ಶಾಲೆಗಳಲ್ಲಿ ಪ್ರಮುಖವಾಗಿ ಕಲಿಸಬೇಕಾದ ವಿಷಯಗಳಲ್ಲಿ ಗುಡ್ ಟಚ್ - ಬ್ಯಾಡ್ ಟಚ್ ಕೂಡಾ ಒಂದು. ಯಾವ ಸ್ಪರ್ಷ (Touch) ಯಾವ ರೀತಿಯ ಪ್ರಭಾವ ಬೀರುತ್ತದೆ. ಮಕ್ಕಳು (Student) ಯಾರೊಂದಿಗೆ ಹೇಗೆ ವರ್ತಿಸಬೇಕು? ತಮ್ಮ ಜೊತೆ ಯಾರಾದರೂ ಕೆಟ್ಟ ವರ್ತನೆ ತೋರಿದರೆ ಏನು ಮಾಡಬೇಕು ಎಂಬ ವಿಷಯವನ್ನು ತಿಳಿಸಿಕೊಡುವುದು ಮುಖ್ಯವಾಗುತ್ತದೆ. ಪ್ರತಿಯೊಂದು ಶಾಲೆಯಲ್ಲೂ (School) ಸಹ ಈ ಕುರಿತು ಮಾಹಿತಿ ನೀಡಿ ಮಕ್ಕಳನ್ನು (Children) ಜಾಗೃತಗೊಳಿಸುವುದು ಮುಖ್ಯವಾಗುತ್ತದೆ.
ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಯಾವುದು? ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಯಾವುದು ಎಂಬುದನ್ನು ವಿವರಿಸಲು ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ತಮ್ಮದೇ ಆದ ರೀತಿಯಲ್ಲಿ ಮಕ್ಕಳಿಗೆ ಅಸಭ್ಯವೆನಿಸದಂತೆ ತಿಳಿಸಿಕೊಡುವುದು ಮುಖ್ಯ. ಮಕ್ಕಳ ರಕ್ಷಣಾ ಆಯೋಗದ ಪ್ರಸ್ತಾವನೆಯು ಪಠ್ಯಕ್ರಮ ಸಮಿತಿಯಲ್ಲಿ ಇದನ್ನು ಸೇರಿಸಿ ಮಕ್ಕಳಿಗೆ ಈ ಕುರಿತು ಶಿಕ್ಷಣ ನೀಡುವುದು ಕೂಡಾ ಉತ್ತಮ.
ಯಾವ ಸಂದರ್ಭದಲ್ಲಿ ಮಕ್ಕಳು ಹೇಗೆ ವರ್ತಿಸಬೇಕು? ಯಾರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು? ತಾವು ಇತರರನ್ನು ಹೇಗೆ ಸ್ಪರ್ಷಿಸಬೇಕು ಎಂಬುದನ್ನೂ ಸಹ ತಿಳಿಸಿಕೊಡಬೇಕಾಗುತ್ತದೆ.
ಇದನ್ನೂ ಓದಿ: PUC Preparatory Exam: ಈ ತಿಂಗಳೇ ನಡೆಯಲಿದೆ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ
ಬಾಲ್ಯದಲ್ಲಿ ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವ ಎಷ್ಟೋ ವಿಷಯವನ್ನು ನಾವು ಆಲಿಸಿರುತ್ತೇವೆ. ಪ್ರತಿ ನಿತ್ಯವೂ ಸಹ ಇಂತಹ ಹಲವಾರು ಕೇಸುಗಳು ಬೆಳಕಿಗೆ ಬರುತ್ತಿರುತ್ತದೆ ಆದ್ದರಿಂದ ಆ ಕುರಿತೂ ಸಹ ಶಿಕ್ಷಣ ಒದಗಿಸುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿಬ್ಬರಿಗೂ ಸಹ ಈ ರೀತಿ ಶಿಕ್ಷಣ ನೀಡುವುದು ಮುಖ್ಯವಾಗುತ್ತದೆ. ಪಾಲಕರಿಗೂ ಸಹ ಈ ರೀತಿ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಮಾಹಿತಿ ತಿಳಿಸಿ ಅವರೂ ಸಹ ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿಸಿಕೊಡಬೇಕು.
ಪ್ರತಿಯೊಂದು ಶಾಲೆಯಲ್ಲೂ ಸಹ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಶಿಕ್ಷಣ ನೀಡುವುದು ಮುಖ್ಯವಾಗುತ್ತದೆ. ದೈಹಿಕ ಶಿಕ್ಷಣದಲ್ಲೇ ಇದನ್ನೂ ಒಂದು ಭಾಗವಾಗಿ ಆಯ್ದುಕೊಂಡು ಮಕ್ಕಳಿಗೆ ಮಾಹಿತಿ ನೀಡುವ ಅಗತ್ಯತೆ ಇದೆ.
ಪ್ರಾಥಮಿಕ ಹಂತದಲ್ಲೇ ದೇಹ ಭಾಗಗಳ ಕುರಿತು ಸರಿಯಾದ ರೀತಿಯಲ್ಲಿ ಮಾಹಿತಿ ನೀಡುವುದು ಮುಖ್ಯವಾಗುತ್ತದೆ. ಯಾವುದರ ಕುರಿತಾಗಿಯೂ ಅತಿಯಾದ ಆಸಕ್ತಿ ಮಕ್ಕಳಲ್ಲಿ ಬೆಳೆಯುವ ಹಾಗೆ ಮಾಡಬಾರದು ಎಲ್ಲ ವಿಷಯಗಳ ಕುರಿತು ಮುಕ್ತವಾಘಿ ಮಾತನಾಡಿ ಮಾಹಿತಿ ಹಂಚಿಕೊಳ್ಳಿ.
ಸಂಶೋಧಕರ ಮಾಹಿತಿ
ಈ ಕುರಿತು ಹಲವಾರು ಸಂಶೋಧನೆಗಳು ನಡೆದಿದೆ ಅದರಲ್ಲಿ ಹೇಳಿರುವ ಪ್ರಕಾರ ಮಧುರೈ ಜಿಲ್ಲೆಯಲ್ಲಿ ಓದುತ್ತಿರುವ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಜಾಗೃತಿ ಸಂಶೋಧನೆ ನಡೆಸಲಾಗಿತ್ತು. ಡಾ.ಎಂ.ಮಾರುತವನನ್ ಮತ್ತು ಶ್ರೀಮತಿ.ಟಿ.ರೇಣುಗಾದೇವಿಸಹಾಯಕ ಪ್ರಾಧ್ಯಾಪಕರು, ತ್ಯಾಗರಾಜರ್ ಕಾಲೇಜ್ ಆಫ್ ಪ್ರಿಸೆಪ್ಟರ್ಸ್, ಇವರು ಸಂಶೋಧನೆಯಲ್ಲಿ ಮುಖ್ಯಪಾತ್ರ ವಹಿಸಿದ್ದರು.
ಅಹಿತಕರ ಘಟನೆಗೆ ಕಾರಣವಾಗುತ್ತೆ
ಇವರ ಸಂಶೋಧನೆಯಲ್ಲಿ ತಿಳಿದು ಬಂದಿರುವ ಪ್ರಕಾರ ಪೋಷಕರು ಮಕ್ಕಳ ಬಳಿ ಈ ವಿಚಾರಗಳನ್ನು ಮುಚ್ಚಿಡುವುದರಿಂದಲೇ ಎಷ್ಟೋ ಅಹಿತಕರ ಘಟನೆಗಳು ಜರುಗುತ್ತಿದೆ. ಸರಿಯಾದ ಶಿಕ್ಷಣ ಮಕ್ಕಳಿಗೆ ಇಲ್ಲ ಎಂದು ತಿಳಿದು ಬಂದಿದೆ. ಲೈಂಗಿಕನಿಂದನೆ, ಭಾವನಾತ್ಮಕನಿರ್ಲಕ್ಷ್ಯಗಳೇ ಎಲ್ಲದಕ್ಕೂ ಕಾರಣ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ