• ಹೋಂ
  • »
  • ನ್ಯೂಸ್
  • »
  • Jobs
  • »
  • Technology: ವಿದ್ಯಾರ್ಥಿಗಳಲ್ಲಿ ಒತ್ತಡ ಸೃಷ್ಟಿಸುತ್ತಿದೆ ತಂತ್ರಜ್ಞಾನ; ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

Technology: ವಿದ್ಯಾರ್ಥಿಗಳಲ್ಲಿ ಒತ್ತಡ ಸೃಷ್ಟಿಸುತ್ತಿದೆ ತಂತ್ರಜ್ಞಾನ; ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಶಿಕ್ಷಣದ ಮಾಜಿ ಸಹಾಯಕ ಕಾರ್ಯದರ್ಶಿ ಡಯೇನ್ ರಾವಿಚ್ ಆಧುನಿಕ ಶಿಕ್ಷಣ ವ್ಯವಸ್ಥೆಯ ಕೆಲವೊಂದು ತತ್ವಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಪದ್ಧತಿಯಲ್ಲಿ ತಂತ್ರಜ್ಞಾನಗಳ ಹೆಚ್ಚುವರಿ ಬಳಕೆ ವಿದ್ಯಾರ್ಥಿಗಳಲ್ಲಿ ಒತ್ತಡವನ್ನುಂಟು ಮಾಡುತ್ತಿದೆ ಎಂಬ ಅಂಶವನ್ನು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:
  • published by :

ತಂತ್ರಜ್ಞಾನ ಅಪ್‌ಡೇಟ್ (Update) ಆಗುತ್ತಿದ್ದಂತೆ ಅದರ ಪ್ರಭಾವವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣಬಹುದಾಗಿದೆ. ಪ್ರಸ್ತುತ ಶಿಕ್ಷಣ ವಲಯದಲ್ಲೂ ತಂತ್ರಜ್ಞಾನದ ಪ್ರಭಾವ ಹೆಚ್ಚಾಗಿಯೇ ಕಾಣಬಹುದಾಗಿದ್ದು ಆನ್‌ಲೈನ್ (Online Class) ತರಗತಿಗಳಿಂದ ಆರಂಭಿಸಿ ವಿದ್ಯಾರ್ಥಿಗಳ (Students) ಭಾವನೆಗಳನ್ನು ಅರಿತುಕೊಳ್ಳಲು ಇದೀಗ ಮೆಶೀನ್‌ಗಳನ್ನು ಬಳಸುವ ಪದ್ಧತಿ ಆರಂಭವಾಗಿದೆ ಎಂಬುದು ಇತ್ತೀಚಿನ ವರದಿಗಳಿಂದ ದೃಢವಾಗಿದೆ.


ವಿದ್ಯಾರ್ಥಿಗಳಲ್ಲಿ ಒತ್ತಡಕ್ಕೆ ಕಾರಣವಾಗಿರುವ ತಂತ್ರಜ್ಞಾನಗಳು


ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಶಿಕ್ಷಣದ ಮಾಜಿ ಸಹಾಯಕ ಕಾರ್ಯದರ್ಶಿ ಡಯೇನ್ ರಾವಿಚ್ ಆಧುನಿಕ ಶಿಕ್ಷಣ ವ್ಯವಸ್ಥೆಯ ಕೆಲವೊಂದು ತತ್ವಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಪದ್ಧತಿಯಲ್ಲಿ ತಂತ್ರಜ್ಞಾನಗಳ ಹೆಚ್ಚುವರಿ ಬಳಕೆ ವಿದ್ಯಾರ್ಥಿಗಳಲ್ಲಿ ಒತ್ತಡವನ್ನುಂಟು ಮಾಡುತ್ತಿದೆ ಎಂಬ ಅಂಶವನ್ನು ತಿಳಿಸಿದ್ದಾರೆ.


ಎಮೋಷನ್ ಅನಾಲಿಟಿಕ್ಸ್ ಅನ್ನು ಡಿಜಿಟಲೀಕರಣದ ಲಾಭದಾಯಕ ರೂಪವಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಮುಖ, ಧ್ವನಿಗಳು, ದೇಹಗಳು ಮತ್ತು ಮಿದುಳುಗಳ ಮೇಲೆ ಅದರ ಸಾಫ್ಟ್‌ವೇರ್ ಅನ್ನು ತರಬೇತಿ ಮಾಡುತ್ತದೆ.


ಕೃತಕ ಬುದ್ಧಿಮತ್ತೆ ಶಿಕ್ಷಣ ರಂಗದಲ್ಲಿ ಹೇಗೆ ಕಪ್ಪುಚುಕ್ಕೆಯಾಗಿದೆ


ಡಿಜಿಟಲ್ ಶಿಕ್ಷಣಕ್ಕಾಗಿ ಸಾಂಕ್ರಾಮಿಕ ಚಾಲಿತ ಪ್ರಚೋದನೆಯು ಮಕ್ಕಳ ಮೇಲೆ ಹಾನಿಕಾರಕ ಪರಿಣಾಮ ಬೀರುವ ತಂತ್ರಜ್ಞಾನಗಳ ಶೈಕ್ಷಣಿಕ ಮೌಲ್ಯಮಾಪನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.


ಇದನ್ನೂ ಓದಿ: Chitradurga: ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ್​ ಹಾಕಿದ ಶಾಲಾ ಶಿಕ್ಷಕ ಅಮಾನತು


ಇದೀಗ ಕೃತಕ ಬುದ್ಧಿಮತ್ತೆ ಕೂಡ ಶಿಕ್ಷಣ ರಂಗದಲ್ಲಿ ನಿಧಾನವಾಗಿ ಕಾರ್ಯತಂತ್ರಗಳನ್ನು ವಿಸ್ತರಿಸುತ್ತಿದ್ದು ಇದು ಮಕ್ಕಳ ಬೌದ್ಧಿಕ ಅಂತೆಯೇ ಕ್ರಿಯಾತ್ಮಕ ಜ್ಞಾನವನ್ನೇ ಆಹುತಿಯನ್ನಾಗಿ ತೆಗೆದುಕೊಳ್ಳಲಿದೆ ಎಂಬ ಭಯ ಹೆಚ್ಚಾಗುತ್ತಿದೆ.


ಮಕ್ಕಳ ಬುದ್ಧಿವಂತಿಕೆಗೆ ಎಐ ಹೇಗೆ ಮಾರಕವಾಗುತ್ತಿದೆ?


ಎಐ ತಂತ್ರಜ್ಞಾನ ಬಳಸಿಕೊಂಡು ಅದೆಷ್ಟೋ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ನಡೆದ ಪಾಠ ಪ್ರವಚನಗಳನ್ನು ಒಂದೇ ದಿನದಲ್ಲಿ ಅರಿತುಕೊಂಡಿದ್ದಾರೆ ಇನ್ನು ಕೆಲವರು ಸಂಪೂರ್ಣ ಪ್ರಾಜೆಕ್ಟ್‌ಗಳನ್ನೇ ಎಐ ಬಳಸಿಕೊಂಡು ತಯಾರಿಸಿದ್ದಾರೆ. ಮಕ್ಕಳ ಬುದ್ಧಿವಂತಿಕೆಗೆ ಎಐ ಮಾರಕವಾಗುತ್ತಿದೆ ಎಂಬ ಅಂಶ ಇಲ್ಲಿ ನಿಚ್ಚಳವಾಗಿ ಕಾಣುತ್ತಿದೆ.


ಕೃತಕ ಬುದ್ಧಿಮತ್ತೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಯಂತ್ರ ಕಲಿಕೆ ಮತ್ತು ವಿದ್ಯಾರ್ಥಿಗಳ ಹೊಂದಾಣಿಕೆಯ ಮೌಲ್ಯಮಾಪನದ ಹೆಚ್ಚಿನ ಬಳಕೆಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ನೀತಿ ಆಯೋಗದಿಂದ ಬೆಂಬಲ ದೊರೆಯುತ್ತಿಲ್ಲ.


2022 ರಲ್ಲಿ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯ ಸರ್ಕಾರಗಳು ತಮ್ಮ ಶಾಲಾ ಪಠ್ಯಕ್ರಮವನ್ನು 'ಆಧುನೀಕರಿಸಲು' ಆನ್‌ಲೈನ್ ಪೂರೈಕೆದಾರ ಬೈಜುಸ್‌ನೊಂದಿಗೆ ಎಂಒಯುಗಳಿಗೆ ಸಹಿ ಹಾಕಿವೆ.




ಡೇಟಾ ಗೌಪ್ಯತೆಗೆ ಸಂಬಂಧಿಸಿದ ಕಳವಳಗಳನ್ನು ದೆಹಲಿ ಸರ್ಕಾರ ತಳ್ಳಿಹಾಕಿದೆ


ಭಾರತದಲ್ಲಿನ ಹೆಚ್ಚಿನ ಶಾಲಾ ವ್ಯವಸ್ಥೆಗಳು ಮಕ್ಕಳ ಗೌಪ್ಯ ಮಾಹಿತಿಗಳನ್ನು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತಿದ್ದು ಇದೊಂದು ಲಾಭದಾಯಕ ಮಟ್ಟದಲ್ಲಿ ಬೆಳೆಯುತ್ತಿದೆ.


ಶಾಲೆಗಳಲ್ಲಿನ ಕ್ಯಾಮೆರಾಗಳು ಮತ್ತು ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್‌ಗಳ (ಸಿಸಿಟಿವಿ) ಆಕ್ರಮಣಕಾರಿ ಆಡಳಿತದಲ್ಲಿ ದೆಹಲಿ ಸರಕಾರ ತನ್ನ ಪಾಲಿಲ್ಲ ಎಂದೇ ತಳ್ಳಿಹಾಕಿದೆ.


ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಫಾರ್ ಎಜುಕೇಶನ್ ಅಂಡ್ ಪೀಸ್ ಫಾರ್ ಸಸ್ಟೈನಬಲ್ ಡೆವಲಪ್‌ಮೆಂಟ್ (MGIEP) ಅನ್ನು ದೆಹಲಿಯಲ್ಲಿ ಸ್ಥಾಪಿಸಲಾಯಿತು ಮಾನವತಾವಾದ, ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯ ಗಾಂಧೀಜಿಯ ಮೌಲ್ಯಗಳನ್ನು ಅನುಸರಿಸಲು ಇದು ಕಾರ್ಯತತ್ಪರವಾಗಿದೆ.


ಆದರೆ ಈ ಸಂಸ್ಥೆ ಡಿಜಿಟಲ್ ಕಾರ್ಯಸೂಚಿಯನ್ನು ಮಾರಾಟ ಮಾಡುವ ಹೊಲೊಗ್ರಾಫಿಕ್ ಏಜೆಂಟ್ ಆಗಿ ಗಾಂಧಿಯನ್ನು ಮರುಬ್ರಾಂಡ್ ಮಾಡಿದೆ ಮತ್ತು ರಾಜಕೀಯವಾಗಿ ಪೊಳ್ಳು ಮಾಡಿದೆ ಎಂಬುದು ಈ ಸಂಸ್ಥೆಯ ಮೇಲಿರುವ ಆರೋಪವಾಗಿದೆ.


ಡಿಜಿಟಲ್ ಅಂಶಗಳಿಂದ ಹೆಚ್ಚಿನ ಅಪಾಯ


ಬಡ ಮಕ್ಕಳ 'ಡಿಜಿಟಲ್ ದೇಹಗಳು' (ಚಿತ್ರಗಳು, ಮಾಹಿತಿ ಮತ್ತು ಬಯೋಮೆಟ್ರಿಕ್ ಡೇಟಾ) ದೊಡ್ಡ ಡೇಟಾಸೆಟ್‌ಗಳಿಗೆ ಜೈವಿಕ ಬಂಡವಾಳವಾಗಿ ಬಳಕೆಯಾಗುವ ಹೆಚ್ಚಿನ ಅಪಾಯವಿದೆ ಎಂದು ಗುರುತಿಸಲಾಗುತ್ತಿದೆ.


ಬಾಲ್ಯವಿವಾಹಕ್ಕಾಗಿ ಅಸ್ಸಾಂನಲ್ಲಿ ವ್ಯಾಪಕವಾದ ಬಂಧನಗಳನ್ನು ಮಾಡುತ್ತಿರುವ ಪೊಲೀಸರು ಡಿಜಿಟಲ್ ಆರೋಗ್ಯ ದಾಖಲೆಗಳ ಶಸ್ತ್ರಾಸ್ತ್ರಗಳ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದಾರೆ.

First published: