ನಿಮ್ಮ ಮಕ್ಕಳನ್ನು ಇದೇ ಮೊದಲಬಾರಿಗೆ ಶಿಶುವಿಹಾರಕ್ಕೆ ಸೇರಿಸುತ್ತಿದ್ದರೆ ಈ ಸುದ್ದಿಯಿಂದ ನಿಮಗೆ ಸರಿಯಾದ ಮಾಹಿತಿ ಲಭ್ಯವಾಗುತ್ತದೆ. ಪಾಲಕರು ಗಮನವಿಟ್ಟು ಇದನ್ನು ಓದಿ. ಶಿಶುವಿಹಾರದ (Kindergarten) ಪಠ್ಯಕ್ರಮ ಎಂದರೇನು? ನಿಮ್ಮ ಮಗುವಿಗೆ ಅತ್ಯುತ್ತಮ ಪಠ್ಯಕ್ರಮವನ್ನು ನೀವು ಹೇಗೆ ಆಯ್ಕೆ ಮಾಡಬಹುದು? ಎಂಬ ಎಲ್ಲಾ ವಿಷಯದ ಬಗ್ಗೆ ಸರಿಯಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಮಕ್ಕಳ ಮೆದುಳು (Brain) ಅಭಿವೃದ್ಧಿ ಹೊಂದುವ ಎಳೆಯ ವಯಸ್ಸಿನ ರಚನಾತ್ಮಕ ವರ್ಷಗಳು ಅವರ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿರುತ್ತವೆ. ಈ ರಚನೆಯ ವರ್ಷಗಳ (Year) ಉದ್ದಕ್ಕೂ ಮಗುವಿನ ದೈಹಿಕ (Physical) ಮತ್ತು ಮಾನಸಿಕ ಅಭಿವೃದ್ಧಿಯ ಮೇಲೆ ಅವರ ವಿವಿಧ ಜೀವನಾನುಭವಗಳು ದೀರ್ಘಕಾಲೀನ ಪರಿಣಾಮ ಉಂಟು ಮಾಡಬಹುದು.
ಇದು ಅವರ ಭವಿಷ್ಯದ ಬೆಳವಣಿಗೆಗೆ ತಳಪಾಯವನ್ನು ನಿರ್ಮಿಸುತ್ತದೆ. ಆದ್ದರಿಂದ ಒಂದು ಉತ್ತಮ ಆರಂಭ ಮಗು ತನ್ನ ಕಲಿಕೆಯಲ್ಲಿ ಮುಂಚೂಣಿಯಲ್ಲಿರಲು ನೆರವಾಗುತ್ತದೆ ಅಲ್ಲದೆ, ಭವಿಷ್ಯಕ್ಕಾಗಿ ಮಕ್ಕಳನ್ನು ಸಿದ್ಧಗೊಳಿಸಲು ಶಿಶುವಿಹಾರ (ಕಿಂಡರ್‍ಗಾರ್ಟನ್ ಸ್ಕೂಲ್)ಗಳು ಅವಶ್ಯಕವಾಗಿರುತ್ತವೆ.
ಇಂದಿನ ಆಧುನಿಕ ಯುಗದಲ್ಲಿ ಅದರಲ್ಲೂ ವಿಶೇಷವಾಗಿ ನೂತನ ಚಿಂತನೆಗಳು ಮತ್ತು ತಂತ್ರಜ್ಞಾನಗಳು ಅಚ್ಚರಿ ಮೂಡಿಸುವ ದರದಲ್ಲಿ ಹೊರಹೊಮ್ಮುತ್ತಿರುವಾಗ ಮಗುವಿನ ಚಿಂತನೆ ಮತ್ತು ಸೃಜನಾತ್ಮಕ ಸಾಮಥ್ರ್ಯಗಳನ್ನು ಸರಿಯಾದ ನಿಟ್ಟಿನಲ್ಲಿ ಸಾಗುವಂತೆ ಯೋಜಿಸುವ ಅಗತ್ಯ ಇರುತ್ತದೆ. ಇದರಿಂದ ಮಗು ಈ ನೂತನ ಬದಲಾವಣೆಗಳಿಗೆ ಕ್ಷಿಪ್ರಗತಿಯಲ್ಲಿ ಹೊಂದಿಕೊಳ್ಳಬಹುದಾಗಿರುತ್ತದೆ. ಪ್ರಯೋಗಾತ್ಮಕ ಕಲಿಕೆಯಿಂದ ಬೆಂಬಲ ಪಡೆದು ಸರಿಯಾದ ಶಿಕ್ಷಣಕ್ಕೆ ಮಕ್ಕಳನ್ನು ಒಳಪಡಿಸಲು ಇಲ್ಲಿ ಶಿಶುವಿಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ರಚನಾತ್ಮಕ ಬೆಳವಣಿಗೆಗಾಗಿ ಇದು ಅವರಲ್ಲಿ ಸರಿಯಾದ ಅಡಿಪಾಯವನ್ನು ಸ್ಥಾಪಿಸುತ್ತದೆ.
ಅತ್ಯುತ್ತಮ ಶಿಶುವಿಹಾರ ಪಠ್ಯಕ್ರಮ
ಮಕ್ಕಳ ಬೆಳವಣಿಗೆಯ ದರವನ್ನು ನಿಗದಿಪಡಿಸುವಲ್ಲಿ ಅವರು ಎಳೆಯ ವರ್ಷಗಳಲ್ಲಿ ತೆರೆದುಕೊಳ್ಳುವ ಶಿಶುವಿಹಾರ ಪಠ್ಯಕ್ರಮ ಅಪಾರ ಪರಿಣಾಮ ಬೀರುತ್ತದೆ. ಪೋಷಕರಾಗಿ ಮಕ್ಕಳ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸುವ ಪಠ್ಯಕ್ರಮವನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ, ಮಕ್ಕಳ ಕುತೂಹಲವನ್ನು ಪ್ರೋತ್ಸಾಹಿಸುವುದರೊಂದಿಗೆ ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಕೂಡ ಇದು ಅಭಿವೃದ್ಧಿ ಪಡಿಸಬೇಕಾಗಿರುತ್ತದೆ.
ಆಧುನಿಕ ಶಿಕ್ಷಣ
ಮುಂದುವರಿದ ಮಕ್ಕಳ ಅನನ್ಯ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಆಧುನಿಕ ಶಿಶುವಿಹಾರಗಳು ನೂತನ ಯುಗದ ಪಠ್ಯಕ್ರಮವನ್ನು ಅಳವಡಿಸಿಕೊಂಡಿವೆ. ಶೈಕ್ಷಣಿಕ ಕಲಿಕೆಯ ಜೊತೆಗೆ ಕಲೆ ಮತ್ತು ಸೃಜನಾತ್ಮಕತೆಗಳು ಗಮನಾರ್ಹ ಪಾತ್ರ ವಹಿಸುತ್ತವೆ ಎಂಬ ವಾಸ್ತವಾಂಶದ ಜೊತೆಗೆ ಇಂದಿನ ಶಿಶುವಿಹಾರಗಳು ಕಲೆ ಮತ್ತು ಸಂಗೀತ ಸ್ಟುಡಿಯೋಗಳನ್ನು ಅಳವಡಿಸಿಕೊಂಡಿವೆ. ಇದರಿಂದ ಸೃಜನಾತ್ಮಕ ಚಿಂತನೆ, ಮುಕ್ತ ಅಭಿವ್ಯಕ್ತಿ ಮತ್ತು ಆಸಕ್ತಿ ಆವಿಷ್ಕಾರ ಕೈಗೊಳ್ಳಲು ಮಕ್ಕಳಿಗೆ ಸ್ಥಳಾವಕಾಶವನ್ನು ಪೂರೈಸಬಹುದಾಗಿರುತ್ತದೆ.
ಇದನ್ನೂ ಓದಿ: CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಫಲಿತಾಂಶ ಚೆಕ್ ಮಾಡಲು ಈ ಲಿಂಕ್ ಬಳಸಿ
ಇದಲ್ಲದೆ, ಮಕ್ಕಳ ಚಿಂತನಾ ಕೌಶಲ್ಯಗಳನ್ನು ವಿಸ್ತರಿಸುವುದಕ್ಕಾಗಿ ಈ ಶಾಲೆಗಳು ಇಂದು ಪ್ರಯೋಗಾತ್ಮಕ ಕಲಿಕೆಯ ರೂಪಗಳನ್ನು ಅಳವಡಿಸಿಕೊಳ್ಳುತ್ತಿವೆ. ಇವುಗಳಲ್ಲಿ ವಸ್ತುವಿಷಯಗಳೊಂದಿಗೆ ಸಂಪರ್ಕ ಬೆಸೆದುಕೊಂಡು ತಾರ್ಕಿಕ ಪರಿಹಾರಗಳನ್ನು ಕಂಡುಕೊಳ್ಳುವುದು, ಮೂಲ ವಿಷಯಗಳಿಗೆ ತಳಪಾಯ ಹಾಕುವುದು ಮತ್ತು ಅವರ ಗ್ರಹಿಕೆಯ ಸಾಮಥ್ರ್ಯಗಳನ್ನು ಸುಧಾರಿಸುವುದು ಮುಂತಾದವುಗಳು ಸೇರಿರುತ್ತವೆ.
ಸಮಕಾಲೀನ ಜಗತ್ತಿನಲ್ಲಿ ಪರಿಸರ ಕಾಳಜಿಗಳು ಅತ್ಯುನ್ನತ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ ಎಂಬ ವಾಸ್ತವಾಂಶದ ಹಿನ್ನೆಲೆಯಲ್ಲಿ ಈ ಕುರಿತು ಮುಂದಿನ ಪೀಳಿಗೆಗೆ ಶಿಕ್ಷಣ ನೀಡುವುದು ಅವಶ್ಯಕವಾಗಿರುತ್ತದೆ.
ಪರಿಸರ ಸಂಬಂಧಿತ ಕೋರ್ಸ್ಗಳು
ಇದರ ಫಲಿತಾಂಶವಾಗಿ ಪರಿಸರ ಮತ್ತು ಅದರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪ್ರಕೃತಿ ಸಂಬಂಧಿತ ಕೋರ್ಸ್‍ಗಳನ್ನು ಶಿಶುವಿಹಾರಗಳು ಸೇರಿಸಿಕೊಂಡಿವೆ. ಹೆಚ್ಚುವರಿಯಾಗಿ ನಿಸರ್ಗ ಮತ್ತು ಪರಿಸರಕ್ಕೆ ಎಳೆಯ ವಯಸ್ಸಿನಲ್ಲಿಯೇ ತೆರೆದುಕೊಳ್ಳುವುದು, ಮಕ್ಕಳ ಆರೋಗ್ಯಕರ ಗ್ರಹಿಕೆ ಮತ್ತು ದೈಹಿಕ ಅಭಿವೃದ್ಧಿಯನ್ನು ಬೆಂಬಲಿಸಲು ಅತ್ಯುತ್ತಮ ಮಾರ್ಗವಾಗಿರುತ್ತದೆ.
ಮಾದರಿ ಪಠ್ಯಕ್ರಮ: ಅದನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು?
ಮಗುವಿನ ಬೆಳವಣಿಗೆಯ ಮಾರ್ಗವನ್ನು ಸೂಕ್ತ ರೀತಿಯಲ್ಲಿ ಸಾಗುವಂತೆ ಮಾಡಲು ಸರಿಯಾದ ರೀತಿಯ ಶಿಕ್ಷಣವನ್ನು ನಿಮ್ಮ ಮಗುವಿಗೆ ಲಭಿಸುವಂತೆ ಮಾಡುವ ದೊಡ್ಡ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಮಗುವಿನ ಆಸಕ್ತಿಗಳು ಮತ್ತು ಆದ್ಯತೆಗಳನ್ನು ಒಳಗೊಂಡಿರುವ ಮಾದರಿ ಪಠ್ಯಕ್ರಮವನ್ನು ಆರಿಸಿಕೊಳ್ಳುವುದು ಇಲ್ಲಿ ಮುಖ್ಯವಾಗಿರುತ್ತದೆ.
ನಾವು ಆಧುನಿಕ ಯುಗದಲ್ಲಿ ಬದುಕುತ್ತಿರುವುದರಿಂದ, ಮಕ್ಕಳು ಸ್ವತಃ ಮಾಡಿ ಕಲಿಯುವ ಮೂಲಕ ಪ್ರಯೋಗಾತ್ಮಕ ಕಲಿಕೆಯನ್ನು ಒಳಗೊಂಡಿರುವ, ಆಟ ಆಧರಿಸಿದ ಪ್ರಯೋಗಾತ್ಮಕ ಚಟುವಟಿಕೆಗಳನ್ನು ಹೊಂದಿರುವ ಪಠ್ಯ ಆಯ್ಕೆ ಮಾಡಬೇಕು. ವಿದ್ಯಾರ್ಥಿಗಳ ಉಚ್ಛಾರಣೆಗಳಿಗೆ ಮಾರ್ಗದರ್ಶನವಾಗಿ ಮೂಲ ವಿಷಯಗಳನ್ನು ಬಳಸುವ, ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುವ, ಸೃಜನಾತ್ಮಕತೆ, ನವೀನತೆಯನ್ನು ಮತ್ತು ಆಳವಾಗಿ ಅರ್ಥ ಮಾಡಿಕೊಳ್ಳುವುದನ್ನು ಪ್ರೋತ್ಸಾಹಿಸುವ ಸೂಕ್ತ ಪಠ್ಯಕ್ರಮವನ್ನು ಆರಿಸುವುದರಲ್ಲಿ ಪೋಷಕರು ತೊಡಗಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.
ಇದರಿಂದ ನಿಮ್ಮ ಮಗು ತನ್ನ ಸಂಪೂರ್ಣ ಬೌದ್ಧಿಕ ಮತ್ತು ಭಾವನಾತ್ಮಕ ಸಾಮಥ್ರ್ಯವನ್ನು ತಲುಪುವುದರಲ್ಲಿ ಸಹಾಯವಾಗುವುದಲ್ಲದೆ, ನೈಜ ಬದುಕಿನ ಅನುಭವವನ್ನು ಅವರಿಗೆ ಲಭಿಸುವಂತೆ ಮಾಡುತ್ತದೆ. ಜೊತೆಗೆ ಅವರ ಕಲಿಕೆಯಲ್ಲಿ ಅಪಾರವಾಗಿ ನೆರವು ನೀಡಿ, ಪರಿಪೂರ್ಣ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.
ಯಶಸ್ವಿ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಕ್ರಮಗಳು
ಸರಿಯಾದ ನಿಟ್ಟಿನಲ್ಲಿ ತಮ್ಮ ಮಗುವಿನ ಬೆಳವಣಿಗೆಗೆ ಮಾರ್ಗದರ್ಶನ ನೀಡುವ ಆಶಯವನ್ನು ಪ್ರತಿಯೊಬ್ಬ ಪೋಷಕರು ಹೊಂದಿರುತ್ತಾರೆ. ಇದು ಸಾಧ್ಯವಾಗುವುದಕ್ಕಾಗಿ ಮಕ್ಕಳು ಸರಿಯಾದ ಶಿಕ್ಷಣದ ಕಡೆಗೆ ತೆರೆದುಕೊಳ್ಳುವಂತೆ ಮಾಡುವುದು ಬಹಳಷ್ಟು ಮುಖ್ಯವಾಗಿರುತ್ತದೆ. ಬೆಳವಣಿಗೆಯ ಕಡೆಗೆ ಪರಿಪೂರ್ಣ ಮಾರ್ಗವನ್ನು ಪೂರೈಸುವುದರ ಜೊತೆಗೆ ನಿಮ್ಮ ಮಗುವಿನ ಕಲಿಕೆ ಮತ್ತು ಅರ್ಥ ಮಾಡಿಕೊಳ್ಳುವಲ್ಲಿ ಸಹಾಯ ಮಾಡುವಂತಹ ಸೂಕ್ತ ಪಠ್ಯಕ್ರಮ ಹೊಂದಿರುವ ಸರಿಯಾದ ಶಿಶುವಿಹಾರವನ್ನು ಆಯ್ದುಕೊಳ್ಳುವುದು ಗಮನಾರ್ಹವಾಗಿ ಮುಖ್ಯವಾಗಿರುತ್ತದೆ ಎಂದು ಹಾಯ್ ಕಲ್ಪಾ ಚೈನ್ ಆಫ್ ಪ್ರೀ ಸ್ಕೂಲ್ನ ಪೌಡರ್ ಹಾಗೂ ಸಿಇಓ ಆಗಿರುವ ಶಾಲಿನಿ ಶರ್ಮಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ