• Home
  • »
  • News
  • »
  • jobs
  • »
  • Book: ಪುಸ್ತಕ ಬರೆಯುವ ಆಸೆಯಿದೆ, ಆದ್ರೆ ಬರಿಯೋಕೆ ಆಗ್ತಿಲ್ಲ ಅನ್ನೋರು ಇಲ್ಲಿ ಗಮನಿಸಿ

Book: ಪುಸ್ತಕ ಬರೆಯುವ ಆಸೆಯಿದೆ, ಆದ್ರೆ ಬರಿಯೋಕೆ ಆಗ್ತಿಲ್ಲ ಅನ್ನೋರು ಇಲ್ಲಿ ಗಮನಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೀವು ಬರವಣಿಗೆ ಅಭ್ಯಾಸವನ್ನು ಶುರು ಮಾಡಿದರೆ ಮೊದಲೇ ದೊಡ್ಡ ಬುಕ್‌ಗಳನ್ನು ಇಲ್ಲವೋ ಜರ್ನಲ್‌ಗಳನ್ನು ಬರೆಯಬೇಕಂತಿಲ್ಲ. ಮೊದಲಿಗೆ ಸಣ್ಣ ಕಥೆ, ಕವನ ಇವುಗಳಿಂದ ಆರಂಭಿಸಿ. ಅಥವಾ ನಿಮ್ಮ ಪ್ರತಿದಿನದ ಕಾರ್ಯಕ್ರಮಗಳನ್ನು, ದಿನಚರಿಯನ್ನು ಬರೆಯಿರಿ. ಸಣ್ಣದಾಗಿ ಆರಂಭಿಸಿ ನಂತರ ಬೇಕಾದಲ್ಲಿ ಸಮಯವನ್ನು ಅಥವಾ ಪದಗಳನ್ನು ಬರವಣಿಗೆಯಲ್ಲಿ ವಿಸ್ತರಿಸಿ. ಇದು ನಿಮ್ಮನ್ನು ದೀರ್ಘಾಕಾಲ ಬರೆಯಲು ಪ್ರೋತ್ಸಾಹಿಸುತ್ತದೆ.

ಮುಂದೆ ಓದಿ ...
  • Share this:

ಬರವಣಿಗೆ (Writing) ಪ್ರತಿಯೊಬ್ಬರಿಗೂ ಅಗತ್ಯವಿರುವ ಕೌಶಲ್ಯ. ಬರವಣಿಗೆ ಅಂತಾ ಹೇಳಿದ ಕೂಡಲೇ "ಬರೆದರೆ ಮುತ್ತು ಪೋಣಿಸಿದಂತಿರಬೇಕು" ಎಂದು ಶಾಲೆಯಲ್ಲಿ ಹೇಳುತ್ತಿದ್ದ ಮೇಷ್ಟ್ರು ನಮಗೆ ನೆನಪಾಗಬಹುದು. ಕೇವಲ ಓದುವುದರಿಂದ ಜ್ಞಾನ ಹೆಚ್ಚಾಗುವುದಿಲ್ಲ. ಬದಲಿಗೆ, ಓದಿದ್ದನ್ನು (Reading) ನಮ್ಮ ಸ್ವಂತ ಪದಗಳಲ್ಲಿ ಬರೆದಾಗಲೇ ಜ್ಞಾನ ದುಪ್ಪಟ್ಟಾಗೋದು. ಶಾಲೆಯಲ್ಲಿ (School) ಕೂಡ ಓದಿದನ್ನು ಹೆಚ್ಚು ನೆನಪಿಟ್ಟುಕೊಳ್ಳಲು ಬರೆದು ಕಲಿಯಿರಿ, ಕಲಿತು ಬರೆಯಿರಿ ಅಂತಾ ನಮ್ಮ ಶಿಕ್ಷಕರು (Teacher) ಸಲಹೆ ನೀಡುತ್ತಿದ್ದರು.


ಹೌದು ಬರವಣಿಗೆ ನಮ್ಮ ಕೌಶಲ್ಯವನ್ನು ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುವುದರ ಜೊತೆಗೆ ಇತರ ಪ್ರಯೋಜನಗಳನ್ನು ಹೊಂದಿದೆ.


ಸೃಜನಶೀಲತೆ ಹೆಚ್ಚಿಸುವ ಕಲೆ


ನಿಮ್ಮ ಆಲೋಚನೆಗಳನ್ನು ಸ್ಪಷ್ಟಪಡಿಸಲು ಮತ್ತು ಅವುಗಳನ್ನು ತಾರ್ಕಿಕವಾಗಿ ಜೋಡಿಸಲು ಬರವಣಿಗೆ ನಿಮ್ಮನ್ನು ಉತ್ತೇಜಿಸುತ್ತದೆ. ಇದು ನಿಮಗೆ ಹೆಚ್ಚು ಸೃಜನಶೀಲ ವ್ಯಕ್ತಿಯಾಗಲು ಸಹಾಯ ಮಾಡುತ್ತದೆ. ಏಕೆಂದರೆ ನೀವು ಬರೆಯಲು ಪ್ರತಿದಿನ ಹೊಸ ಆಲೋಚನೆಗಳನ್ನು ಯೋಚಿಸಬೇಕು, ಈ ಆಲೋಚನೆಗಳು ನಿಮ್ಮನ್ನು ಪ್ರತಿಕ್ಷಣ ಹೊಸ ವ್ಯಕ್ತಿಯನ್ನಾಗಿ ಮಾಡುತ್ತದೆ.


ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಬರವಣಿಗೆ ಅವರ ಕ್ರಿಯೇಟಿವಿಟಿ ಹೊರಹಾಕಲು ಸಹಾಯ ಮಾಡುತ್ತದೆ. ಶಾಲೆಗೆ ಹೋಗುವ ಮಕ್ಕಳು ಹೆಚ್ಚಿನದಾಗಿ ಬರವಣಿಗೆಯಲ್ಲಿರುತ್ತಾರೆ. ಆದರೆ ದೊಡ್ಡವರು, ಉದ್ಯೋಗಸ್ಥರು ಈ ಲ್ಯಾಪ್‌ಟಾಪ್‌, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವುದರಿಂದ ಬರವಣಿಗೆ ಅಭ್ಯಾಸ ಕಡಿಮೆಯಾಗಿದೆ. ಅಂತಹವರು ಬರವಣಿಗೆ ಅಭ್ಯಾಸ ಮಾಡಿಕೊಳ್ಳಬೇಕು.


ಒಟ್ಟಾರೆ ಒಬ್ಬರು ಪ್ರತಿನಿತ್ಯ ಏನನ್ನಾದರೂ ಬರೆಯುವುದು ಕೌಶಲ್ಯ ಅಭಿವೃದ್ಧಿಗೆ ಸಹಕಾರಿ. ಹಾಗಾದರೆ ಬರವಣಿಗೆಯನ್ನು ಪ್ರತಿದಿನದ ಅಭ್ಯಾಸವನ್ನಾಗಿ ಹೇಗೆ ಅಳವಡಿಸಿಕೊಳ್ಳೋದು ಅನ್ನೋದನ್ನ ಈ ಸಲಹೆಗಳನ್ನು ಅನುಸರಿಸುವ ಮೂಲಕ ಪ್ರಾರಂಭಿಸೋಣ.


ಇದನ್ನೂ ಓದಿ: Anganwadi Workers: ಅಂಗನವಾಡಿಗಳಿಗೂ NEP ಅನ್ವಯ ಮಾಡುವಂತೆ ನೌಕರರಿಂದ ಭಾರೀ ಪ್ರತಿಭಟನೆ


1. ಅಭ್ಯಾಸ ಮಾಡಿಕೊಳ್ಳಿ
ನಮ್ಮ ಜೀವನದಲ್ಲಿ ಕೆಲವು ಅಭ್ಯಾಸಗಳು ನಮ್ಮನ್ನು ಹಾಸುಹೊಕ್ಕಿರುತ್ತವೆ. ಯಾರೂ ಹೇಳದೆಯೇ, ನಮಗೆ ತೋಚದೆಯೇ ಕೆಲವು ಕಾರ್ಯಗಳು ನಡೆಯುತ್ತದೆ. ಇವುಗಳನ್ನು ಕೆಲಸ ಅನ್ನುವುದಕ್ಕಿಂದ ಅಭ್ಯಾಸ ಎನ್ನುತ್ತೇವೆ.


ಅಂತೆಯೇ ನಿಮ್ಮ ಜೀವನದಲ್ಲಿ ಇರುವ ಕೆಲ ಅಭ್ಯಾಸಗಳ ಜೊತೆ ಬರವಣಿಗೆಯನ್ನು ಸಹ ಅಭ್ಯಾಸವಾಗಿ ರೂಢಿ ಮಾಡಿಕೊಳ್ಳಿ. ಬರೆಯಲು ಒಂದು ಸಮಯ, ಸ್ಥಳವನ್ನು ಬೇಕಾದರೂ ನಿಗದಿಪಡಿಸಿಕೊಳ್ಳಿ. ಆ ಸಮಯಕ್ಕೆ ನೀವು ಬರೆಯುತ್ತಿದ್ದರೆ ಕ್ರಮೇಣ ಇದೇ ಅಭ್ಯಾಸ ನಿಮ್ಮ ಜೀವನದ ಭಾಗವಾಗಬಹುದು.


2. ಚಿಕ್ಕದಾಗಿ ಪ್ರಾರಂಭಿಸಿ
ನೀವು ಬರವಣಿಗೆ ಅಭ್ಯಾಸವನ್ನು ಶುರು ಮಾಡಿದರೆ ಮೊದಲೇ ದೊಡ್ಡ ಬುಕ್‌ಗಳನ್ನು ಇಲ್ಲವೋ ಜರ್ನಲ್‌ಗಳನ್ನು ಬರೆಯಬೇಕಂತಿಲ್ಲ. ಮೊದಲಿಗೆ ಸಣ್ಣ ಕಥೆ, ಕವನ ಇವುಗಳಿಂದ ಆರಂಭಿಸಿ. ಅಥವಾ ನಿಮ್ಮ ಪ್ರತಿದಿನದ ಕಾರ್ಯಕ್ರಮಗಳನ್ನು, ದಿನಚರಿಯನ್ನು ಬರೆಯಿರಿ. ಸಣ್ಣದಾಗಿ ಆರಂಭಿಸಿ ನಂತರ ಬೇಕಾದಲ್ಲಿ ಸಮಯವನ್ನು ಅಥವಾ ಪದಗಳನ್ನು ಬರವಣಿಗೆಯಲ್ಲಿ ವಿಸ್ತರಿಸಿ. ಇದು ನಿಮ್ಮನ್ನು ದೀರ್ಘಾಕಾಲ ಬರೆಯಲು ಪ್ರೋತ್ಸಾಹಿಸುತ್ತದೆ.


3. ಬರವಣಿಗೆ ಪಾಲುದಾರರನ್ನು ಹುಡುಕಿ
ಬರವಣಿಗೆಯಲ್ಲಿ ನಾವು ಆಸಕ್ತಿ ತೋರಿಸಬೇಕೆಂದರೆ ಜೊತೆಗೆ ಯಾರಾದರೂ ಒಬ್ಬರನ್ನು ಕೂರಿಸಿಕೊಳ್ಳಬೇಕು. ನಿಮಗೆ ಒಬ್ಬರೇ ಕೂತು ಬರೆಯುವುದು ಬೋರ್‌ ಆದರೆ ಅಥವಾ ನಿಮ್ಮ ಬರವಣಿಗೆಗೆ ಯಾರೂ ಪ್ರೋತ್ಸಾಹ ನೀಡುತ್ತಿಲ್ಲ ಎಂದಾದಲ್ಲಿ ನಿಮ್ಮ ಮನಸ್ಥಿತಿಗೆ ಅನುಗಣವಾಗಿ ಅಥವಾ ಬರವಣಿಗೆಯನ್ನು ಹವ್ಯಾಸವಾಗಿಟ್ಟುಕೊಂಡಿರುವವರ ಜೊತೆ ಸ್ನೇಹ ಬೆಳೆಸಿ ಮತ್ತು ನಿಮ್ಮ ಬರವಣಿಗೆಯನ್ನು ಹಂಚಿಕೊಳ್ಳಿ.


4. ಜರ್ನಲ್ ಅಥವಾ ಬ್ಲಾಗ್ ಅನ್ನು ಪ್ರಾರಂಭಿಸಿ
ಜರ್ನಲ್ ಅನ್ನು ಇಟ್ಟುಕೊಳ್ಳುವುದರ ಮೂಲಕ ಅಥವಾ ಮಧ್ಯಮ ಅಥವಾ ಸಬ್‌ಸ್ಟ್ಯಾಕ್‌ನಂತಹ ಉಚಿತ ವೆಬ್‌ಸೈಟ್‌ನಲ್ಲಿ ಬ್ಲಾಗ್ ಅನ್ನು ಪ್ರಾರಂಭಿಸುವ ಮೂಲಕ ನಿಮ್ಮ ಬರವಣಿಗೆಯ ಬೆಳವಣಿಗೆಯನ್ನು ವೀಕ್ಷಿಸಬಹುದು. ನಿಮ್ಮ ಬರವಣಿಗೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಬ್ಲಾಗಿಂಗ್ ನಿಮಗೆ ಅವಕಾಶ ನೀಡುತ್ತದೆ. ಮೊದಲಿಗೆ, ನೀವು ಹೊಸ ಬರಹಗಾರರಾಗಿದ್ದರೆ ನಿಮ್ಮ ಕೆಲಸವನ್ನು ಹಂಚಿಕೊಳ್ಳಲು ನೀವು ಹಿಂಜರಿಯಬಹುದು.


ಆದರೆ ನೀವು ಪ್ರತಿದಿನ ಬರೆಯುವುದನ್ನು ಮುಂದುವರಿಸಿದಂತೆ, ನಿಮ್ಮ ಬರವಣಿಗೆಯ ಸಾಮರ್ಥ್ಯದೊಂದಿಗೆ ನೀವು ಹೆಚ್ಚು ಹೆಚ್ಚು ಆತ್ಮವಿಶ್ವಾಸ ಹೊಂದುತ್ತೀರಿ ಮತ್ತು ಇತರರಿಗೆ ಕಲಿಸಲು ಮತ್ತು ಸ್ಫೂರ್ತಿ ನೀಡಲು ಸಾಧ್ಯವಾಗುತ್ತದೆ.


5. ಬರವಣಿಗೆ ಉದಾಗರಣೆಗಳನ್ನು ಬಳಸಿ
ಬರವಣಿಗೆಯ ಪ್ರಾಂಪ್ಟ್ ಎನ್ನುವುದು ಪಠ್ಯದ ಸಂಕ್ಷಿಪ್ತ ರೂಪವಾಗಿದೆ. ಇದು ಸಂಭಾವ್ಯ ವಿಷಯ ಕಲ್ಪನೆ ಅಥವಾ ಮೂಲ ಪ್ರಬಂಧ, ವರದಿ, ಜರ್ನಲ್ ನಮೂದು, ಕಥೆ, ಕವಿತೆ ಅಥವಾ ಇತರ ಬರವಣಿಗೆಯ ಆರಂಭಿಕ ಹಂತವನ್ನು ಒದಗಿಸುತ್ತದೆ. ನೀವೂ ಸಹ ಬರವಣಿಗೆಯನ್ನು ಆರಂಭಿಸಿದ್ದಲ್ಲಿ ಈ ಮಾರ್ಗವನ್ನು ಅನುಸರಿಸಬಹುದು.


6. ವಿವಿಧ ರೀತಿಯ ಬರವಣಿಗೆಯ ಪ್ರಯೋಗ
ನಿಮ್ಮ ದೈನಂದಿನ ಬರವಣಿಗೆಯ ಅಭ್ಯಾಸದೊಂದಿಗೆ ನೀವು ಮೊದಲು ಪ್ರಾರಂಭಿಸಿದಾಗ, ನಿಮಗೆ ಸುಲಭವಾದ ಮತ್ತು ಹೆಚ್ಚು ಆನಂದದಾಯಕವಾದ ಬರವಣಿಗೆಯ ಪ್ರಕಾರವನ್ನು ಕಂಡುಕೊಳ್ಳಿ. ಅಂದರೆ ಯಾವ ರೀತಿಯ ಬರವಣಿಗೆ ನಿಮಗೆ ಇಷ್ಟವಾಗುತ್ತದೆಯೋ ಅದರಲ್ಲಿಯೇ ಮುಂದುವರಿದು ನಂತರ ಬೇರೆ ಬೇರೆ ಪ್ರಕಾರಗಳಿಗೆ ತೆರೆದುಕೊಳ್ಳಿ. ನೀವು ಕೇವಲ ಖುಷಿಗಾಗಿ ಕಾದಂಬರಿಯನ್ನು ಸಹ ಬರೆಯಲು ಪ್ರಯತ್ನಿಸಬಹುದು. ನೀವು ಪ್ರತಿದಿನ ಕಥೆಯನ್ನು ಮುಂದುವರಿಸಿದ್ದಲ್ಲಿ ನಿಮಗೆ ದಿನ ಹೊಸ ವಸ್ತುವಿಷಯ ಸಿಗುತ್ತದೆ.


7. ಅನುಭವಗಳನ್ನು ಸಂಗ್ರಹಿಸಿ
ಹೊಸದಾಗಿ ಬರೆಯಲು ಏನಾದರೂ ವಸ್ತುವಿಷಯ ಬೇಕು ಎಂದಾದಲ್ಲಿ ಯಾವುದಾದರು ಸ್ಥಳಕ್ಕೆ ಭೇಟಿ ನೀಡಿ. ಈ ಅನುಭವಗಳು ನಿಮಗೆ ಬರೆಯಲು ಹೆಚ್ಚಿನ ವಿಷಯಗಳು ಮತ್ತು ಆಲೋಚನೆಗಳನ್ನು ನೀಡುತ್ತದೆ. ಪುಸ್ತಕಗಳನ್ನು ಓದುವುದು ಬರೆಯಲು ಹೊಸ ವಿಷಯಗಳನ್ನು ಸಂಗ್ರಹಿಸಲು ಮತ್ತೊಂದು ಅದ್ಭುತ ಮಾರ್ಗವಾಗಿದೆ.

First published: