ಎಂಜಿನಿಯರಿಂಗ್ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ GATE 2023ರ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ, ಐಐಟಿ ಕಾನ್ಪುರ ಅಭ್ಯರ್ಥಿಗಳಿಗೆ ಅಧಿಕೃತ ವೆಬ್ಸೈಟ್ನಲ್ಲಿ ನೋಡಲು GATE ಶಾಖೆಯವಾರು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. gate.iitk.ac.in ಅಲ್ಲಿ ಇದೀಗ ಲಭ್ಯವಿದೆ. GATE 2023 ಪರೀಕ್ಷೆಯ ವೇಳಾಪಟ್ಟಿಯನ್ನು ಸಹ ನೀಡಲಾಗಿದೆ. ಈ ಮಾಹಿತಿ ಪಡೆಯುವುದಕ್ಕಾಗಿ ನೀವು ಅಧಿಕೃತ ವೆಬ್ ಸೈಟ್ಗೆ ಬೇಟಿ ನೀಡಿ.
ಪರೀಕ್ಷೆ | ವಿವರ |
ಪರೀಕ್ಷಾ ಅವಧಿ | 2 ದಿನಗಳ ಕಾಲ |
ದಿನಾಂಕ | ಫೆಬ್ರುವರಿ 4, 5 , 11 ಮತ್ತು 12 |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
GATE 2023 ಪರೀಕ್ಷಾ ದಿನಾಂಕ
GATE ಪರೀಕ್ಷೆವೇಳಾಪಟ್ಟಿಫೆಬ್ರವರಿ 4, 2023ರಂದು ಬೆಳಿಗ್ಗೆ ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ CS ಮಧ್ಯಾಹ್ನದ ಅವಧಿಯಲ್ಲಿ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ - AR, ಮೆಕ್ಯಾನಿಕಲ್ ಇಂಜಿನಿಯರಿಂಗ್ - ME
ಫೆಬ್ರವರಿ 5, 2023 ಬೆಳಗ್ಗಿನ ಅವಧಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ - ಇಇ, ಎನ್ವಿರಾನ್ಮೆಂಟಲ್ ಸೈನ್ಸ್ ಮತ್ತು ಇಂಜಿನಿಯರಿಂಗ್ - ES, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸಸ್ - XH ಮಧ್ಯಾಹ್ನದ ಅವಧಿ ಬಯೋಮೆಡಿಕಲ್ ಇಂಜಿನಿಯರಿಂಗ್ - BM, ಕೆಮಿಸ್ಟ್ರಿ - CY, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ - EC.
ಫೆಬ್ರವರಿ 11, 2023
ಮುಂಜಾನೆ ಭೂವಿಜ್ಞಾನ ಮತ್ತು ಭೂ ಭೌತಶಾಸ್ತ್ರ - GG, ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ - IN, ಗಣಿತ - MA, ಪೆಟ್ರೋಲಿಯಂ ಎಂಜಿನಿಯರಿಂಗ್ - PE, ಎಂಜಿನಿಯರಿಂಗ್ ವಿಜ್ಞಾನ - XE, ಲೈಫ್ ಸೈನ್ಸಸ್ - XLಮಧ್ಯಾಹ್ನ ಶಿಫ್ಟ್ ಏರೋಸ್ಪೇಸ್ ಎಂಜಿನಿಯರಿಂಗ್ - ಎಇ, ಅಗ್ರಿಕಲ್ಚರ್ ಎಂಜಿನಿಯರಿಂಗ್ - ಎಇ, ಬಯೋಟೆಕ್ನಾಲಜಿ - ಬಿಟಿ, ಕೆಮಿಕಲ್ ಎಂಜಿನಿಯರಿಂಗ್ - ಸಿಎಚ್, ಇಕಾಲಜಿ ಮತ್ತು ಎವಲ್ಯೂಷನ್ - ಇವೈ, ಜಿಯೋಮ್ಯಾಟಿಕ್ಸ್ ಎಂಜಿನಿಯರಿಂಗ್ - ಜಿಇ, ಮೆಟಲರ್ಜಿಕಲ್ ಎಂಜಿನಿಯರಿಂಗ್ - ಎಂಟಿ, ನೇವಲ್ ಆರ್ಕಿಟೆಕ್ಚರ್ ಮತ್ತು ಮೆರೈನ್ ಎಂಜಿನಿಯರಿಂಗ್ - ಎನ್ಎಂ, ಭೌತಶಾಸ್ತ್ರ - ಇಂಡಸ್ಟ್ರಕ್ಷನ್ ಎಂಜಿನಿಯರಿಂಗ್ - PI, ಟೆಕ್ಸ್ಟೈಲ್ ಎಂಜಿನಿಯರಿಂಗ್ ಮತ್ತು ಫೈಬರ್ ಸೈನ್ಸ್ - TF
ಇದನ್ನೂ ಓದಿ: ಪಾಠ ಮಾಡುವ ಶಿಕ್ಷಕರಿಗೂ ಬೇಕು ಈ ವಿಷಯಗಳ ಮೇಲೆ ಗಮನ
ಫೆಬ್ರವರಿ 12, 2023
ಮುಂಜಾನೆ ಸಿವಿಲ್ ಇಂಜಿನಿಯರಿಂಗ್ ಸೆಟ್ 1 - CE1, ಅಂಕಿಅಂಶಗಳು - STಮಧ್ಯಾಹ್ನ ಶಿಫ್ಟ್ ಸಿವಿಲ್ ಇಂಜಿನಿಯರಿಂಗ್ ಸೆಟ್ 2 - CE2, ಮೈನಿಂಗ್ ಇಂಜಿನಿಯರಿಂಗ್ - MNIIT ಕಾನ್ಪುರ್ ಬಿಡಿಗಡೆ ಮಾಡಿದೆ.
ಜನವರಿ 3, 2023 ರಿಂದ GATE 2023 ಪ್ರವೇಶ ಕಾರ್ಡ್ ಅನ್ನು ಬಿಡುಗಡೆ ಮಾಡಲಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ತಿಳಿಸುವ ಸಮಯ ಮತ್ತು ಇತರ GATE ಪರೀಕ್ಷೆಯ ವಿವರಗಳನ್ನು ತಮ್ಮ ಪ್ರವೇಶ ಕಾರ್ಡ್ಗಳಲ್ಲಿ ಪಡೆಯಬಹುದು.
ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕಾಗಿ GATE ಪರೀಕ್ಷೆಯನ್ನು ನಡೆಸಲಾಗುತ್ತದೆ ಐಐಟಿ ಬಾಂಬೆ, IIT ದೆಹಲಿ, IIT ಗುವಾಹಟಿ, IIT ಕಾನ್ಪುರ್, IIT ಖರಗ್ಪುರ, IIT ಮದ್ರಾಸ್, IIT ರೂರ್ಕಿ ಮತ್ತುIISc ಬೆಂಗಳೂರು ಮತ್ತು PSUಗಳ ಅಡಿಯಲ್ಲಿ ನೇಮಕಾತಿಗಾಗಿ ಫೆಬ್ರವರಿಯಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆಯು ನಡೆಯಲಿದೆ ಎಂದು ತಿಳಿದು ಬಂದಿದೆ. ನಿಮ್ಮ ಅರ್ಜಿಯನ್ನು ಸರಿಪಡಿಸಲು ನೀವು ಇಚ್ಚಿಸಿದರೆ ಈ ಹಿಂದೆ ನಿಮಗೆ ಅವಕಾಶ ಕಲ್ಪಸಲಾಗಿತ್ತು. ಇನ್ನೂ ಹೆಚ್ಚನ ಮಾಹಿತಿಗಾಗಿ ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ