• Home
  • »
  • News
  • »
  • jobs
  • »
  • Hijab In Exam Hall: ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಬ್ಯಾನ್ ಮಾಡಿದ ಸೌದಿ ಅರೇಬಿಯಾ! ವಿದ್ಯಾರ್ಥಿಗಳ ವಿರೋಧ

Hijab In Exam Hall: ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಬ್ಯಾನ್ ಮಾಡಿದ ಸೌದಿ ಅರೇಬಿಯಾ! ವಿದ್ಯಾರ್ಥಿಗಳ ವಿರೋಧ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರಪಂಚದಾದ್ಯಂತ ನೆಲೆಸಿರುವ ಎಲ್ಲ ಮುಸ್ಲಿಮರ ಪಾಲಿಗೆ ಪವಿತ್ರ ಯಾತ್ರಾ ಕ್ಷೇತ್ರವಾಗಿರುವಂತಹ ಮಕ್ಕಾ ಹಾಗೂ ಮದೀನಾ ನಗರಗಳು ಸ್ಥಿತವಿರುವುದು ಸೌದಿ ಅರೇಬಿಯಾ ದೇಶದಲ್ಲೆ ಹಿಜಾಬ್​ ನಿಷೇಧ!

  • Share this:

ಇದು ನಿಜಕ್ಕೂ ಅಚ್ಚರಿಪಡುವಂತಹ ವಿಷಯ ಎಂದೇ ಹೇಳಬಹುದು. ಕಳೆದ ಕೆಲ ಸಮಯದಲ್ಲಿ ನಾವೆಲ್ಲರೂ ಭಾರತದಲ್ಲಿ ಹಿಜಾಬ್ (Hijab) ವಿವಾದದ ಬಗ್ಗೆ ಸಾಕಷ್ಟು ಸುದ್ದಿಗಳನ್ನು ನೋಡಿದ್ದೇವೆ. ಹಿಜಾಬ್ ಧರಿಸಲು ಅನುಮತಿ ಇಲ್ಲ ಎಂದು ಅದೆಷ್ಟೋ ಮುಸ್ಲಿಮ್ ವಿದ್ಯಾರ್ಥಿನಿಯರು (Students) ಪರೀಕ್ಷೆ ಬರೆಯದೇ ಕೊಠಡಿಗಳಿಂದ ತೆರಳಿರುವ ಸುದ್ದಿಗಳಾಗಿವೆ. ಇದು ಒಂದೆಡೆಯಾದರೆ ಇನ್ನೊಂದೆಡೆ ಸೌದಿ ಅರೇಬಿಯಾ, ವಿದ್ಯಾರ್ಥಿನಿಯರು ಪರೀಕ್ಷಾ (Exam) ಕೊಠಡಿಗಳಲ್ಲಿ ಹಿಜಾಬ್ ನಂತೆಯೇ ಎನ್ನಲಾಗುವ ಅಬಾಯಾ ಅನ್ನು ಧರಿಸದಂತೆ ನಿಯಮ ಜಾರಿ ಮಾಡಿದೆ.


ಹಿಜಾಬ್​ ಎನ್ನುವುದು ಒಂದು ರೀತಿಯ ಸುರಕ್ಷತಾ ಉಡುಪಾಗಿದ್ದು ಇದು ಮಹಿಳೆಯ ಆಕಾರ, ತಲೆ ಹಾಗೂ ಮುಖವನ್ನು ಕವರ್ ಮಾಡುತ್ತದೆ. ಸೌದಿ ಸೇರಿದಂತೆ ಕೆಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಅಬಾಯಾ (ಹಿಜಾಬ್​) ಧರಿಸುವುದು ಕಡ್ಡಾಯ ಹಾಗೂ ನಿಯಮವಾಗಿದೆ. ಇತ್ತೀಚಿಗಷ್ಟೇ ಇರಾನಿನಲ್ಲಿ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಅಷ್ಟಕ್ಕೂ ಸೌದಿ ಪ್ರಿನ್ಸ್ ಮೊಹ್ಮದ್ ಬಿನ್ ಸಲ್ಮಾನ್ ಅವರ 2018 ರಲ್ಲಿ ನೀಡಿದ್ದ ಒಂದು ಹೇಳಿಕೆಯು ಜಾಗತಿಕವಾಗಿ ಎಲ್ಲರ ಗಮನ ಸೆಳೆದಿತ್ತು.


ಸಮವಸ್ತ್ರವನ್ನಷ್ಟೆ ಧರಿಸಬೇಕು


ಸದ್ಯ ಅಬುಧಾಬಿಯಿಂದ ಪ್ರಕಟವಾಗುವ ಆಂಗ್ಲ ಪತ್ರಿಕೆಯೊಂದರ ವರದಿಯಂತೆ ಸೌದಿಯ ಶೈಕ್ಷಣಿಕ ಮತ್ತು ತರಬೇತಿ ಮೌಲ್ಯಮಾಪನ ಸಮಿತಿಯು ಇತ್ತೀಚಿಗಷ್ಟೆ ವಿದ್ಯಾರ್ಥಿನಿಯರನ್ನು ಕುರಿತು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯುವಾಗ ಹಿಜಾಬ್​ ಅನ್ನು ಧರಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ಘೋಷಿಸಿದೆ. ಸಮಿತಿಯು ಈ ಸಂಬಂಧ ವಿದ್ಯಾರ್ಥಿಗಳೆಲ್ಲರೂ ನಿಗದಿಪಡಿಸಿರುವ ಸಮವಸ್ತ್ರವನ್ನಷ್ಟೆ ಧರಿಸಬೇಕೆಂದಿದೆ.


ಇದನ್ನೂ ಓದಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಗಮನಿಸಿ, ಇಲ್ಲಿದೆ ಮಹತ್ವದ ಅಪ್​ಡೇಟ್


ಪ್ರಪಂಚದಾದ್ಯಂತ ನೆಲೆಸಿರುವ ಎಲ್ಲ ಮುಸ್ಲಿಮರ ಪಾಲಿಗೆ ಪವಿತ್ರ ಯಾತ್ರಾ ಕ್ಷೇತ್ರವಾಗಿರುವಂತಹ ಮಕ್ಕಾ ಹಾಗೂ ಮದೀನಾ ನಗರಗಳು ಸ್ಥಿತವಿರುವುದು ಸೌದಿ ಅರೇಬಿಯಾ ದೇಶದಲ್ಲೆ ಎಂಬುದನ್ನು ಇಲ್ಲಿ ಗಮನಿಸಬಹುದು. ಅಂತಹ ಒಂದು ದೇಶದಲ್ಲಿ ಅಲ್ಲಿನ ಆಡಳಿತ ಇಂತಹ ಒಂದು ಕ್ರಮ ತೆಗೆದುಕೊಂಡಿರುವುದನ್ನು ಭಾರತದ ನೆಲೆಗಟ್ಟಿನಲ್ಲಿ ಅವಲೋಕಿಸಿದಾಗ ಸಾಕಷ್ಟು ಅಚ್ಚರಿಪಡುವಂತಿದೆ ಎಂದಷ್ಟೇ ಹೇಳಬಹುದು.


ಏಕೆಂದರೆ, ಭಾರತದಲ್ಲಿ ಶಾಲಾ ಪ್ರಾಧಿಕಾರಗಳಿಂದ ಸೌದಿಯಂತೆಯೇ ಸಮಾನಾದ ಕ್ರಮ ಅಂದರೆ ಕೊಠಡಿಗಳಲ್ಲಿ ಹಿಜಾಬ್ ಧರಿಸದಂತಹ ನಿಯಮ ತಂದಾಗ ಇಲ್ಲಿರುವ ಮುಸ್ಲಿಮ್ ವಿದ್ಯಾರ್ಥಿಗಳು ಅದನ್ನು ವಿರೋಧಿಸಿದ್ದಲ್ಲದೆ ಹಲವು ಮುಸ್ಲಿಮ್ ಧಾರ್ಮಿಕ ಸಂಘಟನೆಗಳು ಇದನ್ನು ಇಸ್ಲಾಮೋಫೋಬಿಕ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಈ ವರ್ಷ ಏಪ್ರಿಲ್ ನಲ್ಲಿ ಕರ್ನಾಟಕದಲ್ಲಿ ಪಿಯು ಎರಡನೇ ವರ್ಷದ ಪರೀಕ್ಷೆ ನಡೆಯುವಂತಹ ಸಂದರ್ಭದಲ್ಲಿ ಹಿಜಾಬ್ ತೊಟ್ಟಿದ್ದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುಮತಿಸಲಾಗಿರಲಿಲ್ಲ.


ಹಿಜಾಬ್ ತೊಟ್ಟು ಪರೀಕ್ಷಾ ಕೊಠಡಿಗೆ ತೆರಳುವಂತಿಲ್ಲ


ಶಿಕ್ಷಣ ಸಚಿವರು ಹೈಕೋರ್ಟ್ ನಿಯಮವನ್ನು ಎಲ್ಲರೂ ಪಾಲಿಸಬೇಕು ಹಾಗೂ ಹಿಜಾಬ್ ತೊಟ್ಟು ಪರೀಕ್ಷಾ ಕೊಠಡಿಗೆ ತೆರಳುವುದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದರು. ವರದಿಗಳ ಪ್ರಕಾರ, ಪರೀಕ್ಷೆ ಬರೆಯಲು ಅನುಮತಿ ಪಡೆಯದ ಬಾಲಕಿಯರು ಕೋರ್ಟ್ ಮೆಟ್ಟಿಲೇರಿದ್ದರು ಹಾಗೂ ನ್ಯಾಯಾಲಯಕ್ಕೆ ಅವರು ಹಿಜಾಬ್ ತಮ್ಮ ಕಡ್ಡಾಯ ಧಾರ್ಮಿಕ ಕರ್ತವ್ಯವಾಗಿರುವುದರಿಂದ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ವಿಶೇಷ ಸ್ಥಾನ ಒದಗಿಸಿ ಅದರನ್ವಯ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೇಳಿದ್ದರು.


ಹೈಕೋರ್ಟ್ ನಿಲುವು


ತದನಂತರ ಹೈಕೋರ್ಟ್ ನಲ್ಲಿ ಹಲವು ಬಾರಿ ವಿಚಾರಣೆಗಳು ನಡೆದು ಕೊನೆಯದಾಗಿ ಹೈಕೋರ್ಟ್ ಕರ್ನಾಟಕ ಸರ್ಕಾರದ ನಿಲುವನ್ನೇ ಎತ್ತಿ ಹಿಡಿಯಿತು. ಸರ್ಕಾರವು ಶಾಲೆಗಳಲ್ಲಿ ಸಮವಸ್ತ್ರದ ಬಗ್ಗೆ ಆಯಾ ಶಾಲಾ ಪ್ರಾಧಿಕಾರಗಳ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಹೇಳಿತ್ತು. ಕೆಲ ವಿದ್ಯಾರ್ಥಿನಿಯರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸ್ವತಂತ್ರ ಕಮ್ಯುನಿಸ್ಟ್ ಗಳು, ಕೆಲ ಮುಸ್ಲಿಮ್ ವಿದ್ವಾಂಸರು, ಹಿಜಾಬ್ ಧರಿಸಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡದ್ದಕ್ಕಾಗಿ ಕಾಮೆಂಟ್ ಗಳನ್ನು ಮಾಡಿದ್ದರು, ವಿವಾದ ಎಬ್ಬಿಸಿದ್ದರು.


ಬಿಹಾರದಲ್ಲೂ ನಡೀತು ಇಂತದ್ದೇ ಘಟನೆ


ಅಕ್ಟೋಬರ್ ನಲ್ಲೂ ಬಿಹಾರದಿಂದ ಇಂತದ್ದೇ ಒಂದು ಪ್ರಕರಣ ದಾಖಲಾಗಿತ್ತು, ಕಾಲೇಜೊಂದರಲ್ಲಿ ಅಲ್ಲಿನ ಕೆಲ ಮುಸ್ಲಿಮ್ ವಿದ್ಯಾರ್ಥಿನಿಯರು ಉಪನ್ಯಾಸಕರೊಬ್ಬ ತಮ್ಮನ್ನು ಕುರಿತು ಹಿಜಾಬ್ ತೆಗೆಯುವಂತೆ ಸೂಚಿಸಿದ್ದಾನೆಂದು ಪ್ರತಿಭಟಿಸಿದ್ದರು. ಆದರೆ, ಶಾಲಾಡಳಿತ ಹಾಗೂ ಉಪನ್ಯಾಸಕರು ಈ ಸಂದರ್ಭದಲ್ಲಿ, ಅವರು (Students) ಬ್ಲ್ಯೂಟುತ್ ಉಪಕರಣ ಏನಾದರೂ ಹೊಂದಿದ್ದಾರೆಯೇ ಎಂದು ಪರಿಶೀಲಿಸಲು ಹೀಗೆ ಮಾಡಬೇಕಾಗಿತ್ತು ಎಂದು ಸಮರ್ಥಿಸಿಕೊಂಡಿದ್ದರು.


ಈ ದೇಶದಲ್ಲೂ ಇದ್ಯಾ ನಿಯಮ


ಇದಾದ ಬಳಿಕ ಆ ಮುಸ್ಲಿಮ್ ಸಮುದಾಯದವರೇ ಆದ ಇನ್ನೊಬ್ಬ ವಿದ್ಯಾರ್ಥಿನಿಯು ಪರೀಕ್ಷೆಗೆ ಸಂಬಂಧಿಸಿದ ಇದೊಂದು ಚಿಕ್ಕ ವಿಷಯವಾಗಿತ್ತು. ಆದರೆ ಅದನ್ನು  ಸುಮ್ಮನೆ ದೊಡ್ಡದು ಮಾಡಲಾಯಿತು ಎಂದು ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಸೌದಿ ಅರೇಬಿಯಾದಂತಹ ಮುಸ್ಲಿಮ್ ಮುಖ್ಯವಾದಂತಹ ದೇಶವು ಈ ರೀತಿಯ ನಿಯಮ ತರುವುದಾದರೆ ಭಾರತದಲ್ಲಿರುವ ಮುಸ್ಲಿಮರ ನಿಲುವು ಏನಾಗಬಹುದು ಎಂಬುದೇ ಸದ್ಯ ಕಾದು ನೋಡಬೇಕು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು