ನೀವು ಉನ್ನತ ಶಿಕ್ಷಣಕ್ಕಾಗಿ (Education) ಹೊಸದಾಗಿ ಕಾಲೇಜ್ ಹುಡುಕುತ್ತಿದ್ದೀರಾ? ಹಾಗಾದರೆ ಈ ಅಂಶಗಳನ್ನು ನೆನಪಿನಲ್ಲಿಡಬೇಕಾಗುತ್ತದೆ. ಅದು ಯಾವುದೇ ಕೋರ್ಸ್ ಆಗಿರಲಿ ನೀವು ಅದಕ್ಕೆ ಸಂಬಂಧಿಸಿದಂತೆ ಉತ್ತಮ ಕಾಲೇಜು (College) ಅಥವಾ ಶಾಲೆಯನ್ನು (School) ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ಹಾಗಂತ ಆರ್ಟ್ಸ್ ಉತ್ತಮವಾಗಿರುವ ಶಾಲೆಯಲ್ಲಿ ನೀವು ಸೈನ್ಸ್ಗೆ ಅಡ್ಮಿಷನ್ (Admission) ಮಾಡಿದರೆ ಅದೂ ಕೂಡಾ ವ್ಯರ್ಥವಾಗುತ್ತದೆ. ಹಾಗಾಗಿ ನೀವು ಯಾವ ಕೋರ್ಸ್ ಮಾಡುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿ ನಂತರ ಉತ್ತಮ ಕಾಲೇಜು ಅಥವಾ ಶಾಲೆ ಆಯ್ಕೆ ಮಾಡುವ ಪ್ರಯತ್ನ ಆರಂಭಿಸಿ.
ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಅತ್ಯುತ್ತಮ ಸಂಸ್ಥೆಗಳು ಯಾವುವು?
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಾಂಗಕ್ಕಾಗಿ ವಿದೇಶಕ್ಕೆ ತೆರಳುವ ಆಸಕ್ತಿ ಹೊಂದಿದ್ದಾರೆ ಅದಕ್ಕಿಂತ ಭಾರತದಲ್ಲೇ ಉತ್ತಮವಾದ ಉನ್ನತ ಶಿಕ್ಷಣ ನೀಡುವ ಬೆಸ್ಟ್ ಕಾಲೇಜುಗಳ ಬಗ್ಗೆ ನಾವು ಇಲ್ಲಿ ಕೆಲವು ಮಾಹಿತಿ ನೀಡಿದ್ದೇವೆ ಗಮನಿಸಿ. ಅದಕ್ಕಿಂತ ಹೆಚ್ಚಾಗಿ ನೀವೇ ನಿಮಗೆ ಬೇಕಾದ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಯಾವ ಅಂಶ ಮುಖ್ಯ ಎಂಬ ಕುರಿತು ಇಲ್ಲಿದೆ ಮಾಹಿತಿ.
ಯಾವುದನ್ನು ಮಾಡಬಾರದು
ನೀವು ಉನ್ನತ ಶಿಕ್ಷಣಕ್ಕಾಗಿ ಹೊಸ ಕಾಲೇಜ್ ಹುಡುಕಾಟದಲ್ಲಿದ್ದರೆ ಜಾಹಿರಾತುಗಳನ್ನು ಅತಿಯಾಗಿ ನಂಬಬೇಡಿ. ಜಾಹಿರಾತುಗಳು ಯಾವಾಗಲೂ ತಮ್ಮ ಪ್ರಚಾರಕ್ಕಾಗಿ ವಿದ್ಯಾಸಂಸ್ಥೆಗಳು ಮಾಡಿಕೊಂಡಿರುವ ಸೇತುವೆಯಾಗಿರುತ್ತದೆ ಆದ್ದರಿಂದ ಅವುಗಳ ಬಗ್ಗೆ ನಿಖರ ಮಾಹಿತಿ ಇದ್ದರೆ ಮಾತ್ರ ನಂಬಿ. ಉತ್ತಮ ಹೆಸರು ಪಡೆದಿದೆ ಎಂದರೆ ಅದು ನಿಮಗೆ ಸೂಕ್ತವಾಗಿದೆ ಎಂದಲ್ಲ. ಕೆಲ ರಾಜಕಾರಣಿಗಳ, ಉದ್ಯಮಿಗಳ ಸಂಸ್ಥೆಗಳು ಕೂಡಾ ಉತ್ತಮ ಹೆಸರು ಹೊಂದಿರುತ್ತದೆ ಆದರೆ ಅಲ್ಲಿ ನಿಮಗೆ ಬೇಕಾದ ಎಲ್ಲಾ ವ್ಯವಸ್ಥೆ ಅಲ್ಲಿದೆಯೇ ಎಂಬುದನ್ನು ನೀವು ಪರೀಕ್ಷಿಸಲೇ ಬೇಕಾಗುತ್ತದೆ.
ಇದನ್ನೂ ಓದಿ: Teachers Transfer: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್!
ಹೆಸರುವಾಸಿಯಾಗಿದೆ ಎಂಬ ಮಾತ್ರಕ್ಕೆ ಆ ಸಂಸ್ಥೆ ಶಿಕ್ಷಣಕ್ಕೆ ಒಳ್ಳೆಯದು ಎಂದು ನಿರ್ಧರಿಸಬೇಡಿ. Placement ಕೂಡಾ ಮುಖ್ಯವಾಗುತ್ತದೆ. ಆ ಕಾಲೇಜಿನ ವಿದ್ಯಾರ್ಥಿಗಳು ಎಷ್ಟು ಜನ ಕೆಲಸ ಪಡೆದುಕೊಂಡಿದ್ದಾರೆ ಮತ್ತು ಈ ವರ್ಷ ಯಾವ ಕಂಪನಿಯವರು ಕ್ಯಾಪಂಸ್ಗೆ ಬರಲಿದ್ದಾರೆ ಎಂಬ ಕುರಿತು ಮಾಹಿತಿ ಪಡೆದುಕೊಳ್ಳಿ. ಅಲ್ಲಿ ನೀಡಿರುವ ಅಂಕಿ ಅಂಶಗಳ ಕುರಿತು ನಂಬಿಕೆ ಇಡಬೇಡಿ. ಹಳೆ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ವಿಚಾರಿಸಿ.
ಆ ಸಂಸ್ಥೆಯಲ್ಲಿ ಕಲಿತವರ ಅಂಕ ಪಟ್ಟಿ ನೋಡಿ.
ಆ ಸಂಸ್ಥೆಯಲ್ಲಿ ಕಲಿತವರ ಅಂಕ ಪಟ್ಟಿ ನೋಡಿ. ಎಷ್ಟು ಜನ ಪಾಸ್ ಆಗಿದ್ದಾರೆ ಎಂದು ವಿಚಾರಿಸಿಕೊಳ್ಳಿ. ವಿದ್ಯಾರ್ಥಿಗಳ ಏಳಿಗೆಗಾಗಿ ಕಾಲೇಜ್ ಎನು ಮಾಡುತ್ತಿದೆ ಎಂಬ ಕುರಿತು ಗಮನವಿಡಿ. ಇಲ್ಲವಾದರೆ ಯಾರಿಂದಲಾದರೂ ಕೇಳಿ ತಿಳಿಯಿರಿ. ಏಕೆಂದರೆ ಸಾಮಾನ್ಯವಾಗಿ ಒಳ್ಳೆ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳ ಅಂಕವನ್ನೇ ಕೇಂದ್ರವಾಗಿಟ್ಟುಕೊಂಡು ಪಾಸಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡೆಗಣಿಸಿಬಿಡಬಹುದು.
ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ವಿಚಾರಿಸಿ
ಎಷ್ಟು ಕಂಪನಿಗಳ ಜೊತೆ ಟೈ ಅಪ್ ಮಾಡಿಕೊಂಡು ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಕುರಿತು ನಿಖರ ಮಾಹಿತಿ ಸಂಗ್ರಹ ಮಾಡಿ. ಹಳೆ ವಿದ್ಯಾರ್ಥಿಗಳ ಜೊತೆ ಮಾತನಾಡಿ ಈ ಕಾಲೇಜಿನಿಂದ ನಿಮಗೆಷ್ಟು ಸಹಾಯವಾಗಿದೆ ಎಂದು ಕೇಳಿ ತಿಳಿದುಕೊಳ್ಳಿ. ಏಕೆಂದರೆ ಕೆಲ ಸಂಸ್ಥೆಗಳು ಕೇವಲ ಪ್ರತಿಷ್ಠೆಗಾಗಿ Industry tie upಮಾಡಿಕೊಂಡಿರುತ್ತವೆ ಅಸಲಿಗೆ ಅಲ್ಲಿ ಉಪಯುಕ್ತವಾದ ಯಾವುದೇ ಚಟುವಟಿಕೆಗಳು ನಡೆಯುತ್ತಿರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ