• ಹೋಂ
  • »
  • ನ್ಯೂಸ್
  • »
  • Jobs
  • »
  • 2nd PUC ಪ್ರಶ್ನೆ ಪತ್ರಿಕೆ ಡೌನ್​ಲೋಡ್​ ಮಾಡಲು ಈ ಲಿಂಕ್​ ಕ್ಲಿಕ್ ಮಾಡಿ

2nd PUC ಪ್ರಶ್ನೆ ಪತ್ರಿಕೆ ಡೌನ್​ಲೋಡ್​ ಮಾಡಲು ಈ ಲಿಂಕ್​ ಕ್ಲಿಕ್ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪದವಿ ಪೂರ್ವ ಶಿಕ್ಷಣ ಇಲಾಖೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.  II PUC ವಾರ್ಷಿಕ ಪರೀಕ್ಷೆಯ  ಗುರುವಾರ, 9 ಮಾರ್ಚ್ 2023 ರಿಂದ ಆರಂಭವಾಗಿ ಬುಧವಾರದ ದಿನಾಂಕ, 29 ಮಾರ್ಚ್ 2023 ರಿಂದ ಕೊನೆಗೊಳ್ಳುತ್ತದೆ. ಕರ್ನಾಟಕ II PUC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಪರಿಚಿತರಾಗಿರಬೇಕು. ಮಾದರಿ ಮತ್ತು ಪ್ರಶ್ನೆ ಪತ್ರಿಕೆ ವಿನ್ಯಾಸ ತಿಳಿದಿರಬೇಕು. 

ಮುಂದೆ ಓದಿ ...
  • Share this:

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು (Students) ಇತ್ತೀಚಿಗೆ ತುಂಬಾ ಆತಂಕದಲ್ಲಿ ಅಭ್ಯಾಸ ಮಾಡಲು ಆರಂಭಿಸಿರುತ್ತಾರೆ. ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಹುಡುಕಾಟ ಆರಂಭಿಸಿದ್ದರೆ ಇಲ್ಲಿ ಆ ಕುರಿತು ಮಾಹಿತಿ ನೀಡಲಾಗಿದೆ. ನಾವು ಇಲ್ಲಿ ಹೇಳುವ ಹಂತಗಳನ್ನು ಅನುಸರಿಸಿ ನೀವು ಪಿಯುಸಿ (PUC) ಮಾದರಿ ಪ್ರಶ್ನೆ ಪತ್ರಿಕೆಗಳನ್ನು (Paper) ಡೌನ್​ಲೋಡ್​ ಮಾಡಿ ಓದಿಕೊಳ್ಳಬಹುದು (Read). ಇನ್ನು ನಾಲ್ಕೆ ದಿನದಲ್ಲಿ ಪರೀಕ್ಷೆ ಆರಂಭವಾಗಲಿದ್ದು ಮಾದರಿ ಪ್ರಶ್ನೆ ಪತ್ರಿಕೆಗಳ ಮೇಲೆ ಒಮ್ಮೆ ಕಣ್ಣಾಡಿಸಿ. 


ಮಾರ್ಚ್​ನಲ್ಲಿ ನಡೆಯಲಿರುವ ಪರೀಕ್ಷೆಗೆ ಇದು ತುಂಬಾ ಸಹಾಯವಾಗಲಿದ್ದು ಈ ಬಾರಿ ಬಹು ಆಯ್ಕೆಯ ಪ್ರಶ್ನೆಗಳೂ ಸಹ ಪ್ರಶ್ನೆ ಪತ್ರಿಕೆಯಲ್ಲಿ ಇರಲಿವೆ. ಯಾವ ಮಾದರಿಯಲ್ಲಿ ಎಷ್ಟು ಅಂಕಗಳಲ್ಲಿ ಪ್ರಶ್ನೆ ಬರುತ್ತದೆ ಎನ್ನುವ ಕುರಿತು ಇಲ್ಲಿ ಸರಿಯಾದ ರೀತಿಯ ಮಾದರಿಯನ್ನು ನೀಡಲಾಗಿದೆ.


ಇದನ್ನೂ ಓದಿ: PUC ವಿದ್ಯಾರ್ಥಿಗಳೇ ಗಮನಿಸಿ, ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆಯಾಗಿದೆ


ಪದವಿ ಪೂರ್ವ ಶಿಕ್ಷಣ ಇಲಾಖೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.  II PUC ವಾರ್ಷಿಕ ಪರೀಕ್ಷೆಯ  ಗುರುವಾರ, 9 ಮಾರ್ಚ್ 2023 ರಿಂದ ಆರಂಭವಾಗಿ ಬುಧವಾರದ ದಿನಾಂಕ, 29 ಮಾರ್ಚ್ 2023 ರಿಂದ ಕೊನೆಗೊಳ್ಳುತ್ತದೆ. ಕರ್ನಾಟಕ II PUC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಪರಿಚಿತರಾಗಿರಬೇಕು. ಮಾದರಿ ಮತ್ತು ಪ್ರಶ್ನೆ ಪತ್ರಿಕೆ ವಿನ್ಯಾಸ ತಿಳಿದಿರಬೇಕು.  ಮುಂಬರುವ ಕರ್ನಾಟಕ 2 ನೇ ಪಿಯುಸಿ ಪರೀಕ್ಷೆ 2023 ರ ಮಾರ್ಕಿಂಗ್ ಸ್ಕೀಮ್ ಅನ್ನು ಸಹ ತಿಳಿದಿರಬೇಕು.
2 ನೇ ಪಿಯುಸಿ ಪ್ರಶ್ನೆ ಪತ್ರಿಕೆ 2023 ಗಾಗಿ ಹುಡುಕುತ್ತಿರುವ ವಿದ್ಯಾರ್ಥಿಗಳು ವಿಷಯವಾರು ವಾರ್ಷಿಕ, ಪೂರಕ ಮತ್ತು ಮಾದರಿ ಪ್ರಶ್ನೆಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಯನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.


ಈ ಲಿಂಕ್​ ಕ್ಲಿಕ್ ಮಾಡಿ : ಇಲ್ಲಿ ಕ್ಲಿಕ್ ಮಾಡಿ


ಇಲ್ಲಿ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಸರ್ಕಾರದ ಅಧಿಕೃತ ಪೇಜ್​ ಓಪನ್​ ಆಗುತ್ತದೆ ಅಲ್ಲಿ ನಿಮಗೆ ಬೇಕಾದ ಎಲ್ಲಾ ಮಾಹಿತಿ ಲಭ್ಯವಾಗುತ್ತೆ. ಆ ಮಾಹಿತಿ ಓದಿಕೊಂಡು ನಿಮಗೆ ಯಾವ ಪ್ರಶ್ನೆ ಪತ್ರಿಕೆಯ ಅಗತ್ಯವಿದೆಯೋ ಆ ಪ್ರಶ್ನೆ ಪತ್ರಿಕೆಯನ್ನು ನೀವು ಆಯ್ಕೆ ಮಾಡಿಕೊಂಡು ಓದಿಕೊಳ್ಳಬಹುದು.


ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆ ಲಭ್ಯ


ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ವಿಜ್ಞಾನ ಸ್ಟ್ರೀಮ್‌ಗಾಗಿ ಲಭ್ಯವಿದೆ ಮತ್ತು ಆರ್ಟ್ಸ್ ಸ್ಟ್ರೀಮ್‌ನ ಇತಿಹಾಸ, ಭೂಗೋಳ, ನಾಗರಿಕಶಾಸ್ತ್ರ ಮತ್ತು ಅರ್ಥಶಾಸ್ತ್ರ ಇಲ್ಲಿ ಲಭ್ಯವಿದೆ, ಕರ್ನಾಟಕ II PUC ಪ್ರಶ್ನೆ ಬ್ಯಾಂಕ್ PDF ಸ್ವರೂಪವನ್ನು ಡೌನ್‌ಲೋಡ್ ಮಾಡಲು ನಮ್ಮ ನಾವು ನೀಡಿರುವ ಅಧಿಕೃತ ಜಾಲತಾಣವನ್ನೇ ಕ್ಲಿಕ್ ಮಾಡಿ.


ಹೊಸ ಮಾದರಿಯ ಪ್ರಶ್ನೆ ಪತ್ರಿಕೆ


ಇದೇ ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಲು ಅನುಕೂಲವಾಗಲೆಂಬ ಉದ್ದೇಶದಿಂದ ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದೆ.ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಮಾದರಿಯನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ. ಬಹು ಆಯ್ಕೆ ಪ್ರಶ್ನೆಗಳಿದ್ದರೆ ಹೆಚ್ಚು ಅಂಕ ತೆಗೆಯಲು ಸಾಧ್ಯವಾಗುತ್ತದೆ. ಆ ಕಾರಣದಿಂದ ಈ ಮಾದರಿಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ವಿವಿಧ ವಿಭಾಗದಲ್ಲಿ ಕ್ರಮವಾಗಿ 2 ಅಂಕದ 11 ಪ್ರಶ್ನೆಗಳನ್ನು ನೀಡಿದೆ. 3 ಅಂಕದ 4 ಪ್ರಶ್ನೆಗಳು, 4 ಅಂಕದ 6 ಪ್ರಶ್ನೆಗಳು, 5 ಮತ್ತು 6 ಅಂಕದ 2 ಪ್ರಶ್ನೆಗಳನ್ನು ನೀಡಲಾಗಿದೆ. ಒಟ್ಟಾರೆ 80 ಅಂಕಗಳಿಗೆ ವಿಸ್ತ್ರತವಾಗಿ ವಾಕ್ಯ ರೂಪದಲ್ಲಿ ಉತ್ತರಿಸುವ ಪ್ರಶ್ನೆಗಳಿವೆ.

First published: