ಕೋಲ್ಕತ್ತಾ: ಉನ್ನತ ವ್ಯಾಸಂಗ (Higher Education) ಮಾಡಲು ನಿರ್ಧರಿಸಿದ 17 ವರ್ಷದ ಬಾಲಕಿಯೊಬ್ಬಳು ತನಗೆ ತಂದೆ ತಾಯಿ ಬಾಲ್ಯ ವಿವಾಹ (Marriage) ಮಾಡುತ್ತಾರೆ ಎಂದು ತಪ್ಪಿಸಿಕೊಂಡು ಹೋಗಿದ್ದಾಳೆ. ಕತ್ತಲೆಯಲ್ಲೇ ಮನೆ ಬಿಟ್ಟ ಆಕೆ ಓಡಿ ಮತ್ತು ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ (ಬಿಡಿಒ) ಕಚೇರಿಯನ್ನು ತಲುಪಿದ್ದಾಳೆ. ಕತ್ತಲೆಯಲ್ಲಿ 2 ಕಿಮೀ ತಲುಪಲು ಬಸ್‌ನಲ್ಲಿ ಮತ್ತೆ 10 ಕಿಮೀ ಪ್ರಯಾಣಿಸಿದ್ದಾಳೆ ಎಂದು ಹೇಳಲಾಗಿದೆ. ಪಶ್ಚಿಮ ಮಿಡ್ನಾಪುರದಲ್ಲಿ ಈ ಘಟನೆ ನಡೆದಿದೆ. ಪಾಲಕರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲದ ಸಮಯದಲ್ಲಿ ತನ್ನ ಶಿಕ್ಷಣಕ್ಕಾಗಿ ಈ ಬಾಲಕಿ ಮಾಡಿದ ಕಾರ್ಯ ಅಷ್ಟಿಷ್ಟಲ್ಲಾ.
ಆಕೆಯ ಪೋಷಕರ ಮನವೊಲಿಸಲು ಬಿಡಿಒ ಕೂಡಲೇ ಸ್ಥಳೀಯ ಅಧಿಕಾರಿಗಳನ್ನು ಆಕೆಯ ಮನೆಗೆ ಕಳುಹಿಸಲಾಗಿದೆ. ಆನಂತರ ಹನ್ನೊಂದನೇ ತರಗತಿ ಓದುತ್ತಿದ್ದ ಈ ವಿದ್ಯಾರ್ಥಿನಿಯನ್ನು ಮದುವೆ ಮಾಡುವುದಿಲ್ಲ ಎಮದು ಆಕೆಯ ತಂದೆಯ ಬಳಿ ಲಿಖಿತ ರೂಪದ ದಾಖಲೆಯಲ್ಲಿ ಬರೆಸಿಕೊಳ್ಳಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಿಖಿತ ಹೇಳಿಕೆ ನೀಡಿದರೆ ಮಾತ್ರ ಶಿಕ್ಷೆ ವಿಧಿಸುವುದಿಲ್ಲ ಎಂದು ಹೇಳಿರುವುದಕ್ಕೆ ಅವರು ಬರೆದುಕೊಟ್ಟಿದ್ದಾರೆ.
ಇದನ್ನೂ ಓದಿ: JEE Advanced 2023ರ ಪಠ್ಯಕ್ರಮ ಪರಿಷ್ಕರಣೆ; ಏನೆಲ್ಲಾ ಬದಲಾವಣೆಯಾಗಿದೆ ನೋಡಿ
ಈ ರೀತಿ ಆಕೆಯ ತಂದೆ ಭರವಸೆ ನೀಡಿದ ನಂತರ ಅವಳಿಗೆ ಶಿಕ್ಷಣ ನೀಡುತ್ತಾರೆ ಎಂದಾದ ನಂತರ ಆಕೆಯನ್ನು ಹಸ್ತಾಂತರಿಸಲಾಗಿದೆ. ಪಶ್ಚಿಮ ಮಿಡ್ನಾಪುರದ ಚಂದ್ರಕೋನಾ-II ಬ್ಲಾಕ್‌ನ BDO ಅಮಿತ್ ಕುಮಾರ್ ಘೋಷ್, ಕಳೆದ ವಾರ ಶುಕ್ರವಾರದಂದು ನನಗೆ ಕರೆ ಬಂದಿತ್ತು ಎಂದು ಹೇಳಿದ್ದಾರೆ. ಆದರೆ ಇದಕ್ಕೂ ಮುನ್ನ ಹುಡಿಗಿಯೇ ಈ ಕರೆ ಮಾಡಿದ್ದಾಳೆ ಎಂಬುದು ತಿಳಿದು ಬಂದಿದೆ. ಆಕೆ ಏನನ್ನೋ ಪಿಸುಗುಟ್ಟುತ್ತಿದ್ದಾಳೆ ಎಂದಷ್ಟೇ ತಿಳಿದಿತ್ತು ಹೊರತಾಗಿ ಆಕೆ ಏನು ಹೇಳಿದ್ದಾಳೆ ಎಂದು ಆಗ ಅವರಿಗೆ ಅರ್ಥವಾಗಿರಲಿಲ್ಲ. ಆದರೆ ಆಕೆ ತೊಂದರೆಯಲ್ಲಿದ್ದಾಳೆ ಎಂಬುದಷ್ಟೇ ತನಗೆ ಅರ್ಥವಾಗಿತ್ತು ಎಂದು ಅಧೀಕಾರಿಗಳು ತಿಳಿಸಿದ್ದಾರೆ. ಫೋನ್ ಡಿಸ್ಕನೆಕ್ಟ್ ಆಯಿತು. ನಾನು ಅವಳನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅದು ಕೆಲಸ ಮಾಡಲಿಲ್ಲ.
ಅವಳು ಸಂವಹನ ನಡೆಸುವ ಸ್ಥಿತಿಯಲ್ಲಿಲ್ಲ ಎಂದು ತೋರುತ್ತದೆ ಎಂದು ಅವರು ಹೇಳಿದ್ದಾರೆ. ಮರುದಿನ ಆ ಹುಡುಗಿ ಕಚೇರಿಗೆ ಬಂದಿದ್ದಳು. ಆಗ ಆದ ಸಮಸ್ಯೆಯ ಬಗ್ಗೆ ಮಾತನಾಡಿ ನನ್ನನ್ನು ಮದುವೆಯಿಂದ ಹೇಗಾದರೂ ಮಾಡಿ ಪಾರು ಮಾಡಿ ಎಂದು ಕೇಳಿಕೊಂಡಿದ್ದಾಳೆ. ಕಛೇರಿಯಲ್ಲಿ ಕಣ್ಣೀರು ಹಾಕಿದ್ದಾಳೆ. ಕ್ಲಬ್‌ನ ಶಾಲೆಯಲ್ಲಿ ಈಗೆ ಓದುತ್ತಿರುವುದು ತಿಳಿದು ಬಂದಿದೆ. ಮಿಡ್ನಾಪುರ ಜಿಲ್ಲೆಯ ಚಂದ್ರಕೋನಾ-II ನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಅಮಿತ್ ಕುಮಾರ್ ಘೋಷ್ ಈಕೆಗೆ ಸಹಾಯ ಮಾಡಿದ್ದಾರೆ.
10 ಕಿಮೀ ದೂರದಲ್ಲಿರುವ ಬ್ಲಾಕ್ ಹೆಡ್ಕ್ವಾರ್ಟರ್ಸ್ ತಲುಪಲು ಬಸ್ ಹತ್ತಿ ರಾತ್ರೋ ರಾತ್ರಿ ಆಕೆ ಅಲ್ಲಿಂದ ಪಾರಾಗಿ ತನ್ನ ಜೀವನವನ್ನು ರೂಪಿಸಿಕೊಳ್ಳಲು ಸಾಹಸ ಮಾಡಿದ್ದಾಳೆ. ಅಧಿಕಾರಿಗಳ ಸಹಾಯ ಪಡೆದು ಅಂತೂ ವಿವಾಹದಿಂದ ಮುಕ್ತಿ ಪಡೆದಿದ್ದಾಳೆ. ಮುಂದಿನ ದಿನದಲ್ಲಿ ಓದನ್ನು ಮುಂದುವರಿಸುವ ಆಶಯ ಹೊಂದಿದ್ದಾಳೆ. ಬಿಡಿಒಗೆ ನೀಡಿದ ಹೇಳಿಕೆಯಲ್ಲಿ ಬಾಲಕಿ ತನ್ನ ತಂದೆಯ ಬಗ್ಗೆ ದೂರು ದಾಖಲಿಸಿದ್ದಾಳೆ. ತನ್ನ ಒಪ್ಪಿಗೆ ಇಲ್ಲದಿದ್ದರೂ ಸಹ ತಂದೆ ಮದವೆ ಮಾಡಲು ಮುಂದಾಗಿದ್ದಾರೆ ತನಗಿನ್ನು ಪೂರ್ಣ ಮದುವೆಯ ವಯಸ್ಸಾಗಿಲ್ಲ. ಮುಂದೆ ಓದುವ ಬಯಕೆ ಇದೆ ಎಂದು ಹೇಳಿದ್ದಾಳೆ. ಅಧಿಕಾರಿಗಳು ಹುಡುಗಿಯ ಮನೆಗೆ ಭೇಟಿ ನೀಡಿ ಈ ಘಟನೆಯ ಬಗ್ಗೆ ವಿವರ ನೀಡಿ ಆಕೆಯ ತಂದೆಯ ಮನವೊಲಿಸಿದ್ದಾರೆ. ಲಿಖಿತ ರೂಪದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ