• Home
  • »
  • News
  • »
  • jobs
  • »
  • Education: 9 ಲಕ್ಷ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾದ ಜಾರ್ಖಂಡ್ ಸರ್ಕಾರ

Education: 9 ಲಕ್ಷ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾದ ಜಾರ್ಖಂಡ್ ಸರ್ಕಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಅಕ್ಟೋಬರ್ 2022 ರಲ್ಲಿ ಗಿರಿದಿಹಿಯಿಂದ ಈ ಕ್ರಮವನ್ನು ಪ್ರಾರಂಭಿಸಿದರು ಮತ್ತು 'ಆಪ್ಕಿ ಯೋಜನಾ ಆಪ್ಕಿ ಸರ್ಕಾರ್ ಆಪ್ಕೆ ದ್ವಾರ್' ಅಭಿಯಾನದೊಂದಿಗೆ ಈ ಕ್ರಮವನ್ನು ಪ್ರಾರಂಭಿಸಿದರು. ಇದು ಗ್ರಾಮಸ್ಥರಿಗೆ ಸುಲಭವಾಗಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವ ಕಾರ್ಯಕ್ರಮವಾಗಿದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Jharkhand, India
  • Share this:

ನಮ್ಮ ದೇಶದಲ್ಲಿರುವ ಅನೇಕ ರಾಜ್ಯ ಸರ್ಕಾರಗಳಗಳ ಉದ್ದೇಶಗಳಲ್ಲಿ ಪ್ರಮುಖವಾದದ್ದು ಅಂತ ಹೇಳಿದರೆ ಅದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು (Education) ನೀಡಲು ಅನುಕೂಲ ಮಾಡಿಕೊಡುವುದು ಮತ್ತು ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಅಂತ ಹೇಳಬಹುದು. ಈಗ ಜಾರ್ಖಂಡ್ ಸರ್ಕಾರ ಸಹ ಇದೇ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ ಅಂತ ಹೇಳಬಹುದು. ಜಾರ್ಖಂಡ್ ಸರ್ಕಾರವು (Government) ಮಂಗಳವಾರದಂದು ಸಾವಿತ್ರಿಬಾಯಿ ಫುಲೆ (Savitribai Phule) ಕಿಶೋರಿ ಸಮೃದ್ಧಿ ಯೋಜನೆಯಡಿಯಲ್ಲಿ (Plan) ರಾಜ್ಯದ ಒಂಬತ್ತು ಲಕ್ಷ ಹದಿಹರೆಯದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಅನುಕೂಲ ಮಾಡಿಕೊಡುವ ಉದ್ದೇಶವನ್ನು (Intenstion) ಹೊಂದಿದೆ ಎಂದು ಘೋಷಣೆ ಮಾಡಿದೆ.


ಏನಿದು ಜಾರ್ಖಂಡ್ ಸರ್ಕಾರದ ಯೋಜನೆ?


ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಅಕ್ಟೋಬರ್ 2022 ರಲ್ಲಿ ಗಿರಿದಿಹಿಯಿಂದ ಈ ಕ್ರಮವನ್ನು ಪ್ರಾರಂಭಿಸಿದರು ಮತ್ತು 'ಆಪ್ಕಿ ಯೋಜನಾ ಆಪ್ಕಿ ಸರ್ಕಾರ್ ಆಪ್ಕೆ ದ್ವಾರ್' ಅಭಿಯಾನದೊಂದಿಗೆ ಈ ಕ್ರಮವನ್ನು ಪ್ರಾರಂಭಿಸಿದರು. ಇದು ಗ್ರಾಮಸ್ಥರಿಗೆ ಸುಲಭವಾಗಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವ ಕಾರ್ಯಕ್ರಮವಾಗಿದೆ.


ಸಾವಿತ್ರಿಬಾಯಿ ಫುಲೆ ಕಿಶೋರಿ ಸಮೃದ್ಧಿ ಯೋಜನೆಯು ಹದಿಹರೆಯದ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡಲು ರಾಜ್ಯ ಸರ್ಕಾರದ ಪ್ರಯತ್ನವಾಗಿದೆ. ಇದು ಮಹಿಳಾ ಸಬಲೀಕರಣ ಮತ್ತು ಲಿಂಗ ನ್ಯಾಯದ ಕಡೆಗೆ ಒಂದು ಉತ್ತಮ ಹೆಜ್ಜೆ ಎಂದು ಪರಿಗಣಿಸಲಾಗಿದೆ. ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆಯಲ್ಲಿ ರಾಜ್ಯದ ಸುಮಾರು 9 ಲಕ್ಷ ಹದಿಹರೆಯದ ಹುಡುಗಿಯರು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಘೋಷಿಸಿದೆ.


ಜಾರ್ಖಂಡ್ ಸರ್ಕಾರದಿಂದ ‘ಆಪ್ಕಿ ಯೋಜನಾ’ ಅಭಿಯಾನ


ಸುಮಾರು ಒಂದು ತಿಂಗಳ ಕಾಲ ಉತ್ತಮವಾಗಿ ನಡೆದ 'ಆಪ್ಕಿ ಯೋಜನಾ' ಎಂಬ ಅಭಿಯಾನದ ಅಡಿಯಲ್ಲಿ, ಸುಮಾರು ಮೂರು ಲಕ್ಷ ಹದಿಹರೆಯದ ಹುಡುಗಿಯರನ್ನು ಈ ಯೋಜನೆಗೆ ಸಂಪರ್ಕಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಮೂರು ವರ್ಷಗಳನ್ನು ಪೂರೈಸಿದ ನಂತರ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಇದಲ್ಲದೆ, ಮುಖ್ಯಮಂತ್ರಿಗಳು ಒಟ್ಟು 219 ಕೋಟಿ ರೂಪಾಯಿಗಳನ್ನು 5.52 ಲಕ್ಷ ಹದಿಹರೆಯದ ಬಾಲಕಿಯರ ಖಾತೆಗಳಿಗೆ ವರ್ಗಾಯಿಸಿದ್ದಾರೆ.


ಇದನ್ನೂ ಓದಿ: Pariksha Pe Charcha 2023: ಪ್ರಧಾನಿ ಜೊತೆ ಸಂವಾದದಲ್ಲಿ ಭಾಗವಹಿಸ್ಬೇಕಾ? ನಾಳೆಯೊಳಗೆ ಹೀಗೆ ರೆಜಿಸ್ಟರ್ ಮಾಡ್ಕೊಳ್ಳಿ


ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ರಾಜ್ಯದಲ್ಲಿರುವ ಹದಿಹರೆಯದ ಹುಡುಗಿಯರಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಒದಗಿಸುವುದು ಮಾತ್ರವಲ್ಲದೆ, ಬಾಲಕಿಯರು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಆಗಿದೆ. ಬಾಲ್ಯವಿವಾಹವನ್ನು ತಡೆಗಟ್ಟುವುದು ಈ ಯೋಜನೆಯ ಹಿಂದಿನ ಮತ್ತೊಂದು ಮುಖ್ಯವಾದ ಉದ್ದೇಶವಾಗಿದೆ.


ಜಾರ್ಖಂಡ್ ಸರ್ಕಾರದ ವಿದ್ಯಾರ್ಥಿವೇತನ ಯೋಜನೆಗಳು


ಜಾರ್ಖಂಡ್ ಸರ್ಕಾರವು ತನ್ನ ಎರಡು ವಿದ್ಯಾರ್ಥಿವೇತನ ಯೋಜನೆಗಳಿಗೆ ಜಾರ್ಖಂಡ್ ಚಳವಳಿಯ ಅಪ್ರತಿಮ ನಾಯಕ ಮತ್ತು ಭಾರತೀಯ ಹಾಕಿ ತಂಡದ ಮೊದಲ ನಾಯಕ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಮುಂಡಾ ಮತ್ತು ನಮ್ಮ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಹೆಸರನ್ನು ಇಡುವ ಮೂಲಕ ಗೌರವಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಇದಲ್ಲದೆ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಗಳಿಗೆ ಸೇರಿದ ಯುವಕರಿಗೆ ಉನ್ನತ ಶಿಕ್ಷಣಕ್ಕಾಗಿ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಮುಂಡಾ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ.


ಬ್ರಿಟಿಷ್ ಹೈಕಮಿಷನ್ ನೊಂದಿಗೆ ಜಾರ್ಖಂಡ್ ಸರ್ಕಾರದ ತಿಳುವಳಿಕಾ ಒಡಂಬಡಿಕೆ


ಇತ್ತೀಚೆಗೆ ಜಾರ್ಖಂಡ್ ರಾಜ್ಯ ಸರ್ಕಾರವು ಬ್ರಿಟಿಷ್ ಹೈಕಮಿಷನ್ ನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಸಾಗರೋತ್ತರ ವಿದ್ಯಾರ್ಥಿವೇತನದ ವ್ಯಾಪ್ತಿಯನ್ನು ವಿಸ್ತರಿಸಿತು. ಪ್ರಸ್ತುತ, ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯಡಿ ಆರು ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.


ಆದರೆ, ಪ್ರಸ್ತುತ ಶೈಕ್ಷಣಿಕ ಅಧಿವೇಶನದಲ್ಲಿ 20 ವಿದ್ಯಾರ್ಥಿಗಳು ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ಮೊದಲು, ಈ ಉಪಕ್ರಮದ ಪ್ರಯೋಜನವನ್ನು ಪರಿಶಿಷ್ಟ ಪಂಗಡಗಳಿಗೆ ಸೇರಿದ ಹತ್ತು ಹುಡುಗರು ಮತ್ತು ಹುಡುಗಿಯರಿಗೆ ಮಾತ್ರ ನೀಡಲಾಗುತ್ತಿತ್ತು. ಕಳೆದ ವರ್ಷ, ಈ ಯೋಜನೆಯ ಪ್ರಯೋಜನವನ್ನು ಪರಿಶಿಷ್ಟ ಜಾತಿಗಳು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಯುವಕರಿಗೆ ವಿಸ್ತರಿಸಲಾಗಿದ್ದು, ಸಿಎಂ ನಿರ್ದೇಶನದಂತೆ ಈ ಸಂಖ್ಯೆ ಈಗ ಗರಿಷ್ಠ 25ಕ್ಕೆ ಏರಿದೆ ಎಂದು ಹೇಳಿದರು.

First published: