• ಹೋಂ
  • »
  • ನ್ಯೂಸ್
  • »
  • Jobs
  • »
  • Education Fair: ಉನ್ನತ ಶಿಕ್ಷಣಕ್ಕಾಗಿ ನೀವು ವಿದೇಶಕ್ಕೆ ಹೋಗ್ಬೇಕಾ? ಹಾಗಾದ್ರೆ ಇದನ್ನೊಮ್ಮೆ ಓದಿ

Education Fair: ಉನ್ನತ ಶಿಕ್ಷಣಕ್ಕಾಗಿ ನೀವು ವಿದೇಶಕ್ಕೆ ಹೋಗ್ಬೇಕಾ? ಹಾಗಾದ್ರೆ ಇದನ್ನೊಮ್ಮೆ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಾರ್ಜಿಯಾದ ರಾಯಭಾರಿ ಆರ್ಚಿಲ್ ಜುಲಿಯಾಶ್ವಿಲಿ ಹೇಳಿದರು ಈ ಬಗ್ಗೆ ಮಾತನಾಡಿದ್ದಾರೆ. ಮೊದಲ ಈವೆಂಟ್‌ನಲ್ಲಿ ನಮಗೆ ದೊರೆತ ಪ್ರತಿಕ್ರಿಯೆಯು ನಮ್ಮ ನಿರೀಕ್ಷೆಗಳನ್ನು ಮೀರಿದೆ. ಜಾರ್ಜಿಯನ್ ಕಾಲೇಜಿಗೆ ಪ್ರವೇಶ ಪಡೆಯುವ ಬಗ್ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ.

  • Share this:

ಬೆಂಗಳೂರು: ವಿದ್ಯಾರ್ಥಿಗಳು (Students) ಉನ್ನತ ವ್ಯಾಸಂಗದಲ್ಲಿ ಉತ್ತಮ ಸಾಧನೆ ಮಾಡಲು ಸಹಾಯ ಆಗುವಂತೆ ಜಾರ್ಜಿಯಾದ ರಾಯಭಾರ ಕಚೇರಿಯು ಭಾರತದಲ್ಲಿ ಅತಿ ದೊಡ್ಡ ವಿದೇಶಿ ಶಿಕ್ಷಣ (Education) ಮೇಳಗಳಲ್ಲಿ ಒಂದನ್ನು ಆಯೋಜಿಸುತ್ತಿದೆ ಎಂದು ಶುಕ್ರವಾರ ತಿಳಿಸಿದೆ. ಇದು ಪ್ರಮುಖ ಈವೆಂಟ್‌ನ ಎರಡನೇ ಆವೃತ್ತಿಯಾಗಿದ್ದು, ಜಾರ್ಜಿಯನ್ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ (College) ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಕಾರ್ಯ ಮಾಡುತ್ತಾ ಬಂದಿದೆ. 


ಜೂನ್ 1 ರಂದು ಬೆಂಗಳೂರಿನಲ್ಲಿ ಈವೆಂಟ್ ಅನ್ನು ಯೋಜಿಸಲಾಗಿದೆ. ಮತ್ತು ಜಾರ್ಜಿಯಾದ 11 ವಿಶ್ವವಿದ್ಯಾನಿಲಯಗಳು ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ಟ್ರೀಮ್‌ಗಳಲ್ಲಿ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‌ಗಳನ್ನು ಪರಿಚಯಿಸುತ್ತವೆ. ಅಂತಿಮವಾಗಿ, ಉನ್ನತ ಶಿಕ್ಷಣವನ್ನು ಮುಂದುವರಿಸಲು ಸರಿಯಾದ ಕೋರ್ಸ್ ಮತ್ತು ಸಂಸ್ಥೆಯನ್ನು ಆಯ್ಕೆ ಮಾಡಲು ಇದು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ: Memory Power: ನಿಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಾದ್ರೆ ಈ ರೀತಿ ಮಾಡಿ


ಪ್ರಸ್ತುತ ಜಾರ್ಜಿಯಾದಲ್ಲಿ 20,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಆ ಕಾರಣದಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅನುಕೂಲಕರ ವಾತಾವರಣವು ಹೆಚ್ಚಿನ ಜನರು ಅಲ್ಲಿ ಹೋಗಲು ಮತ್ತು ಅಧ್ಯಯನ ಮಾಡಲು ಹೋಗುತ್ತಾರೆ.




ಜಾರ್ಜಿಯಾದ ರಾಯಭಾರಿ ಆರ್ಚಿಲ್ ಜುಲಿಯಾಶ್ವಿಲಿ ಹೇಳಿದರು ಈ ಬಗ್ಗೆ ಮಾತನಾಡಿದ್ದಾರೆ. ಮೊದಲ ಈವೆಂಟ್‌ನಲ್ಲಿ ನಮಗೆ ದೊರೆತ ಪ್ರತಿಕ್ರಿಯೆಯು ನಮ್ಮ ನಿರೀಕ್ಷೆಗಳನ್ನು ಮೀರಿದೆ. ಜಾರ್ಜಿಯನ್ ಕಾಲೇಜಿಗೆ ಪ್ರವೇಶ ಪಡೆಯುವ ಬಗ್ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ತರಲು ಆರು ತಿಂಗಳೊಳಗೆ ಇನ್ನೊಂದು ಕಾರ್ಯಕ್ರಮವನ್ನು ಆಯೋಜಿಸಲು ನಾವು ಸಂತೋಷಪಡುತ್ತೇವೆ. ದಿನವಿಡೀ ನಡೆಯುವ ಮೇಳವು ವಿವಿಧ ಭಾರತೀಯ ನಗರಗಳ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತದೆ. ಇದರಲ್ಲಿ 11 ಜಾರ್ಜಿಯನ್ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಯುವ ಸಂಗಮ ಇದೊಂದು ಹೊಸ ಕಾರ್ಯಕ್ರಮ


ಯುವ ಸಂಗಮ (Yuva Sangam) ಎಂಬುದು ಸಾಂಸ್ಕೃತಿಕ ಮತ್ತು ಶೈಕ್ಷಣಿಕ (Education) ಪ್ರಯತ್ನವಾದ ಏಕ್ ಭಾರತ್ ಶ್ರೇಷ್ಠ ಭಾರತ್ ಅಡಿಯಲ್ಲಿ ನಡೆಯುವ ಕಾರ್ಯಕ್ರಮವಾಗಿದೆ. ಇದರಲ್ಲಿ ವಿದ್ಯಾರ್ಥಿಗಳು (Students) ಭಾಗಿಯಾಗುತ್ತಾರೆ. ಸರ್ಕಾರದ ಮಹತ್ವಾಕಾಂಕ್ಷೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಯತ್ನದ ಎರಡನೇ ಹಂತದ ಭಾಗವಾಗಿ ಪಶ್ಚಿಮ ಬಂಗಾಳದ ವಿವಿಧ ಉನ್ನತ ಶಿಕ್ಷಣ (Higher Education) ಸಂಸ್ಥೆಗಳಾದ ಎನ್‌ಐಟಿ ದುರ್ಗಾಪುರ, ಕಂಡಿ ರಾಜ್ ಕಾಲೇಜು, ಜೂನಿಯರ್ ಎಕ್ಸಿಕ್ಯೂಟಿವ್ ಎಂಜಿನಿಯರಿಂಗ್ ಸಂಸ್ಥೆ ಇತ್ಯಾದಿಗಳಿಂದ 45 ವಿದ್ಯಾರ್ಥಿಗಳ ನಿಯೋಗವು ಮೇ 16 ರಂದು ಪುದುಚೇರಿಗೆ ಹೊರಟಿದೆ.


NIT ದುರ್ಗಾಪುರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಧ್ವಜಾರೋಹಣ ಮಾಡಲಾಯಿತು ಮತ್ತು ಮೇ 19 ರಂದು ಪುದುಚೇರಿಗೆ ವಿದ್ಯಾರ್ಥಿಗಳು ತಲುಪಲಿದ್ದಾರೆ. ಅವರ ಪ್ರವಾಸವು ಮೇ 24 ರಂದು ಮುಕ್ತಾಯಗೊಳ್ಳಲಿದೆ.


ಅಧ್ಯಾಪಕರು ಸಹ ಇದ್ದಾರೆ

top videos


    ಈ ವಿದ್ಯಾರ್ಥಿಗಳ ಜೊತೆಗೆ ನಾಲ್ವರು ಅಧ್ಯಾಪಕರು ಸಹ ಇದ್ದಾರೆ.ಎನ್‌ಐಟಿ ದುರ್ಗಾಪುರದ ಆವರಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಇಂದ್ರಜಿತ್ ಬಸಕ್ ಮಾತನಾಡಿ, “ರಾಷ್ಟ್ರೀಯ ಏಕೀಕರಣವನ್ನು ನಿರ್ಮಿಸಲು ಮತ್ತು ಭಾರತದ ವೈವಿಧ್ಯತೆ ಮತ್ತು ಸಾಮರ್ಥ್ಯಕ್ಕೆ ವಿದ್ಯಾರ್ಥಿಗಳ ಮನಸ್ಸನ್ನು ತೆರೆಯಲು ಇದು ಸರ್ಕಾರದ ಹೊಸ ಯೋಜನೆಯಾಗಿದೆ ಎಂದಿದ್ದಾರೆ. ಅವರು ವಿವಿಧ ಸಂಸ್ಕೃತಿಗಳ ಬಗ್ಗೆ ಕಲಿಯುವುದರಿಂದ ಮತ್ತು ಭಾರತದ ವೈವಿಧ್ಯತೆ ಮತ್ತು ಏಕತೆಯ ಬಗ್ಗೆ ಗೌರವವನ್ನು ಬೆಳೆಸುವುದರಿಂದ ನಮ್ಮ ದೇಶದ ಸಂಸ್ಕ್ರತಿ ಇನ್ನಷ್ಟು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

    First published: