ಉರ್ದು ಹಾಗೂ ಅರೇಬಿಕ್ (Arebic) ಶಾಲೆಗಳ ಮೇಲೆ ದೊಡ್ಡ ಆರೋಪ ಕೇಳಿ ಬರುತ್ತಿದೆ. ಅರೇಬಿಕ್ ಹಾಗೂ ಉರ್ದು ಶಾಲೆಗಳ ವಿರುದ್ಧ ಹಿಂದೂ ಸಂಘಟನೆಗಳು ಆರೋಪ ಮಾಡುತ್ತವೆ. ಉರ್ದು ಶಾಲೆ (Urdu School) ಹಾಗೂ ಅರೇಬಿಕ್ ಶಾಲೆಗಳಲ್ಲಿ ನಡೆಯುತ್ತಿದೆಯಾ ಗೋಲ್ ಮಾಲ್ ಎಂಬ ಪ್ರಶ್ನೆ(Question) ಉದ್ಭವವಾಗಿದೆ. ಮಕ್ಕಳ ದಾಖಲಾತಿ ಇಲ್ಲದೆ ಇದ್ರೂ, ಮಕ್ಕಳು ಶಾಲೆಗೆ ಹಾಜರಾಗದೆ ಇದ್ರೂ ಶಿಕ್ಷಣ (Education) ಇಲಾಖೆಗೆ ಸುಳ್ಳು ದಾಖಲಾತಿ ನೀಡಿ ವಂಚನೆ ಮಾಡುತ್ತಿದೆಯಾ? ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಸುಳ್ಳು ಮಾಹಿತಿ ನೀಡಿ ಕೋಟಿ ಕೋಟಿ ಹಣ ಸುಲಿಗೆ ಮುಂದಾಗಿವೆಯಂತೆ ಶಾಲೆಗಳು
1100 ಕ್ಕೂ ಹೆಚ್ಚು ಉರ್ದು ಶಾಲೆಗಳು ಇವೆ. ಆ ಶಾಲೆಗಳಲ್ಲೆಲ್ಲಾ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಿಜವಾಗಿ ನಡೆಯುತ್ತಿರುವ ಗೋಲ್ ಮಾಲ್ ಏನು ಎಂಬ ಬಗ್ಗೆ ಅಲ್ಲಿನ ಶಿಕ್ಷಕಿಯೊಬ್ಬರು ಮಾತನಾಡಿದ್ದಾರೆ. ಅವರು ಹೇಳಿರುವ ಪ್ರಕಾರ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ ಎಂದು ಸುಳ್ಳು ಹಾಜರಾತಿ ಹಾಕಲು ಹೇಳುತ್ತಿದ್ದಾರಂತೆ.
ದಾವಣಗೆರೆಯಲ್ಲಿ ಶಾಲೆಗೆ ಮಕ್ಕಳು ಬಾರದೇ ಇದ್ದರೂ ಸುಳ್ಳು ಹಾಜರಾತಿ ಹಾಕುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಶಿಕ್ಷಕಿಯೊಬ್ಬರು ಆರೋಪ ಮಾಡಿದ್ದಾರೆ. ಈ ಆರೋಪದ ಹಿಂದೆ ಇರುವ ಕಾರಣ ಇನ್ನೂ ವಿಚಿತ್ರವಾಗಿದೆ. ತರಗತಿಯಲ್ಲಿ ಮಕ್ಕಳೇ ಇಲ್ಲದಿದ್ದರೂ ಇದ್ದಾರೆ ಎಂದು ಸಾಬೀತು ಮಾಡಲೇ ಬೇಕಾದ ಪರಿಸ್ಥಿತಿಯನ್ನು ಅಲ್ಲಿನ ಶಿಕ್ಷಕರಿಗೆ ನೀಡಲಾಗಿದೆಯಂತೆ.
ಇದನ್ನೂ ಓದಿ: Education News: ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಉರ್ದು ಶಾಲೆಯಲ್ಲಿ ನಡೆದಿರೋ ಘಟನೆ
ಹಾಜರಾತಿ ಹಾಕೋದಿಲ್ಲ ಎಂದಿದ್ದಕ್ಕೆ ಶಿಕ್ಷಕಿಗೆ ಸಂಬಳ ನೀಡದೆ ಮೂರು ತಿಂಗಳಿನಿಂದ ಸತಾಯಿಸಲಾಗುತ್ತಿದೆ ಎಂದು ಶಿಕ್ಷಕಿ ಕಂಗಾಲಾಗಿದ್ದಾರೆ. ಶಿಕ್ಷಕಿ ನಾಗಲಾಂಬಿಕೆಗೆ ಮಕ್ಕಳ ಸುಳ್ಳು ಹಾಜರಾತಿ ಹಾಕಲು ಮುಖ್ಯ ಶಿಕ್ಷಕಿ ರುಮಿನಾಜ್ ನಿಂದ ಹಿಂಸೆ ಕಿರುಕುಳ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಉರ್ದು ಹಾಗೂ ಅರೇಬಿಕ ಶಾಲೆಗಳಲ್ಲಿ ಇದೇ ರೀತಿಯ ಕಳ್ಳಾಟದ ಬಗ್ಗೆ ಹಿಂದೂ ಸಂಘಟನೆ ಆರೋಪ
ಈ ಘಟನೆಯ ಬಳಿಕ ಹಲವು ಉರ್ದು ಹಾಗೂ ಅರೇಬಿಕ್ ಶಾಲೆಗಳಲ್ಲಿ ಇದೇ ರೀತಿಯ ಕಳ್ಳಾಟದ ಬಗ್ಗೆ ಹಿಂದೂ ಸಂಘಟನೆಗಳು ಆರೋಪ ಮಾಡಿವೆ. ಇನ್ನೂ ಹಲವು ಶಾಲೆಗಳಲ್ಲಿ ಇದೇ ರೀತಿ ಆಗುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ನಮ್ಮಲ್ಲಿಯೂ ಉರ್ದು ಹಾಗೂ ಅರೇಬಿಕ್ ಶಾಲೆಗಳನ್ನ ಬಂದ್ ಮಾಡಿ ಎಂಬ ಒತ್ತಡ ನೀಡುತ್ತಿದ್ದಾರೆ. ಈ ಹಿಂದೆ ಉರ್ದು ಹಾಗೂ ಅರೇಬಿಕ್ ಶಾಲೆಗಳನ್ನು ಆಡಿಟ್ ಮಾಡಲು ಮುಂದಾಗಿದ್ದ ಶಿಕ್ಷಣ ಇಲಾಖೆ ಮುಂದೆ ಏನಾಯ್ತು ಎಂಬ ಮಾಹಿತಿಯನ್ನೇ ನೀಡಲಿಲ್ಲ ಎಂದು ಹೇಳಿದ್ದಾರೆ.
ಮೋಹನ್ ಗೌಡ, ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷರ ಮಾತು
ಈ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೆ ಆಡಿಟ್ ರಿಪೋರ್ಟ್ ಮಾಡುವಂತೆ ಹಿಂದೂ ಸಂಘಟನೆಗಳ ಒತ್ತಾಯ ಮಾಡುತ್ತಿವೆ. ಆಡಿಟ್ ಮಾಡುತ್ತೇವೆ ಎಂದು ಮಾತ್ರ ಹೇಳುತ್ತಾರೆ ಆದರೆ ಆಡಿಟ್ ನಡೆಯಲೇ ಇಲ್ಲ ಆದರೆ ಈ ಬಾರಿ ಆಡಿಟ್ ಮಾಡಲೇಬೇಕು ಎಂದು ಹಿಂದೂ ಸಂಘನೆಗಳು ಒತ್ತಾಯ ಮಾಡುತ್ತಿವೆ. ಈ ಕುರಿತು ಮೋಹನ್ ಗೌಡ, ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಮಾತನಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ