• Home
  • »
  • News
  • »
  • jobs
  • »
  • MBA ಕೋರ್ಸ್​ನಲ್ಲಿ ಕರಿಯರ್‌ ಮುಂದುವರಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಟಿಪ್ಸ್​

MBA ಕೋರ್ಸ್​ನಲ್ಲಿ ಕರಿಯರ್‌ ಮುಂದುವರಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಟಿಪ್ಸ್​

ವಿದ್ಯಾರ್ಥಿಗಳು

ವಿದ್ಯಾರ್ಥಿಗಳು

ದೇಶದ ಸಾಮಾಜಿಕ ಉನ್ನತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಈ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದು ಶಿಕ್ಷಣವು ಹೈಬ್ರಿಡ್ ಮಾದರಿಯತ್ತ ಸಾಗಿರುವುದರಿಂದ, ತಂತ್ರಜ್ಞಾನದತ್ತ ಗಮನ ಹರಿಸುವುದು ಅತಿ ಮುಖ್ಯವಾಗಿದೆ.

  • Share this:

ಒಂದು ಉದ್ಯಮ ಮಾಡುತ್ತೆವೆ ಅಂದರೆ ಅದಕ್ಕೆ ಪ್ರಮುಖವಾಗಿ ಬೇಕಾಗಿರೋದು ಅನುಭವದ ಜೊತೆಗೆ, ವ್ಯಾಪಾರದ ಕೌಶಲ್ಯ (Skill), ತಂತ್ರಗಾರಿಕೆ, ಹಣಕಾಸು ನಿರ್ವಹಣೆ, ಮಾರುಕಟ್ಟೆ ಬಗ್ಗೆ ಆಳವಾದ ಜ್ಞಾನ ಹೀಗೆ ಹತ್ತು ಹಲವು ಕೌಶಲ್ಯಗಳು ಬೇಕೆ ಬೇಕು. ಇಂತಹ ನೂರು ಕೌಶಲ್ಯಗಳನ್ನು ಕಲಿಸುತ್ತದೆ ಈ ಮಾಸ್ಟರ್ಸ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್( MBA).  ಈ ಮ್ಯಾನೇಜ್‌ಮೆಂಟ್‌ ಕೋರ್ಸ್‌ (Management Course), ವಿದ್ಯಾರ್ಥಿಗಳಿಗೆ ಬ್ಯುಸಿನೆಸ್‌ (Business) ನಡೆಸಲು ಬೇಕಾಗುವ ಜ್ಞಾನ, ವ್ಯಾಪಾರ ಕೌಶಲ್ಯ, ನೆಟ್‌ವರ್ಕಿಂಗ್‌ ಮತ್ತು ವ್ಯಾಪಾರದ ವಿವಿಧ ಪರಿಕಲ್ಪನೆಗಳನ್ನು ಕಲಿಸುತ್ತದೆ. ಕಾರ್ಪೋರೆಟ್‌ ಜಗತ್ತಿಗೆ (Corporate World) ಬೇಕಾಗುವ ಪ್ರತಿಯೊಂದು ಅಂಶವನ್ನು ಈ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಕಲಿಸುತ್ತದೆ ಎಂದು ಹೇಳಬಹುದು.


ದೇಶದ ಸಾಮಾಜಿಕ ಉನ್ನತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಈ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಧುನಿಕ ಕಾಲದ ಡೈನಾಮಿಕ್ ವ್ಯವಹಾರದ ಪರಿಸರದಲ್ಲಿ ನಿರ್ವಹಣಾ ಶಿಕ್ಷಣವು ಪ್ರತಿ ದಿನವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ.


ಬಹುಮುಖ ಕೌಶಲ್ಯ ಹೊಂದಿರುವ ಮ್ಯಾನೇಜ್ಮೆಂಟ್ ಕೋರ್ಸ್‌


ಇಂದು ಮ್ಯಾನೇಜ್‌ಮೆಂಟ್‌ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಅತ್ಯಂತ ಸವಾಲಿನ ಕೆಲಸವೆಂದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ಉದ್ಯಮಿಗಳನ್ನಾಗಿ ಮಾಡುವುದು. ಪ್ರಸ್ತುತ ಉದ್ಯಮದ ಮಾದರಿಯನ್ನು ನೋಡಿದಾಗ, ಮ್ಯಾನೇಜ್ಮೆಂಟ್ ಅಧ್ಯಯನಗಳ ಪ್ರಾಮುಖ್ಯತೆಯು ಬಹುಮುಖವಾಗಿದೆ.


ಇದನ್ನೂ ಓದಿ: AtoS Jobs: ಟ್ರೈನಿ ಇಂಜಿನಿಯರ್​ ಹುದ್ದೆಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ


ಕೈಗಾರಿಕಾ ಕ್ರಾಂತಿ(4.0) ಯ ನಂತರ, ಆರ್ಥಿಕತೆಯ ಮಾದರಿ ಮತ್ತು ಉದ್ಯಮವು ತೀವ್ರವಾಗಿ ಬದಲಾಗಿದೆ. ಪ್ರಪಂಚವು ತನ್ನನ್ನು ತಾನು ಪರಿಷ್ಕರಿಸುತ್ತಿದೆ ಮತ್ತು ಬಾಹ್ಯ ಪರಿಸರದಲ್ಲಿನ ಹಠಾತ್ ಬದಲಾವಣೆಗಳಿಂದಾಗಿ ಬ್ಯುಸಿನೆಸ್ ಮಾಡುವವರು ಸಹ ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ.


ವಿದ್ಯಾರ್ಥಿಗಳು MBA ಅನ್ನು ವೃತ್ತಿಜೀವನದ ಸ್ಟ್ರೀಮ್ ಆಗಿ ಆಯ್ಕೆ ಮಾಡುವ ಮೊದಲು, ಅದಕ್ಕೆ ಬೇಕಾಗುವ ಕೆಲವು ಕೌಶಲ್ಯಗಳನ್ನು ಕಲಿಯಬೇಕಾಗುವುದು ಅವಶ್ಯಕ.


ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳು ಕಲಿಯಬೇಕಾದ ಕೌಶಲ್ಯಗಳು ಇವು


ಸಂಪರ್ಕ ಹೆಚ್ಚಿರುವ ಜನರ ಜೊತೆ ಕಾಂಟೆಕ್ಟ್​ ಬೆಳೆಸಿಕೊಳ್ಳಿ
ಈಗ ಜಗತ್ತು ನಿಂತಿರುವುದೇ ನೆಟ್‌ವರ್ಕಿಂಗ್‌ಗೆ ಮೇಲೆ. ಉತ್ತಮ ನೆಟ್‌ವರ್ಕ್ ಇರುವ ವ್ಯಕ್ತಿಗೆ ಜಗತ್ತು ಸಹಾಯ ಮಾಡುತ್ತದೆ. ಈ ನೆಟ್‌ವರ್ಕ್‌ ಒಬ್ಬ ವ್ಯಕ್ತಿಯು ಕೆಲಸ ಮಾಡುತ್ತಿರುವ ಸಂಸ್ಥೆಗೆ ಸಹ ಸೇವೆ ಸಲ್ಲಿಸುತ್ತದೆ.


ಮಹತ್ವಾಕಾಂಕ್ಷೆಯ ಮ್ಯಾನೇಜ್‌ಮೆಂಟ್ ಪದವೀಧರರು ನೆಟ್‌ವರ್ಕಿಂಗ್‌ನಲ್ಲಿ ಉತ್ತಮವಾಗಿರಬೇಕು. ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ನೆಟ್‌ವರ್ಕ್‌ಗಳನ್ನು ರಚಿಸುವುದರಿಂದ ಹಿಡಿದು ಕಾರ್ಪೊರೇಟ್‌ಗಳಲ್ಲಿ ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಕೌಶಲ್ಯವನ್ನು ಉತ್ತಮವಾಗಿಸಿಕೊಳ್ಳಬೇಕು.


ಸಂವಹನ ಕೌಶಲ್ಯಗಳನ್ನು ಇಂಪ್ರೂವ್‌ ಮಾಡಿಕೊಳ್ಳಿ
ನಿಮ್ಮ ತಲೆಯಲ್ಲಿರುವ ವಿಷಯದ ಜ್ಞಾನ ಎಷ್ಟೆ ಇರಲಿ, ಅದಕ್ಕೆ ತಕ್ಕ ಹಾಗೆ ಅದನ್ನು ಬಯಸಿದ ರೀತಿಯಲ್ಲಿ ವ್ಯಕ್ತಪಡಿಸುವುದು ಬಹಳ ಮುಖ್ಯ. ಅಸಾಧಾರಣ ಸಂವಹನ ಕೌಶಲ್ಯವನ್ನು ಹೊಂದಿರುವುದು ಈಗಿನ ಕಾರ್ಪೋರೆಟ್‌ ಜಗತ್ತಿನ ಅಗತ್ಯವಾಗಿದೆ.


ಮ್ಯಾನೇಜ್‌ಮೆಂಟ್ ಪದವೀಧರರಿಗೆ ಸಂವಹನ, ಅಭಿವ್ಯಕ್ತಿ ಮತ್ತು ಮಾತುಕತೆಯ ಕಲೆ ಮುಖ್ಯವಾಗಿದೆ. ಸಂಧಾನದ ಕಲೆಯೊಂದಿಗೆ ನಿಮ್ಮ ಆಲೋಚನೆಗಳನ್ನು ಚೆನ್ನಾಗಿ ವಿವರಿಸಲು ಅಭಿವ್ಯಕ್ತಿ ಕಲೆಯೂ ಕೂಡ ಅಷ್ಟೆ ಮಹತ್ವದ್ದಾಗಿದೆ.


ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಿ
ಇಂದು ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳು ಹೆಚ್ಚಿವೆ ಎಂದೇ ಹೇಳಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ಮನಸ್ಸಿನ ಪರಿಹಾರಗಳು ಸೂಕ್ತವಾಗುವುದಿಲ್ಲ. ಇದಕ್ಕೆ ತಾರ್ಕಿಕ ಯೋಚನೆಗಳು ಸಹ ಬೇಕಾಗುತ್ತವೆ. ಕಾರ್ಪೊರೇಟ್ ಕೆಲಸದಲ್ಲಿ ಭಾವನಾತ್ಮಕ ಬುದ್ಧಿವಂತಿಕೆಯ ಜೊತೆಗೆ ಸೃಜನಶೀಲತೆ ಅಗತ್ಯ.


ಟೆಕ್ನಿಕಲ್‌ ಜ್ಞಾನದಲ್ಲಿ ನಿಪುಣತೆ ಅಗತ್ಯ
ಇಂದು, ಶಿಕ್ಷಣವು ಹೈಬ್ರಿಡ್ ಮಾದರಿಯತ್ತ ಸಾಗಿರುವುದರಿಂದ, ತಂತ್ರಜ್ಞಾನದತ್ತ ಗಮನ ಹರಿಸುವುದು ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದಲ್ಲಿ ಉತ್ತಮರಾಗಿರುವುದು ಹೆಚ್ಚು ಸೂಕ್ತ. ಅದಲ್ಲದೆ, ಅಧ್ಯಾಪಕರು ಕೈಗೊಳ್ಳುವ ವಿವಿಧ ಶಿಕ್ಷಣದ ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಹ ವಿದ್ಯಾರ್ಥಿಗಳು ಉತ್ತಮವಾಗಿ ಸಿದ್ಧರಾಗಿರಬೇಕು. ಅಧ್ಯಾಪಕರು ಕೆಲವು ಅಪ್ಲಿಕೇಶನ್‌ಗಳನ್ನು ಬಳಸಿ ನಿಮಗೆ ಕ್ಲಾಸ್‌ಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ನಿಮಗೆ ಟಿಕ್ನಿಕಲ್‌ ಬಗ್ಗೆ ಸ್ವಲ್ಪನಾದ್ರೂ ಜ್ಞಾನ ಇರೋದು ಬಹು ಅವಶ್ಯಕವಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು