• Home
  • »
  • News
  • »
  • jobs
  • »
  • Shuchi Scheme: ಹೆಣ್ಣು ಮಕ್ಕಳಲ್ಲಿ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ, ಮತ್ತೆ ಆರಂಭವಾಗಬೇಕಿದೆ ಶುಚಿ ಯೋಜನೆ!

Shuchi Scheme: ಹೆಣ್ಣು ಮಕ್ಕಳಲ್ಲಿ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ, ಮತ್ತೆ ಆರಂಭವಾಗಬೇಕಿದೆ ಶುಚಿ ಯೋಜನೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸರ್ಕಾರ ಕೂಡಲೇ ಶುಚಿ ಯೋಜನೆ ಜಾರಿಗೆ ತರುವಂತೆ ಪ್ರೌಢಾವಸ್ಥೆಯಲ್ಲಿರುವ ಶಾಲಾ ಮಕ್ಕಳ ಒತ್ತಾಯ ಮಾಡುತ್ತಿದ್ದಾರೆ. ಪಿರಿಯಡ್ಸ್​ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಆಗದೆ ಪರದಾಡುತ್ತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಗದಗ: ರಾಜ್ಯದ ವಿವಿಧ ಶಾಲೆಗಳಲ್ಲಿ (School) ಹೆಣ್ಣು ಮಕ್ಕಳ ಆರೋಗ್ಯದ (Heath) ಕುರಿತು ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಏಕೆಂದರೆ ಹಲವಾರು ಹೆಣ್ಣು ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ  ತುತ್ತಾಗುತ್ತಿದ್ದಾರೆ. "ಶುಚಿ ಯೋಜನೆ" (Shuchi Scheme) ಸ್ಥಗಿತಗೊಂಡು ಶುಚಿತ್ವ ಕಾಪಾಡಿಕೊಳ್ಳಲಾಗದೆ ಹೆಣ್ಣು ಮಕ್ಕಳು ಪರದಾಡುವಂತಾಗಿದೆ. ರಾಜ್ಯಾದ್ಯಂತ "ಶುಚಿ ಯೋಜನೆ" ಸ್ಥಗಿತ 36 ಲಕ್ಷ ಫಲಾನುಭವಿಗಳಿದ್ದರು (Beneficent) ಈ ಯೋಜನೆ ನಿಂತು ಹೋಗಿರುವುದರಿಂದ ತೊಂದರೆ ಉಂಟಾಗುತ್ತಿದೆ.


ಕೇಂದ್ರ ಸರ್ಕಾರ 2014-15 ರಲ್ಲಿ ಜಾರಿಗೆ ತಂದ "ಶುಚಿ ಯೋಜನೆ" ಪ್ರೌಢಶಾಲೆ, ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ ಕಿನ್ ನೀಡುವ ಯೋಜನೆಯಾಗಿದ್ದು ಇದರಿಂದ ಹಲವಾರು ಪ್ರಯೋಜನ ಪಡೆದುಕೊಂಡಿದ್ದರು. ಕೊವೀಡ್ ನಂತರ ಈ ಯೋಜನೆ ಸ್ಥಗಿತವಾಗಿದೆ.


ಯೋಜನೆ ಮತ್ತೆ ಜಾರಿಯಾಗಲಿ


ಗ್ರಾಮೀಣ ಭಾಗದ ಪ್ರೌಢಾವಸ್ಥೆ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್ ಸಿಗುತ್ತಿಲ್ಲ ಆದ್ದರಿಂದ ಆರೋಗ್ಯ ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಹೆಚ್ಚುತ್ತಿದೆ. ಈ ಯೋಜನೆ ತುಂಬಾ ಸಹಕಾರಿಯಾಗಿತ್ತು ಅಷ್ಟೇ ಅಲ್ಲ ಎಷ್ಟೋ ಜನರಿಗೆ ಇದೊಂದು ಆರ್ಥಿಕ ನೆರವಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಬಂದಾದ ಯೋಜನೆ ಮತ್ತೆ ಜಾರಿಯಾಗಲಿ ಎಂದು ಒತ್ತಾಯ ಮಾಡಲಾಗುತ್ತಿದೆ.


60 ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳು


ಗದಗ ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳು ಪ್ರೌಢಾವಸ್ಥೆಯಲ್ಲಿದ್ದಾರೆ ಅದರೆ ಎಷ್ಟೋ ಜನರಿಗೆ ಸ್ಯಾನಿಟರಿ ನ್ಯಾಪ್​ಕಿನ್​ ಸಿಗುತ್ತಿಲ್ಲ. ಸರ್ಕಾರದ ಯೋಜನೆ ಅಡಿಯಲ್ಲಿ ಈ ಸೌಕರ್ಯ ಸಿಗುತ್ತಿದ್ದಾಗ ತುಂಬಾ ಪ್ರಯೋಜನವಾಗುತ್ತಿತ್ತು ಆದರೆ ಈಗ ಅದು ಸ್ಥಗಿತವಾಗಿದೆ.


ಇದನ್ನೂ ಓದಿ: ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮ ಜ್ಯೋತಿಬಾ ಫುಲೆ ಕೊಡುಗೆ, ಸುಧಾರಣೆಗಳೇನು?


ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳು ತುಂಬಾ ಜನ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ನ್ಯಾಪ್ ಕಿನ್ ಅತ್ಯ ಅವಶ್ಯಕವಾಗಿದೆ. ಶುಚಿತ್ವ ಕಾಪಾಡಿಕೊಳ್ಳಲು ಅತೀ ಹೆಚ್ಚು ಸಹಕಾರಿಯಾಗಿದ್ದ ನ್ಯಾಪ್​ಕಿನ್​ ಈಗ ಲಭ್ಯವಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಸರ್ಕಾರ "ಶುಚಿ ಯೋಜ‌ನೆ" ಸ್ಥಗಿತ ಮಾಡಿರುವುದು ತುಂಬಾ ಪರಿಣಾಮ ಬೀರುತ್ತಿದೆ.


ಯೋಜನೆ ಮತ್ತೆ ಆರಂಭಿಸುವಂತೆ ಒತ್ತಾಯ


ಸರ್ಕಾರ ಕೂಡಲೇ ಶುಚಿ ಯೋಜನೆ ಜಾರಿಗೆ ತರುವಂತೆ ಪ್ರೌಢಾವಸ್ಥೆಯಲ್ಲಿರುವ ಶಾಲಾ ಮಕ್ಕಳ ಒತ್ತಾಯ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಬಡ ಹೆಣ್ಣು ಮಕ್ಕಳಿಗೆ ನ್ಯಾಪ್ ಕಿನ್ ಖರೀದಿ ಮಾಡಲು ಆಗುತ್ತಿಲ್ಲ. ಪಿರಿಯಡ್ಸ್​ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಆಗದೆ ಪರದಾಡುತ್ತಿದ್ದಾರೆ. ಪಿರಿಯಡ್​ ಸಮಯದಲ್ಲಿ ಶಾಲೆ ಬಿಟ್ಟು ಮೂರು ದಿನ ಮನೆಯಲ್ಲಿರ ಬೇಕಾದ ಸಂದರ್ಭ ಎದುರಾಗಿದೆ. ಹೀಗಾಗಿ ನ್ಯಾಪ್ ಕಿನ್ ಯೋಜನೆ ಮತ್ತೆ ಆರಂಭಿಸುವಂತೆ ಒತ್ತಾಯಮಾಡುತ್ತಿದ್ದಾರೆ.


ಆರೋಗ್ಯ ಇಲಾಖೆ RCH ಅಧಿಕಾರಿ ಡಾ.ಬಿ.ಎಮ್ ಗೋಜನೂರ ಅವರನ್ನ ಕೇಳಿದಾಗ ಗದಗ ಜಿಲ್ಲೆ ಶುಚಿ ಯೋಜನೆ 2014-15 ರಿಂದ ಆರಂಭವಾಗಿದೆ. ಶಾಲಾ-ಕಾಲೇಜು ಹಾಗೂ ಹಾಸ್ಟೆಲ್ ಮಕ್ಕಳಿಗೆ ಉಚಿತವಾಗಿ ಶುಚಿ ಪ್ಯಾಡ್ ಗಳನ್ನು ನೀಡಲಾಗುತ್ತಿತ್ತು. ಆರೋಗ್ಯ ಇಲಾಖೆಯಿಂದ ಶುಚಿ ಪ್ಯಾಡ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಗದಗ ಜಿಲ್ಲೆಯಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಫಲಾನುಭವಿಗಳಿದ್ದಾರೆ ಎಂದಿದ್ದಾರೆ.


ಸ್ವಚ್ಚತೆ ಬಗ್ಗೆ ಜಾಗೃತಿ


2015-16 ರಲ್ಲಿ 1 ಲಕ್ಷಕ್ಕೂ ಅಧಿಕ ಪ್ಯಾಡ್ ಗಳನ್ನು ವಿತರಣೆ ಮಾಡಲಾಗಿತ್ತು. 2016-17 ರಲ್ಲಿ 2 ಲಕ್ಷ ಪ್ಯಾಡ್ ಗಳನ್ನು ವಿತರಣೆ ಮಾಡಲಾಗಿತ್ತು. 2017-18 ರಲ್ಲಿ 1 ಲಕ್ಷ 90 ಸಾವಿರ ಪ್ಯಾಡ್ ಗಳನ್ನು ವಿತರಣೆ. ಆರೋಗ್ಯ ಇಲಾಖೆಯಿಂದ ಕೊವೀಡ್ ಲಾಕ್ ಡೌನ್ ಸಮಯದಲ್ಲಿ ಮನೆ ಮನೆಗಳಿಗೆ ತೆರಳಿ ಪ್ಯಾಡ್ ಗಳನ್ನು ವಿತರಣೆ ಮಾಡಲಾಗಿತ್ತು. ಪ್ಯಾಡ್ ನೀಡುವುದರ ಜೊತೆಗೆ ವೈಯಕ್ತಿಕ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಶುಚಿ ಪ್ಯಾಡ್ ಗಳಿಗೆ ಬೇಡಿಕೆ ಇದೆ. ಶಾಲಾ ಕಾಲೇಜುಗಳಿಂದ ಕೇಳುತ್ತಿದ್ದಾರೆ. ಈ ವಿಷಯವನ್ನು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.


ಸ್ರ್ತೀ ರೋಗ ತಜ್ಞ ಅಮೃತ ಪಾಟೀಲ್ ಮಾತು


ನ್ಯಾಪ್ ಕಿನ್ ಬಳಕೆಯ ಬಗ್ಗೆ ಸ್ರ್ತೀ ರೋಗ ತಜ್ಞ ಅಮೃತ ಪಾಟೀಲ್ ಅವರು ಹೇಳಿರುವ ಪ್ರಕಾರ ಪಿರಿಯಡ್ಸ್​ ಸಮಯದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಬಟ್ಟೆಯನ್ನು ಉಪಯೋಗಿಸುತ್ತಾರೆ. ಬಟ್ಟೆಯನ್ನು ಉಪಯೋಗ ಮಾಡುವುದು ಸುರಕ್ಷಿತವಲ್ಲ. ಬಟ್ಟೆಯಿಂದ ಶುಚಿತ್ವ ಕಾಪಾಡಿಕೊಳ್ಳಲು ಆಗೋದಿಲ್ಲ. ಚರ್ಮ ರೋಗ, ಯೂರಿನ್ ಇನ್ಪಪೆಕ್ಷನ್, ಕ್ಯಾನ್ಸರ್ ಡಿಸಿಜ್, ಬಂಜತನ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು