• ಹೋಂ
 • »
 • ನ್ಯೂಸ್
 • »
 • Jobs
 • »
 • Higher Education ಕೋರ್ಸ್​ಗಳ ಫುಲ್​ ಫಾರ್ಮ್​​​ ಲಿಸ್ಟ್​ ಇಲ್ಲಿದೆ ನೋಡಿ

Higher Education ಕೋರ್ಸ್​ಗಳ ಫುಲ್​ ಫಾರ್ಮ್​​​ ಲಿಸ್ಟ್​ ಇಲ್ಲಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನನ್ನ ಮಗ ಎಂಬಿಬಿಎಸ್‌ ಓದುತ್ತಿದ್ದಾನೆ ಅಂತಾ ಹೇಳೋದನ್ನು ಅದರ ಪೂರ್ಣ ರೂಪ ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ ಅಂತಾ ಹೇಳುತ್ತೀರಾ? ಇಲ್ಲಾ ತಾನೆ ಇದು ಯಾಕೆ ಹೀಗೆ ಎಂಬ ಮಾಹಿತಿ ಇಲ್ಲಿದೆ.

 • Share this:
 • published by :

ನೀವು ಎಲ್‌ಐಸಿ (LIC) ಮಾಡಿಸಿದ್ದೀರಾ, ಓಹೋ ನಿಮ್ಮ ಮಗ ಪಿಯುಸಿ ಓದಾತ್ತಿದ್ದಾನಾ, ನೀವು ಕೆಎಂಎಫ್‌ ಹಾಲು ಬಳಕೆ ಮಾಡೋದಾ, ಸಿಲ್ಕ್‌ ಬೋರ್ಡ್‌ಲ್ಲಿ ಎಷ್ಟು ಟ್ರಾಫಿಕ್‌ ಅಲ್ವಾ? ಎಂಜಿ ರೋಡಲ್ಲಿ ಒಳ್ಳೆ ಹೋಟೆಲ್‌ಗಳಿವೆ (Hotel). ಅಯ್ಯೋ ಏನಿದು ಅಂತೀರಾ? ನಮ್ಮ ದೈನಂದಿನ ಜೀವನದಲ್ಲಿ (Daily Life) ಹುದ್ದೆ, ರಸ್ತೆ, ವಸ್ತು, ವಿದ್ಯಾಭ್ಯಾಸ, ಪದವಿ ಇಂತಹ ಸುಮಾರು ಪದಗಳನ್ನು ನಾವು ಶಾರ್ಟ್‌ ರೂಪದಲ್ಲಿ (Shortform) ಬಳಸುತ್ತೇವೆ. ಅಂದರೆ ಮೇಲೆ ಹೇಳಿರುವ ಎಲ್‌ಐಸಿ, ಪಿಯುಸಿ, ಎಂಜಿ ರೋಡ್‌ ಇವೆಲ್ಲಾ ನಾವು ಬಳಸುವ ಪೂರ್ಣ ರೂಪ ಪದಗಳ ಸಂಕ್ಷೇಪಣಗಳು. ಇಲ್ಲಿ ಎಂಜಿ ರೋಡ್‌ (MG Road) ಅಂದರೆ ಮಹಾತ್ಮ ಗಾಂಧಿ ರಸ್ತೆ ಅಂತಾ, ಇನ್ನೂ ಎಲ್‌ಐಸಿ ಅಂದರೆ ಲೈಫ್ ಇನ್ಶೂರನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಅಂತಾ. 


ಕೆಲ ಪದಗಳನ್ನು ಬಿಡಿಸಿ ಹೇಳೋದು ತುಂಬಾ ಕಷ್ಟವಾಗಬಹುದು. ಉದಾಹರಣೆಗೆ ನನ್ನ ಮಗ ಎಂಬಿಬಿಎಸ್‌ ಓದುತ್ತಿದ್ದಾನೆ ಅಂತಾ ಹೇಳೋದನ್ನು ಅದರ ಪೂರ್ಣ ರೂಪ ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ ಅಂತಾ ಹೇಳುತ್ತೀರಾ? ಇಲ್ಲಾ ತಾನೇ. ಅದಕ್ಕಾಗಿ ಇಂತಹ ಕ್ಲಿಷ್ಟ ಪದಗಳನ್ನು ಸಂಕ್ಷೇಪಣಾ ಅಂದರೆ ಅಬ್ರಿವೇಷನ್‌ ಆಗಿ ಬಳಸಲಾಗುತ್ತದೆ. ಇವು ಹೇಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಬಳಕೆಯಲ್ಲಿವೆ.


ಸುಮಾರು ಜನಕ್ಕೆ ಈ ಪದಗಳೇ ಹೆಚ್ಚು ರೂಢಿಯಲ್ಲಿದ್ದು, ಅದರ ಪೂರ್ಣ ಪದದ ಅರ್ಥವೇ ಗೊತ್ತಿರುವುದಿಲ್ಲ. ಹಾಗಾದರೆ ನಾವಿಲ್ಲಿ ಕೆಲ ಪದಗಳ ಪೂರ್ಣ ರೂಪವನ್ನು ನೋಡೋಣ ಬನ್ನಿ. ಇದು ಕೇವಲ ಮಾಹಿತಿ ಅಲ್ಲ, ಕೆಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಈ ಪದದ ಸಂಕ್ಷೇಪಣ ರೂಪ ಇಲ್ಲಾ ಪೂರ್ಣ ರೂಪ ಬರೆಯಿರಿ ಎಂದು ಸಹ ಕೇಳುತ್ತಾರೆ.


MBA- ಎಂಬಿಎ ಯ ಪೂರ್ಣ ರೂಪವೆಂದರೆ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್. ಇದೊಂದು ಪದವಿಯಾಗಿದ್ದು, ಎಂಬಿಎ ಮುಗಿಸಿದ ನಂತರ, ಪದವೀಧರರು ಬ್ಯಾಂಕಿಂಗ್, ಸಲಹಾ, ಹಣಕಾಸು, ಮಾನವ ಸಂಪನ್ಮೂಲಗಳು, ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು.


ITI- ITI ಯ ಪೂರ್ಣ ರೂಪ ಇಂಡಸ್ಟ್ರಿಯಲ್‌ ಟ್ರೈನಿಂಗ್‌ ಇನ್ಸ್‌ಟ್ಯೂಟ್ (ಕೈಗಾರಿಕಾ ತರಬೇತಿ ಸಂಸ್ಥೆ) ಇದನ್ನು ಐಟಿಐ ಎಂದೂ ಕರೆಯುತ್ತಾರೆ.


OFC- OFC ಯ ಪೂರ್ಣ ರೂಪ ಆಪ್ಟಿಕಲ್ ಫೈಬರ್ ಕೇಬಲ್. ಸುಮಾರು ಜನ ಆಫೀಸ್‌ ಅನ್ನು ಸಹ ಹೀಗೆ ಒಫ್‌ಸಿ ಎಂದು ಸಂದೇಶಗಳಲ್ಲಿ ಬಳಸುತ್ತಾರೆ.


ಇಲ್ಲಿ ಒಎಫ್‌ಸಿ ಎಂದರೆ ವಿದ್ಯುತ್ ಕೇಬಲ್‌ಗೆ ಹೋಲುವ ಒಂದು ಜೋಡಣೆಯಾಗಿದೆ ಆದರೆ ಬೆಳಕನ್ನು ಸಾಗಿಸಲು ಬಳಸುವ ಒಂದು ಅಥವಾ ಹೆಚ್ಚಿನ ಆಪ್ಟಿಕಲ್ ಫೈಬರ್‌ಗಳನ್ನು ಹೊಂದಿರುತ್ತದೆ.


ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ! ಸಿಗಲಿದೆ ಶೇಕಡಾ 10ರಷ್ಟು ಗ್ರೇಸ್​ ಮಾರ್ಕ್ಸ್​​


BA- ಬಿಎ ಎಂದು ಕರೆಯಲ್ಪಡುವ ಇದು ಬ್ಯಾಚುಲರ್ ಆಫ್ ಆರ್ಟ್ಸ್ ಆಗಿದ್ದು, ಮೂರು ವರ್ಷಗಳ ಪದವಿಪೂರ್ವ ವ್ಯಾಸಾಂಗವಾಗಿದೆ. ಪಿಯುಸಿ ನಂತರ ತೇರ್ಗಡೆಯಾದವರು ಪದವಿಗೆ ಸೇರಬಹುದು. ಇಂಗ್ಲಿಷ್, ಇತಿಹಾಸ, ಹಿಂದಿ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಉರ್ದು, ಅರ್ಥಶಾಸ್ತ್ರ, ಮುಂತಾದವುಗಳಲ್ಲಿ ಬಿಎ ಪದವಿ ಪಡೆಯಬಹುದು.


B.Com- B.Com ನ ಪೂರ್ಣ ರೂಪ ಬ್ಯಾಚುಲರ್ ಆಫ್ ಕಾಮರ್ಸ್. B.com ವಾಣಿಜ್ಯದಲ್ಲಿ ಮೂರು ವರ್ಷಗಳ ಪದವಿಪೂರ್ವ ಪದವಿಯಾಗಿದೆ. ಇದು MBA ಮತ್ತು M.Com (Master of Commerce) ನಂತಹ ಸ್ನಾತಕೋತ್ತರ ಪದವಿಗಳಿಗೆ ಅರ್ಹತೆ ಪಡೆದ ವಾಣಿಜ್ಯ ಪದವೀಧರರಿಗೆ ಅನುಮತಿಸುವ ಮೂಲಭೂತ ಪದವಿ.


ಸಾಂಕೇತಿಕ ಚಿತ್ರ


ICSE- ICSE ಅಂದರೆ ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್. ‌ಅಂದರೆ ಪ್ರೌಢ ಶಿಕ್ಷಣದ ಭಾರತೀಯ ಪ್ರಮಾಣಪತ್ರವಾಗಿದೆ. ICSE ಬೋರ್ಡ್ ಅನ್ನು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ನಿರ್ವಹಿಸುತ್ತದೆ, ಇದು ಹೊಸ ಶಿಕ್ಷಣ ನೀತಿ 1986 (ಭಾರತ) ಶಿಫಾರಸುಗಳಿಗೆ ಅನುಗುಣವಾಗಿ ಶಿಕ್ಷಣವನ್ನು ಒದಗಿಸಲು ರಚಿಸಲಾದ ಖಾಸಗಿ ಮಂಡಳಿಯಾಗಿದೆ.


BPT- BPT ಎಂಬುದು ಬ್ಯಾಚುಲರ್ ಆಫ್ ಫಿಸಿಯೋಥೆರಪಿಯ ಸಂಕ್ಷಿಪ್ತ ರೂಪವಾಗಿದೆ. ಇದು 4 ವರ್ಷಗಳ ಪದವಿ ಮಟ್ಟದ ಅಧ್ಯಯನ ಕಾರ್ಯಕ್ರಮವಾಗಿದ್ದು ಇದನ್ನು ವೈದ್ಯಕೀಯ ವಿಜ್ಞಾನದಲ್ಲಿ ಕಲಿಸಲಾಗುತ್ತದೆ.
ACCA- ACCA ಎಂದರೆ ಅಸೋಸಿಯೇಷನ್ ​​ಆಫ್ ಸರ್ಟಿಫೈಡ್ ಚಾರ್ಟರ್ಡ್ ಅಕೌಂಟೆಂಟ್ಸ್, ಇದು ವಿದ್ಯಾರ್ಥಿಗಳಿಗೆ 'ಪ್ರಮಾಣೀಕೃತ ಚಾರ್ಟರ್ಡ್ ಅಕೌಂಟೆಂಟ್' ಪ್ರಮಾಣೀಕರಣವನ್ನು ಒದಗಿಸುವ ಜಾಗತಿಕ ಸಂಸ್ಥೆಯಾಗಿದೆ.


ABS- ಎಬಿಎಸ್‌ನ ಪೂರ್ಣ ರೂಪವೆಂದರೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಎಂದರ್ಥ. ವಾಹನಗಳಲ್ಲಿ ಬಳಕೆ ಮಾಡುವ ಬ್ರೇಕ್‌ ಸಿಸ್ಟಮ್‌ ಇದಾಗಿದ್ದು, ಬೈಕ್‌ಗಳು, ಟ್ರಕ್‌ಗಳು, ಬಸ್‌ಗಳು ಮತ್ತು ಕಾರುಗಳಂತಹ ಭೂ ವಾಹನಗಳಲ್ಲಿ ವಿಮಾನದಲ್ಲಿಯೂ ಬಳಸಲಾಗುತ್ತದೆ. ಇದು ಬ್ರೆಕ್ ತುರ್ತು ಸ್ಥಗಿತಗೊಂಡಾಗ ‌ವಾಹನದ ಟೈರ್‌ಗಳು ಲಾಕ್ ಆಗುವುದನ್ನು ಮತ್ತು ಸ್ಕಿಡ್ ಆಗುವುದನ್ನು ತಡೆಯುತ್ತದೆ

top videos


  ACH- ACH ನ ಪೂರ್ಣ ರೂಪವು ಆಟೋಮೇಟೆಡ್ ಕ್ಲಿಯರಿಂಗ್ ಹೌಸ್. ಕಂಪ್ಯೂಟರ್ ಆಧಾರಿತ ಎಲೆಕ್ಟ್ರಾನಿಕ್ ನೆಟ್‌ವರ್ಕ್ ಆಗಿದ್ದು, ಕ್ರೆಡಿಟ್ ವರ್ಗಾವಣೆ ಮತ್ತು ನೇರ ಡೆಬಿಟ್ ಎರಡನ್ನೂ ಬೆಂಬಲಿಸುತ್ತದೆ.

  First published: