• Home
  • »
  • News
  • »
  • jobs
  • »
  • Google School: ಗೂಗಲ್​ ಮಾನ್ಯತೆ ಪಡೆದ ಈ ಶಾಲೆ ಹೇಗಿದೆ ನೋಡಿ

Google School: ಗೂಗಲ್​ ಮಾನ್ಯತೆ ಪಡೆದ ಈ ಶಾಲೆ ಹೇಗಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಲಿಕೆಯ ಪ್ರಕ್ರಿಯೆಗಳಿಗೆ Google ಒದಗಿಸಿದ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುತ್ತದೆ. ಗೂಗಲ್‌ನಿಂದ ಶಾಲೆಯು ಈ ಮನ್ನಣೆಯನ್ನು ಗಳಿಸಿದ್ದು ಇದು ಶಾಲೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ.

  • News18 Kannada
  • Last Updated :
  • New Delhi, India
  • Share this:

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತಿನಂತೆ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರವನ್ನೊದಗಿಸಿದರೆ ಭವ್ಯ ಭಾರತದ ಅನನ್ಯ ಪ್ರಜೆಗಳಾಗುವುದರಲ್ಲಿ ಸಂಶಯವೇ ಇಲ್ಲ. ಮಕ್ಕಳಿಗೆ (Students) ಮನೆಯೇ ಮೊದಲ ಪಾಠಶಾಲೆ ನಂತರ ಶಾಲೆಯಲ್ಲಿ ಹೆಚ್ಚಿನ ಜೀವನ ಮೌಲ್ಯಗಳನ್ನು ಶಿಕ್ಷಣ (Education) ಒದಗಿಸುತ್ತದೆ ಎಂದರೆ ತಪ್ಪಿಲ್ಲ. ಹಾಗಾಗಿ ಮನೆಯಿಂದ ಶಾಲೆಗೆ ಸೇರುವಾಗ, ಮಕ್ಕಳು ಹೊಸದೊಂದು ಪ್ರಪಂಚಕ್ಕೆ (World) ಕಾಲಿಟ್ಟ ಅನುಭವಕ್ಕೆ ಒಳಗಾಗುತ್ತಾರೆ. ಮನೆ ಹಾಗೂ ಅಪ್ಪ ಅಮ್ಮನೇ ಪ್ರಪಂಚವಾಗಿದ್ದ ಮಕ್ಕಳಿಗೆ ಶಾಲೆಯ ವಾತಾವರಣ, ಶಿಕ್ಷಕರು, (Teacher) ಇತರ ಮಕ್ಕಳು ಹೊಸಬರಂತೆ ಕಾಣಿಸಿಕೊಳ್ಳುತ್ತಾರೆ ನಂತರ ನಿಧಾನವಾಗಿ ಮಗು ಈ ಪರಿಸರಕ್ಕೆ ಹೊಂದಿಕೊಳ್ಳುತ್ತದೆ.


ಆಟದೊಂದಿಗೆ ಪಾಠ TGAAಯ ತತ್ವ


ಈ ಸಮಯದಲ್ಲಿ ಶಾಲೆ ಎಂಬುದು ಮಕ್ಕಳಿಗೆ ಬಂಧನವಾಗಿರದೆ ಮನೆಯ ಅದೇ ಅನುಭವವನ್ನು ನೀಡಬೇಕು ಎಂಬುದು 'ದಿ ಗ್ರೀನ್ ಎಕರ್ಸ್ ಅಕಾಡೆಮಿಕ್ಸ್' (TGAA) ಯ ಅಭಿಪ್ರಾಯವಾಗಿದೆ. ಆಟದೊಂದಿಗೆ ಪಾಠ ಎಂಬ ಮೂಲಭೂತ ತತ್ವವನ್ನು ಅಳವಡಿಸಿಕೊಂಡಿರುವ ಈ ಶಾಲೆ ಪಾಠಗಳ ಜೊತೆ ಜೊತೆಗೆ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ಸಮರ್ಥನನ್ನಾಗಿ ಮಾಡಿಸುತ್ತದೆ. ಮುಂಬೈಯಲ್ಲಿರುವ ಈ ಶಾಲೆ ತನ್ನ ಮೂರು ಕ್ಯಾಂಪಸ್‌ಗಳಲ್ಲಿಯೂ ಸಮತೋಲಿತ ಶಿಕ್ಷಣ ಕ್ರಮ, ತಂತ್ರಜ್ಞಾನದ ರೀತಿಗಳನ್ನು ಅಳವಡಿಸುವ ಮೂಲಕ ಮಕ್ಕಳಿಗೆ ಸಂಪೂರ್ಣ ಕಲಿಕೆಯ ಅನುಭವವನ್ನು ಒದಗಿಸುತ್ತಿದೆ.


ಪಠ್ಯಕ್ರಮವನ್ನು ಮೀರಿದ ಶಿಕ್ಷಣ TGAA ಶಾಲೆಯ ಉದ್ದೇಶ


ಮಕ್ಕಳಿಗೆ ಪಠ್ಯಕ್ರಮವನ್ನು ಮೀರಿದ ಶಿಕ್ಷಣವನ್ನು ಒದಗಿಸುವ ಗುರಿ ಹೊಂದಿರುವ ಟಿಜಿಎಎ ನಾಯಕತ್ವ ಹಾಗೂ ಸಾಮಾಜಿಕ ಭಾವನೆಗಳ ಕಲಿಕೆ, ಪೌರತ್ವ ಕಾರ್ಯಕ್ರಮ ಮೊದಲಾದವುಗಳನ್ನು ಹಮ್ಮಿಕೊಂಡಿದ್ದು ಮಕ್ಕಳನ್ನು ನಾಳಿನ ಜವಬ್ದಾರಿಯುತ ಪೌರರನ್ನಾಗಿ ರೂಪಿಸಲು ಸ್ಥಳೀಯ, ರಾಷ್ಟ್ರೀಯ ಹಾಗೂ ಜಾಗತಿಕ ಸಮಸ್ಯೆಗಳ ಅರಿವನ್ನು ಮೂಡಿಸುತ್ತದೆ.


ಗೂಗಲ್ ಶಿಫಾರಸು ಮಾಡಿದ ಶಾಲೆಯಾಗಿ TGAA ಹೇಗೆ ಖ್ಯಾತಿಗೊಂಡಿದೆ


ಪ್ರತಿಷ್ಠಿತ ಗ್ರೀನ್ ಎಕರ್ಸ್ ಅಕಾಡೆಮಿ ಚೆಂಬೂರ್, ಭಾರತದ ಗೂಗಲ್ ಶಿಫಾರಸ್ಸು ಮಾಡಲಾದ ಶಾಲೆಗಳಲ್ಲಿ ಒಂದು ಎಂಬುದಾಗಿ ಗುರುತಿಸಲಾಗಿದೆ. ಭಾರತದ ಐದು ಶಾಲೆಗಳಲ್ಲಿ ಈ ಶಾಲೆ ಕೂಡ ಒಂದು ಹಾಗೂ ಮಹಾರಾಷ್ಟ್ರದಲ್ಲಿ ಮೊದಲನೆಯ ಶಾಲೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.


ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸುವ ಸಲುವಾಗಿ ಗೂಗಲ್ ಕೆಲವೊಂದು ಸೀಮಿತ ಶಾಲೆಗಳನ್ನು ಶಿಫಾರಸ್ಸು ಮಾಡುತ್ತದೆ. ಇಂತಹ ಶಾಲೆಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣದ ಮೂಲ ವಿಧಾನದೊಂದಿಗೆ ಪಾಠ ಪ್ರವಚನಗಳನ್ನು ನಡೆಸುತ್ತದೆ. ಮಕ್ಕಳಿಗೆ ಶಿಕ್ಷಣ ಎಂಬುದು ಹೊರೆಯಾಗದಂತೆ ನೋಡಿಕೊಳ್ಳುತ್ತದೆ.


ಇದನ್ನೂ ಓದಿ: ಜವಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಕ ಹುದ್ದೆಗಳ ನೇಮಕಾತಿ- ಜ. 16ಕ್ಕೆ ಯಾದಗಿರಿಯಲ್ಲಿ ಸಂದರ್ಶನ


ಸಮಾನವಾದ ಕಲಿಕಾ ಪದ್ಧತಿ


ಗ್ರೀನ್ ಎಕರ್ಸ್ ಅಕಾಡೆಮಿಯು ಚೆಂಬೂರ್, ಕಲ್ಯಾಣ್ ಹಾಗೂ ಮುಲುಂದ್‌ನಲ್ಲಿ ಕ್ಯಾಂಪಸ್‌ಗಳನ್ನು ಹೊಂದಿದ್ದು, ಎಲ್ಲಾ ಶಾಲೆಗಳಲ್ಲಿಯೂ ಸಮಾನವಾದ ಕಲಿಕಾ ಪದ್ಧತಿಯನ್ನೇ ಮಕ್ಕಳಿಗೆ ಒದಗಿಸುತ್ತಿದೆ. ಈ ಶಾಲೆಯ ಕುರಿತು ಮತ್ತಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ


ಮಕ್ಕಳ ವ್ಯಕ್ತಿತ್ವ ರೂಪಿಸುವ ಶಾಲೆಯಾಗಿ ರೂಪುಗೊಂಡಿದೆ


ಶಾಲಾ ಶಿಕ್ಷಣ ಬದಲಾಗುತ್ತಿದೆ ಹಾಗೂ ತಂತ್ರಜ್ಞಾನದ ಬಳಕೆಯೊಂದಿಗೆ ಇತ್ತೀಚಿನ ದಿನಗಳಲ್ಲಿ ಕಲಿಕೆ ಸಾಗುತ್ತಿದೆ, ಆದರೆ, ಶಾಲೆಯು ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ವ್ಯಕ್ತಿತ್ವ ರೂಪಿಸಲು ಹಾಗೂ ಮಕ್ಕಳಿಗೆ ಸ್ವಯಂ ನಿರ್ದೇಶಿತ ಕಲಿಕೆಯ ಅನುಭವಗಳು ದೊರೆಯುವಂತೆ ಮಾಡುತ್ತಿದೆ.


ಪಾಠ ಪ್ರವಚನಗಳನ್ನು ಕಂಠಪಾಠ ಮಾಡಿ ಕಲಿಯುವುದಕ್ಕಿಂತ ಮಿಗಿಲಾಗಿ ಸುಲಭವಾದ ವಿಧಾನಗಳಲ್ಲಿ ಅರ್ಥಮಾಡಿಕೊಂಡು ಕಲಿಯಲು ಸಹಕಾರ ನೀಡುತ್ತದೆ. ಬೋಧನೆ ಹಾಗೂ ಕಲಿಕೆಯ ಅನುಭವದಲ್ಲಿ ತಂತ್ರಜ್ಞಾನದ ಸಮತೋಲವನ್ನು ಕಾಪಾಡಲು TGAA ವಿದ್ಯಾರ್ಥಿಗಳಿಗೆ 21 ನೇ ಶತಮಾನದಲ್ಲಿ ಯಶಸ್ಸಿಗೆ ಸಿದ್ಧಗೊಳಿಸುವ ಕೌಶಲ್ಯ ಮತ್ತು ಅನುಭವಗಳನ್ನು ಮಕ್ಕಳಿಗೆ ಒದಗಿಸುತ್ತಿದೆ. ಸುಸಜ್ಜಿತ ಗುಂಪನ್ನಾಗಿ ಅವರನ್ನು ರೂಪಿಸುತ್ತಿದೆ.


ಮುಂಬೈ/ಮಹಾರಾಷ್ಟ್ರದ ಮೊದಲ ಗೂಗಲ್ ರೆಫರೆನ್ಸ್ ಸ್ಕೂಲ್


ಗೂಗಲ್ ಶಿಫಾರಸ್ಸು ಮಾಡಿದ ಶಾಲೆಯಾಗಿ TGAA ತಂತ್ರಜ್ಞಾನವನ್ನು ಕಲಿಕೆಯೊಂದಿಗೆ ಒಗ್ಗೂಡಿಸಿದೆ ಮಕ್ಕಳಿಗೆ ಸಮಗ್ರ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಲಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕ್ರಮಗಳನ್ನು ಪರಿಚಯಿಸಲು ತಂತ್ರಜ್ಞಾನದ ಅತ್ಯುತ್ತಮ ಬಳಕೆಗೆ ಗೂಗಲ್ ತನ್ನದೇ ನಿರ್ವಹಣೆಯಲ್ಲಿ ಕೆಲವೊಂದು ಶಾಲೆಗಳನ್ನು ಗುರುತಿಸುತ್ತದೆ. TGAA ಅನ್ನು 2021 ರಲ್ಲಿ ಮುಂಬೈ/ಮಹಾರಾಷ್ಟ್ರದ ಮೊದಲ ಗೂಗಲ್ ರೆಫರೆನ್ಸ್ ಸ್ಕೂಲ್ ಎಂದು ಗುರುತಿಸಲಾಗಿದೆ.
ಗೂಗಲ್ ಡಾಕ್ಸ್ ಶೀಟ್, ಸ್ಲೈಡ್‌ಗಳು ಹಾಗೂ ಗೂಗಲ್ ಕ್ಲಾಸ್‌ರೂಮ್‌ನಂತಹ ತಂತ್ರಜ್ಞಾನಗಳನ್ನು ಕಲಿಕೆಯಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳ ಬೋಧನಾ ಕ್ರಮವನ್ನು ಇನ್ನಷ್ಟು ಅತ್ಯುತ್ತಮಗೊಳಿಸುವಲ್ಲಿ TGAA ಪ್ರಮುಖ ಪಾತ್ರ ವಹಿಸಿದೆ.


ಕಲಿಕೆಯ ಪ್ರಕ್ರಿಯೆಗಳಿಗೆ Google ಒದಗಿಸಿದ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುತ್ತದೆ. ಗೂಗಲ್‌ನಿಂದ ಶಾಲೆಯು ಈ ಮನ್ನಣೆಯನ್ನು ಗಳಿಸಿದ್ದು ಇದು ಶಾಲೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ.


ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ


ಕಲಿಕೆಯೊಂದಿಗೆ ಶಿಕ್ಷಣವನ್ನು ಒಗ್ಗೂಡಿಸುವಾಗ ತಂತ್ರಜ್ಞಾನ ಆಧಾರಿತ ಕಲಿಕೆ ಅವರಿಗೆ ಹೊರೆಯಾಗದಂತೆ ಶಾಲೆ ನೋಡಿಕೊಳ್ಳುತ್ತದೆ. ಹೊರಾಂಗಣ ಶಿಕ್ಷಣ, ಕ್ಷೇತ್ರ ಪ್ರವಾಸಗಳು, ಪ್ರಯೋಗಗಳು ಮತ್ತು ಪ್ರಾಜೆಕ್ಟ್ ಆಧಾರಿತ ಕಲಿಕೆಯಂತಹ ಇತರ ರೀತಿಯ ಕಲಿಕೆಯ ನಡುವೆ ಸಮತೋಲನವನ್ನು ಸಾಧಿಸುವಂತೆ ಮಾಡುತ್ತಿದೆ. ಪಠ್ಯಕ್ರಮದಲ್ಲಿ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಈ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಸಂಸ್ಥೆ ನೋಡಿಕೊಳ್ಳುತ್ತಿದೆ.


ಸಂಸ್ಥೆಯು ಚೆಂಬೂರ್‌ನಲ್ಲಿರುವ ಪ್ರಮುಖ ಕ್ಯಾಂಪಸ್‌ನಿಂದ ಇದೀಗ ಮುಳುಂದ್ ಹಾಗೂ ಕಲ್ಯಾಣ್‌ವರೆಗೆ ವಿಸ್ತರಿಸಿದೆ. TGAA ವರ್ಷಗಳಲ್ಲಿ ಮಹತ್ತರವಾಗಿ ಬೆಳೆದಿದೆ. ಮುಂದೆ ಇನ್ನಷ್ಟು ಅಭಿವೃದ್ಧಿ ಸಾಗಿಸಲು ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ.


ಶಾಲೆಯ ಮುಂದಿನ ಯೋಜನೆಗಳೇನು?


ಘಾಟ್‌ಕೋಪರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಕ್ಯಾಂಪಸ್ ತರೆಯುವುದು ಶಾಲೆಯ ಮುಂದಿನ ಯೋಜನೆಯಾಗಿದೆ. ಪ್ರತೀ ವರ್ಷ ಹೊಸ ಕ್ಯಾಂಪಸ್‌ಗಳನ್ನು ಸೇರಿಸುತ್ತಿರುವ ಶಾಲೆಯು ಹೊಸ ಹೊಸ ಪಠ್ಯ ವಿಧಾನಗಳನ್ನು ತನ್ನ ಶಾಲೆಗಳಲ್ಲಿ ಪರಿಚಯಿಸುತ್ತಿದೆ. ಜೊತೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಲು ಇತರ ಶಾಲೆಗಳಿಗೂ ಬೆಂಬಲಿ ನೀಡುವ ಕೆಲಸವನ್ನು ಮಾಡುತ್ತಿದೆ.


ಶಾಲೆಯ ಅಧ್ಯಕ್ಷರಾಗಿರುವ ರೋಹನ್ ಪರೀಖ್, ಶಾಲೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾಲನ್ನು ಹೊಂದಿದ್ದು ಒಬ್ಬ ಶಿಕ್ಷಣ ತಜ್ಞ ಹಾಗೂ ಉದ್ಯಮಿಯಾಗಿ ಸಂಸ್ಥೆಗಾಗಿ ದುಡಿಯುತ್ತಿದ್ದಾರೆ. ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಬಿಎಸ್‌ಸಿ ಪದವಿ, INSEAD ನಿಂದ ಎಮ್‌ಬಿಎ ಪದವಿಯನ್ನು ರೋಹನ್ ಪಡೆದಿದ್ದಾರೆ.


ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ತಂಡ


ರೋಹನ್, ಮುಂಬೈ ಹಾಗೂ ಶ್ರೀಲಂಕಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ 20 ವರ್ಷಗಳ ಅನುಭವವನ್ನು ಪಡೆದುಕೊಂಡಿದ್ದಾರೆ. ಶಿಕ್ಷಣ ರಂಗದ ಬಗ್ಗೆ ತೀವ್ರ ಒಲವು ಹಾಗೂ ಆಸಕ್ತಿಯನ್ನು ಹೊಂದಿರುವ ರೋಹನ್ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಹಾಗೂ ಒತ್ತಡರಹಿತವಾಗಿ ಹೇಗೆ ಬೋಧಿಸಬಹುದು ಎಂಬುದನ್ನು ಅರಿತುಕೊಳ್ಳಲು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ಸಾಧನೆಯ ರುವಾರಿಗಳೆಂದರೆ ತಾವು ಕಟ್ಟಿದ ತಮ್ಮ ತಂಡ ಎಂಬುದಾಗಿ ತಿಳಿಸುವ ರೋಹನ್, ತಜ್ಞರ ತಂಡವನ್ನು ರೂಪಿಸಿದ್ದಾರೆ.


TGAA, ಚೆಂಬೂರ್, ICSE ಪಠ್ಯಕ್ರಮದ ಶಾಲೆಯನ್ನು ಸ್ಥಾಪಿಸಿದೆ, ಇದು ಕೈಗೆಟುಕುವ ಇನ್ನೂ ಸಮಗ್ರ ಮತ್ತು ಸುಸಜ್ಜಿತ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.


ಮಕ್ಕಳಿಗೆ ಸಹಾಯ ಮಾಡುವ ವೇದಿಕೆಯಾಗಿ ಶಾಲೆ ಹೇಗೆ ಸಹಕಾರಿಯಾಗಿದೆ?


TGAA ಅನುಸರಿಸುವ ಶಿಕ್ಷಣದ ಸಮಗ್ರ ವಿಧಾನದ ಕುರಿತು ಮಾಹಿತಿ ನೀಡಿರುವ ರೋಹನ್, ಇಂದು ಮಕ್ಕಳು ಶಿಕ್ಷಣ ಕ್ರಮದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ಅದೇ ರೀತಿ ತಮ್ಮ ಹಿರಿಯರು ಎದುರಿಸದೇ ಇರುವ ಅನೇಕ ತೊಂದರೆಗಳಲ್ಲಿ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಶಾಲೆಗಳು ಮಕ್ಕಳಿಗೆ ಸಹಾಯ ಮಾಡುವ ವೇದಿಕೆಗಳಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸುತ್ತಾರೆ.


ಮಕ್ಕಳು ಶಿಕ್ಷಣ ಪೂರೈಸಿದ ನಂತರ ಹೊರಜಗತ್ತಿಗೆ ಕಾಲಿಡುತ್ತಾರೆ. ಈ ಸಮಯದಲ್ಲಿ ಅವರನ್ನು ಆ ಜಗತ್ತಿಗೆ ಸರಿಹೊಂದುವಂತೆ ಸಿದ್ಧರಾಗಿಸಬೇಕಾಗಿದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣಗಳಲ್ಲಿರುವ ತೊಂದರೆಗಳನ್ನು ನಿಭಾಯಿಸಲು ಪೋಷಕರಿಗೆ ಸಹಾಯ ಮಾಡುತ್ತೇವೆ ಎಂದು ರೋಹನ್ ತಿಳಿಸುತ್ತಾರೆ.


ಮಕ್ಕಳ ಸಂಪೂರ್ಣ ಅಭಿವೃದ್ಧಿಗೆ ಶಾಲೆಯು ಒದಗಿಸಿರುವ ಸೌಲಭ್ಯಗಳೇನು?


ದೃಶ್ಯ ಕಲೆ, ಭಾರತೀಯ ಮತ್ತು ಪಾಶ್ಚಾತ್ಯ ನೃತ್ಯ ಮತ್ತು ಸಂಗೀತ, ಭಾಷಣ ಮತ್ತು ನಾಟಕ, ದೈನಂದಿನ ಕ್ರೀಡೆಗಳು ಹೀಗೆ ಪಾಠಗಳೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ಅನನ್ಯ ಸಹಪಠ್ಯ ಚಟುವಟಿಕೆಗಳನ್ನು TGAA ಒದಗಿಸುತ್ತದೆ ಎಂಬುದು ರೋಹನ್ ಮಾತಾಗಿದೆ.


ಕಲ್ಯಾಣ್‌ನಲ್ಲಿರುವ TGAA ಶಾಲೆಯು ಮಲ್ಟಿ-ಯುಟಿಲಿಟಿ ಸ್ಪೋರ್ಟ್ಸ್ ಕೋರ್ಟ್, ಕಿಡ್ಸ್ ಪ್ಲೇ ಝೋನ್, ಅನೇಕ ವಾದ್ಯಪರಿಕರಗಳಿರುವ ಸಂಗೀತ ಕೊಠಡಿ, ನೃತ್ಯ ಕೊಠಡಿ, ಲೈಬ್ರರಿ ಮತ್ತು ವಾಚನಾಲಯ, ವೆಲ್ನೆಸ್ ಸೆಂಟರ್, ಮಲ್ಟಿ ಲ್ಯಾಬ್, ಹೊರಾಂಗಣ ಆಟದ ಪ್ರದೇಶವನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ಸೌಲಭ್ಯಗಳನ್ನು ಒಳಗೊಂಡಿದೆ. ಸಿಸಿಟಿವಿ ಭದ್ರತಾ ಕಣ್ಗಾವಲನ್ನು ಶಾಲೆ ಒಳಗೊಂಡಿದೆ ಎಂಬುದು ರೋಹನ್ ಮಾತಾಗಿದೆ.

First published: