• ಹೋಂ
  • »
  • ನ್ಯೂಸ್
  • »
  • Jobs
  • »
  • Viral News: ಎಕ್ಸಾಂ ಸೆಂಟರ್ ಮಿಸ್ ಆಯ್ತು ಅಂತ ಕಂಗಾಲಾಗಿದ್ದ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿ!

Viral News: ಎಕ್ಸಾಂ ಸೆಂಟರ್ ಮಿಸ್ ಆಯ್ತು ಅಂತ ಕಂಗಾಲಾಗಿದ್ದ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿ!

ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿನಿ ಮತ್ತು ಪೊಲೀಸ್​

ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿನಿ ಮತ್ತು ಪೊಲೀಸ್​

ವರದಿಗಳ ಪ್ರಕಾರ, ಹುಡುಗಿಗೆ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ತನ್ನ ತಂದೆ ಪರೀಕ್ಷೆಯ ದಿನದಂದು, ಆತುರ ಆತುರದಲ್ಲಿ ತಪ್ಪು ಪರೀಕ್ಷೆ ಕೇಂದ್ರಕ್ಕೆ ಡ್ರಾಪ್ ಮಾಡಿ ಹೋಗಿದ್ದಾರೆ. ಪೊಲೀಸ್​ ಅಧಿಕಾರಿಯೊಬ್ಬರು ಅವಳನ್ನು ಸರಿಯಾದ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ.

  • Share this:

ಈ ಪರೀಕ್ಷೆಯ ಸಮಯ ಬಂತು ಎಂದರೆ ಸಾಕು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ (Parents) ಎಲ್ಲಿಲ್ಲದ ಒತ್ತಡ, ಆತಂಕ. ವಿದ್ಯಾರ್ಥಿಗಳಿಗೆ (Students) ಪರೀಕ್ಷೆ ಬಂತು ಇನ್ನೇನು ಓದುವುದು ಬಾಕಿ ಉಳಿದಿದೆ, ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಪತ್ರಿಕೆ ಬರುತ್ತದೆಯೋ, ವರ್ಷವಿಡೀ ಓದಿದ್ದನ್ನ (Read) ಪರೀಕ್ಷೆಯಲ್ಲಿ ಎಷ್ಟರ ಮಟ್ಟಿಗೆ ನೆನಪು ಮಾಡಿಕೊಂಡು ಸರಿಯಾಗಿ ಬರೆದು ಅಂಕಗಳನ್ನು ಗಳಿಸುತ್ತೇವೆ ಅನ್ನೋ ಚಿಂತೆಗಳು ಒತ್ತಡ (Stress) ತರುತ್ತವೆ.


ಇನ್ನೊಂದು ಕಡೆ ಪೋಷಕರಿಗೆ ತಮ್ಮ ಮಕ್ಕಳು ಪರೀಕ್ಷೆಗೆ ಹೇಗೆ ಓದಿಕೊಂಡು ತಯಾರಿ ಮಾಡಿಕೊಂಡಿದ್ದಾರೆ, ಪರೀಕ್ಷೆಯಲ್ಲಿ ಹೇಗೆ ಬರೆಯುತ್ತಾರೆ ಮತ್ತು ಕಡಿಮೆ ಅಂಕಗಳು ಬಂದರೆ ಪಕ್ಕದ ಮನೆಯವರಿಗೆ ಮತ್ತು ನೆಂಟರಿಷ್ಟರಲ್ಲಿ ಏನಂತ ಹೇಳಿಕೊಂಡು ತಿರುಗುವುದು ಅನ್ನೋ ಅನೇಕ ರೀತಿಯ ಯೋಚನೆಗಳು ಒತ್ತಡವನ್ನು ತರುತ್ತವೆ.


ಇಂತಹ ಒತ್ತಡದ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಮತ್ತು ತಲೆಯನ್ನು ತುಂಬಾನೇ ಶಾಂತವಾಗಿರಿಸಿಕೊಳ್ಳಬೇಕು. ಆಗಲೇ ಪರೀಕ್ಷೆಯ ಮುನ್ನ ಆಗುವ ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತರಾಗಿರಬಹುದು.
ತಪ್ಪಾದ ಪರೀಕ್ಷೆ ಕೇಂದ್ರಕ್ಕೆ ಹೋದ ವಿದ್ಯಾರ್ಥಿನಿಗೆ ಸಹಾಯ ಮಾಡಿದ ಪೊಲೀಸ್ ಅಧಿಕಾರಿ


ಪರೀಕ್ಷೆಯ ಬಗ್ಗೆ ಇಷ್ಟೆಲ್ಲಾ ಮಾತು ಈಗೇಕೆ ಅಂತೀರಾ? ಇಲ್ಲೊಬ್ಬ ವಿದ್ಯಾರ್ಥಿನಿ ಒತ್ತಡದಲ್ಲಿ ತಪ್ಪಾದ ಪರೀಕ್ಷೆ ಕೇಂದ್ರಕ್ಕೆ ಹೋಗಿರುವುದಾಗಿ ತಿಳಿದು ಕಕ್ಕಾಬಿಕ್ಕಿಯಾಗಿದ್ದಳು. ಆದರೆ ಈಕೆಯ ಸಹಾಯಕ್ಕೆ ಅಂತ ಬಂದಿದ್ದು ಗುಜರಾತ್‌ನ ಒಬ್ಬ ಪೊಲೀಸ್ ಅಧಿಕಾರಿ. ಈ ಪೊಲೀಸ್ ಅಧಿಕಾರಿ ತನ್ನ ಕರ್ತವ್ಯವನ್ನು ಮೀರಿ ವಿದ್ಯಾರ್ಥಿನಿಯೊಬ್ಬಳು ತನ್ನ ಸರಿಯಾದ ಪರೀಕ್ಷಾ ಕೇಂದ್ರವನ್ನು ಸಮಯಕ್ಕೆ ತಲುಪಲು ಸಹಾಯ ಮಾಡಿದ್ದಾರೆ.


ವರದಿಗಳ ಪ್ರಕಾರ, ಹುಡುಗಿಗೆ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ತನ್ನ ತಂದೆ ಪರೀಕ್ಷೆಯ ದಿನದಂದು, ಆತುರ ಆತುರದಲ್ಲಿ ತಪ್ಪು ಪರೀಕ್ಷೆ ಕೇಂದ್ರಕ್ಕೆ ಡ್ರಾಪ್ ಮಾಡಿ ಹೋಗಿದ್ದಾರೆ. ಹುಡುಗಿ ತನ್ನ ರೋಲ್ ನಂಬರ್ ಅನ್ನು ಅಲ್ಲಿ ಹುಡುಕಿದ್ದಾಳೆ. ಆನಂತರವಷ್ಟೆ ಆಕೆಗೆ ತಪ್ಪು ಪರೀಕ್ಷೆ ಕೇಂದ್ರಕ್ಕೆ ಬಂದಿದ್ದು ಅಂತ ಗೊತ್ತಾಗಿದ್ದು. ಆಕೆ ತಪ್ಪು ಪರೀಕ್ಷೆ ಕೇಂದ್ರದಲ್ಲಿದ್ದ ಕಾರಣ ಆಕೆಯ ಸಂಖ್ಯೆ ಆ ಪಟ್ಟಿಗಳಲ್ಲಿ ಇರಲಿಲ್ಲ.


ವಿದ್ಯಾರ್ಥಿನಿಯನ್ನು ಸರಿಯಾದ ಪರೀಕ್ಷೆ ಕೇಂದ್ರಕ್ಕೆ ಸೇರಿಸಿದ ಪೊಲೀಸ್ ಅಧಿಕಾರಿ


ಏನು ಮಾಡುವುದು ಅಂತ ಚಿಂತೆಯಲ್ಲಿದ್ದ ಆ ವಿದ್ಯಾರ್ಥಿನಿಗೆ ಅಲ್ಲೇ ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸಹಾಯಕ್ಕೆ ಬಂದಿದ್ದಾರೆ.


ಇದನ್ನೂ ಓದಿ: Exam: ಕೇಂದ್ರ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆಗಳನ್ನು ಆಯೋಜಿಸಿದ MCD


ಆಕೆ ಸಂಕಷ್ಟದಲ್ಲಿರುವುದನ್ನು ನೋಡಿದ ಅಧಿಕಾರಿ ಆಕೆಬಳಿ ಬಂದು ವಿಚಾರಿಸಿದಾಗ ಘಟನೆಯ ಬಗ್ಗೆ ವಿವರವಾಗಿ ತಿಳಿಯಿತು. ಈಗಾಗಲೇ ತಡವಾಗಿದ್ದರಿಂದ ತನ್ನ ಪರೀಕ್ಷೆಯನ್ನು ತಪ್ಪಿಸಿಕೊಳ್ಳಬಹುದು ಅಂತ ವಿದ್ಯಾರ್ಥಿನಿ ತುಂಬಾನೇ ಚಿಂತೆಯಲ್ಲಿದ್ದುದ್ದನ್ನು ಕಂಡು ಅಧಿಕಾರಿ ಆಕೆಗೆ ಹಾಲ್ ಟಿಕೆಟ್ ತೋರಿಸಲು ಹೇಳಿದರು ಮತ್ತು ಅದರಲ್ಲಿ ನಮೂದಿಸಲಾದ ಪರೀಕ್ಷೆ ಕೇಂದ್ರವು ಅಲ್ಲಿಂದ 20 ಕಿಲೋ ಮೀಟರ್ ದೂರದಲ್ಲಿದೆ ಎಂಬುದನ್ನು ಅವರು ಅರಿತುಕೊಂಡರು. ಹೀಗಾಗಿ ಆಕೆಯನ್ನು ತನ್ನ ಪೊಲೀಸ್ ವಾಹನದಲ್ಲಿ ಡ್ರಾಪ್ ಕೊಡಲು ಅಧಿಕಾರಿ ನಿರ್ಧರಿಸಿದರು.


ನಿಗದಿತ ಸಮಯಕ್ಕೆ ಸರಿಯಾದ ಪರೀಕ್ಷೆ ಕೇಂದ್ರಕ್ಕೆ ತಲುಪಲು ಪೊಲೀಸ್ ಅಧಿಕಾರಿ ತಮ್ಮ ಜೀಪ್ ನ ಸೈರನ್ ಅನ್ನು ಆನ್ ಮಾಡಿದರು ಮತ್ತು ಎಲ್ಲಿಯೂ ನಿಲ್ಲಿಸದೆ ನೇರವಾಗಿ ಆ ಪರೀಕ್ಷೆ ಕೇಂದ್ರಕ್ಕೆ ಹೋಗಿ ಸಮಯದಲ್ಲಿ ತಲುಪಿದರು. ಈ ಇಡೀ ಘಟನೆಯನ್ನು ಆದರ್ಶ್ ಹೆಗ್ಡೆ ಎಂಬ ಟ್ವಿಟರ್ ಬಳಕೆದಾರರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.


ಇವರು ರಿಯಲ್ ಲೈಫ್ ಸಿಂಗಂ ಎಂದ ನೆಟ್ಟಿಗರು


ಈ ಘಟನೆಯನ್ನು ವಿವರಿಸಿದ ನಂತರ, ಅವರು ಆ ಪೊಲೀಸ್ ಅಧಿಕಾರಿಗೆ ಧನ್ಯವಾದವನ್ನು ಹೇಳಿದರು ಮತ್ತು "ನಮ್ಮ ಸಮಾಜದಲ್ಲಿ ಅನೇಕ ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ" ಎಂದು ಟ್ವೀಟ್ ಮಾಡಿದರು.


ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಾದ ಕೆ.ಎನ್.ನಾಗಶಯನ್ ರಾವ್ “ನೀವು ಒಳ್ಳೆಯ ಕೆಲಸವನ್ನು ಮಾಡಿದ್ದೀರಿ. ಸಮಾಜದಲ್ಲಿ ಇನ್ನೂ ಅನೇಕ ಒಳ್ಳೆಯ ಜನರಿದ್ದಾರೆ ಅಂತ ಇದು ತೋರಿಸುತ್ತದೆ” ಎಂದು ಹೇಳಿದರು.


"ಪೊಲೀಸರ ಇಂತಹ ಅದ್ಭುತ ಕೆಲಸಗಳನ್ನ ಹೈಲೈಟ್ ಮಾಡಬೇಕು" ಎಂದು ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ. ಮೂರನೆಯವರು “ಇವರು ನಿಜ ಜೀವನದ ಸಿಂಗಂ” ಎಂದಿದ್ದಾರೆ.

First published: