• ಹೋಂ
  • »
  • ನ್ಯೂಸ್
  • »
  • jobs
  • »
  • India And Germany: ಶಿಕ್ಷಣ ಹಾಗೂ ಉದ್ಯೋಗ ಅನುಕೂಲಕ್ಕಾಗಿ ಸಂಚಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು ಜರ್ಮನ್‌

India And Germany: ಶಿಕ್ಷಣ ಹಾಗೂ ಉದ್ಯೋಗ ಅನುಕೂಲಕ್ಕಾಗಿ ಸಂಚಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು ಜರ್ಮನ್‌

ಭಾರತ ಮತ್ತು ಜರ್ಮನ್​

ಭಾರತ ಮತ್ತು ಜರ್ಮನ್​

ಎರಡೂ ದೇಶಗಳ ವಿಶ್ವವಿದ್ಯಾನಿಲಯಗಳ ನಡುವಿನ ಸಹಕಾರ ಹೇಗಿದೆ ಎಂದು ತಿಳಿಯಲು ವಿಶ್ವವಿದ್ಯಾನಿಲಯ ಮಟ್ಟದ ಪ್ರಯತ್ನಗಳನ್ನು ಎರಡೂ ದೇಶಗಳು ಒಪ್ಪಿಕೊಂಡಿದ್ದವು. "ಭಾರತ ಸರ್ಕಾರವು 'ಭಾರತದಲ್ಲಿ ಅಧ್ಯಯನ' ದಂತಹ ಕಾರ್ಯಕ್ರಮಗಳ ಮೂಲಕ ಜರ್ಮನ್ ವಿದ್ಯಾರ್ಥಿಗಳನ್ನು ಭಾರತೀಯ ವಿಶ್ವವಿದ್ಯಾಲಯಗಳಿಗೆ ಬರಲು ಅವಕಾಶ ನೀಡುತ್ತದೆ" ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.

ಮುಂದೆ ಓದಿ ...
  • Share this:

ಭಾರತ ಮತ್ತು ಜರ್ಮನ್‌ ದೇಶಗಳು ಸೋಮವಾರದಂದು ಸಮಗ್ರ ವಲಸೆ ಮತ್ತು ಸಂಚರಿಸುವಿಕೆಗೆ ಸಂಬಂಧಿಸಿದ ಪಾಲುದಾರಿಕೆಯ ಒಪ್ಪಂದಕ್ಕೆ ಸಹಿ (Signature) ಹಾಕಿದವು. ಇದು ಎರಡೂ ರಾಷ್ಟ್ರಗಳ ನಾಗರಿಕರಿಗೆ ಪರಸ್ಪರರ ದೇಶದಲ್ಲಿ ಅಧ್ಯಯನ ಮಾಡಲು, ಸಂಶೋಧನೆ (Research) ನಡೆಸಲು ಮತ್ತು ಕೆಲಸ (Work) ಮಾಡಲು ಕೂಡ ಸಹಾಯ (Help) ಮಾಡುತ್ತದೆ. "ಈ ಒಪ್ಪಂದವು ನಮ್ಮ ಎರಡು ದೇಶಗಳ ನಡುವಿನ ಪ್ರತಿಭೆ ಮತ್ತು ಕೌಶಲ್ಯಗಳ ಹೆಚ್ಚಿನ ಹರಿವಿಗೆ ಬಲವಾದ ಸಂಕೇತವಾಗಿದೆ. ಆದರೆ ಹೆಚ್ಚು ಸಮಕಾಲೀನ ಪಾಲುದಾರಿಕೆಗೆ ಆಧಾರವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಜರ್ಮನಿಯ ವಿದೇಶಾಂಗ ಸಚಿವೆ ಒಟ್ಟಾಗಿ ಹೇಳಿದರು.


ನವದೆಹಲಿಯಲ್ಲಿ ನಡೆದ ಸಭೆಯ ನಂತರ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.


ಸಮಗ್ರ ವಲಸೆ ಮತ್ತು ಪಾಲುದಾರಿಕೆ ಒಪ್ಪಂದಕ್ಕೆ ಗ್ರೀನ್‌ ಸಿಗ್ನಲ್‌


ಮೇ ತಿಂಗಳಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರ್ಲಿನ್ ಭೇಟಿಯ ಸಂದರ್ಭದಲ್ಲಿ, “ಉಭಯ ದೇಶಗಳು ಸಮಗ್ರ ವಲಸೆ ಮತ್ತು ಸಂಚಾರ ಪಾಲುದಾರಿಕೆಯ ಒಪ್ಪಂದವನ್ನು ಒಪ್ಪಿಕೊಂಡಿದ್ದವು. ಈ ಒಪ್ಪಂದದನ್ವಯ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಂಶೋಧಕರು ಪರಸ್ಪರರ ದೇಶಗಳಿಗೆ ಭೇಟಿ ನೀಡಬಹುದು” ಎಂದು ಹೇಳಿದ್ದರು.


“ನಾವು ನಮ್ಮ ಪರಸ್ಪರ ಅನುಕೂಲಕ್ಕೆ ವಲಸೆ ಮತ್ತು ನುರಿತ ಕೆಲಸಗಾರರ ಸಾಮರ್ಥ್ಯವನ್ನು ದೇಶದ ಉನ್ನತಿಗಾಗಿ ಬಳಸಿಕೊಳ್ಳಬಹುದು. ಇದು ನಮ್ಮ ದೇಶಕ್ಕೆ ಸಮಗ್ರ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಮೊದಲ ಒಪ್ಪಂದವಾಗಿದೆ” ಎಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹೇಳಿದ್ದಾರೆ.


ಮೋದಿ ಮಾತಲ್ಲಿ ಈ ಒಪ್ಪಂದದ ಬಗ್ಗೆ ಇರುವ ಅಭಿಪ್ರಾಯ


"ಭಾರತ ಮತ್ತು ಜರ್ಮನ್‌ ದೇಶಗಳ ನಡುವಿನ ಸಮಗ್ರ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಒಪ್ಪಂದವು ಉಭಯ ದೇಶಗಳ ನಡುವಿನ ಚಲನೆಯನ್ನು ಸುಗಮಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಮೋದಿ ಹೇಳಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ, ಭಾರತ ಮತ್ತು ಜರ್ಮನ್‌ ದೇಶಗಳ ಶಿಕ್ಷಣ ಮತ್ತು ಅರ್ಹತೆಗಳ ಕುರಿತು ಹೆಚ್ಚಿನ ಸಹಕಾರವನ್ನು ಮುಂದುವರಿಸಲು ಒಪ್ಪಿಕೊಂಡಿವೆ. ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಜರ್ಮನಿ ವಿಶ್ವವಿದ್ಯಾಲಯದ ಕೋರ್ಸ್‌ಗಳನ್ನು ಪ್ರಾರಂಭಿಸಲು ನೋಂದಾಯಿಸಿಕೊಳ್ಳಬಹುದಾದ ಡಿಜಿಟಲ್ ಪೂರ್ವಸಿದ್ಧತಾ ಕೋರ್ಸ್‌ಗಳನ್ನು ಆರಂಭಿಸಿರುವುದನ್ನು ಶ್ಲಾಘಿಸಿದರು.


ಜರ್ಮನ್‌ ಚಾನ್ಸೆಲರ್‌ ಹೇಳುವುದೇನು?


ಬರ್ಲಿನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಕೋಲ್ಜ್, ಅವರು “ಉನ್ನತ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರವು ಈ ಎರಡು ದೇಶಗಳ ನಡುವೆ ಪರಸ್ಪರ ನಿಕಟವಾದ ಸಂಬಂಧಗಳನ್ನು ಹೊಂದಿರುವ ಉತ್ತಮ ಸೂಚನೆ ಆಗಿದೆ” ಎಂದು ಹೇಳಿದರು. “17,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಜರ್ಮನ್ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಕೊಡುಗೆಗಳ ಲಾಭವನ್ನು ಪಡೆಯುತ್ತಾರೆ. ಭಾರತೀಯ ಪ್ರತಿ ವ್ಯಕ್ತಿಗೂ ಕೂಡ ಜರ್ಮನ್‌ ದೇಶಕ್ಕೆ ಸ್ವಾಗತವನ್ನು ನಾವು ಕೋರುತ್ತಿದ್ದೇವೆ” ಎಂದು ಸ್ಕೋಲ್ಜ್‌ ಹೇಳಿದರು.


ಎರಡೂ ದೇಶಗಳ ವಿಶ್ವವಿದ್ಯಾನಿಲಯಗಳ ನಡುವಿನ ಸಹಕಾರ ಹೇಗಿದೆ ಎಂದು ತಿಳಿಯಲು ವಿಶ್ವವಿದ್ಯಾನಿಲಯ ಮಟ್ಟದ ಪ್ರಯತ್ನಗಳನ್ನು ಎರಡೂ ದೇಶಗಳು ಒಪ್ಪಿಕೊಂಡಿದ್ದವು. "ಭಾರತ ಸರ್ಕಾರವು 'ಭಾರತದಲ್ಲಿ ಅಧ್ಯಯನ' ದಂತಹ ಕಾರ್ಯಕ್ರಮಗಳ ಮೂಲಕ ಜರ್ಮನ್ ವಿದ್ಯಾರ್ಥಿಗಳನ್ನು ಭಾರತೀಯ ವಿಶ್ವವಿದ್ಯಾಲಯಗಳಿಗೆ ಬರಲು ಅವಕಾಶ ನೀಡುತ್ತದೆ" ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.


ಜರ್ಮನ್‌ ವಿದೇಶಾಂಗ ಸಚಿವೆ ಏನ್‌ ಹೇಳ್ತಿದಾರೆ?


ಜರ್ಮನ್‌ ವಿದೇಶಾಂಗ ಸಚಿವೆ ಬೇರ್‌ಬಾಕ್ ಅವರು ನವದೆಹಲಿಯಲ್ಲಿ ಎರಡು ದಿನಗಳ ಕಾಲ ಉಳಿಯಲಿದ್ದಾರೆ. “21ನೇ ಶತಮಾನದಲ್ಲಿ ವಿಶೇಷವಾಗಿ ಇಂಡೋ-ಪೆಸಿಫಿಕ್‌ನಲ್ಲಿ ಅಂತರಾಷ್ಟ್ರೀಯ ಕ್ರಮವನ್ನು ರೂಪಿಸುವಲ್ಲಿ ಭಾರತವು ನಿರ್ಣಾಯಕ ಪ್ರಭಾವ ಬೀರುತ್ತದೆ” ಎಂದು ಬೇರ್‌ಬಾಕ್ ಹೇಳಿದ್ದಾರೆ. “ಕಳೆದ 15 ವರ್ಷಗಳಲ್ಲಿ 400 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸಂಪೂರ್ಣ ಬಡತನದಿಂದ ಹೊರತರುವಲ್ಲಿ ಭಾರತವು ಅತ್ಯಂತ ಪ್ರಭಾವಶಾಲಿ ದೇಶವಾಗಿದೆ.


ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಸಹಕಾರ


ಸಾಮಾಜಿಕ ಬಹುತ್ವ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವು - ಆರ್ಥಿಕ ಅಭಿವೃದ್ಧಿ, ಶಾಂತಿ ಮತ್ತು ಸಮಸ್ತ ಅಭಿವೃದ್ಧಿಗೆ ಮೂಲ ಎಂಬುದನ್ನು ಭಾರತ ದೇಶ ಸಾಬೀತು ಪಡಿಸುತ್ತದೆ” ಎಂದು ಬೇರ್‌ಬಾಕ್‌ ಹೇಳಿದರು. "ಮಾನವ ಹಕ್ಕುಗಳನ್ನು ಬಲಪಡಿಸುವುದರೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮ ಕಾರ್ಯವಾಗಿದೆ" ಎಂದು ಬೇರ್‌ಬಾಕ್ ಅವರು ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ.


ವಿದೇಶಾಂಗ ಸಚಿವರ ಅಭಿಪ್ರಾಯ


“ಕಾರ್ಯತಂತ್ರದ ಪಾಲುದಾರಿಕೆಯನ್ನು ಮೀರಿ ಭಾರತದೊಂದಿಗೆ ಆರ್ಥಿಕ ಮತ್ತು ಭದ್ರತಾ ನೀತಿ ಸಹಕಾರವನ್ನು ಬಲಪಡಿಸಲು ನಾವು ಬಯಸುತ್ತೇವೆ ಎನ್ನುವುದು ಸುಳ್ಳಲ್ಲ” ಎಂದು ಬೇರ್‌ಬಾಕ್‌ ಹೇಳಿದರು. ಜರ್ಮನಿಯ ವಿದೇಶಾಂಗ ಸಚಿವರಾದ ಬೇರ್‌ಬಾಕ್‌ ಅವರು ಸೋಮವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ್ದು, ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸುದೀರ್ಘ ಮಾತುಕತೆಯನ್ನು ನಡೆಸಲಿದ್ದಾರೆ.

First published: