• Home
  • »
  • News
  • »
  • jobs
  • »
  • Education News: ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿದ ದಾಖಲಾತಿ, ವರದಿ ಬಿಡುಗಡೆ ಮಾಡಿದ ಸರ್ಕಾರ

Education News: ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿದ ದಾಖಲಾತಿ, ವರದಿ ಬಿಡುಗಡೆ ಮಾಡಿದ ಸರ್ಕಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

COVID-19 ಸಾಂಕ್ರಾಮಿಕ ರೋಗದಿಂದಾಗಿ 4 ವರ್ಷಗಳ ನಂತರ ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ಮಾಡಲಾಗಿದೆ  616 ಜಿಲ್ಲೆಗಳು ಮತ್ತು 19,060 ಹಳ್ಳಿಗಳನ್ನು ಆಯ್ದುಕೊಳ್ಳಲಾಗಿದೆ. 3,74,544 ಕುಟುಂಬಗಳು ಮತ್ತು 3 ರಿಂದ 16 ವರ್ಷ ವಯಸ್ಸಿನ 6,99,597 ಮಕ್ಕಳನ್ನು ಈ ಸಮೀಕ್ಷೆ ಒಳಗೊಂಡಿದೆ.

  • News18 Kannada
  • 2-MIN READ
  • Last Updated :
  • New Delhi, India
  • Share this:

ASER ವರದಿ 2022ರ ಪ್ರಕಾರ ಸಮೀಕ್ಷೆಗೆ ಒಳಗಾದ ಶೇಕಡಾ 72.9 ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ (School) ಹೋಗುತ್ತಾರೆ ಎಂದು ವರದಿ ಹೇಳಿದೆ. ಇದು ಖಾಸಗಿ ಟ್ಯೂಷನ್ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ (Number) ಹೆಚ್ಚಳವನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ (Government School) ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಹೆಚ್ಚಿದೆ ಎಂದು ವಾರ್ಷಿಕ ಶಿಕ್ಷಣ ವರದಿಯ (ASER 2022) ಇತ್ತೀಚಿನ ಅಂಕಿ ಅಂಶಗಳಲ್ಲಿ ಇದು ಸಾಬೀತಾಗಿದೆ. 


COVID-19 ಸಾಂಕ್ರಾಮಿಕ ರೋಗದಿಂದಾಗಿ 4 ವರ್ಷಗಳ ನಂತರ ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ಮಾಡಲಾಗಿದೆ  616 ಜಿಲ್ಲೆಗಳು ಮತ್ತು 19,060 ಹಳ್ಳಿಗಳನ್ನು ಆಯ್ದುಕೊಳ್ಳಲಾಗಿದೆ. 3,74,544 ಕುಟುಂಬಗಳು ಮತ್ತು 3 ರಿಂದ 16 ವರ್ಷ ವಯಸ್ಸಿನ 6,99,597 ಮಕ್ಕಳನ್ನು ಈ ಸಮೀಕ್ಷೆ ಒಳಗೊಂಡಿದೆ. ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿರುವ ಪ್ರಥಮ ಶಿಕ್ಷಣ ಪ್ರತಿಷ್ಠಾನ ಬುಧವಾರ ಈ ಬಗ್ಗೆ ಮಾಹಿತಿ ತಿಳಿಸಿದೆ.


ಈ ವರದಿಯ ಪ್ರಕಾರ 2018 ರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಗಮನಾರ್ಹವಾಗಿ ಹೆಚ್ಚಾಗಿದೆ ASER ಸಂಸ್ಥೆಯು ಕಳೆದ ಬಾರಿ ನಿಯಮಿತವಾಗಿ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ನಡೆಸಿತು. 2018 ರಲ್ಲಿ, ಈ ಸಂಖ್ಯೆ 65.6 ಪ್ರತಿಶತದಷ್ಟಿತ್ತು.
“2006 ರಿಂದ 2014 ರ ಅವಧಿಯಲ್ಲಿ ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ (6 ರಿಂದ 14 ವರ್ಷ ವಯಸ್ಸಿನವರು) ಅನುಪಾತದಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆ. 2014 ರಲ್ಲಿ, ಈ ಅಂಕಿ ಅಂಶವು 64.9% ರಷ್ಟಿತ್ತು ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆಗಳಲ್ಲಿ ಅಷ್ಟೇನೂ ಬದಲಾವಣೆ ಕಂಡುಬಂದಿಲ್ಲ.


ಇದನ್ನೂ ಓದಿ: IISc Recruitment 2023: ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 60 ಸಾವಿರ ಸಂಬಳ!


ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಪ್ರಮಾಣ (6 ರಿಂದ 14 ವರ್ಷ ವಯಸ್ಸಿನವರು) 2018 ರಲ್ಲಿ 65.6% ರಿಂದ 2022 ರಲ್ಲಿ 72.9% ಕ್ಕೆ ತೀವ್ರವಾಗಿ ಏರಿಕೆಯಾಗಿದೆ. ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಹೆಚ್ಚಳವಾಗಿರುವುದಲ್ಲದೇ ಪ್ರತಿಯೊಂದು ರಾಜ್ಯದಲ್ಲೂ ಉತ್ತಮ ಫಲಿತಾಂಶ ಕಂಡುಬಂದಿದೆ.


ಖಾಸಗಿ ಟ್ಯೂಷನ್ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ


ಇದಕ್ಕೆ ವ್ಯತಿರಿಕ್ತವಾಗಿ ಖಾಸಗಿ ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ASER 2022 ವರದಿಯ ಪ್ರಕಾರ, 2018 ರಲ್ಲಿ 26.4% ಕ್ಕೆ ಹೋಲಿಸಿದರೆ, 1-8 ನೇ ತರಗತಿಯ ವಿದ್ಯಾರ್ಥಿಗಳ ಶೇಕಡಾವಾರು ಟ್ಯೂಷನ್ ತರಗತಿಗಳನ್ನು 2022 ರಲ್ಲಿ 30.5% ಆಗಿದೆ. "ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ, ಪಾವತಿಸಿದ ಖಾಸಗಿ ಟ್ಯೂಷನ್ ತೆಗೆದುಕೊಳ್ಳುವ ಮಕ್ಕಳ ಪ್ರಮಾಣವು 2018 ರ ಮಟ್ಟಕ್ಕಿಂತ 8 ಶೇಕಡಾ ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಾಗಿದೆ" ಎಂದು ವರದಿ ಹೈಲೈಟ್ ಮಾಡಿದೆ.


ಈಗ ಹೆಚ್ಚು ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.
ಶಾಲೆಗಳಲ್ಲಿ 11-14 ವರ್ಷ ವಯಸ್ಸಿನ ಹುಡುಗಿಯರ ಸಂಖ್ಯೆಯೂ ಕಡಿಮೆಯಾಗಿದೆ - 2018 ರಲ್ಲಿ 4% ಗೆ ಹೋಲಿಸಿದರೆ 2022 ರಲ್ಲಿ 2%. ಕಡಿಮೆಯಾಗಿದೆ.  15-16 ವಯೋಮಾನದ ಹಿರಿಯ ಬಾಲಕಿಯರಲ್ಲಿ ಶಾಲೆಗೆ ದಾಖಲಾಗದ ಬಾಲಕಿಯರ ಪ್ರಮಾಣದಲ್ಲಿನ ಇಳಿಕೆ ಇನ್ನೂ ತೀವ್ರವಾಗಿದೆ. 2008 ರಲ್ಲಿ, ರಾಷ್ಟ್ರೀಯವಾಗಿ, 15-16 ವಯಸ್ಸಿನ 20% ಕ್ಕಿಂತ ಹೆಚ್ಚು ಹುಡುಗಿಯರು ಶಾಲೆಗೆ ದಾಖಲಾಗಿರಲಿಲ್ಲ. ಆದರೆ  ಈಗ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದು ಖುಷಿ ತಂದಿದೆ.




ದಾಖಲಾತಿಯಲ್ಲಿ ಹೆಚ್ಚಳವಾದರೂ ಸಹ ಓದುವಿಕೆ ಮತ್ತು ಅಂಕಗಣಿತದ ಕೌಶಲ್ಯಗಳಲ್ಲಿ ಇಳಿಕೆ ಉಂಟಾಗಿದೆ. ಇನ್ನು ಮುಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣೆ ತರುವ ಅವಶ್ಯಕಥೆ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಸಾಂಕ್ರಾಮಿಕ ರೋಗದ ಅಡಚಣೆಯ ಹೊರತಾಗಿಯೂ ಈ ಮಟ್ಟಿನ ಶಿಕ್ಷಣ ಸುಧಾರಣೆಯಾಗಿರುವುದು ಉತ್ತಮವೂ ಹೌದು. ASER 2022 ಸಾಂಕ್ರಾಮಿಕ ರೋಗದ ಹೊರತಾಗಿಯೂ ರಾಷ್ಟ್ರವ್ಯಾಪಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

First published: