• ಹೋಂ
  • »
  • ನ್ಯೂಸ್
  • »
  • Jobs
  • »
  • GATE 2023 ಕೀ ಆನ್ಸರ್​​ ನವೀಕರಣ ದಿನಾಂಕ ಪ್ರಕಟ; ಇಲ್ಲಿ ಪರಿಶೀಲಿಸಿ

GATE 2023 ಕೀ ಆನ್ಸರ್​​ ನವೀಕರಣ ದಿನಾಂಕ ಪ್ರಕಟ; ಇಲ್ಲಿ ಪರಿಶೀಲಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಭ್ಯರ್ಥಿಗಳು ಎತ್ತಿರುವ ಪ್ರತಿ ಸವಾಲನ್ನು ಪರಿಗಣಿಸಿದ ನಂತರ ತಜ್ಞರ ತಂಡವು ಫಲಿತಾಂಶಗಳೊಂದಿಗೆ ಗೇಟ್ 2023 ಅಂತಿಮ ಕೀ ಆನ್ಸರ್​​ ಬಿಡುಗಡೆ ಮಾಡುತ್ತದೆ.

  • News18 Kannada
  • 2-MIN READ
  • Last Updated :
  • New Delhi, India
  • Share this:

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಕಾನ್ಪುರವು ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್) 2023 ರ ತಾತ್ಕಾಲಿಕ ಉತ್ತರ ಕೀಯನ್ನು ಫೆಬ್ರವರಿ 21, ಮಂಗಳವಾರ ಬಿಡುಗಡೆ (Release) ಮಾಡಲಾಗುತ್ತದೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ . ಕೀ ಉತ್ತರಗಳು (Key Answer) ಬಿಡುಗಡೆಯಾದ ನಂತರ ಅಭ್ಯರ್ಥಿಗಳು gate.iitk.ac.in ನಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ (Website) ಉತ್ತರದ ಕೀಲಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಆ ಕಾರಣದಿಂದ ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ (Information) ತಿಳಿದುಕೊಳ್ಳಬಹುದು. 


ಪ್ರವೇಶ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೀ ಆನ್ಸರ್​​ ಒಳಗೊಂಡಿರುತ್ತದೆ ಎಂಬುದನ್ನು ಅಭ್ಯರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಇದನ್ನು ಅನುಸರಿಸಿ ವಿದ್ಯಾರ್ಥಿಗಳು GATE 2023 ರಲ್ಲಿ ತಮ್ಮ ಒಟ್ಟಾರೆ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ. ತಮಗೆ ಎಷ್ಟು ಅಂಕ ಬಂದಿದೆ ಎಂಬ ಮಾಹಿತಿಯನ್ನೂ ಸಹ ಇದರಿಂದ ಅಂದಾಜು ಮಾಡಲು ಸಾಧ್ಯವಾಗುತ್ತದೆ.


GATE 2023 ಉತ್ತರದ ಕೀ ಬಿಡುಗಡೆ ದಿನಾಂಕ


GATE 2023 ಉತ್ತರದ ಕೀ ಬಿಡುಗಡೆಯಾದ ಒಂದು ದಿನದ ನಂತರ, IIT ಕಾನ್ಪುರ್ ಫೆಬ್ರವರಿ 22 ರಿಂದ 25 ರವರೆಗೆ ಆನ್‌ಲೈನ್ ಮೋಡ್‌ನಲ್ಲಿ ಆಕ್ಷೇಪಣೆ ಇದ್ದರೆ ಅದನ್ನು ತಿಳಿಸಲು ಪೋರ್ಟಲ್​​ ಓಪನ್​ ಇರುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಏನಾದರು ತೊಂದರೆ ಇದ್ದರೆ ಮೊದಲೇ ತಿಳಿಸಬಹುದು. ಕೀ ಆನ್ಸರ್​ ಸರಿ ಇಲ್ಲ ಎಂದು ಆಕ್ಷೇಪಣೆಗಳನ್ನು ಎತ್ತಲು, ವಿದ್ಯಾರ್ಥಿಗಳು ತಮ್ಮ ಲಾಗಿನ್ ವಿವರಗಳಾದ ದಾಖಲಾತಿ ಐಡಿಯನ್ನು ಬಳಸಬೇಕಾಗುತ್ತದೆ. ಗೇಟ್ ಆನ್‌ಲೈನ್ ಅಪ್ಲಿಕೇಶನ್ ಪ್ರೊಸೆಸಿಂಗ್ ಸಿಸ್ಟಮ್ (GOAPS) ನಲ್ಲಿ ಪಾಸ್‌ವರ್ಡ್ ನೀಡಬೇಕಾಗುತ್ತದೆ.


ಇದನ್ನೂ ಓದಿ: Puttur: ಹಿಂದೂ ವಿದ್ಯಾರ್ಥಿಗಳಿಗೆ ಇಸ್ಲಾಂ ಪ್ರವಚನ ಆರೋಪ; ಮುಖ್ಯೋಪಾಧ್ಯಾಯ, ಸಂಘಟಕರ ವಿರುದ್ಧ ಪ್ರಕರಣ ದಾಖಲು


ಅಭ್ಯರ್ಥಿಗಳು ಎತ್ತಿರುವ ಪ್ರತಿ ಸವಾಲನ್ನು ಪರಿಗಣಿಸಿದ ನಂತರ ತಜ್ಞರ ತಂಡವು ಫಲಿತಾಂಶಗಳೊಂದಿಗೆ ಗೇಟ್ 2023 ಅಂತಿಮ ಕೀ ಆನ್ಸರ್​​ ಬಿಡುಗಡೆ ಮಾಡುತ್ತದೆ. ವೇಳಾಪಟ್ಟಿಯ ಪ್ರಕಾರ, ಮಾರ್ಚ್ 16 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಮತ್ತು ಮಾರ್ಚ್ 21 ರಂದು ಅಭ್ಯರ್ಥಿಗಳಿಗೆ ಅಂಕಪಟ್ಟಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಫೆಬ್ರವರಿ 15 ರಂದು ರೆಸ್ಪಾನ್ಸ್​​ ಪೇಜ್​ ಓಪನ್​ ಆಗಿದೆ


ಫೆಬ್ರವರಿ 15 ರಂದು, ಐಐಟಿ ಕಾನ್ಪುರ್ ಗೇಟ್ 2023 ಪ್ರತಿಕ್ರಿಯೆ ಪೇಜ್​ ಬಿಡುಗಡೆ ಮಾಡಿದೆ. ಪ್ರತಿಕ್ರಿಯೆ ಹಾಳೆ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ. ಪರೀಕ್ಷೆಯಲ್ಲಿನ ಎಲ್ಲಾ ವಿಭಾಗಗಳಿಗೆ ಅಭ್ಯರ್ಥಿಗಳು ಗುರುತಿಸಿದ ಉತ್ತರಗಳನ್ನು ಇದು ಒಳಗೊಂಡಿದೆ ಪರೀಕ್ಷೆಯನ್ನು ಫೆಬ್ರವರಿ 4, 5, 11, ಮತ್ತು 12 ರಂದು ಐಐಟಿ ನಡೆಸಿತ್ತು ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ಧಾರೆ.




ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ


ಎಲ್ಲಾ 29 ಪತ್ರಿಕೆಗಳಿಗೆ ಗೇಟ್ ಕಟ್-ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗುತ್ತದೆ.  ಅವು ಎಲ್ಲಾ ವಿಷಯಗಳಿಗೆ ವಿಭಿನ್ನವಾಗಿರುತ್ತದೆ. ಗೇಟ್ ಕಟ್-ಆಫ್ ಅಂಕಗಳು ಪ್ರವೇಶ ಪರೀಕ್ಷೆಗೆ ಅರ್ಹತೆ ಪಡೆಯಲು ಅಭ್ಯರ್ಥಿಯು ಗಳಿಸಬೇಕಾದ ಕನಿಷ್ಠ ಅಂಕಗಳಾಗಿವೆ. ಕಟ್-ಆಫ್ ಪಟ್ಟಿಯನ್ನು PDF ಫೈಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಲಭ್ಯವಿರುವ ಒಟ್ಟು ಸೀಟುಗಳ ಸಂಖ್ಯೆ, ಅಭ್ಯರ್ಥಿಗಳು ಗಳಿಸಿದ ಅಂಕಗಳು ಮತ್ತು ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ಸಂಖ್ಯೆಯನ್ನು ಆಧರಿಸಿ ಕಟ್-ಆಫ್ ಸ್ಕೋರ್ ಅನ್ನು ನಿರ್ಧರಿಸಲಾಗುತ್ತದೆ. ಈ ವರ್ಷ, GATE ಗಾಗಿ ಎರಡು ರೀತಿಯ ಕಟ್-ಆಫ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ - ಒಂದು ಅರ್ಹತೆ ಮತ್ತೊಂದು ಪ್ರವೇಶ ಕಟ್-ಆಫ್.


ಹೆಚ್ಚಿನ ಅಂಕ ಗಳಿಸಿದರೆ ಕಟ್​ ಆಫ್​ನಿಂದಲೂ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಇನ್ನು ಕೆಲವೇ ಬೆರಳೆಣಿಕೆಯ ದಿನಗಳಲ್ಲಿ ನೀವು ಕೀ ಆನ್ಸರ್​ ಪಡೆಯಲಿದ್ದೀರಿ. ಉತ್ತಮ ಫಲಿತಾಂಶ ನಿಮ್ಮದಾಗಲಿ.

First published: