• Home
  • »
  • News
  • »
  • jobs
  • »
  • Yuvajanotsava: ಪ್ರಧಾನಿ ಮೋದಿ ಆಗಮನ, ಯುವಜನೋತ್ಸವಕ್ಕೆ ವಿದ್ಯಾರ್ಥಿಗಳನ್ನು ಕರೆತರುವಂತೆ ಸೂಚಿಸಿದ್ದ ಸುತ್ತೋಲೆ ವಾಪಸ್​

Yuvajanotsava: ಪ್ರಧಾನಿ ಮೋದಿ ಆಗಮನ, ಯುವಜನೋತ್ಸವಕ್ಕೆ ವಿದ್ಯಾರ್ಥಿಗಳನ್ನು ಕರೆತರುವಂತೆ ಸೂಚಿಸಿದ್ದ ಸುತ್ತೋಲೆ ವಾಪಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲ್ಲಾ ಶಾಲಾ ಕಾಲೇಜುಗಳಿಂದ ಕನಿಷ್ಠ 100ರಾದರೂ ವಿದ್ಯಾರ್ಥಿಗಳನ್ನು ಕರೆತರುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ಇದನ್ನು ಹಿಂಪಡೆಯಲಾಗಿದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಯುವಜನೋತ್ಸವ ಸಮಾರಂಭಕ್ಕೆ ಆಗಮಿಸಬಹುದು ಉಳಿದ ವಿದ್ಯಾರ್ಥಿಗಳಿಗೆ ಇದೇನೂ ಕಡ್ಡಾಯವಲ್ಲ ಎಂದು ಸೂಚಿಸಲಾಗಿದೆ. 

ಮುಂದೆ ಓದಿ ...
  • Share this:

ಜನವರಿ 12 ರಂದು ಬಿಜೆಪಿಯಿಂದ ನಡೆಯಲಿರುವ ಯುವಜನೋತ್ಸವ ಸಮಾರಂಭಕ್ಕೆ ವಿದ್ಯಾರ್ಥಿಗಳನ್ನು (Students) ಕರೆತರಬೇಕು ಎಂದು ಆದೇಶ ಹೊರಡಿಸಲಾಗಿತ್ತು ಆದರೆ ಈಗ ಆಸಕ್ತಿ ಇದ್ದ ವಿದ್ಯಾರ್ಥಿಗಳು ಮಾತ್ರ ಆಗಮಿಸಲಿ ಎಂದು ಹೇಳಲಾಗಿದೆ. ಯುವಜನೋತ್ಸವ (Yuvajanotsava) ಸಮಾರಂಭಕ್ಕೆ ಪದವಿ ಪೂರ್ವ ಕಾಲೇಜುಗಳಿಂದ ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆ ತರುವಂತೆ ನೀಡಿದ್ದ ಸುತ್ತೋಲೆಯನ್ನು ಮೇಲ್ವೀಚಾರಣೆ ಕಾರಣ ನೀಡಿ ರಾಜ್ಯ ಶಿಕ್ಷಣ (Education) ಇಲಾಖೆ ಹಿಂಪಡೆದಿದೆ. ಈ ರೀತಿ ಹೇಳಲು ಕಾರಣವೇನು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಬುಧವಾರ ಬೆಳಗ್ಗೆಯಷ್ಟೇ ಧಾರವಾಡದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರಿಗೆ ಪತ್ರ ಬರೆಯಲಾಗಿತ್ತು ಎಲ್ಲಾ ಶಾಲಾ ಕಾಲೇಜುಗಳಿಂದ ಕನಿಷ್ಠ 100ರಾದರೂ ವಿದ್ಯಾರ್ಥಿಗಳನ್ನು ಕರೆತರುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈಗ ಇದಕ್ಕೆ ನಿರ್ಧಿಷ್ಟ ಕಾರಣ ಇದಲ್ಲವಾದ್ದರಿಂದ ಈ ಸುತ್ತೋಲೆಯನ್ನು ಹಿಂಪಡೆಯಲಾಗಿದೆ.


ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ಇದನ್ನು ಹಿಂಪಡೆಯಲಾಗಿದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಯುವಜನೋತ್ಸವ ಸಮಾರಂಭಕ್ಕೆ ಆಗಮಿಸಬಹುದು ಉಳಿದ ವಿದ್ಯಾರ್ಥಿಗಳಿಗೆ ಇದೇನೂ ಕಡ್ಡಾಯವಲ್ಲ ಎಂದು ಸೂಚಿಸಲಾಗಿದೆ.


ಇದನ್ನೂ ಓದಿ: Python Programming ಕೋರ್ಸ್​ ಮಾಡಿ, ಮನೆಯಲ್ಲೇ ಕೂತು ಹಣ ಸಂಪಾದಿಸಿ


ಈ ಹಿಂದೆ ನವೆಂಬರ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿಗಳ ಸಮಾರಂಭಕ್ಕೆ ವಿದ್ಯಾರ್ಥಿಗಳನ್ನು ಹಾಜರಾಗುವಂತೆ ಆದೇಶಿಸಿದ್ದ ಶಿಕ್ಷಣ ಇಲಾಖೆ ಕೆಲವೇ ಗಂಟೆಗಳಲ್ಲಿ ಮತ್ತೆ ಹಿಂಪಡೆದಿತ್ತು. ಈ ರೀತಿ ಮಾಡುತ್ತಿರುವುದಕ್ಕೆ ನಿಖರ ಕಾರಣ ತಿಳಿಯದಾಗಿದೆ. ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಗುರುವಾರ ಜರುಗಲಿರುವ ಯುವಜನೋತ್ಸವವು ಏಳುದಿನಗಳ ಕಾಲ ಬಹಳ ಅದ್ದೂರಿಯಿಂದ ಜರುಗುವ ನಿರೀಕ್ಷೆ ಇದೆ. ಈ ಸಮಾರಂಭವನ್ನು ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಪ್ರತಿಯೊಂದು ರಾಜ್ಯದಿಂದಲೂ ಸಹ ಜನರು ಇಲ್ಲಿಗೆ ಆಗಮಿಸಲಿದ್ದಾರೆ.


ಕಾರ್ಯಕ್ರಮ ಯುವ ಸಮೂಹಕ್ಕೆ ಪ್ರೇರಣೆಯಾಗಲಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ. ಹಲವಾರು ಜನರು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯೂ ಇದೆ. ಇದೇ ನಿಟ್ಟಿನಲ್ಲಿ ಧಾರವಾಡ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆತರುವಂತೆ ಸುತ್ತೋಲೆ ಹೊರಡಿಸಿದ್ಧರು.


ಕರ್ನಾಟಕಕ್ಕೆ ಆಗಮಿಸಲಿರುವ ಮೋದಿ


ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿ ಹೈಕಮಾಂಡ್‌ ನಾಯಕರು ಅಲರ್ಟ್‌ ಆಗಿದ್ದಾರೆ. ರಾಜ್ಯದಲ್ಲಿ ಈ ಬಾರಿಯೂ ಕಮಲ ಅರಳಿಸಲು ರೆಡಿಯಾಗಿದ್ದಾರೆ. ಗುಜರಾತ್ ಗೆಲುವಿನ ಖುಷಿಯಲ್ಲಿರೋ ಬಿಜೆಪಿ ಕರ್ನಾಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಜನಸಂಕಲ್ಪ ಯಾತ್ರೆ, ಎಸ್​ ಟಿ ಸಮಾವೇಶಗಳ ಮೂಲಕ ಚುನಾಣಾ ಪ್ರಚಾರ ಕಾರ್ಯವನ್ನು ಬಿಜೆಪಿ ಆರಂಭಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಮ ಜೆ.ಪಿ.ನಡ್ಡಾ ಸೇರಿದಂತೆ ಹಲವು ಹೈಕಮಾಂಡ್ ನಾಯಕರು ರಾಜ್ಯದತ್ತ ಮುಖ ಮಾಡಿದ್ದಾರೆ.


26ನೇ ರಾಷ್ಟ್ರೀಯ ಯುವಜನೋತ್ಸವದ ಆಯೋಜನೆ ಕುರಿತು ಪೂರ್ವಭಾವಿ ಸಭೆ


ಮತ್ತೊಂದು ಕಡೆ ಆರ್​ಎಸ್​ಎಸ್​ ನಾಯಕರು ಸಹ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಯಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.ಜನವರಿ 12ಕ್ಕೆ ಖದ್ದು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಇಂದು ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವದ ಆಯೋಜನೆ ಕುರಿತು ಪೂರ್ವಭಾವಿ ಸಭೆ ನಡೆಯಲಿದೆ.ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಮೊದಲು ಬೆಳಗಾವಿಯಲ್ಲಿ ರಾಷ್ಟ್ರೀಯ ಯುವಜನೋತ್ಸವದ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆಯಾಗಿತ್ತು.

First published: