• Home
  • »
  • News
  • »
  • jobs
  • »
  • Gangubai Hangal University: ವಿವಿಧ ಕೋರ್ಸ್​ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ

Gangubai Hangal University: ವಿವಿಧ ಕೋರ್ಸ್​ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ

ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ

ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ಸ್ನಾತಕೋತ್ತರ, ಡಿಪ್ಲೋಮಾ,  ಸರ್ಟಿಫಿಕೇಟ್ ಹಾಗೂ ಡಿ.ಲಿಟ್ ಕೋರ್ಸ್​ಗಳ ಪ್ರವೇಶಾತಿ ಆರಂಭ.

  • News18 Kannada
  • Last Updated :
  • Karnataka, India
  • Share this:

ಉನ್ನತ ಶಿಕ್ಷಣ (Education) ಪಡೆಯಲು ಬಯಸುವ ವಿದ್ಯಾರ್ಥಿಗಳು ಈಗ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ( (Dr. Gangubai Hangal University) ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಲು ಆಸಕ್ತರಾಗಿದ್ದಲ್ಲಿ  ಅರ್ಜಿ ಪ್ರಕ್ರಿಯೆ ಆರಂಭವಾಗಿದೆ (Started). ಅಷ್ಟೇ ಅಲ್ಲ ವಿಷೇಶವಾಗಿ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ (Students) ವಿದ್ಯಾಭ್ಯಾಸಕ್ಕೆ ಈ ವಿಶ್ವ ವಿದ್ಯಾಲಯ ಒಂದು ಉತ್ತಮ ಆಯ್ಕೆಯಾಗಲಿದೆ. 


ಕರ್ನಾಟಕ ದಿಂದ 2022-23ನೆ ಸಾಲಿನ ಬಿ.ಪಿ.ಎ, ಎಂ.ಪಿ.ಎ, ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ, ಪಿ.ಜಿ.ಡಿಪ್ಲೋಮಾ ಹಾಗೂ ಡಿ.ಲಿಟ್ ಕೋರ್ಸ್‍ಗಳಿಗೆ ಪ್ರವೇಶಾತಿಗಳು ಪ್ರಾರಂಭವಾಗಿವೆ. ಬಿ.ಪಿ.ಎ ಹಾನರ್ಸ್ ನಾಲ್ಕು ವರ್ಷಗಳ ಕೋರ್ಸ್‍ನ್ನು ಹೊಸ ಶಿಕ್ಷಣ ನೀತಿ ಮಾದರಿಯದಾಗಿದ್ದು, ನಾಟಕ, ಭರತನಾಟ್ಯ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಕನಾಟಕ ಶಾಸ್ತ್ರೀಯ ಸಂಗೀತ, ತಬಲಾ, ಮೃದಂಗ, ವೀಣಾ, ಪಿಟೀಲು, ಭಾಷಾ ಪತ್ರಿಕೆಗೆ ಪ್ರವೇಶ ಪಡೆಯಲು ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ನೀವು ತೆರ್ಗಡೆ ಹೊಂದಿರಬೇಕು.


ಕಲಾಸಕ್ತರಿಗೆಂದೇ ಹೇಳಿ ಮಾಡಿಸಿದ ವಿಶ್ವವಿದ್ಯಾಲಯ
ನಿಮಗೆ ಕಲೆ, ಸಂಗೀತ ಮತ್ತು ನೃತ್ಯ ಕ್ಷೇದ್ರಲ್ಲಿ ಆಕಸ್ತಿ ಇದ್ದರೆ ಖಂಡಿತ ನೀವು ಕೂಡಲೆ ಅರ್ಜಿ ಸಲ್ಲಿಸಿ ಸೀಟ್​ ನಿಮ್ಮದಾಗಿಸಿಕೊಳ್ಳಿ.


ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್: ಭಕ್ತಿ ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ, ರಂಗ ಸಂಗೀತ, ಭರತನಾಟ್ಯ, ನಾಟಕ, ಹಾರ್ಮೊನಿಯಂ, ತಬಲ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಯಕ್ಷಗಾನ, ಗಮಕ, ಸಿತಾರ, ಒಡಿಸ್ಸಿ ಕೋರ್ಸ್‍ಗಳನ್ನು ಕಲಿಸಲಾಗುತ್ತದೆ.
ಪ್ರತಿ ದಿನ ಸಂಜೆ 5.30 ಗಂಟೆಯಿಂದ 8.30 ಗಂಟೆಯವರೆಗೆ ಈ ಕೋರ್ಸ್​ನ ಅವಧಿ ಇರುತ್ತದೆ. ಒಂದು ವರ್ಷದ ಡಿಪ್ಲೋಮಾ ಕೋರ್ಸ್ – ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ ಪ್ರವೇಶಕ್ಕೆ ಪಿ.ಯು.ಸಿಯಲ್ಲಿ ತೇರ್ಗಡೆ ಹೊಂದಿರಬೇಕು.


ಇದನ್ನೂ ಓದಿ: ಎಂಜಿನಿಯರಿಂಗ್ ಆಗಿದ್ರೆ ಇಲ್ಲಿದೆ ಬಂಪರ್ ಸರ್ಕಾರಿ ಉದ್ಯೋಗ- ನೇರ ಸಂದರ್ಶನ ಮಾತ್ರ


ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸ್: ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ ಪ್ರವೇಶಕ್ಕೆ ಯಾವುದೇ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಈ ಎಲ್ಲಾ ಕೋರ್ಸ್‍ಗಳ ಪ್ರವೇಶಕ್ಕೆ  200ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ.


ಆನ್​ಲೈನ್​ನಲ್ಲಿ ಈ ಕುರಿತು ಮಾಹಿತಿ
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ಸ್ನಾತಕೋತ್ತರ, ಡಿಪ್ಲೋಮಾ,  ಸರ್ಟಿಫಿಕೇಟ್ ಹಾಗೂ ಡಿ.ಲಿಟ್ ಕೋರ್ಸ್​ಗಳ ಪ್ರವೇಶಾತಿಯನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಮನಿರ್ವಾಹಕ ವ್ಯವಸ್ಥೆ ಪೊರ್ಟಲ್ ಮೂಲಕ ಮಾಡಲಾಗುವುದು.


ಉತ್ತಮ ಗ್ರಂಥಾಲಯ ಹಾಗೂ ಇನ್ನಿತರ ಸೌಕರ್ಯ ಒಳಗೊಂಡಿರುವ ಈ ವಿಶ್ವವಿದ್ಯಾಲಯದಲ್ಲಿ ನೀವೂ ಸಹ ಕಲಿಯಬಹುದು ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವೂ ಅಪ್ಲೈ ಮಾಡಿ. ಅಷ್ಟೇ ಅಲ್ಲ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಅಪ್ಲೈ ಮಾಡಿ.


ಸಂಪರ್ಕ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಅಧಿಕೇತ ವೆಬ್​ಸೈಟ್​ಗೆ ಭೇಟಿ ನೀಡಿ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಇ-ಮೇಲ್ ವಿಳಾಸ ಅಥವಾ registrar@ musicuniversity.ac.in ಮೂಲಕ ರಿಜಿಸ್ಟರ್​ ಮಾಡಿಕೊಳ್ಳಿ.
ಅಥವಾ ದೂರವಾಣಿ ಸಂಖ್ಯೆಗೆ ಕರೆಮಾಡಿ - 0821-2402141,
ಮೊಬೈಲ್ ದೂರವಾಣಿ ಸಂಖ್ಯೆ - 9880761877ಗೆ ಕರೆ ಮಾಡಿ.


ವಿಳಾಸ: 
ರಿಜಿಸ್ಟ್ರಾರ್ (ಆಡಳಿತ)
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು
ಇಮೇಲ್: registrar@musicuniversity.ac.in
ದೂರವಾಣಿ: 9880761877

First published: