ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ (Result) ಈಗಾಗಲೇ ಪ್ರಕಟವಾಗಿದೆ. ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕೆಲವು ಅನುಕೂಲಗಳನ್ನು ಪರಿಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ (Students) ಮಾಡಿ ಕೊಟ್ಟಿದೆ. ಹಿಂದೆಲ್ಲಾ ಈ ರೀತಿಯ ಸೌಲಭ್ಯ ಇರಲಿಲ್ಲ. 2 ನೇ ಪಿಯುಸಿ ಸ್ಕ್ಯಾನ್ ಮಾಡಿದ ಪ್ರತಿಯು ನಿಮಗೆ ಬೇಕಾದಲ್ಲಿ ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ (Website) ನೀವು ಭೇಟಿ ನೀಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದೆ. ಇದಕ್ಕೆ ನೀವು ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ.
ನೀವು ಹೇಗೆ ಇದನ್ನು ಡೌನ್ಲೋಡ್ ಮಾಡಬಹುದು ಎಂಬ ಉತ್ತರವನ್ನು ನಾವಿಲ್ಲಿ ನೀಡಿದ್ದೇವೆ. ಈ ಹಂತಗಳನ್ನು ನೀವು ಅನುಸರಿಸುತ್ತಾ ಹೋದರೆ ಸಾಕು ಉತ್ತರ ಪತ್ರಿಕೆ ನಿಮಗೆ ಲಭ್ಯವಾಗುತ್ತದೆ.
ಇದನ್ನೂ ಓದಿ: Ghost School: ಭೂತದ ಕಾಟಕ್ಕೆ ಹೆದರಿ ಶಾಲೆಯೇ ಕ್ಲೋಸ್! ಅಷ್ಟಕ್ಕೂ ಇದೆಲ್ಲಾ ನಿಜಾನಾ?
ಇದರಲ್ಲೇ ನಿಮಗೆ ಪೋರ್ಟಲ್ ಮಾರ್ಕ್ ಶೀಟ್‌ಗಳು ಮತ್ತು ಪ್ರಮಾಣಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನೂ ಸಹ ನೀಡಲಾಗಿದೆ. ಈ ಸೌಲಭ್ಯ ನಿಮಗೆ ಇಂದಿನಿಂದಲೇ ಸಿಗುತ್ತಿದೆ. ಬೇರೆ ಕಾಲೇಜಿಗೆ ನೀವು ಅಡ್ಮಿಷನ್ ಮಾಡಿಸಲು ಕಾತುರದಿಂದ ಕಾಯುತ್ತಿದ್ದರೆ ಇದನ್ನು ಉಪಯೋಗಿಸಿಕೊಳ್ಳಿ.
ಸಾಫ್ಟ್ ಕಾಪಿಯ ರೂಪದಲ್ಲಿ ಇದು ನಿಮಗೆ ಸಿಗುತ್ತದೆ. ಯಾವ ಪ್ರಶ್ನೆಗೆ ಯಾವ ರೀತಿ ಉತ್ತರ ಬರೆದಿದ್ದೀರಿ ಎಲ್ಲಿ ನಿಮ್ಮ ಅಂಕ ಕಡಿಮೆಯಾಗಿದೆ ಎಂಬ ವಿಷಯವನ್ನು ನೀವು ಈ ಮೂಲಕ ಚೆಕ್ ಮಾಡಬಹುದು. ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 21-04-2023 ರಂದು ಪ್ರಕಟಿಸಲಾಗಿದ್ದು ವಿದ್ಯಾರ್ಥಿಗಳು ಈಗಾಗಲೇ ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಂಡಿದ್ದಾರೆ.
ನೀವು ಡೌನ್ಲೋಡ್ ಕಾಪಿ ಬೇಕಿದ್ದರೆ ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಸಂಬಂಧಿಸಿದ ಮಾಹಿತಿಗಳೆಲ್ಲಾ ಲಭ್ಯವಾಗುತ್ತದೆ. ಅಥವಾ ಇಲ್ಲಿ ಕ್ಲಿಕ್ ಮಾಡಿ ಈ ಎರಡೂ ಲಿಂಕ್ ಬಳಸಿ ನೀವು ಚೆಕ್ ಮಾಡಬಹುದು.
ನೀವು ಈ ಬಾರಿ ಫೇಲ್ ಆಗಿದ್ದರೆ ಚಿಂತೆ ಬೇಡ
ಪಿಯುಸಿ (PUC) ಅನ್ನೋದು ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾನೇ ಪ್ರಮುಖವಾದ ಘಟ್ಟ. ಹಾಗಂತ ಪಿಯುಸಿಯಲ್ಲಿ ಫೇಲಾದರೆ ಅಥವಾ ಕಡಿಮೆ ಅಂಕಗಳನ್ನು (PU Results 2023) ಗಳಿಸಿದರೆ ಮುಂದೆ ಬದುಕೇ ಇಲ್ಲ ಅಂತ ಮಾತ್ರ ತಿಳಿದುಕೊಂಡು ಹತಾಶರಾಗಬೇಡಿ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದವರಿಗೆ ಮತ್ತು ಸಿಇಟಿ ಪರೀಕ್ಷೆಯಲ್ಲಿ (CET Exam) ಉತ್ತಮ ಅಂಕಗಳನ್ನು ಗಳಿಸಿದವರಿಗೆ ಎಂಜಿನಿಯರ್ ಅಥವಾ ವೈದ್ಯರಾಗುವ ಅವಕಾಶಗಳು ತುಂಬಾನೇ ಇರುತ್ತವೆ.
ಆದರೆ ಕಡಿಮೆ ಅಂಕಗಳನ್ನು ಗಳಿಸಿದವರಿಗೂ ಸಹ ಬೇರೆ ರೀತಿಯ ಅನೇಕ ಪದವಿ ಕೋರ್ಸ್ ಗಳು ಈಗ ಬಂದಿವೆ. ಇನ್ನೂ ಪಿಯುಸಿಯಲ್ಲಿ ಫೇಲಾದವರು ‘ಅಯ್ಯೋ ಹೀಗಾಯಿತ್ತಲ್ಲ ನಮ್ಮ ಬದುಕು’ ಅಂತ ತೀರಾ ಹತಾಶೆ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಇವರಿಗೂ ಸಹ ಅನೇಕ ರೀತಿಯ ಕೋರ್ಸ್ ಗಳು ಮತ್ತು ವೃತ್ತಿ ಆಯ್ಕೆಗಳು ಲಭ್ಯವಿವೆ.
ಇನ್ನೂ ಎಷ್ಟೋ ಜನ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಓದಲು ಮನೆಯಲ್ಲಿ ಅಷ್ಟೊಂದು ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ 10ನೇ ತರಗತಿ ಮುಗಿಸಿ ಶಾಲೆ ಬಿಟ್ಟು ಕೆಲಸಕ್ಕೆ ಹೋಗಲು ಶುರು ಮಾಡಿರುತ್ತಾರೆ. ಹೀಗೆ ಪಿಯುಸಿ ನಿಮಗೆ ಕೈ ಕೊಟ್ಟರೂ, ಜೀವನ ನಿಮ್ಮ ಕೈ ಬಿಡಬಾರದು ಅಷ್ಟೇ. ಜೀವನದಲ್ಲಿ ನಂಬಿಕೆ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ