• Home
  • »
  • News
  • »
  • jobs
  • »
  • Time Table: ವಿದ್ಯಾರ್ಥಿಗಳಿಗಾಗಿ ದೈನಂದಿನ ವೇಳಾಪಟ್ಟಿಯನ್ನು ತಯಾರಿಸಲು ಇಲ್ಲಿದೆ ಮಾಹಿತಿ

Time Table: ವಿದ್ಯಾರ್ಥಿಗಳಿಗಾಗಿ ದೈನಂದಿನ ವೇಳಾಪಟ್ಟಿಯನ್ನು ತಯಾರಿಸಲು ಇಲ್ಲಿದೆ ಮಾಹಿತಿ

ವೇಳಾಪಟ್ಟಿ

ವೇಳಾಪಟ್ಟಿ

ನಿಮ್ಮ ದೈನಂದಿನ ಕೆಲಸಗಳ ಪಟ್ಟಿಯನ್ನು ಮಾಡುವುದರೊಂದಿಗೆ, ವಾರದ ದಿನಗಳಲ್ಲಿ ನೀವು ಏನು ಮಾಡಬೇಕೆಂದು ನೀವು ನಿಗದಿಪಡಿಸಲು ಪ್ರಾರಂಭಿಸಿ. ಈ ರೀತಿಯಾಗಿ ನಿಮ್ಮ ವೇಳಾಪಟ್ಟಿಯನ್ನು ನೀವೆ ಸಿದ್ಧಪಡಿಸಿ.

  • Share this:

ಕೆಲವು ಮಕ್ಕಳು ತಮ್ಮ ಶಾಲಾ (School) ದಿನಗಳಿಂದಲೇ ತುಂಬಾ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಅಂದರೆ ಅವರ ವಿದ್ಯಾಭ್ಯಾಸ, ಸಮಯ ನಿರ್ವಹಣೆ, ದೈನಂದಿನ ಜೀವನದಲ್ಲಿನ ಶಿಸ್ತಿನ ದಿನಚರಿ ಮತ್ತು ಒಂದು ಶಿಸ್ತುಬದ್ಧವಾದ ಯೋಜನೆಯನ್ನು (Plan) ಹೊಂದಿರುತ್ತಾರೆ ಎಂದು ಹೇಳಬಹುದು. ಅದೇ ಇನ್ನೂ ಕೆಲವು ಮಕ್ಕಳು (Children) ಬೆಳಿಗ್ಗೆ ಎದ್ದು ತಮ್ಮ ಕಣ್ಣುಗಳನ್ನು ಒರೆಸಿಕೊಂಡು ಅವಸರ ಅವಸರವಾಗಿ ತಮ್ಮ ದಿನವನ್ನು ಶುರು ಮಾಡಿ, ಹೇಗೆ ಬರುತ್ತೋ ಹಾಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು (Activity) ಮಾಡುತ್ತಾ ಸಾಗುತ್ತಾರೆ.


ಈ ರೀತಿಯ ವಿದ್ಯಾರ್ಥಿಗಳಲ್ಲಿ ದಿನಚರಿ ಪಾಲಿಸುವ ವಿದ್ಯಾರ್ಥಿಗಳ ಜೀವನದಲ್ಲಿ ಇದ್ದಷ್ಟು ಶಿಸ್ತು ಮತ್ತು ಆ ಸಮಯ ನಿರ್ವಹಣೆ ಸರಿಯಾಗಿ ಆಗುವುದಿಲ್ಲ ಅಂತ ಹೇಳಬಹುದು. ನೀವು ಒಂದು ಯೋಜನೆಯನ್ನು ಹೊಂದಿರುವುದರಿಂದ ನೀವು ತುಂಬಾನೇ ಉತ್ಸಾಹದಿಂದ ದಿನವನ್ನು ಶುರು ಮಾಡುತ್ತೀರಿ. ಹಾಗಾದರೆ ಎಂತಹ ಯೋಜನೆಯನ್ನು ನಾವು ರೂಪಿಸಿಕೊಳ್ಳಬೇಕು? ಅದು ಹೇಗಿರಬೇಕು? ಎಂದೆಲ್ಲಾ ಪ್ರಶ್ನೆಗಳು ನಮಗೆ ನಾವೇ ಕೇಳಿಕೊಳ್ಳುತ್ತೇವೆ.


ವಿದ್ಯಾರ್ಥಿಗಳಿಗಾಗಿ ದೈನಂದಿನ ವೇಳಾಪಟ್ಟಿಯನ್ನು ಹೇಗೆ ತಯಾರಿಸುವುದು ಎಂಬುದರ ಬಗ್ಗೆ ಈ ಲೇಖನವನ್ನು ನೀವು ಓದಿದಾಗ ನಿಮಗೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ. ಈ ದೈನಂದಿನ ಯೋಜನೆ ಅಥವಾ ವೇಳಾಪಟ್ಟಿ ಇರದೆ ಹೋದಲ್ಲಿ ಇಡೀ ದಿನದಲ್ಲಿ ನೀವು ಹೊಂದಿರುವ ಕೆಲಸಗಳ ಬಗ್ಗೆ ನಿಮಗೆ ಅನೇಕ ಗೊಂದಲಗಳಿರುತ್ತವೆ ಮತ್ತು ನೀವು ಅವುಗಳನ್ನು ಸರಿಯಾಗಿ ನಿಭಾಯಿಸಲು ಆಗದೆ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗಬಹುದು.


ಅದೇ ಒಂದು ನಿರ್ದಿಷ್ಟವಾದ ವೇಳಾಪಟ್ಟಿ ಮತ್ತು ನಿಮ್ಮ ಸಮಯವನ್ನು ನಿರ್ವಹಿಸುವ ಸಾಮರ್ಥ್ಯದೊಂದಿಗೆ, ನಿಮ್ಮ ಜೀವನದಲ್ಲಿ ಅವ್ಯವಸ್ಥೆ ಎನ್ನುವುದು ತುಂಬಾ ಕಡಿಮೆ ಇರುತ್ತದೆ ಮತ್ತು ನೀವು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗಾಗಿ ದೈನಂದಿನ ಅಧ್ಯಯನ ವೇಳಾಪಟ್ಟಿಯನ್ನು ತಯಾರಿಸಿ ಕೊಡುವ ಮೂಲಕ, ಅವರ ಸಮಯವನ್ನು ಉತ್ತಮವಾಗಿ ನಿರ್ವಹಿಸಬಹುದು. ಅಲ್ಲದೆ ದಿನದ 12 ಗಂಟೆಗಳನ್ನು ಹೇಗೆ ಸರಿಯಾಗಿ ಬಳಸಿಕೊಳ್ಳುವುದು ಎಂಬುದನ್ನು ಅವರು ತಿಳಿದುಕೊಳ್ಳುತ್ತಾರೆ.


ಇದನ್ನೂ ಓದಿ: Resume Tips-4: 2023ರಲ್ಲಿ ಕೆಲಸ ಸಿಗಲು ನಿಮ್ಮ ರೆಸ್ಯೂಮ್​​ನಲ್ಲಿ ಈ 8 ವಿಷಯಗಳು ಇರಲೇಬೇಕು


ವಿದ್ಯಾರ್ಥಿಗೆ ಸಮಯ ನಿರ್ವಹಣೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ..


ಮೊದಲನೆಯದಾಗಿ, ವಿದ್ಯಾರ್ಥಿಗೆ ಅತ್ಯುತ್ತಮ ವೇಳಾಪಟ್ಟಿಯನ್ನು ಬಳಸುವ ಬಗ್ಗೆ ನೀವು ಏಕೆ ಕಾಳಜಿ ವಹಿಸಬೇಕು? ಸರಿ, ನೀವು ವಿದ್ಯಾರ್ಥಿಯಾಗಿದ್ದರೆ ನೀವು ಸಮಯವನ್ನು ಹೇಗೆ ನಿರ್ವಹಿಸುವುದು ಅಂತ ತುಂಬಾ ಗೊಂದಲಗಳಿರುತ್ತವೆ. ಸಮಯ ನಿರ್ವಹಣೆಯು ಸಮಯದ ಉತ್ಪಾದಕ ಬಳಕೆಯನ್ನು ಸೂಚಿಸುತ್ತದೆ. ಇದು ನೀವು ಹೇಗೆ ಮತ್ತು ಯಾವಾಗ ಕಾರ್ಯಗಳನ್ನು ಮಾಡುತ್ತೀರಿ ಮತ್ತು ನಿಮ್ಮ ದಿನವನ್ನು ಹೇಗೆ ಆಯೋಜಿಸುತ್ತೀರಿ ಎಂಬುದನ್ನು ಆಯ್ಕೆ ಮಾಡುವುದು ಮತ್ತು ನಿಗದಿಪಡಿಸುವುದನ್ನು ಒಳಗೊಂಡಿರುತ್ತದೆ.


ಇದರಿಂದ ನೀವು ನಿಮಗೆ ಅಗತ್ಯವಿರುವ ಎಲ್ಲಾ ಕೆಲಸಗಳನ್ನು ಮಾಡಬಹುದು. ಒಬ್ಬ ವಿದ್ಯಾರ್ಥಿಯಾಗಿ, ನೀವು ಶಾಲೆಗೆ ಹೋಗುವುದರಿಂದ ಹಿಡಿದು ನಿಮಗೆ ಸಾಕಷ್ಟು ಜವಾಬ್ದಾರಿಗಳು ಇರುತ್ತವೆ. ಅಧ್ಯಯನ ಮಾಡುವುದರಿಂದ ಹಿಡಿದು ತರಗತಿಗಳಿಗೆ ಹಾಜರಾಗುವವರೆಗೆ ಮತ್ತು ಶಾಲೆಯಲ್ಲಿ ನೀಡಿದ ಮನೆಗೆಲಸಗಳನ್ನು ಮಾಡಿ ಮುಗಿಸುವುದು ಒಳಗೊಂಡಿರುತ್ತದೆ.


ಸ್ಪಷ್ಟವಾದ ವೇಳಾಪಟ್ಟಿ ಮತ್ತು ಸಮಯ ನಿರ್ವಹಣಾ ಕೌಶಲ್ಯಗಳೊಂದಿಗೆ, ನೀವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಲಸವನ್ನು ತುಂಬಾನೇ ಉತ್ಪಾದಕವಾಗಿ ಹೇಗೆ ಮಾಡುವುದು ಮತ್ತು ಕೆಲಸ ಮತ್ತು ವೈಯುಕ್ತಿಕ ಜೀವನವನ್ನು ಹೇಗೆ ಸಮತೋಲನಗೊಳಿಸುವುದು ಎಂದು ತಿಳಿಯಬಹುದು.


ವಿದ್ಯಾರ್ಥಿಗಳಿಗಾಗಿ ದೈನಂದಿನ ವೇಳಾಪಟ್ಟಿಯನ್ನು ಮಾಡುವುದು ಹೇಗೆ?


ನಿಮ್ಮ ಸಮಯ ನಿರ್ವಹಣೆಯ ಮೇಲೆ ಸರಿಯಾದ ನಿಯಂತ್ರಣವನ್ನು ಸಾಧಿಸಲು, ವಿದ್ಯಾರ್ಥಿಗಳಿಗೆ ದೈನಂದಿನ ವೇಳಾಪಟ್ಟಿಯನ್ನು ತಯಾರಿಸಿ ಕೊಡುವುದು ಒಳ್ಳೆಯದು.


1. ದಿನದಲ್ಲಿ ನೀವು ಮಾಡಬೇಕಾದ ಕೆಲಸಗಳ ಪಟ್ಟಿಯೊಂದನ್ನು ರಚಿಸಿಕೊಳ್ಳಿ


ನೀವು ಮಾಡಬೇಕಾಗಿರುವ ಎಲ್ಲಾ ಕೆಲಸಗಳನ್ನು ಪಟ್ಟಿ ಮಾಡುವ ಮೂಲಕ ಪ್ರಾರಂಭಿಸಿ. ಆದ್ಯತೆಗಳು ಅಥವಾ ಗಡುವಿನ ದೃಷ್ಟಿಯಿಂದ ನಿಮ್ಮ ಪಟ್ಟಿಯನ್ನು ರಚಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ. ನೀವು ಡಿಜಿಟಲ್ ಪರಿಕರಗಳನ್ನು ಬಳಸಬಹುದು ಅಥವಾ ನಿಮ್ಮ ಪಟ್ಟಿಯನ್ನು ಕೈಯಿಂದ ಅಥವಾ ವೈಟ್ ಬೋರ್ಡ್ ನಲ್ಲಿ ಬರೆಯಬಹುದು. ನೀವು ವೈಟ್ ಬೋರ್ಡ್ ಅನ್ನು ಹೊಂದಿದ್ದರೆ, ಅದು ನಿಮಗೆ ಈ ಕೆಲಸದಲ್ಲಿ ತುಂಬಾ ಸಹಾಯಕ್ಕೆ ಬರಬಹುದು.


ಏಕೆಂದರೆ ನೀವು ನಿಮ್ಮ ಪಟ್ಟಿಯನ್ನು ಆಗಾಗ್ಗೆ ನೋಡಿಕೊಳ್ಳಬಹುದು ಮತ್ತು ಇದಕ್ಕೆ ನೀವು ಯಾವುದೇ ಕಾಗದವನ್ನು ವ್ಯರ್ಥ ಮಾಡುವ ಅವಶ್ಯಕತೆ ಇರುವುದಿಲ್ಲ.


2. ದೈನಂದಿನ ಚಟುವಟಿಕೆಗಳನ್ನು ಸಮತೋಲನಗೊಳಿಸಿ


ನಿಮ್ಮ ದೈನಂದಿನ ಕೆಲಸಗಳ ಪಟ್ಟಿಯನ್ನು ಮಾಡುವುದರೊಂದಿಗೆ, ವಾರದ ದಿನಗಳಲ್ಲಿ ನೀವು ಏನು ಮಾಡಬೇಕೆಂದು ನೀವು ನಿಗದಿಪಡಿಸಲು ಪ್ರಾರಂಭಿಸಬಹುದು. ಮತ್ತೆ, ಇದನ್ನು ಆದ್ಯತೆಗಳ ಆಧಾರದ ಮೇಲೆ ಹೊಂದಿಸಿಕೊಳ್ಳುವುದು ಉಪಯುಕ್ತ ಮತ್ತು ನಿಮ್ಮ ದೈನಂದಿನ ಚಟುವಟಿಕೆಗಳನ್ನು ಸಮತೋಲನಗೊಳಿಸಲು ಶಿಫಾರಸು ಮಾಡಲಾಗಿದೆ.


ಇದರಿಂದ ನೀವು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗುವುದಿಲ್ಲ. ಉದಾಹರಣೆಗೆ, ಶಾಲೆ, ಸಾಮಾಜಿಕ ಘಟನೆಗಳು, ಕೌಟುಂಬಿಕ ಕಟ್ಟುಪಾಡುಗಳು ಮತ್ತು ನಿಮ್ಮ ಕೆಲಸಕ್ಕಾಗಿ ನೀವು ಕೆಲವು ಕೆಲಸಗಳನ್ನು ಹೊಂದಿದ್ದರೆ, ದಿನವಿಡೀ ಅವುಗಳನ್ನು ಯಾವಾಗ ಮಾಡಬೇಕೆಂದು ಹೊಂದಿಸಿಕೊಳ್ಳಲು ಪ್ರಯತ್ನಿಸಿ, ಇದರಿಂದ ನಿಮಗೆ ಬೇಸರವಾಗುವುದಿಲ್ಲ.


3. ನಿಯೋಜಿತ ಸ್ಥಳವನ್ನು ಮಾಡಿಕೊಳ್ಳಿ


ನೀವು ಅಧ್ಯಯನ ಮಾಡಲು ಸಿದ್ಧರಾದಾಗ, ಸ್ಥಿರವಾದ ಮತ್ತು ಸಮರ್ಪಿತ ಸ್ಥಳದಲ್ಲಿ ಅದನ್ನು ಮಾಡಲು ಪ್ರಯತ್ನಿಸಿ. ಈ ರೀತಿಯಾಗಿ, ನೀವು ಚಂಚಲತೆಯನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ಅಧ್ಯಯನ ಸ್ಥಳಕ್ಕೆ ನೀವು ತಲುಪಿದ ತಕ್ಷಣ ಶಾಲೆ ಕೆಲಸಗಳಿಗೆ ಸಿದ್ಧರಾಗಲು ನಿಮ್ಮ ಮೆದುಳಿಗೆ ತರಬೇತಿ ನೀಡಬಹುದು.


4. ಆಗಾಗ ವಿರಾಮ ತೆಗೆದುಕೊಳ್ಳಿ


ನಿಮ್ಮ ಸಮಯವನ್ನು ಗರಿಷ್ಠಗೊಳಿಸಲು ನೀವು ಪ್ರಯತ್ನಿಸುತ್ತಿರುವಾಗ, ಎಲ್ಲಾ ಸಮಯದಲ್ಲೂ ಉತ್ಪಾದಕರಾಗಿರುವಂತೆ ಪ್ರಯತ್ನಿಸಿದಾಗ ನೀವು ಒತ್ತಡಕ್ಕೆ ಒಳಗಾಗಬಹುದು. ವಿರಾಮಗಳನ್ನು ತೆಗೆದುಕೊಳ್ಳಲು ಮರೆಯದಿರಿ.


5. ಅನಿರೀಕ್ಷಿತ ಘಟನೆಗಳು ಎದುರಾದಾಗ ಸಮಯವನ್ನು ಸರಿಯಾಗಿ ಹೊಂದಿಸಿಕೊಳ್ಳಿ


ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಅನಿರೀಕ್ಷಿತ ಘಟನೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಮತ್ತು ನೀವು ಯೋಜಿಸಿದ್ದಕ್ಕೆ ನೀವು ಹೊಂದಿಕೊಳ್ಳಬೇಕಾಗುತ್ತದೆ. ಈಗ ಅನಿರೀಕ್ಷಿತ ಘಟನೆಗಳು ಎದುರಾದವು ಅಂತ ಕೋಪ ಮಾಡಿಕೊಳ್ಳುವುದು ಅಥವಾ ಬೇಸರ ಮಾಡಿಕೊಳ್ಳುವುದು ಬೇಡ. ತಪ್ಪಿಹೋದ ಚಟುವಟಿಕೆಯನ್ನು ಸರಿದೂಗಿಸಲು ನಿಮ್ಮ ಸಮಯವನ್ನು ನೀವು ಎಲ್ಲಿ ಹೇಗೆ ಸಮಯವನ್ನು ತೆಗೆದುಕೊಳ್ಳುತ್ತೀರಿ ಎಂಬುದು ನಿಮ್ಮ ಬುದ್ದಿವಂತಿಕೆಗೆ ಬಿಟ್ಟದ್ದು.


ಉದಾಹರಣೆಗೆ, ನೀವು ಬೆಳಿಗ್ಗೆ 10-11 ರವರೆಗೆ ಅಧ್ಯಯನ ಮಾಡಲು ಯೋಜಿಸಿದ್ದರೆ, ಆದರೆ ಆ ಸಮಯದಲ್ಲಿ ನಿಮಗೆ ನಿಮ್ಮ ಕುಟುಂಬ ಸದಸ್ಯರೊಬ್ಬರ ಸಹಾಯ ಮಾಡಬೇಕಾದ ಪರಿಸ್ಥಿತಿ ಬಂದಲ್ಲಿ ಆ ಕಳೆದುಕೊಂಡ ಅಧ್ಯಯನ ಸಮಯವನ್ನು ಇನ್ನ್ಯಾವುದೋ ನೀವು ಬಿಡುವಿರುವ ಸಮಯದಲ್ಲಿ ಪೂರ್ಣಗೊಳಿಸಿ ಸರಿದೂಗಿಸಲು ಪ್ರಯತ್ನಿಸಿ.


6. ಪರಿಕರಗಳನ್ನು ಬಳಸಿ


ವಿದ್ಯಾರ್ಥಿಗಳು ತಮ್ಮ ಸಮಯವನ್ನು ನಿಗದಿಪಡಿಸಲು ಮತ್ತು ನಿರ್ವಹಿಸಲು ಸಹಾಯ ಮಾಡಲು ಸಾಕಷ್ಟು ತಂತ್ರಜ್ಞಾನಗಳಿವೆ. ಸೇವೆ ಸಲ್ಲಿಸಬಹುದಾದ ಸಮಯ ನಿರ್ವಹಣಾ ಅಪ್ಲಿಕೇಶನ್ ಗಳ ಈ ಪಟ್ಟಿಯನ್ನು ಪರಿಶೀಲಿಸಿ. ನಿಮ್ಮ ಕಾರ್ಯಗಳನ್ನು ಸಮಯಬದ್ಧಗೊಳಿಸುವುದು ಮತ್ತು ನೀವು ಯಾವಾಗ ಹೆಚ್ಚು ಉತ್ಪಾದಕರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸುವುದು ಸೇರಿವೆ.


ವಿದ್ಯಾರ್ಥಿಗಳಿಗಾಗಿ ಅಧ್ಯಯನ ಯೋಜನೆಗಳು


ವಿದ್ಯಾರ್ಥಿಗಳಿಗೆ ಒಂದು ಪರಿಣಾಮಕಾರಿ ಅಧ್ಯಯನ ಯೋಜನೆಯನ್ನು ರಚಿಸಲು, ಈ ಕೆಳಗಿನ ಉತ್ತಮ ಅಭ್ಯಾಸಗಳನ್ನು ನೆನಪಿನಲ್ಲಿಡಿ:


1. ಕಲಿಕಾ ಶೈಲಿಯನ್ನು ವಿಶ್ಲೇಷಿಸಿ


ಮೊದಲಿಗೆ ನೀವು ನಿಮ್ಮ ಕಲಿಕಾ ಶೈಲಿಯನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಕಲಿಕಾ ಶೈಲಿಯನ್ನು ತಿಳಿದುಕೊಳ್ಳುವ ಮೂಲಕ, ನೀವು ಅಧ್ಯಯನದಲ್ಲಿ ಕಳೆಯುವ ಸಮಯದ ಗುಣಮಟ್ಟವನ್ನು ಗರಿಷ್ಠಗೊಳಿಸಬಹುದು. ಉದಾಹರಣೆಗೆ, ಕೆಲವು ಜನರು ಪರಿಕಲ್ಪನೆಗಳನ್ನು ದೃಷ್ಟಿಗೋಚರವಾಗಿ ನೋಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ, ಆದರೆ ಇತರರು ಉಪನ್ಯಾಸಗಳನ್ನು ಕೇಳಲು ಬಯಸುತ್ತಾರೆ.


2. ವಿಷಯಗಳನ್ನು ಪಟ್ಟಿ ಮಾಡಿ ಮತ್ತು ಆದ್ಯತೆ ನೀಡಿ


ನೀವು ನೋಂದಾಯಿಸಿದ ವಿಷಯಗಳ ಪಟ್ಟಿಯನ್ನು ತಯಾರಿಸಿ ಮತ್ತು ತಕ್ಷಣಕ್ಕೆ ಏನು ಮಾಡಬೇಕು ಅಂತ, ಎಂದರೆ ಅಸೈನ್ಮೆಂಟ್ ಗಳು ಮತ್ತು ಪರೀಕ್ಷೆಗಳನ್ನು ಪಟ್ಟಿ ಮಾಡಿಕೊಳ್ಳಿರಿ. ನಂತರ, ನಿಮಗೆ ನೀಡುವ ಗಡುವಿನ ಪ್ರಕಾರ ನೀವು ಯಾವುದನ್ನು ಮೊದಲು ಮಾಡಬೇಕು ಅಂತ ಅವುಗಳ ಆದ್ಯತೆಗಳನ್ನು ಸೆಟ್ ಮಾಡಿಕೊಳ್ಳಿರಿ.


3. ನಿಮಗೆ ನೀವೇ ಉಪಚರಿಸಿಕೊಳ್ಳಿ


ನೀವು ಏನೋ ಒಂದನ್ನು ಸಾಧಿಸಿದ್ದೀರಿ ಅಂತ ಅಂದುಕೊಳ್ಳಿ, ಅದನ್ನು ಹಾಗೆಯೇ ನೀವು ಮುಂದುವರೆಸಲು ನಿಮಗೆ ನೀವೇ ಬಹುಮಾನ ನೀಡಲು ಮರೆಯದಿರಿ! ಎಂದರೆ, ನೀವು ಉಳಿಸಿದ ಹಣದಲ್ಲಿ ಏನಾದರೂ ನಿಮಗೆ ಇಷ್ಟವಾಗುವ ವಸ್ತುವನ್ನು ಖರೀದಿಸುವುದು ಅಥವಾ ನಿಮಗೆ ಹೆಚ್ಚು ಇಷ್ಟವಾದ ತಿಂಡಿಯನ್ನು ಅಥವಾ ಊಟವನ್ನು ಮಾಡುವುದು ಸಹ ಆಗಿರಬಹುದು. ಯಾವುದು ಬೇಡ ಅಂತ ಹೇಳಿದರೆ, ನೀವು ಸರಳವಾಗಿ ವಿಶ್ರಾಂತಿ ಸಹ ಪಡೆಯಬಹುದು. ನಿಮ್ಮನ್ನು ನೀವು ಉಪಚರಿಸಿಕೊಳ್ಳುವ ಮೂಲಕ ನೀವು ಮಾಡಿದ ಸಾಧನೆಗೆ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳಿ.

First published: