• Home
  • »
  • News
  • »
  • jobs
  • »
  • Mangaluru: ದಕ್ಷಿಣ ಕನ್ನಡ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಉಚಿತ ಜೀವನ ಕೌಶಲ್ಯ ಪಾಠ

Mangaluru: ದಕ್ಷಿಣ ಕನ್ನಡ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಉಚಿತ ಜೀವನ ಕೌಶಲ್ಯ ಪಾಠ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮಂಗಳೂರು ವಿಭಾಗವು ನಡೆಸುತ್ತಿರುವ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಜಿಲ್ಲೆಯ 50 ಹಾಸ್ಟೆಲ್‌ಗಳಲ್ಲಿ ಹಿಂದುಳಿದ ವರ್ಗಗಳ 50 ಸಾವಿರ ವಿದ್ಯಾರ್ಥಿಗಳು ವಾಸವಿದ್ದಾರೆ. ಸಂಪೂರ್ಣ ಐವತ್ತು ಸಾವಿರ ವಿದ್ಯಾರ್ಥಿಗಳಿಗೂ ಈ ಸೌಕರ್ಯವನ್ನು ಕಲ್ಪಿಸಲಾಗುತ್ತದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Karnataka, India
  • Share this:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ದಕ್ಷಿಣ ಕನ್ನಡದ (Kannada) ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ (Students) ಉಚಿತ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಮಾಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಹಾಗೂ ಭಾಷಾ ಅಭಿವೃದ್ಧಿಗೆ ಸಹಾಯ ಮಾಡುವ ಅವಕಾಶ ಕಲ್ಪಿಸಲಾಗಿದೆ. ಮತ್ತು ವ್ಯಕ್ತಿತ್ವ ವಿಕಸನ ತರಗತಿಗಳಿಗೆ (Class) ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಆ ಕಾರಣ ಇನ್ನು ಮುಂದಿನ ದಿನದಲ್ಲಿ ಸ್ಪೋಕನ್ ಇಂಗ್ಲಿಷ್ (English) ತರಗತಿಯನ್ನು ಹಾಸ್ಟೆಲ್‌ಗಳಲ್ಲಿ ನಡೆಸಲಾಗುತ್ತದೆ.


ಮಂಗಳೂರು ವಿಭಾಗವು ನಡೆಸುತ್ತಿರುವ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಜಿಲ್ಲೆಯ 50 ಹಾಸ್ಟೆಲ್‌ಗಳಲ್ಲಿ ಹಿಂದುಳಿದ ವರ್ಗಗಳ 50 ಸಾವಿರ ವಿದ್ಯಾರ್ಥಿಗಳು ವಾಸವಿದ್ದಾರೆ. ಸಂಪೂರ್ಣ ಐವತ್ತು ಸಾವಿರ ವಿದ್ಯಾರ್ಥಿಗಳಿಗೂ ಈ ಸೌಕರ್ಯವನ್ನು ಕಲ್ಪಿಸಲಾಗುತ್ತದೆ. ಆದ್ದರಿಂದ ಇದೊಂದು ಪ್ರಯೋಜನಕಾರಿ ಯೋಜನೆಯಾಗಿ ರೂಪುಗೊಳ್ಳಲಿದೆ.


ಈ ಕಾರ್ಯದ ಹಿಂದಿನ ಉದ್ದೇಶ ಹೀಗಿದೆ
ಆರ್ಥಿಕವಾಗಿ ಬಡ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಅವರ ಸಂವಹನ ಕೌಶಲ್ಯಗಳನ್ನು, ವಿಶೇಷವಾಗಿ ಇಂಗ್ಲಿಷ್ ಮತ್ತು ಜೀವನ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುವುದು ಮತ್ತು ಅವರ ಜೀವನದ ಮುಂದಿನ ದಿನಗಳಲ್ಲಿ ಈ ಯೋಜನೆ ಮೂಲಕ ಸಹಾಯವಾಗುವಂತೆ ನೋಡಿಕೊಳ್ಳುವುದು. 


ಇದನ್ನೂ ಓದಿ: Anganwadi Jobs: 500 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ-10th ಪಾಸಾದವರು ಅಪ್ಲೈ ಮಾಡಿ


ಮಂಗಳೂರಿನ ಹಲವೆಡೆ ತಿಂಗಳುಗಳ ಕಾಲ ಅಧಿವೇಶನಗಳನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲ್ಯವನ್ನು ಈ ಯೋಜನೆಯ ಮೂಲಕ ಹೆಚ್ಚಿಸಿಕೊಂಡಿದ್ದಾರೆ ಎಂದು ರಶ್ಮಿ ಎಸ್ಆರ್ ಹೇಳಿದ್ದಾರೆ. ನಿಜಕ್ಕೂ ಇಂಗ್ಲಿಷ್ ಭಾಷಾಜ್ಞಾನ ನೀಡುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಈಗ ಎಲ್ಲಾ ಕ್ಷೇತ್ರದಲ್ಲೂ ಇಂಗ್ಲೀಷ್​ ಭಾಷೆ ಬಗ್ಗೆ ಕೇಳೆ ಕೇಳುತ್ತಾರೆ. ವ್ಯಾಪಾರ ವಹಿವಾಟುಗಳ ವಿಸ್ತರಣೆಗೂ ಸಹ ಇದರ ಅವಶ್ಯಕಥೆ ಇರುತ್ತದೆ.


2022-23 ರ ಬಜೆಟ್‌ನಲ್ಲಿ 5 ಕೋಟಿ ರೂ. ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಕಾಲೇಜುಗಳ ಸುಮಾರು 24 ಅತಿಥಿ ಅಧ್ಯಾಪಕರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇದಕ್ಕೆ ಸಹಕರಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಉಪಕ್ರಮವನ್ನು ಘೋಷಿಸಿದ್ದಾರೆ.


ಸುಮಾರು 15 ಗಂಟೆಗಳ ತರಗತಿಗಳನ್ನು ನಡೆಸುತ್ತಾರೆ


ಹಾಸ್ಟೆಲ್‌ಗಳಲ್ಲಿ ನಿಯಮಿತ ಕಾಲೇಜು ಬೋಧನಾ ಸಮಯದ ನಂತರ ಉಪನ್ಯಾಸಕರು ಪ್ರತಿ ತಿಂಗಳು ಸುಮಾರು 15 ಗಂಟೆಗಳ ತರಗತಿಗಳನ್ನು ನಡೆಸುತ್ತಾರೆ. ಹಾಸ್ಟೇಲ್ ಗ್ರಾಮೀಣ ಹಾಗೂ ಪಟ್ಟಣದ ಮಿಶ್ರಣವನ್ನು ಹೊಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಇದರ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿಧಾನವಾಗಿದ್ದರೂ ಅವರು ಅರ್ಥಮಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡುತ್ತಾರೆ.


ಪಟ್ಟಣದ ವಿದ್ಯಾರ್ಥಿಗಳು ಈ ತರಗತಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ


ಪಟ್ಟಣದ ವಿದ್ಯಾರ್ಥಿಗಳು ಈ ತರಗತಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆದರೆ ಯಾರಿಗೆ ಇದರ ಅಗತ್ಯತೆ ಇದೆಯೋ ಅವರು ಇದರ ಪ್ರಯೋಜನವನ್ನು ಖಂಡಿತವಾಗಿಯೂ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿದ್ಯಾರ್ಥಿಗಳು, ವಿಶೇಷವಾಗಿ ಕನ್ನಡ-ಮಾಧ್ಯಮ ಸಂಸ್ಥೆಗಳಲ್ಲಿ ಕಲಿಯುತ್ತಿರುವವರು, ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಪಡೆಯುವುದರ ಜೊತೆಗೆ, ಬ್ಯಾಂಕಿಂಗ್, ಕಾನೂನು ಅರಿವು, ಕಂಪ್ಯೂಟರ್ ಜ್ಞಾನ ಮತ್ತು ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಅಗತ್ಯವಾದ ಕೌಶಲ್ಯಗಳ ಬಗ್ಗೆ ಕೂಡ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಕೌಶಲ್ಯಗಳ ಅಳವಡಿಕೆ ಮುಖ್ಯ


ಈ ಎಲ್ಲಾ ತರಗತಿಗಳಿಂದ ಖಂಡಿತ ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಯೋಜನ ದೊರೆಯಲಿದೆ. ಮಕ್ಕಳು ಅಥವಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಈ ಕೌಶಲ್ಯಗಳನ್ನು ಅಳವಡಿಸಿಕೊಂಡು ಅದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಲಾಗಿದೆ.

First published: