• ಹೋಂ
  • »
  • ನ್ಯೂಸ್
  • »
  • Jobs
  • »
  • Scholarship: ನೆದರ್​ಲ್ಯಾಂಡ್​ ಆರೆಂಜ್ ಟುಲಿಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಇಲ್ಲಿದೆ ವಿವರ

Scholarship: ನೆದರ್​ಲ್ಯಾಂಡ್​ ಆರೆಂಜ್ ಟುಲಿಪ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಇಲ್ಲಿದೆ ವಿವರ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೆದರ್​ಲ್ಯಾಂಡ್​​ನ ಆರೆಂಜ್​ ಟುಲಿಪ್​​ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರ ಇಲ್ಲಿದೆ.

  • Share this:

ವಿದೇಶದಲ್ಲಿ ಓದುವುದು (Sstudy Abroad) ಬಹುತೇಕ ವಿದ್ಯಾರ್ಥಿಗಳ ಕನಸು. ವೃತ್ತಿನಿರತ ಕೋರ್ಸ್​​ಗಳಿಗೆ (Professional Courses) ಭಾರತದಲ್ಲಿ ಅತಿ ಹೆಚ್ಚು ಶುಲ್ಕವನ್ನು (Fees) ಕಟ್ಟಬೇಕು. ಆದರೆ ಕೆಲವು ವಿದೇಶಗಳಲ್ಲಿ ಶಿಕ್ಷಣ ದುಬಾರಿಯಲ್ಲ. ಜೊತೆಗೆ ಹಲವಾರು ಸ್ಕಾಲರ್​ಶಿಪ್​ಗಳು ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಬಹುತೇಕರು ಇಂಗ್ಲೀಷ್ ಪ್ರಾಧಾನ್ಯವಿರುವ ಯೂರೋಪ್​, ಯುಎಸ್​ ಜೊತೆ ಡಚ್ಚರ ದೇಶ ನೆದರ್​​ಲ್ಯಾಂಡನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.


ನೆದರ್​ಲ್ಯಾಂಡ್​​ನ​ ವಿಶೇಷತೆಗಳು


ನೆದರ್​​ಲ್ಯಾಂಡ್​ ಪ್ರಪಂಚದಲ್ಲೇ ಹೆಚ್ಚಿನ ಮ್ಯೂಸಿಯಂ ಹೊಂದಿದೆ, ಸುರಕ್ಷತೆ, ಹ್ಯಾಪಿಯೆಸ್ಟ್​​ ಕಂಟ್ರಿಗಳಲ್ಲಿ ಟಾಪ್​ 10 ನೇ ಸ್ಥಾನದಲ್ಲಿದೆ. ಜೊತೆಗೆ ಶೇಕಡಾ 90 ರಷ್ಟು ಜನರು ಇಂಗ್ಲೀಷ್​ ಬಲ್ಲವರಾಗಿದ್ದಾರೆ. ಜೊತೆಗೆ ಯುರೋಪ್​​ ದೇಶಗಳಿಗೆ ನೆದರ್​​ಲ್ಯಾಂಡ್​ನಿಂದ 3 ಗಂಟೆಗಳ ಪ್ರಯಾಣವಷ್ಟೇ! ಅಷ್ಟೇ ಅಲ್ಲ ಭಾರತೀಯರಿಗೆ ಸಾಕಷ್ಟು ಸ್ಕಾಲರ್​​ಶಿಪ್​ ಕೂಡ ಲಭ್ಯವಿದೆ.


ಪ್ರಸ್ತುತ ನೆದರ್​ಲ್ಯಾಂಡ್​​ನ ಆರೆಂಜ್​ ಟುಲಿಪ್​​ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದ್ರೆ ಇಷ್ಟೆಲ್ಲಾ ತಿಳಿದ ಮೇಲೆ ನೀವು ಕೂಡ ಅರ್ಜಿ ಹಾಕೋ ಯೋಚ್ನೇ ಮಾಡ್ತಿದ್ರೆ ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.


ಏನಿದು ಆರೆಂಜ್​ ಟುಲಿಪ್​ ಸ್ಕಾಲರ್​ಶಿಪ್​ ?


ನೆದರ್​ಲ್ಯಾಂಡ್​​ನ ಶಿಕ್ಷಣ ಸಂಸ್ಥೆಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಭಾರತೀಯರಿಗೆ ಮತ್ತು ಇಂಡೋನೇಷ್ಯಾದ ವಿದ್ಯಾರ್ಥಿಗಳಿಗೆ ಭರಿಸುವ ಶೈಕ್ಷಣಿಕ ಶುಲ್ಕವಾಗಿದೆ. ಭಾರತೀಯರಿಗೆ ಪ್ರತಿ ವರ್ಷ 50 ಆರೆಂಜ್​ ಸ್ಕಾಲರ್​​ಶಿಪ್​ಗಳನ್ನು ನೀಡಲಾಗುತ್ತಿದೆ.


ಪ್ರಾತಿನಿಧಿಕ ಚಿತ್ರ


ಅನುದಾನದ ವಿವರ


ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ವೇತನದ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಸಂಪೂರ್ಣ ಶುಲ್ಕವನ್ನು ಭರಿಸುವುದು, ಅಥವಾ ಶೇಕಡಾ 50 ರಷ್ಟು, ಇಲ್ಲವೇ 25 ರಷ್ಟು ಶುಲ್ಕ ಭರಿಸುತ್ತದೆ.


ಅರ್ಹತೆ
ಭಾರತ ಅಥವಾ ಇಂಡೋನೇಷ್ಯಾದ ನಾಗರೀಕರಾಗಿರಬೇಕು. ಡಚ್​ ಶಿಕ್ಷಣ ಸಂಸ್ಥೆಯವರಾಗಿರಬಾರದು.


ಪ್ರಸ್ತುತ ನೆದರ್​​ಲ್ಯಾಂಡ್​ನಲ್ಲಿ ಓದುತ್ತಿರುವಂತಿಲ್ಲ. ಜೊತೆಗೆ ಕೆಲಸ ಮಾಡುತ್ತಿರುವಂತಿಲ್ಲ.


ಈಗಾಗಲೇ ಡಚ್​ ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಿರಬೇಕು.


ಡಚ್ಚ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್​​​ಗೆ ಈಗಾಗಲೇ ಪ್ರವೇಶ ಪಡೆದುಕೊಂಡಿರಬೇಕು.


ಅರ್ಜಿ ಸಲ್ಲಿಸುವುದು ಹೇಗೆ?


ಆರೆಂಜ್​ ಟುಲಿಪ್​​ ಅರ್ಹತೆ ಮತ್ತು ಆದ್ಯತೆಗಳನ್ನು ಗಮನಿಸಿ


Nuffic NESOs ಸ್ಟಡಿ ಫೈಂಡರ್​ ಪೊರ್ಟಲ್​ನಿಂದ ಕೋರ್ಸ್​ ಮತ್ತು ಕಾಲೇಜನ್ನು ಆಯ್ಕೆ ಮಾಡಿಕೊಳ್ಳಿ


ಅರ್ಜಿ ಸಲ್ಲಿಸಿ ಡಚ್​ ವಿಶ್ವವಿದ್ಯಾಲಯದಿಂದ ದೃಢೀಕರಣ ಪಡೆಯಿರಿ.


Nesco ಮೂಲಕ ವಿದ್ಯಾರ್ಥಿ ವೇತನದ ಅರ್ಜಿಯನ್ನು ಡೌನ್​ಲೋಡ್​​ ಮಾಡಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.


ಈ ಅರ್ಜಿಯನ್ನು ವರ್ಡ್​​ ಅಥವಾ ಪಿಡಿಎಫ್​ ಮಾದರಿಯಲ್ಲಿ ಅಪಲೋಡ್​ ಮಾಡಿ.




ಅಗತ್ಯ ದಾಖಲೆಗಳನ್ನು ಲಗತ್ತಿಸಿ


ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ots@nesoindia.org ಗೆ ಇ-ಮೇಲ್​ ಮಾಡಬೇಕು.ಪ್ರತಿ ಫೈಲ್​ ನಲ್ಲೂ ಸರಿಯಾಗಿ ಇಂಗ್ಲೀಷ್​ನಲ್ಲಿ ಹೆಸರಿಸಿರಬೇಕು.


ಆಯ್ಕೆ ಪ್ರಕ್ರಿಯೆ


ಅರ್ಜಿದಾರರ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಅವಲಂಬಿಸಿದೆ. ಆರೆಂಜ್​ ಟುಲಿಪ್​ ಸ್ಕಾಲರ್​ ಶಿಪ್​ ಹೊಂದುವ ವಿದ್ಯಾರ್ಥಿ ಈ ಎಲ್ಲ ಹಂತಗಳಲ್ಲೂ ಉತ್ತೀರ್ಣನಾಗಬೇಕು.


ಅರ್ಜಿ ಸ್ವೀಕಾರ ಮತ್ತು ಆಯ್ಕೆ


1. ಆರೆಂಜ್​ ಟುಲಿಪ್​​ ಸ್ಕಾಲರ್​ಶಿಪ್​​ ಮೊದಲ ಪುಟದಲ್ಲಿ ತಿಳಿಸಿರುವ ನಿಯಮ ಮತ್ತು ಷರತ್ತುಗಳ ಮೇಲೆ Nesco ಇಂಡಿಯಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಕನಿಷ್ಠ ಆದ್ಯತೆಗಳನ್ನು ಪೂರೈಸಿರುವ ವಿದ್ಯಾರ್ಥಿಯ ಅರ್ಜಿಯನ್ನು ವಿಶ್ವ ವಿದ್ಯಾಲಯಕ್ಕೆ ಕಳಿಸಲಾಗುತ್ತದೆ.


ಇದನ್ನೂ ಓದಿ: Goonj: ತಿಂಗಳಿಗೆ 20 ಸಾವಿರ ಸಿಗುವ ಈ ಫೆಲೋಶಿಪ್​ಗೆ ನೀವೂ ಅಪ್ಲೈ ಮಾಡಿ


ಕಡತ ಪರಿಶೀಲನೆ


2. ಆಯ್ಕೆ ಹಂತಕ್ಕೆ ಅರ್ಹತೆ ಹೊಂದಿದ ಫೈಲ್​ಗಳನ್ನು ಪ್ರಾಯೋಜಕರಿಗೆ ಕಳುಹಿಸಿಕೊಡಲಾಗವುದು.


ಆಯ್ಕೆಯಾದವರ ಪ್ರಕಟಣೆ

top videos


    3. ಸ್ಕಾಲರ್​ಶಿಪ್​ ಗೆ ಆಯ್ಕೆಯಾದವರ ಬಗ್ಗೆ ನೆಸ್ಕೋ ಇಂಡಿಯಾಗೆ ತಿಳಿಸಲಾಗುತ್ತದೆ. ಆಫರ್​​ ಲೆಟರ್​ ಪಡೆದ ಅಭ್ಯರ್ಥಿ ಅದನ್ನು ಅನುಮೋದಿಸಿ ನೆಸ್ಕೋ ಇಂಡಿಯಾಗೆ ಮರಳಿಸಬೇಕು. ಸ್ಕಾಲರ್​​ಶಿಪ್​​ ಒಪ್ಪಂದ, ಬೋಧನಾ ಶುಲ್ಕದ ಬಗ್ಗೆ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿ ಮತ್ತು ಪ್ರಾಯೋಜಕರ ನಡುವೆ ನಡೆಯುತ್ತದೆ.

    First published: