• Home
  • »
  • News
  • »
  • jobs
  • »
  • Library: ನಿಮ್ಮ ಮನೆ ಹತ್ತಿರದ ಗ್ರಂಥಾಲಯದ ಸದಸ್ಯರಾಗುವುದು ಹೇಗೆ? ಲೈಬ್ರರಿಯಿಂದ ಈ ಪ್ರಯೋಜನಗಳೂ ಇವೆ

Library: ನಿಮ್ಮ ಮನೆ ಹತ್ತಿರದ ಗ್ರಂಥಾಲಯದ ಸದಸ್ಯರಾಗುವುದು ಹೇಗೆ? ಲೈಬ್ರರಿಯಿಂದ ಈ ಪ್ರಯೋಜನಗಳೂ ಇವೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೈಯಕ್ತಿಕ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಸಹಾಯ ಮಾಡುತ್ತದೆ. ಕೇವಲ ತರಗತಿ ಹಾಗು ಪರಿಕ್ಷೆಗೆ ಮಾತ್ರವಲ್ಲ ನಿಮ್ಮ ನಿತ್ಯದ ಬದುಕಿಗೆ ಸಹಾಯವಾಗುವ ಎಷ್ಟೋ ಅಂಶಗಳಿಗೆ ಇದು ಸಹಾಯ ಮಾಡುತ್ತದೆ. ಓದಿ ನೀವು ಗಳಿಸುವ ಆಸ್ತಿ ಯಾರಿಂದಲೂ ದೋಚಲು ಸಾಧ್ಯವಾಗುವುದಿಲ್ಲ.

  • News18 Kannada
  • Last Updated :
  • New Delhi, India
  • Share this:

ಎಷ್ಟೋ ವಿದ್ಯಾರ್ಥಿಗಳು ಹಾಗು ಸಾಮಾನ್ಯ ಜನರು ಮೊಬೈಲ್ (Mobile)​ ಹಾಗೂ ಡಿಜಿಟಲ್ ರೂಪದ ಎಷ್ಟೇ ಪುಸ್ತಕಗಳು ಲಭ್ಯವಿದ್ದರೂ ಸಹ ಕೈಯಲ್ಲಿ ಹಿಡಿದು ಓದುವ ಗ್ರಂಥಾಲಯದ (Library) ಪುಸ್ತಕಗಳನ್ನೇ ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಓದುಗರಲ್ಲಿ ಇನ್ನೂ ಪುಸ್ತಕದ ಮೇಲಿರುವ ಪ್ರೀತಿ. ಭಾರತದಲ್ಲಿ ಅಪಾರ ಪುಸ್ತಕ (Book) ಭಂಡಾರವಿದೆ ಸರಿಯಾಗಿ ಇದನ್ನು ಉಪಯೋಗಿಸಿಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿ ಶಾಲೆಗಳಲ್ಲೂ (School) ಸಹ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್​ ಇರುತ್ತದೆ ಅಥವಾ ಯಾವುದಾದರೊಂದು ವಿಷಯದ ಕುರಿತು ಸಂಶೋಧನೆ (Research) ಮಾಡುವ ಅಗತ್ಯಇರುತ್ತದೆ.


ಅಂಥಹ ಸಂದರ್ಭದಲ್ಲಿ ಅಗತ್ಯವಾಗಿ ಗ್ರಂಥಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ. ಆದರೆ ಹಲವು ಗ್ರಂಥಾಲಯದಲ್ಲಿ ಒಂದು ರಾತ್ರಿಯ ಅವಧಿಗೆ ಪುಸ್ತಕ ನೀಡುತ್ತಾರೆ. ಇನ್ನು ಕೆಲವೆಡೆ ಅಲ್ಲೇ ಕುಳಿತು ಮಾತ್ರ ಓದುವ ವ್ಯವಸ್ಥೆ ಇರುತ್ತದೆ. ಆದರೆ ಹೆಚ್ಚಿನ ಅವಧಿಗೆ ಪುಸ್ತಕ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.


ವೈಯಕ್ತಿಕ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಸಹಾಯ ಮಾಡುತ್ತದೆ. ಕೇವಲ ತರಗತಿ ಹಾಗು ಪರಿಕ್ಷೆಗೆ ಮಾತ್ರವಲ್ಲ ನಿಮ್ಮ ನಿತ್ಯದ ಬದುಕಿಗೆ ಸಹಾಯವಾಗುವ ಎಷ್ಟೋ ಅಂಶಗಳಿಗೆ ಇದು ಸಹಾಯ ಮಾಡುತ್ತದೆ. ಓದಿ ನೀವು ಗಳಿಸುವ ಆಸ್ತಿ ಯಾರಿಂದಲೂ ದೋಚಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ: Exam Tips: ಪಬ್ಲಿಕ್​ ಎಕ್ಸಾಂಗೆ ರೆಡಿ ಆಗ್ತಿದಿರಾ? ಹಾಗಾದ್ರೆ ಈ ಆ್ಯಪ್​ ಡೌನ್​ಲೋಡ್​​ ಮಾಡಿ


ಇಡೀ ಗ್ರಂಥಾಲಯವನ್ನು ನೋಡಿಕೊಳ್ಳಲು ಗ್ರಂಥಪಾಲಕರು ಇರುತ್ತಾರೆ. ಅವರು ಹೇಳುವ ಮಾಹಿತಿ ನಿಮಗೆ ತುಂಬಾ ಸಹಾಯವಾಗುತ್ತದೆ. ಸಾವಿರಾರು ಪುಸ್ತಕಗಳ ನಡುವೆ ನಿಮಗೆ ಯಾವ ಪುಸ್ತಕ ಬೇಕು ಎಂಬುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅಥವಾ ಅದನ್ನು ಹುಡುಕಲು ನಿಮಗೆ ಸಾಧ್ಯವಾಗದೇ ಇದ್ದಾಗ ಇವರ ಸಹಾಯ ಪಡೆಯಬಹುದು.


ವಿಷಯವಾರು ಪುಸ್ತಕ ಜೋಡಣೆ


ಇದನ್ನು ಸರಸ್ವತಿಯ ದೇಗುಲ ಎಂದು ಕರೆಯುತ್ತಾರೆ. ನೀವು ಗ್ರಂಥಾಲಯದ ಸದಸ್ಯರಾದರೆ ಖಂಡಿತ ನಿಮಗೆ ಹಲವು ದಿನಗಳವರೆಗೆ ಪುಸ್ತಕ ಪಡೆದು ಓದಲು ಅವಕಾಶವಾಗುತ್ತದೆ. ಆದ್ದರಿಂದ ನೀವು ಸದಸ್ಯತ್ವ ಪಡೆಯುವುದು ಮುಖ್ಯವಾಗುತ್ತದೆ. ಪುಸ್ತಕಗಳನ್ನು ಪ್ರತಿಯೊಂದು ಶಾಲಾ , ಕಾಲೇಜು , ವಿದ್ಯಾಲಯಗಳಲ್ಲಿ ಅಲ್ಲಿಯ ಅಗತ್ಯಕ್ಕೆ ತಕ್ಕಂತೆ ವಿಷಯವಾರು ಜೋಡಿಸಿಡಲಾಗುತ್ತದೆ. ಹಲವಾರು ಜನರಿರುವುದರಿಂದ ಅದನ್ನು ಒಂದು ರಾತ್ರಿತ ಅವಧಿಗೆ ಮಾತ್ರ ನೀಡಲಾಗುತ್ತದೆ. ಆದರೆ ಸದಸ್ಯತ್ವ ಹೊಂದಿ ಬೇರೆ ಗ್ರಂಥಾಲಯದಿಂದಲೂ ಸಹ ನೀವು ಈ ಪುಸ್ತಕವನ್ನು ಪಡೆಯಬಹುದು.


ಸಾಂದರ್ಭಿಕ ಚಿತ್ರ


ವಿದ್ಯಾರ್ಥಿಗಳ ಜೊತೆ, ಸಂಶೋಧಕರು, ಅಧ್ಯಾಪಕರು, ಸಾಮಾನ್ಯ ಜನರು ಎಲ್ಲರೂ ಸಹ ಪುಸ್ತಕ ಓದುತ್ತಾರೆ. ಪ್ರತಿ ಊರಿಗೊಂದರಂತಾದರೂ ಪುಸ್ತಕಾಲಯ ಇದ್ದೇ ಇರುತ್ತದೆ. ಒಂದೊಂದು ಗ್ರಂಥಾಲಯದಲ್ಲಿ ಒಂದೊಂದು ರೀತಿಯ ಸದಸ್ಯತ್ವ ಇರುತ್ತದೆ. ಸದಸ್ಯತ್ವ ಪಡೆಯಲು ನೀವು ಮಾಡಬೇಕಿರುವುದು ಇಷ್ಟೇ. ಗ್ರಂಥಪಾಲಕರ ಬಳಿ ಹೋಗಿ ಆ ಗ್ರಂಥಾಲಯಕ್ಕೆ ಸಂಬಂಧಿಸಿದ ನಿಯಮ ಏನಿದೆ ತಿಳಿಯಿರಿ. ಅಲ್ಲಿ ಕೇಳಲಾಗುವ ಅಗತ್ಯ ದಾಖಲೆ ಮತ್ತು ಸಹಿ ನೀಡಿ. ಕೆಲವು ನಿಗದಿತ ಶುಲ್ಕ ಇರುತ್ತದೆ ಅದನ್ನು ಪಾವತಿಸಿ, ಅದಕ್ಕೆ ಪ್ರತಿಯಾಗಿ ಒಂದು ಗ್ರಂಥಾಲಯ ಕಾರ್ಡ್​ ನೀಡುತ್ತಾರೆ ಅದನ್ನು ಪಡೆದರೆ ನಿಮ್ಮ ಸದ್ಯತ್ವ ಅಲ್ಲಿ ಉಳಿಯುತ್ತದೆ.
ಕತೆ , ಕಾದಂಬರಿ , ನಾಟಕ , ಕಾವ್ಯ ಇತ್ಯಾದಿಗೆ ಮನರಂಜೆನೆ ನೀಡುವ ವಿಷಯಗಳ ಪುಸ್ತಕಗಳೂ ಸಹ ಅಲ್ಲಿ ಲಭ್ಯವಿರುತ್ತದೆ. ರಾಜ್ಯ ಸರ್ಕಾರ , ಕೇಂದ್ರ ಸರ್ಕಾರ ನಡೆಸುವ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯವಾಗುವ ಅಂಶಗಳನ್ನೂ ಸಹ ಇಲ್ಲಿಂದಲೇ ಡೆಯಬಹುದು.


ಓದುಗರು ಪುಸ್ತಕಗಳನ್ನು ಹಾಳುಮಾಡಬಾರದು
ಗ್ರಂಥಾಲಯದ ಸದಸ್ಯರಾದ ನಂತರ ವ್ಯಕ್ತಿಯು ತನ್ನ ಆಯ್ಕೆಯ ಯಾವುದೇ ಪುಸ್ತಕವನ್ನು ಗ್ರಂಥಾಲಯದಲ್ಲಿ ಓದಬಹುದು ಅಥವಾ ಮನೆಗೂ ಕೊಂಡೊಯ್ಯಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು