ಮೊದಲೆಲ್ಲಾ ನಮಗೆ ಶಿಕ್ಷಣ ಎಂದರೆ ಶಾಲೆ (School) ಕಾಲೇಜುಗಳಿಗೆ (College) ಹೋಗುವುದು, ಅಲ್ಲಿ ಮೇಷ್ಟ್ರು ಅಥವಾ ಟೀಚರ್ (Teacher) ನಮಗೆ ಬೋರ್ಡ್ ಮೇಲೆ ಪಾಠದ ಸಾರಾಂಶವನ್ನು ಅರ್ಥವಾಗುವಂತೆ ತಿಳಿಸಿಕೊಡುವುದು ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ (Day) ಈ ತಂತ್ರಜ್ಞಾನ ಎಂಬುದು ಬಹುತೇಕವಾಗಿ ಎಲ್ಲಾ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಹೌದು. ಈ ತಂತ್ರಜ್ಞಾನ ಎಂಬುದು ಯಾರಿಗೂ ಎಂದಿಗೂ ನಿರಾಶೆಗೊಳಿಸುವುದಿಲ್ಲ. ಅನಾದಿ ಕಾಲದಿಂದಲೂ, ನಮಗೆ ಅಚ್ಚರಿ ಅಂತ ಅನ್ನಿಸುವ ಅನೇಕ ಹೊಸ (New) ವಿಷಯಗಳನ್ನು ಪರಿಚಯಿಸುವುದರಲ್ಲಿ ಅದು ಎಂದಿಗೂ ಹಿಂದೆ ಬಿದ್ದಿಲ್ಲ ಅಂತ ಹೇಳಬಹುದು.
ಮನರಂಜನೆಯಿಂದ ಹಿಡಿದು ಶಿಕ್ಷಣದವರೆಗೆ, ತಂತ್ರಜ್ಞಾನವು ತನ್ನ ಬೇರುಗಳನ್ನು ಹರಡಿದೆ ಆದರೆ ಈಗ ಶಿಕ್ಷಣದ ವಿಷಯಕ್ಕೆ ಬಂದರೆ, ವರ್ಚುವಲ್ ರಿಯಾಲಿಟಿ ಎಂದರೆ ವಿಆರ್ ಮತ್ತು ಚಾಟ್‌ಜಿಪಿಟಿ ಎಂಬ ಎರಡು ಪರಿಕಲ್ಪನೆಗಳು ಡೊಮೇನ್ ಅನ್ನು ಆಳುತ್ತಿವೆ. ವರ್ಚುವಲ್ ರಿಯಾಲಿಟಿ ಈಗ ಎಲ್ಲರಿಗೂ ತಿಳಿದಿರುವ ಕಲ್ಪನೆಯಾಗಿದೆ, ಆದರೆ ಚಾಟ್‌ಜಿಪಿಟಿ, ಹೊಸ ಪರಿಕಲ್ಪನೆಯಾಗಿದ್ದು, ಕೃತಕ ಬುದ್ಧಿಮತ್ತೆ ಡೊಮೇನ್ ನಲ್ಲಿ ಜಾಗತಿಕ ರೇಸ್ ಗೆ ಪ್ರವೇಶಿಸಿದೆ.
ಅದರ ಹಠಾತ್ ಜನಪ್ರಿಯತೆಯು ಚಾಟ್‌ಜಿಪಿಟಿಯನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಉದ್ಯಮ ಮತ್ತು ಸಾಮಾನ್ಯರಲ್ಲಿ ಕುತೂಹಲವನ್ನು ಬೆಳೆಸಿದೆ. ಇದು ವಿವಿಧ ಕ್ಷೇತ್ರಗಳಿಗೆ, ವಿಶೇಷವಾಗಿ ಶಿಕ್ಷಣಕ್ಕೆ ಎಷ್ಟು ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಾಟ್‌ಜಿಪಿಟಿ ಹಲವಾರು ಮುಖ್ಯಾಂಶಗಳನ್ನು ಪಟ್ಟಿ ಮಾಡುವುದರೊಂದಿಗೆ, ವಿಆರ್ ಜೊತೆಗೆ ಈ ಎಐ ಆಧಾರಿತ ಬುದ್ಧಿವಂತ ಚಾಟ್ಬಾಟ್ ಉನ್ನತ ಶಿಕ್ಷಣದ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Mother Tongue: ಶಿಕ್ಷಣವನ್ನು ಮಾತೃಭಾಷೆಯಲ್ಲೇ ಬೋಧನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗಮನಿಸಿ
ಈ ಎರಡು ಪ್ರಮುಖ ಪರಿಕಲ್ಪನೆಗಳು ಉನ್ನತ ಶಿಕ್ಷಣವನ್ನು ಹೇಗೆ ಪರಿವರ್ತಿಸಬಹುದು ಎಂಬುದರ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬಹುದು. ಆದರೆ ಈ ಸಂಭಾಷಣೆಯನ್ನು ಪ್ರಾರಂಭಿಸುವ ಮೊದಲು, ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಚಾಟ್‌ಜಿಪಿಟಿ ಎಂದರೇನು? ಅದು ಶಿಕ್ಷಣದಲ್ಲಿ ಹೇಗೆ ಬದಲಾವಣೆ ತರುತ್ತದೆ?
ಶಿಕ್ಷಣದಲ್ಲಿ ಚಾಟ್‌ಜಿಪಿಟಿ ತಂತ್ರಜ್ಞಾನ ಹೇಗಪ್ಪಾ ಕೆಲಸ ಮಾಡುತ್ತದೆ ಅಂತ ನೀವು ಕೇಳಬಹುದು. ಸಂವಾದಾತ್ಮಕ ರೀತಿಯಲ್ಲಿ ಸಂವಹನ ನಡೆಸುವ ಬುದ್ಧಿವಂತ ಚಾಟ್ಬಾಟ್ ಮತ್ತು ಸಂವಾದ ಸ್ವರೂಪವು ಚಾಟ್‌ಜಿಪಿಟಿಗೆ ಅನುಸರಣಾ ಪ್ರಶ್ನೆಗಳಿಗೆ ಉತ್ತರಿಸಲು, ತಪ್ಪುಗಳನ್ನು ಒಪ್ಪಿಕೊಳ್ಳಲು, ಪ್ರಶ್ನಿಸಲು ಮತ್ತು ಅನುಚಿತ ವಿನಂತಿಗಳನ್ನು ತಿರಸ್ಕರಿಸಲು ಅನುವು ಮಾಡಿಕೊಡುತ್ತದೆ.
ಚಾಟ್‌ಜಿಪಿಟಿಯ ಕ್ರಿಯಾತ್ಮಕತೆಯು ಇದು ಸಂವಾದಾತ್ಮಕ ವಿಆರ್ ಅನುಭವಗಳಿಗೆ ಆದರ್ಶ ಸಂಗಾತಿಯಾಗಿದೆ ಎಂದು ಹೇಳುತ್ತದೆ. ಇತ್ತೀಚೆಗೆ ಈ ವರ್ಚುವಲ್ ರಿಯಾಲಿಟಿ ಉನ್ನತ ಶಿಕ್ಷಣ ಅಥವಾ ಸಂಸ್ಥೆಯ ಭಾಗವಾಗುತ್ತಿದೆ ಅಂತ ಹೇಳಬಹುದು. ಚಾಟ್‌ಜಿಪಿಟಿ ಪ್ರಸ್ತುತ ಪ್ರವೃತ್ತಿಯಾಗುತ್ತಿರುವುದರಿಂದ, ವಿಆರ್ ಮತ್ತು ಚಾಟ್‌ಜಿಪಿಟಿ ಉನ್ನತ ಶಿಕ್ಷಣ ವಿಧಾನಕ್ಕೆ ಹೊಸ ವರ್ಧನೆಗಳನ್ನು ತರಬೇಕು ಅಂತ ಅನೇಕರು ಹೇಳುತ್ತಾರೆ.
ಶಿಕ್ಷಣದಲ್ಲಿ ಚಾಟ್‌ಜಿಪಿಟಿ ಬಳಕೆ ಯಾವ ರೀತಿಯಲ್ಲಿ ಆಗುತ್ತಿದೆ?
ಇದೀಗ ಚಾಟ್‌ಜಿಪಿಟಿ ಒಂದು ಶಕ್ತಿಯುತ ಭಾಷಾ ಮಾದರಿಯಾಗುತ್ತಿದೆ, ಅದು ಶಿಕ್ಷಣದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು ಹೆಚ್ಚು ಸ್ಪಷ್ಟತೆ ಮತ್ತು ಅದರ ಸಾಮರ್ಥ್ಯಗಳ ಸ್ಪಷ್ಟ ಕಲ್ಪನೆಯನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ಶಿಕ್ಷಕರಿಗೆ ಯಾವುದೇ ಒಂದು ಕಲ್ಪನೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುವ ಮೂಲಕ ಮತ್ತು ಕಲಿಸುವಾಗ ಅವರ ಕೆಲಸಗಳನ್ನು ಸುಲಭಗೊಳಿಸುವ ಮೂಲಕ ಸಹಾಯ ಮಾಡುತ್ತದೆ.
ಚಾಟ್‌ಜಿಪಿಟಿ ನೈಸರ್ಗಿಕ ಭಾಷೆಯಲ್ಲಿ ಇನ್ಪುಟ್ ಅನ್ನು ಗ್ರಹಿಸಬಹುದು ಮತ್ತು ಪ್ರತಿಕ್ರಿಯಿಸಬಹುದು. ಶಿಕ್ಷಕರು ಅಥವಾ ಮಾರ್ಗದರ್ಶಕರೊಂದಿಗಿನ ಚರ್ಚೆಯನ್ನು ಹೋಲುವ ಶೈಲಿಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳು ಮತ್ತು ಪ್ರತಿಕ್ರಿಯೆಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ಚಾಟ್‌ಜಿಪಿಟಿ ಪಠ್ಯವನ್ನು ಸಹ ಉತ್ಪಾದಿಸಬಹುದು, ಇದನ್ನು ಉತ್ತೇಜಕ ಮತ್ತು ಸಂವಾದಾತ್ಮಕ ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಬಳಸಬಹುದು.
ಚಾಟ್‌ಜಿಪಿಟಿಯನ್ನು ಅಭಿವೃದ್ಧಿಪಡಿಸುವ ಪರಿಕಲ್ಪನೆಯನ್ನು ಬಹಳ ಚೆನ್ನಾಗಿ ರಚಿಸಲಾಗಿದೆ. ಅದರ ನಿಖರತೆ ಮತ್ತು ತ್ವರಿತತೆಯನ್ನು ನೋಡಿದಾಗ, ಇದು ಉನ್ನತ ಶಿಕ್ಷಣದಲ್ಲಿ ಉಪಯುಕ್ತ ಸಾಧನವಾಗುವ ಸಾಮರ್ಥ್ಯವನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಲು ಇದನ್ನು ಪ್ರವೀಣ ಶಿಕ್ಷಣ ತಜ್ಞರು ಮತ್ತು ಇತರ ವಿಶ್ವಾಸಾರ್ಹ ಸಂಪನ್ಮೂಲಗಳೊಂದಿಗೆ ಸಂಯೋಜಿಸಬೇಕು.
ವಿದ್ಯಾರ್ಥಿಯು ಅವಲಂಬಿತವಾಗಿರುವುದು, ವಿಮರ್ಶಾತ್ಮಕ ಆಲೋಚನಾ ಸಾಮರ್ಥ್ಯಗಳ ಕೊರತೆ ಮತ್ತು ಇದು ಕೆಲವೊಮ್ಮೆ ತಪ್ಪು ಮಾಹಿತಿಯನ್ನು ಸಹ ಒದಗಿಸಬಹುದು. ಹೀಗೆ ಕೆಲವು ನ್ಯೂನತೆಗಳನ್ನು ಸಹ ಇದು ಹೊಂದಿದೆ ಅಂತ ಹೇಳಲಾಗುತ್ತಿದೆ. ಆದಾಗ್ಯೂ, ಈ ಸವಾಲುಗಳ ಹೊರತಾಗಿಯೂ, ಹಲವಾರು ತಜ್ಞರು ಹೊಸ ಸಾಧನವು ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳುತ್ತಾರೆ.
ಉನ್ನತ ಶಿಕ್ಷಣದಲ್ಲಿ ಚಾಟ್‌ಜಿಪಿಟಿ ಮತ್ತು ವಿಆರ್ ನ ಸಂಯೋಜನೆ ಹೇಗಿರುತ್ತದೆ?
ವಿಆರ್ ಮತ್ತು ಚಾಟ್‌ಜಿಪಿಟಿ ತಂತ್ರಜ್ಞಾನಗಳಿಂದಾಗಿ ಕಲಿಕೆ ಇನ್ನಷ್ಟು ಹೆಚ್ಚು ಆಕರ್ಷಕವಾಗುತ್ತದೆ. ಈ ಎರಡು ಸಾಧನಗಳು ಶೈಕ್ಷಣಿಕ ಉದ್ದೇಶಗಳನ್ನು ಸಂಪೂರ್ಣವಾಗಿ ಬದಲಾಯಿಸಿವೆ ಅಂತ ಹೇಳಬಹುದು. ಚಾಟ್‌ಜಿಪಿಟಿ ಮತ್ತು ವಿಆರ್ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಸುಧಾರಿಸುತ್ತದೆಯೇ ಎಂದು ನಿರ್ಧರಿಸುವುದು ಬಹುಶಃ ನಿರ್ಣಾಯಕವಾಗಿದೆ.
ಚಾಟ್‌ಜಿಪಿಟಿ ಮತ್ತು ವರ್ಚುವಲ್ ರಿಯಾಲಿಟಿ ಅನ್ನು ಉನ್ನತ ಶಿಕ್ಷಣದಲ್ಲಿ ಪರಿಣಾಮಕಾರಿಯಾಗಿ ಸಂಯೋಜಿಸಬಹುದು ಮತ್ತು ಇನ್ನಷ್ಟು ಹೆಚ್ಚು ಆಕರ್ಷಕವಾದ ಕಲಿಕೆಯ ಅನುಭವಗಳನ್ನು ರಚಿಸಬಹುದು. ಅವುಗಳನ್ನು ಒಟ್ಟಿಗೆ ಬಳಸಬಹುದಾದ ಕೆಲವು ವಿಧಾನಗಳು ಇಲ್ಲಿವೆ ನೋಡಿ:
1. ಸಂವಾದಾತ್ಮಕ ಉಪನ್ಯಾಸಗಳು: ವರ್ಚುವಲ್ ರಿಯಾಲಿಟಿಯನ್ನು ಸೃಜನಶೀಲ ಮತ್ತು ಸಂವಾದಾತ್ಮಕ ವರ್ಚುವಲ್ ಪರಿಸರಗಳೊಂದಿಗೆ ಸರಿ ಹೊಂದಲು ಪರಿಣಾಮಕಾರಿಯಾಗಿ ಬಳಸಬಹುದು.
ಇದು ವಿದ್ಯಾರ್ಥಿಗಳಿಗೆ ಪ್ರಮುಖ ಪರಿಕಲ್ಪನೆಗಳನ್ನು ನೇರ ರೀತಿಯಲ್ಲಿ ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ಇದರ ಸಂಯೋಜನೆಯಲ್ಲಿ, ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಉಪನ್ಯಾಸಗಳ ಸಮಯದಲ್ಲಿ ನೈಜ-ಸಮಯದ ಪ್ರತಿಕ್ರಿಯೆಯನ್ನು ಒದಗಿಸಲು ಚಾಟ್‌ಜಿಪಿಟಿಯನ್ನು ಸಹ ಬಳಸಬಹುದು.
2. ವರ್ಚುವಲ್ ಕ್ಷೇತ್ರ ಪ್ರವಾಸಗಳು: ಈ ಎರಡು ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ, ವಿದ್ಯಾರ್ಥಿಗಳನ್ನು ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಿಗೆ ವರ್ಚುವಲ್ ಕ್ಷೇತ್ರ ಪ್ರವಾಸಗಳಿಗೆ ಕರೆದೊಯ್ಯಲು ಸಾಧ್ಯವಿದೆ.
ವಿಆರ್ ನಿಜವಾಗಿಯೂ ಆ ಸ್ಥಳದಲ್ಲಿ ನಾವು ಹೋಗಿರುವಂತೆ ನಮಗೆ ಭಾಸವಾಗುವ ಆಳವಾದ ಅನುಭವವನ್ನು ಕೊಡುತ್ತದೆ. ಆದರೆ ಚಾಟ್‌ಜಿಪಿಟಿ ಆ ಸ್ಥಳಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮಗೆ ಒದಗಿಸಬಹುದು.
3. ನೈಜ ಅನುಭವ ನೀಡುತ್ತವೆ: ನೈಜ ಪ್ರಪಂಚದ ಸನ್ನಿವೇಶಗಳ ಬಗ್ಗೆ ಈ ಎರಡು ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಕಷ್ಟವಾಗುತ್ತದೆ ಅಂತ ಬಹುತೇಕರಿಗೆ ಅನ್ನಿಸಬಹುದು.
ಆದರೆ, ಚಾಟ್‌ಜಿಪಿಟಿ ಮತ್ತು ವಿಆರ್ ಅನ್ನು ನೈಜ-ಪ್ರಪಂಚದ ಸನ್ನಿವೇಶಗಳ ಸಿಮ್ಯುಲೇಶನ್ ಗಳನ್ನು ರಚಿಸಲು ಪರಿಣಾಮಕಾರಿಯಾಗಿ ಬಳಸಬಹುದು.
ಉದಾಹರಣೆಗೆ ಹೇಳುವುದಾದರೆ, ವೈದ್ಯಕೀಯ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಅಭ್ಯಾಸ ಮಾಡಲು ವಿಆರ್ ಅನ್ನು ಬಳಸಬಹುದು, ಅಲ್ಲದೆ ಕಾನೂನು ವಿದ್ಯಾರ್ಥಿಗಳು ಸಹ ಅಣಕು ಪ್ರಯೋಗಗಳಲ್ಲಿ ಭಾಗವಹಿಸಲು ವಿಆರ್ ಅನ್ನು ಬಳಸಬಹುದು.
4. ಸಹಯೋಗದಿಂದ ಯೋಜನೆಗಳನ್ನು ಮಾಡಬಹುದು: ವಿಆರ್ ನೊಂದಿಗೆ, ವಿದ್ಯಾರ್ಥಿಗಳ ಗುಂಪು ಯೋಜನೆಯನ್ನು ರಚಿಸಬಹುದು ಮತ್ತು ಸಹಕರಿಸಬಹುದು.
ಇದಲ್ಲದೆ, ಚಾಟ್‌ಜಿಪಿಟಿಯೊಂದಿಗೆ, ಮಾರ್ಗದರ್ಶನ ಮತ್ತು ಪ್ರತಿಕ್ರಿಯೆಯನ್ನು ಒದಗಿಸಬಹುದು. ಹೀಗಾಗಿ, ವಿದ್ಯಾರ್ಥಿಗಳ ನಡುವಿನ ಸಹಯೋಗವನ್ನು ಸುಗಮಗೊಳಿಸಲು ಚಾಟ್‌ಜಿಪಿಟಿ ಮತ್ತು ವಿಆರ್ ಅನ್ನು ಬಳಸಬಹುದು.
ಹೆಚ್ಚು ಆಕರ್ಷಕ ಮತ್ತು ಆಳವಾದ ಕಲಿಕೆಯ ಅನುಭವಗಳನ್ನು ರಚಿಸುವ ಮೂಲಕ, ವಿದ್ಯಾರ್ಥಿಗಳು ವಿಷಯವನ್ನು ತುಂಬಾನೇ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಪ್ರೇರೇಪಿತರಾಗುತ್ತಾರೆ ಮತ್ತು ಆಸಕ್ತಿ ಹೊಂದಿರುತ್ತಾರೆ.
ಇದು ಸುಧಾರಿತ ಕಲಿಕೆಯ ಫಲಿತಾಂಶಗಳಿಗೂ ಸಹ ಕಾರಣವಾಗಬಹುದು. ಹೆಚ್ಚುವರಿಯಾಗಿ, ವೈಯಕ್ತೀಕರಿಸಿದ ಪ್ರತಿಕ್ರಿಯೆಯನ್ನು ಒದಗಿಸುವ ಮೂಲಕ ಮತ್ತು ಸಹಯೋಗವನ್ನು ಸುಗಮಗೊಳಿಸುವ ಮೂಲಕ, ಚಾಟ್‌ಜಿಪಿಟಿ ಮತ್ತು ವಿಆರ್ ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ, ಚಾಟ್‌ಜಿಪಿಟಿ ಮತ್ತು ವಿಆರ್ ಸಂಯೋಜನೆಯು ಉನ್ನತ ಶಿಕ್ಷಣದಲ್ಲಿ ಕಲಿಕೆಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಬಲ ಸಾಧನವಾಗಿದೆ. ಅಲ್ಲದೆ, ಶಿಕ್ಷಣದಲ್ಲಿ ಚಾಟ್‌ಜಿಪಿಟಿ ಮತ್ತು ವಿಆರ್ ಅನ್ನು ಸಂಯೋಜಿಸುವ ಮೂಲಕ, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚು ಆಕರ್ಷಕ, ವೈಯಕ್ತೀಕರಿಸಿದ ಮತ್ತು ಪ್ರವೇಶಿಸಬಹುದಾದ ಕಲಿಕೆಯ ಅನುಭವಗಳನ್ನು ರಚಿಸಬಹುದು, ಇದು ಸುಧಾರಿತ ಕಲಿಕೆಯ ಫಲಿತಾಂಶಗಳಿಗೂ ಸಹ ಕಾರಣವಾಗುತ್ತದೆ.
ಆದಾಗ್ಯೂ, ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕೆಯ ಸಾಧ್ಯತೆಗಳನ್ನು ಸುಧಾರಿಸಲು ವಿಆರ್ ಮತ್ತು ಚಾಟ್‌ಜಿಪಿಟಿಯನ್ನು ಒಟ್ಟಿಗೆ ಬಳಸುವ ಉತ್ತಮ ಮಾರ್ಗಗಳನ್ನು ಎಚ್ಚರಿಕೆಯಿಂದ ಪರಿಗಣಿಸುವ ಜವಾಬ್ದಾರಿ ಎಡ್ಟೆಕ್ ಮಾರುಕಟ್ಟೆ ಮತ್ತು ನವೀನ ಶಿಕ್ಷಕರ ಮೇಲಿದೆ. ಶಿಕ್ಷಣ ತಜ್ಞರು ಮತ್ತು ಎಡ್ಟೆಕ್ ಕಂಪನಿಗಳು ಮುಂದಿನ ದಿನಗಳಲ್ಲಿ ವಿಆರ್ ಮತ್ತು ಚಾಟ್‌ಜಿಪಿಟಿಯ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಗಮನಿಸುವುದು ಆಕರ್ಷಕವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ