• ಹೋಂ
  • »
  • ನ್ಯೂಸ್
  • »
  • Jobs
  • »
  • Exam Stress: ಪರಿಕ್ಷಾ ಸಮಯದ ಒತ್ತಡಗಳನ್ನು ನಿಭಾಯಿಸಲು ಈ ಸಲಹೆಗಳನ್ನು ಪಾಲಿಸಿ

Exam Stress: ಪರಿಕ್ಷಾ ಸಮಯದ ಒತ್ತಡಗಳನ್ನು ನಿಭಾಯಿಸಲು ಈ ಸಲಹೆಗಳನ್ನು ಪಾಲಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಸೂತ್ರವು ಬರೀ ಬೋರ್ಡ್ ಎಕ್ಸಾಂಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಯಾವುದೇ ಇತರ ರೀತಿಯ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೂ ಇದು ಅನ್ವಯವಾಗುತ್ತದೆ.

  • Trending Desk
  • 5-MIN READ
  • Last Updated :
  • Share this:

ಪರೀಕ್ಷಾ ಸಮಯ ಎಂದರೆ ವಿದ್ಯಾರ್ಥಿಗಳಿಗೆ (Students) ಒತ್ತಡ ಇದ್ದೇ ಇರುತ್ತದೆ. ಪ್ರಶ್ನೆ ಪತ್ರಿಕೆ ಹೇಗಿರುತ್ತದೋ? ಉತ್ತರಿಸಲು (Answer) ಬರುತ್ತದೋ ಇಲ್ಲವೋ? ಎಷ್ಟು ಅಂಕ ಬೀಳುಬಹುದು? ಹೀಗೆ ಆತಂಕದಲ್ಲಿ ಬಂದಿದ್ದೂ ಮರೆತುಹೋದರೆ ಏನು ಮಾಡುವುದು ? ಮುಂತಾದ ಪ್ರಶ್ನೆಗಳು ತಲೆಯಲ್ಲಿ ಓಡುತ್ತಿರುತ್ತವೆ. ಹೌದು ಬೋರ್ಡ್‌ ಎಕ್ಸಾಂ (Exam) ಆಗಲಿ ಅಥವಾ ಕಾಲೇಜು (College) ಪರೀಕ್ಷೆಗಳೇ ಆಗಲಿ, ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ಗೆ ಪ್ರವೇಶಿಸಿದ ಕ್ಷಣದಲ್ಲಿ ಆತಂಕ ಮತ್ತು ಒತ್ತಡ ಉಂಟಾಗುವುದು ಸಹಜ. ಇದರ ಜೊತೆಗೆ ತಂದೆ-ತಾಯಿ ಹಾಗೂ ಕುಟುಂಬದವರ (Family) ನಿರೀಕ್ಷೆ ಕೂಡ ಹೆಚ್ಚೇ ಇರುವುದರಿಂದ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೀಡಾಗುತ್ತಾರೆ.


ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ತಮ್ಮ ಒತ್ತಡದ ಮಟ್ಟವನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಿದರೂ 10 ಮತ್ತು 12 ನೇ ತರಗತಿಯವರಿಗೆ, ಆತಂಕ ಸ್ವಲ್ಪ ಹೆಚ್ಚು ಅಂತಲೇ ಹೇಳಬಹುದು.


ಹಾಗಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆವರಿಸಿರುವ ಪರೀಕ್ಷಾ ಒತ್ತಡ ಹಾಗೂ ಭಯವನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಎಚ್ಚರಿಕೆಯಿಂದ ಅನುಸರಿಸಿದರೆ ಅದರಿಂದ ಹೊರಬರಲು ಸಹಾಯ ಮಾಡುತ್ತದೆ. ಹಾಗಾದರೆ ಅವುಗಳು ಯಾವವು ಅನ್ನೋದನ್ನು ನೋಡೋಣ.


1. ಮೊದಲು ಸುಲಭವಾದ ಪ್ರಶ್ನೆಗಳನ್ನು ಪ್ರಯತ್ನಿಸಿ: ವಿದ್ಯಾರ್ಥಿಗಳು ಮೊದಲು ಆಯ್ಕೆ ಮಾಡಿಕೊಳ್ಳುವ ಪ್ರಶ್ನೋತ್ತರವು ಬಹಳ ಮುಖ್ಯವಾಗುತ್ತದೆ. ಹೆಚ್ಚಿನ ಆತ್ಮವಿಶ್ವಾಸ ಮೂಡಲು ಸುಲಭವಾದವುಗಳನ್ನು ಮೊದಲು ಮತ್ತು ಕಷ್ಟಕರವಾದವುಗಳನ್ನು ನಂತರ ತೆಗೆದುಕೊಳ್ಳಬಹುದು.


ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಈ ಸೂತ್ರ ಸಹಕಾರಿ ಎನ್ನಲಾಗುತ್ತದೆ. ವಿದ್ಯಾರ್ಥಿಗಳು ಮೊದಲು ಚೆನ್ನಾಗಿ ಬರೆಯಲು ಬರುವಂಥ ಪ್ರಶ್ನೋತ್ತರಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಅವರು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Exam Paper Leak: ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ! ಪರೀಕ್ಷೆ ಮುಂದೂಡಿಕೆ


2. ರಿವಿಶನ್‌ ಮುಖ್ಯ: ಪರೀಕ್ಷೆಗೂ ಮೊದಲೇ ಚೆನ್ನಾಗಿ ರಿವೈಸ್‌ ಮಾಡುವುದು ಕೊನೆಯ ಕ್ಷಣದ ಭಯದಿಂದ ಮುಕ್ತರಾಗಲು ಒಂದೊಳ್ಳೆಯ ಮಾರ್ಗವಾಗಿದೆ.


ಅದರಲ್ಲೂ ಮುಖ್ಯವಾಗಿ ಪರೀಕ್ಷೆಯ ದಿನದಂದು. ಪರೀಕ್ಷೆಯ ಮೊದಲು ಹಲವಾರು ಬಾರಿ ಪರಿಷ್ಕರಿಸುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದರಿಂದ ವಿದ್ಯಾರ್ಥಿಗಳು ಸವಾಲನ್ನು ಎದುರಿಸಲು ಹೆಚ್ಚು ಸಿದ್ಧರಾಗುತ್ತಾರೆ.


3. ಕಂಠಪಾಠ ಮಾಡುವ ಬದಲು ಅರ್ಥಮಾಡಿಕೊಳ್ಳಿ: ಪರೀಕ್ಷೆಗೆ ಕೆಲವು ದಿನಗಳ ಮೊದಲು ಬಹಳಷ್ಟು ವಿದ್ಯಾರ್ಥಿಗಳು ವಿಷಯಗಳನ್ನು ಬಾಯಿಪಾಠ ಮಾಡುವುದನ್ನು ನೋಡುತ್ತೇವೆ. ಆದರೆ ಇದರಿಂದ ಕೆಲವೊಮ್ಮೆ ಪರೀಕ್ಷಾ ಹಾಲ್‌ನಲ್ಲಿ ಉತ್ತರಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗಬಹುದು. ಇದರಿಂದ ಸಮಸ್ಯೆ ಉದ್ಭವಿಸುತ್ತದೆ.


ಹೀಗಾಗಿ ಕಂಠಪಾಠ ಮಾಡುವ ಬದಲು, ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯುತ್ತಮ. ವಿಷಯಗಳನ್ನು ಅರ್ಥ ಮಾಡಿಕೊಂಡರೆ ಅದು ಯಾವಾಗಲೂ ನಿಮ್ಮ ನೆನಪಿನಲ್ಲಿರುತ್ತದೆ.




4. ಹಿಂದಿನ ವರ್ಷದ ಪತ್ರಿಕೆಗಳನ್ನು ಬಿಡಿಸಿ: ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದರೆ ನಿಮಗೆ ಮತ್ತಷ್ಟು ಆತ್ಮವಿಶ್ವಾಸ ಮೂಡುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.


ಈ ಸೂತ್ರವು ಬರೀ ಬೋರ್ಡ್ ಎಕ್ಸಾಂಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಯಾವುದೇ ರೀತಿಯ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಪರಿಹರಿಸುವ ಮೂಲಕ ಅಥವಾ ಅಣಕು ಪರೀಕ್ಷೆಗಳಿಗೆ ಕುಳಿತುಕೊಳ್ಳುವ ಮೂಲಕ ಉತ್ತಮ ಅಂಕಗಳನ್ನು ಗಳಿಸಬಹುದು.


ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಮಾದರಿಯನ್ನು ತಿಳಿದುಕೊಳ್ಳಬಹುದು ಜೊತೆಗೆ ಒಮ್ಮೆಲೇ ಆತಂಕಗೊಳ್ಳುವುದನ್ನು ತಪ್ಪಿಸಬಹುದು.


5. ನೋಟ್ಸ್‌ ಮಾಡುವುದು : ಪರೀಕ್ಷೆಗಳಿಗೆ ತಯಾರಿ ನಡೆಸುವಾಗ, ತಯಾರಿಯ ಹಂತದಲ್ಲಿ ನೋಟ್ಸ್‌ ಮಾಡುವುದು ಬಹಳ ಮುಖ್ಯ. ಈ ನೋಟ್ಸ್‌ನಲ್ಲಿರುವ ಪ್ರಮುಖ ಅಂಶಗಳನ್ನು ನೀವು ರಿವಿಶನ್‌ ಮಾಡಲು ಬಳಸಬಹುದು. ಏಕೆಂದರೆ ಪರೀಕ್ಷೆಗೆ ಹಾಜರಾಗುವ ಮೊದಲು ಅಂತಿಮ ರಿವಿಶನ್‌ ಬಹಳ ಮುಖ್ಯ.


6. ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ: ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಕೊನೆಯ ಕ್ಷಣದಲ್ಲಿ ಮರೆಯುವುದನ್ನು ತಪ್ಪಿಸಲು ವಿರಾಮ ತೆಗೆದುಕೊಳ್ಳುವುದು ಮುಖ್ಯ.


ಹಾಗಾಗಿ ಪರೀಕ್ಷೆಗೆ ಹಿಂದಿನ ದಿನ ಸರಿಯಾಗಿ ನಿದ್ದೆ ಮಾಡಿ. ಇದಲ್ಲದೆ, ಪರೀಕ್ಷಾ ತಯಾರಿ ಮಾಡುವಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದರಿಂದ ದೇಹ ಮತ್ತು ಮನಸ್ಸು ರಿಫ್ರೆಶ್‌ ಆಗಿ ಏಕಾಗ್ರತೆಗೆ ಸಹಾಯಮಾಡುತ್ತದೆ.

First published: