• ಹೋಂ
 • »
 • ನ್ಯೂಸ್
 • »
 • jobs
 • »
 • Exam: ವರ ಶೇರ್ವಾನಿ ಧರಿಸಿ ಪರೀಕ್ಷೆ ಬರೀತಿದ್ರೆ, ವಧು ಪರೀಕ್ಷಾ ಕೇಂದ್ರದ ಹೊರಗೆ ವೇಟಿಂಗ್!

Exam: ವರ ಶೇರ್ವಾನಿ ಧರಿಸಿ ಪರೀಕ್ಷೆ ಬರೀತಿದ್ರೆ, ವಧು ಪರೀಕ್ಷಾ ಕೇಂದ್ರದ ಹೊರಗೆ ವೇಟಿಂಗ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹರಿದ್ವಾರದಲ್ಲಿ ಸೋಮವಾರ ಎಲ್ ಎಲ್ ಬಿ ಐದನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಮದುವೆಯ ಉಡುಪನ್ನು ಧರಿಸಿದ್ದ ವರನನ್ನು ನೋಡಿ ಪರೀಕ್ಷೆ ಕೇಂದ್ರದಲ್ಲಿ ಇದ್ದ ವಿದ್ಯಾರ್ಥಿಗಳೆಲ್ಲರೂ ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದಂತೂ ನಿಜ.

 • News18 Kannada
 • 4-MIN READ
 • Last Updated :
 • New Delhi, India
 • Share this:

ಜೊತೆಯಿದ್ದ ಸ್ನೇಹಿತರು (Friends) ಜಗಳ ಆಡಿ ನಮ್ಮಿಂದ ದೂರ ಹೋಗಬಹುದು, ಸಂಪಾದಿಸಿದ ಹಣವನ್ನು (Money) ಸಹ ಯಾವುದೋ ಒಂದು ಕಾರಣದಿಂದ ನಾವು ಕಳೆದುಕೊಳ್ಳಬಹುದು. ಆದರೆ ಪಡೆದ ಶಿಕ್ಷಣ (Education) ಮತ್ತು ಸಂಪಾದಿಸಿದ ಜ್ಞಾನ ಮಾತ್ರ ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಹೌದು ಪಡೆದುಕೊಂಡ ಜ್ಞಾನ ಮಾತ್ರ ನಮ್ಮಿಂದ ಯಾರೂ ಕಸಿದುಕೊಳ್ಳಲು ಆಗುವುದಿಲ್ಲ. ಆದ್ದರಿಂದಲೇ ಅನೇಕ ಜನರು ತಮ್ಮ ಮದುವೆಯಾದರೂ, ಮಕ್ಕಳಾದರೂ ಸಹ ತಾವು ಮಾತ್ರ ಬೇರೆ ಬೇರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಮಾಡುತ್ತಲೇ ಇರುತ್ತಾರೆ ಅಂತ ಹೇಳಬಹುದು.


ಮದುವೆ ಮಾಡಿಕೊಂಡು ಮಕ್ಕಳು ಹುಟ್ಟಿದ ನಂತರ ಎಷ್ಟೋ ಮಹಿಳೆಯರು ತಮ್ಮ ಓದನ್ನು ಮುಂದುವರೆಸಿ ಪದವಿ ಪೂರ್ಣಗೊಳಿಸಿ ಕೆಲಸ ಗಿಟ್ಟಿಸಿರುವ ಉದಾಹರಣೆಗಳು ನಮ್ಮಲ್ಲಿ ಇವೆ ಅಂತ ಹೇಳಬಹುದು. ಅನೇಕ ಕಷ್ಟಗಳ ನಡುವೆ ಸಹ ತಮ್ಮ ಶಿಕ್ಷಣವನ್ನು ಪೂರ್ತಿ ಮಾಡಿ ಕೆಲಸ ಗಿಟ್ಟಿಸಿಕೊಂಡು ಸಾಧನೆ ಮಾಡಿರುವವರ ಉದಾಹರಣೆಗಳು ನಮ್ಮ ನಿಮ್ಮ ಮಧ್ಯೆ ತುಂಬಾನೇ ಇವೆ.


ತನ್ನ ಮದುವೆಯ ದಿನವೇ ಪರೀಕ್ಷೆ ಬರೆಯಲು ಹೋದ ವರ..


ಇದೆಲ್ಲಾ ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಎಷ್ಟೋ ಜನರು ಮದುವೆ ಸಮಾರಂಭದ ಮಧ್ಯೆ ಹೋಗಿ ಪರೀಕ್ಷೆ ಬರೆದು ಬರುತ್ತಾರೆ. ಇಲ್ಲಿಯೂ ಸಹ ಅದೇ ರೀತಿಯ ಒಂದು ಘಟನೆ ನಡೆದಿದೆ ನೋಡಿ. ವರನು ತನ್ನ ಮದುವೆಯ ದಿನದಂದು ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುತ್ತಿದ್ದರೆ, ಇತ್ತ ವರನ ಕೈ ಹಿಡಿಯುವ ವಧು ಪರೀಕ್ಷಾ ಕೇಂದ್ರದ ಹೊರಗೆ ನಿಂತು ‘ಯಾವಾಗಪ್ಪಾ ಪರೀಕ್ಷೆ ಬರೆದು ಹೊರ ಬರುತ್ತಾರೆ ನನ್ನ ಕೈ ಹಿಡಿಯುವ ವರ ಅಂತ ಕಾಯುತ್ತಾ ನಿಂತಿದ್ದಾರೆ ನೋಡಿ.


ಇದನ್ನೂ ಓದಿ: Malenadu: ಮಲೆನಾಡಿನ ಕಡೆ ಟ್ರಿಪ್ ಹೋಗ್ತಿದ್ದೀರಾ? ಹಾಗಿದ್ರೆ ತೀರ್ಥಹಳ್ಳಿಯ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡ್ಕೊಂಡ್ ಬನ್ನಿ


ಹರಿದ್ವಾರದಲ್ಲಿ ಸೋಮವಾರ ಎಲ್ ಎಲ್ ಬಿ ಐದನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಮದುವೆಯ ಉಡುಪನ್ನು ಧರಿಸಿದ್ದ ವರನನ್ನು ನೋಡಿ ಪರೀಕ್ಷೆ ಕೇಂದ್ರದಲ್ಲಿ ಇದ್ದ ವಿದ್ಯಾರ್ಥಿಗಳೆಲ್ಲರೂ ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದಂತೂ ನಿಜ.


ಹಿಸಾರ್ ಮೂಲದ ಸಿದ್ದಿಯನ್ನು ಮದುವೆಯಾದ ತುಳಸಿ ಪ್ರಸಾದ್


ಆ ವರನನ್ನು ಪೂರ್ಣಾನಂದ ತಿವಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್‌ಬಿ ಓದುತ್ತಿರುವ ವಿದ್ಯಾರ್ಥಿ ತುಳಸಿ ಪ್ರಸಾದ್ ಅಲಿಯಾಸ್ ತರುಣ್ ಅಂತ ಹೇಳಲಾಗಿದ್ದು, ಅವರು ಘಾಜಿ ವಾಲಿ ಶ್ಯಾಮ್ಪುರ್ ಕಾಂಗ್ರಿ ನಿವಾಸಿ ಆಗಿದ್ದಾರೆ. ಅವರು ಹರಿಯಾಣದ ಹಿಸಾರ್ ಮೂಲದ ಸಿದ್ಧಿಯನ್ನು ಭಾನುವಾರ ಮದುವೆಯಾಗಿದ್ದರು.


ಆದಾಗ್ಯೂ, ಮರುದಿನ (ಸೋಮವಾರ) ಅವರ 5ನೇ ಸೆಮಿಸ್ಟರ್ ನ ಸಿಪಿಸಿ ಪ್ರಶ್ನೆ ಪತ್ರಿಕೆಯನ್ನು ನಿಗದಿಪಡಿಸಲಾಗಿತ್ತು, ಅವರ ಇಡೀ ವರ್ಷ ಪಟ್ಟ ಪರಿಶ್ರಮ ವ್ಯರ್ಥವಾಗುವುದರಿಂದ ಪರೀಕ್ಷೆಯನ್ನು ಬಿಡುವುದು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ಮದುವೆಯಾದ ಕೂಡಲೇ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು ಮತ್ತು ಅತ್ತೆ-ಮಾವನ ಮನೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ನಿರ್ಧರಿಸಿದರು.
ಆದರೆ ಮದುವೆಯ ಉಡುಪನ್ನು ಸಹ ಬದಲಾಯಿಸಲು ತನ್ನ ಮನೆಗೆ ಹೋಗಲು ಸಮಯವಿಲ್ಲದ ಕಾರಣ ಅವರು ತಮ್ಮ ಮದುವೆಯ ಉಡುಪಿನಲ್ಲಿಯೇ ಪರೀಕ್ಷಾ ಕೇಂದ್ರವನ್ನು ತಲುಪಿದರು. ವರನ ಉಡುಪಿನಲ್ಲಿ ಪರೀಕ್ಷೆ ಬರೆಯಲು ಅವರು ಮುಂಚೆಯೇ ಕಾಲೇಜಿನ ಪ್ರಾಂಶುಪಾಲರಿಂದ ಅನುಮತಿ ಪಡೆದಿದ್ದರು.


ವರ ಪರೀಕ್ಷೆ ಬರೀತಾ ಇದ್ರೆ, ವಧು ಹೊರಗೆ ವೇಟಿಂಗ್..


ವರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ, ಅವನ ವಧು ಮತ್ತು ಕುಟುಂಬ ಸದಸ್ಯರು ಪರೀಕ್ಷಾ ಕೇಂದ್ರದ ಹೊರಗೆ ಅವನಿಗಾಗಿ ಕಾಯುತ್ತಿದ್ದರು. ಪರೀಕ್ಷೆ ಮುಗಿದ ನಂತರ, ವರನು ಮನೆಗೆ ಹೋಗಿ ತನ್ನ ವಧುವಿನೊಂದಿಗೆ ಉಳಿದ ಮದುವೆ ಸಮಾರಂಭದ ಆಚರಣೆಗಳನ್ನು ಪೂರ್ಣಗೊಳಿಸಿದ.


"ಅವರು ಈ ಪರೀಕ್ಷೆಯನ್ನು ಬಿಟ್ಟಿದ್ದರೆ, ವರನ ಇಡೀ ವರ್ಷ ವ್ಯರ್ಥವಾಗುತ್ತಿತ್ತು. ಈ ಕಾರಣದಿಂದಾಗಿ, ವಿದ್ಯಾರ್ಥಿ ವರನ ಉಡುಪಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ಕೋರಿದ್ದರು" ಎಂಬುದಾಗಿ ಪಂಡಿತ್ ಪೂರ್ಣಾನಂದ ತಿವಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಅಶೋಕ್ ಕುಮಾರ್ ತಿವಾರಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


"ಅವರು ಪರೀಕ್ಷೆಗೆ ಮೊದಲ ಆದ್ಯತೆ ನೀಡಿದರು. ಇದು ಒಳ್ಳೆಯ ವಿಷಯ ಮತ್ತು ಅದಕ್ಕಾಗಿ ನಾವು ಅವರನ್ನು ಪ್ರಶಂಸಿಸುತ್ತೇವೆ" ಎಂದು ತಿವಾರಿ ಹೇಳಿದರು.

First published: