• Home
  • »
  • News
  • »
  • jobs
  • »
  • Designing Course: ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಡಿಸೈನಿಂಗ್​ ಕೋರ್ಸ್​ ಸೇರ್ಪಡೆಗೆ ಚಿಂತನೆ

Designing Course: ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಡಿಸೈನಿಂಗ್​ ಕೋರ್ಸ್​ ಸೇರ್ಪಡೆಗೆ ಚಿಂತನೆ

ಇನ್ನೋವೇಶನ್ ಎಕ್ಸ್ಪೀರಿಯನ್ಸ್ ಸೆಂಟರ್​ನಲ್ಲಿ  ಮುಖ್ಯಮಂತ್ರಿಗಳು

ಇನ್ನೋವೇಶನ್ ಎಕ್ಸ್ಪೀರಿಯನ್ಸ್ ಸೆಂಟರ್​ನಲ್ಲಿ ಮುಖ್ಯಮಂತ್ರಿಗಳು

ಮೊದಲ ದಿನ ಫ್ಯೂಚರ್ ಡಿಸೈನ್ ಫೆಸ್ಟಿವಲ್​ ಪ್ರಮುಖವಾಗಿ ಗಮನ ಸೆಳೆದಿತ್ತು. ಡಿಸೆಂಬರ್​ 8 ರಿಂದ 10ರ ವರೆಗೆ ಫ್ಯೂಚರ್ ಡಿಸೈನ್ ಫೆಸ್ಟಿವಲ್ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಆರ್ಟ್​ನಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಈ ವಿಷಯಕ್ಕೆ ಸಂಬಂಧಿಸಿದ ಕೋರ್ಸ್​ ಮಾಡಿದರೆ ಖಂಡಿತ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲೇ ಕೆಲಸ ಸಿಗುವ ಅವಕಾಶ ಹೆಚ್ಚಿದೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸಹ ಕೌಶಲ್ಯಗಳನ್ನು (Skill) ಹೊಂದಿರಬೇಕು. ಆ ಕೌಶಲ್ಯಗಳೇ ಮುಂದೆ ವಿದ್ಯಾರ್ಥಿಗಳ ವೃತ್ತಿ (Career) ಜೀವನವನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಐಟಿ ಬಿಟಿ ಸಚಿವ ಡಾ ಅಶ್ವಥ್ ನಾರಾಯಣ (Ashwath Narayan) ತಿಳಿಸಿದರು. ಬೆಂಗಳೂರು ಡಿಸೈನ್ ಫೆಸ್ಟಿವಲ್ ಮತ್ತು ಬೆಂಗಳೂರು ವಿನ್ಯಾಸ ಸಪ್ತಾಹದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಶೃಂಗಸಭೆಯನ್ನು ಉದ್ಘಾಟಿಸಿದರು.


ಇದರಲ್ಲಿ ಜಗತ್ತಿನಾದ್ಯಂತದ 300ಕ್ಕೂ ಹೆಚ್ಚು ಡಿಸೈನ್ ಪರಿಣತರು ಮಾತನಾಡಲಿದ್ದು, 3,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ ವರ್ಲ್ಡ್‌ ಡಿಸೈನ್ ಆರ್ಗನೈಸೇಶನ್, ವರ್ಲ್ಡ್ ಡಿಸೈನ್ ಕೌನ್ಸಿಲ್‌, ಬೆಂಗಳೂರು ಡಿಸೈನ್ ಫೆಸ್ಟಿವಲ್ ಮತ್ತು ಬೆಂಗಳೂರು ಡಿಸೈನ್ ಸಪ್ತಾಹದ ಪ್ರತಿನಿಧಿಗಳು ಸಕ್ರಿಯವಾಗಿ ತೊಡಗಿಸಿ ಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.


'ಇನ್ನೋವೇಶನ್ ಎಕ್ಸ್ಪೀರಿಯನ್ಸ್ ಸೆಂಟರ್
ನಗರದ ಎನ್ ಜಿಇಎಫ್ ಕಾರ್ಖಾನೆ ಜಾಗದಲ್ಲಿ ತಲೆ ಎತ್ತುತ್ತಿರುವ ವೃಕ್ಷೋದ್ಯಾನದ ಆವರಣದಲ್ಲಿ 'ಇನ್ನೋವೇಶನ್ ಎಕ್ಸ್ಪೀರಿಯನ್ಸ್ ಸೆಂಟರ್' ಕೂಡ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ. ಇಲ್ಲಿ ಹಲವಾರು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಕೂಡ ಇದೆ.


ಇದನ್ನೂ ಓದಿ: December Holiday List: ಡಿಸೆಂಬರ್​ ತಿಂಗಳಲ್ಲಿ ಎಷ್ಟು ದಿನ ಶಾಲೆಗೆ ರಜೆ? ಇಲ್ಲಿದೆ ಲಿಸ್ಟ್


ಜೈನ್ ಸ್ಕೂಲ್ ಆಫ್ ಡಿಸೈನ್‌ನ ನಿರ್ದೇಶಕ ರಾಜಶೇಖರ್ ನಾರಾಯಣ್ ಮಾತನಾಡಿ, ವಿಶ್ವದಾದ್ಯಂತದ ಸೃಜನಶೀಲ ಮನಸ್ಸುಗಳೆಲ್ಲ ಕೂಡಿ ಈ ಕೂಟವನ್ನು ಆಯೋಜಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಬೆಂಬಲಿಸಲು ಖುಷಿ ಪಡುತ್ತೇವೆ ಎಂದು ಹೇಳಿದರು.


ವಿದ್ಯಾರ್ಥಿಗಳ ಪಠ್ಯ ಕ್ರಮದಲ್ಲಿ ಡಿಸೈನಿಂಗ್​ ಪಾಠ
ಇದರ ನಡುವೆಯೇ ವಿದ್ಯಾರ್ಥಿಗಳ ಪಠ್ಯ ಕ್ರಮದಲ್ಲಿ ಜೈನ್ ಸ್ಕೂಲ್ ಆಫ್ ಡಿಸೈನ್ ಅನ್ನು ಅಭಿನಂದಿಸುತ್ತಾ. ನಮ್ಮ ಸರ್ಕಾರವು NEP ಮೂಲಕ ವಿದ್ಯಾರ್ಥಿಯ ಸೃಜನಶೀಲತೆಯನ್ನು ಹೆಚ್ಚಿಸಲು ವಿನ್ಯಾಸ ಚಿಂತನೆಯನ್ನು ಉತ್ತೇಜಿಸುತ್ತಿದೆ. ಈ ರೀತಿಯ ಈವೆಂಟ್‌ಗಳು, ಜಾಗತಿಕ ಮತ್ತು ಭಾರತೀಯ ವಿನ್ಯಾಸದ ಹಲವಾರು ದಿಗ್ಗಜರ ಸಹಯೋಗದೊಂದಿಗೆ ನಡೆಯುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳೂ ಸಹ ಹೊಂದಬೇಕು. ಇದರಿಂದ ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲೂ ಸಹ ಉತ್ತಮ ಪ್ರಯೋಜನವಾಗುತ್ತದೆ ಎಂದು ಐಟಿ ಬಿಟಿ ಸಚಿವ ಡಾ ಅಶ್ವಥ್ ನಾರಾಯಣ ಹೇಳಿದರು.


ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಭಾರತದಲ್ಲಿ ವಿನ್ಯಾಸ ಸಂಸ್ಕೃತಿಯನ್ನು ಉತ್ತೇಜಿಸಲು ನಾವು ಯುಕೆ ವಿನ್ಯಾಸ ಸಂಸ್ಥೆಗಳೊಂದಿಗೆ ಭೇಟಿಯಾಗಿ ಮಾತನಾಡುತ್ತಿದ್ದೇವೆ. ಇದು ರಾಜ್ಯಕ್ಕೆ ಭರವಸೆಯ ಪ್ರಯಾಣವಾಗಿದ್ದು, ವಿನ್ಯಾಸದಲ್ಲಿ ಉತ್ತಮ ಸಾಧನೆ ಮಾಡಲು ಮುಂದೆ ಉತ್ತಮ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡರೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದಾಗಿ ಉಲ್ಲೇಕಿಸಲಾಗಿದೆ.


ಡಿಸೆಂಬರ್​ 8 ರಿಂದ 10ರ ವರೆಗೆ ಫ್ಯೂಚರ್ ಡಿಸೈನ್ ಫೆಸ್ಟಿವಲ್  ನಡೆಯಲಿದೆ
ಮೊದಲ ದಿನ ಡಿಸೈನ್ ಸಮ್ಮಿಥ್​ ಪ್ರಮುಖವಾಗಿ ಗಮನ ಸೆಳೆದಿತ್ತು. ಡಿಸೆಂಬರ್​ 8 ರಿಂದ 10ರ ವರೆಗೆ ಈ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಆರ್ಟ್​ನಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಈ ವಿಷಯಕ್ಕೆ ಸಂಬಂಧಿಸಿದ ಕೋರ್ಸ್​ ಮಾಡಿದರೆ ಖಂಡಿತ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲೇ ಕೆಲಸ ಸಿಗುವ ಅವಕಾಶ ಹೆಚ್ಚಿದೆ ಎನ್ನಬಹುದು. ಹಾಗಾಗಿ ಆಸಕ್ತರು ಇದರಲ್ಲಿ ಭಾಗವಹಿಸಿ ಅರ್ಥ ಮಾಡಿಕೊಳ್ಳಿ.


ವಿನ್ಯಾಸ ಶೃಂಗಸಭೆಯಲ್ಲಿ ಭಾಗಿಯಾದರೆ ಕೆಲವು ಪ್ರಯೋಜನಗಳಿವೆ ಅದೇನೆಂದರೆ ಡಿಸೈನಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಇದ್ದವರು ಇನ್ನಿತರ ಸಮಾನ ಮನಸ್ಕರ ಯೋಚನೆಗಳನ್ನು ಹಂಚಿಕೊಳ್ಳಬಹುದು. ಹಾಗೂ ನಿಮ್ಮ ಯೋಜನೆಗಳಿಗೆ ಇತತರಿಂದ ಬೆಂಬಲ ಸಿಗುತ್ತದೆ. ಪರಸ್ಪರ ಯೋಜನೆಗಳ ವಿನಿಮಯ ಮಾಡಿಕೊಳ್ಳಬಹುದು.

First published: