ಎಂಬ ಅರಿವು ನಿಮಗಿರಬೇಕು. ಇದಕ್ಕಾಗಿ ಸ್ವಲ್ಪ ಶ್ರಮ ವಿನಿಯೋಗಿಸಿ ಹಾಗೂ ನಿಮ್ಮ ಪೋರ್ಟ್‌ಫೊಲಿಯೋವನ್ನು ಆಕರ್ಷಕವಾಗಿಸಿ


ಅನುಭವಿ ಫ್ರಿಲ್ಯಾನ್ಸರ್‌ಗಳ ಸಹಾಯ


ಫ್ರಿಲ್ಯಾನ್ಸಿಂಗ್ ವೃತ್ತಿಯನ್ನು ಆರಂಭಿಸುವ ಮೊದಲು ನಿಮ್ಮ ಪರಿಚಯದ ಅನುಭವಿ ಫ್ರಿಲ್ಯಾನ್ಸರ್‌ಗಳ ಸಹಾಯವನ್ನು ಪಡೆದುಕೊಳ್ಳಿ. ಅವರಿಂದ ಇನ್ನಷ್ಟು ಕ್ಲೈಂಟ್‌ಗಳ ಸಂಪರ್ಕವನ್ನು ಪಡೆಯಿರಿ. ಲಿಂಕ್ಡ್‌ಇನ್, ನೌಕರಿ ಮೊದಲಾದ ಉದ್ಯೋಗ ಪೋರ್ಟಲ್‌ಗಳ ಸಹಾಯದಿಂದ ಅನುಭವಿ ಫ್ರಿಲ್ಯಾನ್ಸರ್‌ಗಳ ವಲಯವನ್ನು ಸೇರಿಕೊಳ್ಳಿ. ಅನುಭವಿ ಹಾಗೂ ಯಶಸ್ವಿ ಫ್ರಿಲ್ಯಾನ್ಸರ್‌ಗಳ ನೆರವನ್ನು ಪಡೆದುಕೊಳ್ಳುವುದು ಯಶಸ್ಸಿನ ಕೀಲಿಕೈ ಆಗಿದೆ.


ಉತ್ತಮ ಕ್ಲೈಂಟ್‌ಗಳ ಆಯ್ಕೆ


ನೀವು ಆರಿಸಿಕೊಂಡಿರುವ ಕ್ಲೈಂಟ್ ಉತ್ತಮ ಆಯ್ಕೆಯಾಗಿದೆಯೇ? ಇದು ಸರಿಯಾದ ಪ್ರಾಜೆಕ್ಟ್ ಆಗಿದೆಯೇ? ಹೀಗೆ ನಿಮ್ಮಷ್ಟಕ್ಕೆ ನಿಮ್ಮನ್ನು ಕೇಳಿಕೊಳ್ಳಿ.


ಫ್ರಿಲ್ಯಾನ್ಸರ್ ವಿದ್ಯಾಭ್ಯಾಸ


ನೀವು ಎಷ್ಟೇ ಉನ್ನತ ವಿದ್ಯಾಭ್ಯಾಸವನ್ನು ಹೊಂದಿದ್ದರೂ ಫ್ರಿಲ್ಯಾನ್ಸಿಂಗ್ ವೃತ್ತಿಯನ್ನು ಆರಂಭಿಸುವಾಗ ಸಂಬಂಧಿತ ಕೋರ್ಸ್‌ಗಳು ಹಾಗೂ ಉನ್ನತ ಪರಿಕರಗಳ ಅರಿವನ್ನು ಹೆಚ್ಚಿಸಿಕೊಳ್ಳುವುದು ಹೆಚ್ಚೆಚ್ಚು ಪ್ರಾಜೆಕ್ಟ್‌ಗಳನ್ನು ಆಯ್ಕೆಮಾಡಿಕೊಳ್ಳಲು ಸಹಕಾರಿಯಾಗಿದೆ. UK ಫ್ರಿಲ್ಯಾನ್ಸಿಂಗ್ ಪ್ಲ್ಯಾಟ್‌ಫಾರ್ಮ್‌ ಆದ Underpinned.com, ಫ್ರೀಲ್ಯಾನ್ಸಿಂಗ್‌ನ ಮೂಲಭೂತ ಅಂಶಗಳ ಬಗ್ಗೆ ಹೆಚ್ಚು ಗೌರವಾನ್ವಿತ ಶಿಕ್ಷಣವನ್ನು ಒದಗಿಸುತ್ತದೆ ಮತ್ತು ಯಶಸ್ಸಿಗಾಗಿ ಹೊಸ ಸ್ವತಂತ್ರೋದ್ಯೋಗಿಗಳನ್ನು ತಯಾರು ಮಾಡುತ್ತದೆ. Freelancebusiness.eu ಹೊಸ ಮತ್ತು ಅನುಭವಿ ಸ್ವತಂತ್ರೋದ್ಯೋಗಿಗಳಿಗೆ ಅತ್ಯುತ್ತಮ ಮುಂದುವರಿದ ಶಿಕ್ಷಣವನ್ನು ನೀಡುತ್ತದೆ. ಹೀಗೆ ನಿಮ್ಮ ವೃತ್ತಿಗೆ ಸರಿಹೊಂದುವ ಅನೇಕ ತರಬೇತಿಗಳನ್ನು ಮೂಲಶಿಕ್ಷಣವನ್ನು ಈ ಶಿಕ್ಷಣ ವೇದಿಕೆಗಳ ಮೂಲಕ ಪಡೆದುಕೊಳ್ಳಬಹುದಾಗಿದೆ.


ಹೆಚ್ಚು ಸಹಾಯದ ಅಗತ್ಯವಿರುವವರಿಗೆ ಗಮನ ನೀಡುವುದು


ಯಾವುದೇ ಫ್ರಿಲ್ಯಾನ್ಸರ್‌ಗಳು ತಮ್ಮ ವೃತ್ತಿಯ ಆರಂಭದಲ್ಲಿ ಹೆಚ್ಚಿನ ಸವಾಲುಗಳನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ಅವರ ವಲಯದಲ್ಲಿರುವ ಅನುಭವಿ ಫ್ರಿಲ್ಯಾನ್ಸರ್‌ಗಳು ಹಾಗೂ ಫ್ರಿಲ್ಯಾನ್ಸರ್‌ಗಳನ್ನು ನೇಮಕ ಮಾಡುವ ಸಂಸ್ಥೆಗಳು ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಜಾಗತಿಕ ಸರ್ವೇ ನೀಡಿರುವ ಅಂಕಿ ಅಂಶದ ಪ್ರಕಾರ ಮೂರನೇ ಎರಡರಷ್ಟು ಸ್ವತಂತ್ರೋದ್ಯೋಗಿಗಳು Upwork.com ಮತ್ತು ಇತರರ ಸಂಸ್ಥೆಗಳ ಬೇಡಿಕೆಗಳಿಗೆ ಅನುಗುಣವಾಗಿ ಉದ್ಯೋಗ ಕ್ಷೇತ್ರದಲ್ಲಿ ಸಂತಸಗೊಂಡಿದ್ದಾರೆ. ಆದರೆ ಉಳಿದು ಮೂರನೇ ಭಾಗ ಕಡಿಮೆ ಯಶಸ್ವಿಯಾಗಿದ್ದಾರೆ ಇದಕ್ಕೆ ಕಾರಣ ಅವರು ಆಯ್ದುಕೊಂಡಿರುವ ಕ್ಷೇತ್ರದಲ್ಲಿ ತೃಪ್ತಿ ಇಲ್ಲದೇ ಇರುವುದಾಗಿದೆ.

First published: