GATE 2023 Admit Card: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರವು ಇಂದು 2023ರ ಗೇಟ್(ಎಂಜಿನಿಯರಿಂಗ್ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್-GATE) (Graduate Aptitude Test In Engineering -GATE) ಪ್ರವೇಶ ಕಾರ್ಡ್ನ್ನು(Admit Card) ಬಿಡುಗಡೆ ಮಾಡಲಿದೆ. ಹೀಗಾಗಿ ಫೆಬ್ರವರಿ 4, 5, 11 ಮತ್ತು 12ರಂದು ಗೇಟ್ 2023 ರ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ನ್ನು(Hall Ticket) ಡೌನ್ಲೋಡ್ ಮಾಡಿಕೊಳ್ಳಿ.
ಅಧಿಕೃತ ವೆಬ್ಸೈಟ್ gate.iitk.ac.in ಗೆ ಭೇಟಿ ನೀಡುವ ಮೂಲಕ ತಮ್ಮ ಅಡ್ಮಿಟ್ ಕಾರ್ಡ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು, ಅಭ್ಯರ್ಥಿಗಳು ದಾಖಲಾತಿ ಐಡಿ & ಪಾಸ್ವರ್ಡ್ನ್ನು ಹಾಕಬೇಕು.
GATE 2023 ಪರೀಕ್ಷೆ ಫೆಬ್ರವರಿ 4, 5, 11 ಮತ್ತು 12, 2023 ರಂದು ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿಯ ಪ್ರಕಾರ, ಅಭ್ಯರ್ಥಿಗಳ ಪ್ರತಿಕ್ರಿಯೆಗಳನ್ನು ಫೆಬ್ರವರಿ 15 ರಂದು ಸ್ವೀಕರಿಸಲಾಗುತ್ತದೆ. ಆನ್ಸರ್ ಕೀಗಳನ್ನು ಫೆಬ್ರವರಿ 21 ರಂದು ಬಿಡುಗಡೆ ಮಾಡಲಾಗುತ್ತದೆ. ಪ್ರಿಲಿಮಿನರಿ ಆನ್ಸರ್ ಕೀಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದರೆ, ಅದಕ್ಕಾಗಿ ಫೆಬ್ರವರಿ 22 ರಿಂದ 25 ರ ನಡುವೆ ಸಮಯ ನೀಡಲಾಗುತ್ತದೆ. GATE 2023 ರ ಫಲಿತಾಂಶ ಮಾರ್ಚ್ 16, 2023ರಂದು ಪ್ರಕಟವಾಗಲಿದೆ.
GATE 2023 Admit Card: ಡೌನ್ಲೋಡ್ ಮಾಡಿಕೊಳ್ಳಲು ಈ ಹಂತಗಳನ್ನು ಪಾಲಿಸಿ.
ಹಂತ 1: ಮೊದಲು GATE ಅಧಿಕೃತ ವೆಬ್ಸೈಟ್ gate.iitk.ac.in ಗೆ ಭೇಟಿ ನೀಡಿ.
ಹಂತ 2: ಬಳಿಕ ಹೋಂ ಪೇಜ್ನಲ್ಲಿ ಕಾಣಸಿಗುವ GATE 2023 Admit Card ಲಿಂಕ್ನ್ನು ಓಪನ್ ಮಾಡಿ.
ಹಂತ 3: ನಂತರ ನಿಮ್ಮ ಲಾಗಿನ್ ಡೀಟೇಲ್ಸ್ನ್ನು ಹಾಕಿ, ಸಬ್ಮಿಟ್ ಕೊಡಿ.
ಹಂತ 4: ಆಗ ಸ್ಕ್ರೀನ್ ಮೇಲೆ ನಿಮ್ಮ ಹಾಲ್ ಟಿಕೆಟ್ ಬರುತ್ತದೆ. ಬಳಿಕ ಡೌನ್ಲೋಡ್ ಮಾಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ