ಮೊರಾದಾಬಾದ್ ಶಾಲೆಯೊಂದರಲ್ಲಿ ವಿಚಿತ್ರವಾದ ಘಟನೆ ಜರುಗಿದೆ ಅದೇನೆಂದರೆ ವಿದ್ಯಾರ್ಥಿಗಳ ಕೂದಲನ್ನು (Hair) ಶಾಲೆಯ ಆವರಣದಲ್ಲೇ ಕತ್ತರಿಸಲಾಗಿದೆ ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್‌ನ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಗುಂಪಿನ ಪೋಷಕರು ತಮ್ಮ ಮಕ್ಕಳ (Students) ಕೂದಲನ್ನು ಅನುಮತಿಯಿಲ್ಲದೆ ಟ್ರಿಮ್ ಮಾಡಿದ್ದಾರೆ ಎಂದು ಗರಂ ಆಗಿದ್ದಾರೆ. ಶಿಕ್ಷಕರೊಬ್ಬರು ಶಾಲಾ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪಾಲಕರೆಲ್ಲಾ ಸೇರಿ ಶಾಲೆಗಳ ಇನ್ಸ್‌ಪೆಕ್ಟರ್ (ಡಿಐಒಎಸ್) ಅವರನ್ನು ಸಂಪರ್ಕಿಸಿ ಶಾಲಾ (School) ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
ಪೋಷಕರ ಗುಂಪೇ ಆಗಮಿಸಿ ದೂರು ನೀಡಿದ್ದಾರೆ. DIOS ಅರುಣ್ ದುಬೆ, ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪರವಾನಗಿ ಇಲ್ಲದೇ ತಮ್ಮ ಮಕ್ಕಳ ಕೂದಲನ್ನು ಕತ್ತಿರಿಸಿದ ಕುರಿತು ಆರೋಪಿಸಿದ್ದಾರೆ. ಮೊರಾದಾಬಾದ್‌ನ ಸೇಂಟ್ ಮೀರಾ ಶಾಲೆಯ ಕೆಲವು ಮಕ್ಕಳು ಮನೆಗೆ ಹೋಗುವಷ್ಟರಲ್ಲಿ ಈ ರೀತಿಯಾಗಿರುವುದನ್ನು ಕಂಡು ಪಾಲಕರು ಶಾಕ್ ಆಗಿದ್ದಾರೆ.
50 ರಿಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲು ಕಟ್!
50-60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲು ಕಟ್ ಮಾಡಲಾಗಿದೆ. ಒಪ್ಪಿಗೆಯಿಲ್ಲದೆ ಅವರ ಕೂದಲನ್ನು ಕತ್ತರಿಸಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ. "ನಾವು DIOS ಗೆ ಲಿಖಿತ ದೂರನ್ನು ಸಲ್ಲಿಸಿದ್ದೇವೆ ಮತ್ತು ನಮ್ಮ ಮಕ್ಕಳಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದೇವೆ" ಎಂದು ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿ: Ballari: ವಿದ್ಯಾರ್ಥಿಗಳಿಗೆ ಗೇಟ್ಪಾಸ್ ನೀಡಿದ ಡಿಸಿಯನ್ನು ಅಮಾನತು ಮಾಡಿ; ಸಿದ್ಧರಾಮಯ್ಯ ಆಗ್ರಹ
ಪಾಲಕರೊಬ್ಬರು ನೀಡಿರುವ ದೂರಿನ ಪ್ರಕಾರ ಅವರ ಮಗ ಜ್ವರದಿಂದ ಬಳಲುತ್ತಿದ್ದ. ಅನಾರೋಗ್ಯದ ಕಾರಣ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು ಆದರೆ ಶಾಲೆಯಲ್ಲಿ ಇಡೀ ದಿನ ನಿಲ್ಲುವಂತೆ ಮಾಡಿ ಅವನ ಕೂದಲು ಕತ್ತರಿಸಿದ್ದಾರೆ ಇದು ನನ್ನ ಮಗನಿಗೆ ನೀಡಿದ ಶಿಕ್ಷೆ ಎಂದು ದೂರಿದ್ದಾರೆ. ಅದೂ ಅಲ್ಲದೇ ಯಾವ ಪಾಲಕರ ಒಪ್ಪಿಗೆಯೂ ಇಲ್ಲದೇ ಕೂದಲು ಕತ್ತರಿಸುವುದು ತುಂಬಾ ತಪ್ಪು ಎಂದು ಹೇಳಿದ್ದಾರೆ.
ವಿದ್ಯಾರ್ಥಿ ನೀಡಿದ ಹೇಳಿಕೆ ಹೀಗಿದೆ
9 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ ಹೇಳಿರುವ ಪ್ರಕಾರ ಈಗಾಗಲೇ ನನ್ನ ಕೂದಲು ತುಂಬಾ ಚಿಕ್ಕದಿತ್ತು ಕೂದಲನ್ನು ಟ್ರಿಮ್ ಮಾಡಬೇಡಿ ಎಂದು ನಾನು ಅಳುತ್ತಲೇ ಇದ್ದೇ ಆದರೂ ನನ್ನ ಕೂದಲನ್ನು ಕತ್ತರಿಸಿದ್ದಾರೆ ಎಂದು ಹೇಳಿದ್ದಾನೆ.
ಶಾಲೆಯ ನಿರ್ದೇಶಕ ಅಕ್ಷಿ ಪ್ರಕಾಶ್ ಹೇಳಿಕೆ ಹೀಗಿದೆ
ಆದರೆ ಶಾಲೆಯ ನಿರ್ದೇಶಕ ಅಕ್ಷಿ ಪ್ರಕಾಶ್ ಪೋಷಕರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ನಮ್ಮ ಶಾಲೆಯ ಶಿಸ್ತಿನ ಬಗ್ಗೆ ನಾವು ಪಾಲಕರಿಗೂ ತಿಳಿಸಿರುತ್ತೇವೆ ಮತ್ತು ಮೊದಲೇ ಅವರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಕೂಡಾ ಹಾಸಿಕೊಂಡಿರುತ್ತೇವೆ ಶಿಸ್ತಿಗೆ ಧಕ್ಕೆ ಬಂದರೆ ಮಾತ್ರ ನಾವು ಈ ರೀತಿ ಮಾಡುವುದು ಎಂದು ಹೇಳಿಕೆ ನೀಡಿದ್ದಾರೆ. ಮೂರು ಬಾರಿ ಸೂಚನೆ ನೀಡಿದ ನಂತರವೇ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಲಾಗಿದೆ. ಈ ವಿಷಯದಲ್ಲಿ ಶಾಲೆಯ ಶಿಕ್ಷಕರ ಮಾತನ್ನೂ ಸಹ ನಾವು ಪರಿಗಣಿಸಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಐಒಎಸ್ ಅರುಣ್ ದುಬೆ ತಿಳಿಸಿದ್ದಾರೆ.
ಪ್ರತಿ ಶಾಲೆಯಲ್ಲೂ ಸಹ ಶಿಸ್ತು ಒಂದು ಮುಖ್ಯ ವಿಷಯವಾಗಿರುತ್ತದೆ. ಈಗಿನ ಕಾಲದ ವಿದ್ಯಾರ್ಥಿಗಳು ತಮ್ಮ ಹೇರ್ಸಟೈಲ್ಗೆ ವಿಶೇಷ ಆದ್ಯತೆ ನೀಡುತ್ತಾರೆ. ಹೀಗಾದಾಗ ಕೆಲವೊಮ್ಮೆ ಇಂತಹ ಪ್ರಸಂಗಗಳು ಎದುರಾಗುತ್ತವೆ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಮುಂದೆ ಯಾರ ಪರವಾಗಿ ಈ ನಿರ್ಣಯ ಬರಲಿದೆ ಎಂದು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ