• Home
  • »
  • News
  • »
  • jobs
  • »
  • Good News: ವಿದೇಶದಲ್ಲಿ ಉಚಿತ ಉನ್ನತ ಶಿಕ್ಷಣ, ಹೆಚ್ಚುವರಿ 65 ಕೋಟಿ ಅನುದಾನ

Good News: ವಿದೇಶದಲ್ಲಿ ಉಚಿತ ಉನ್ನತ ಶಿಕ್ಷಣ, ಹೆಚ್ಚುವರಿ 65 ಕೋಟಿ ಅನುದಾನ

ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

ಈ ಯೋಜನೆಯು ಪ್ರತಿ ವರ್ಷ ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಗುರಿ ಹೊಂದಿದೆ. ಇದರಲ್ಲಿ 30 ಪ್ರತಿಶತದಷ್ಟು ಸೀಟುಗಳನ್ನು ಹೆಣ್ಣು ವಿದ್ಯಾರ್ಥಿಗಳಿಗಾಗಿ ಮೀಸಲಿರಿಸಲಾಗಿದೆ.

  • Share this:

ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಸಾಕಷ್ಟು ಮಹತ್ವ ಪಡೆದಿದೆ, ಅದರಲ್ಲೂ ಉನ್ನತ ಶಿಕ್ಷಣವನ್ನು ತಮ್ಮ ಮಕ್ಕಳು ವಿದೇಶದಲ್ಲಿ ಪಡೆಯಬೇಕೆಂದು ಸಾಕಷ್ಟು ಪೋಷಕರು ಅಪೇಕ್ಷಿಸುತ್ತಾರೆ. ಕಾರಣ, ಗುಣಮಟ್ಟದ ಉನ್ನತ ಶಿಕ್ಷಣವನ್ನು (Higher Education) ವಿದ್ಯಾರ್ಥಿಗಳು ವಿದೇಶದಲ್ಲಿ (Education In Foreign) ಪಡೆದುಕೊಂಡಾಗ ಅವರ ಭವಿಷ್ಯ ಹೆಚ್ಚುಕಡಿಮೆ ಸುರಕ್ಷಿತವಗಿರುತ್ತದೆ ಎಂಬ ಭರವಸೆ ಮಕ್ಕಳ ಪೋಷಕರಲ್ಲಿ ಬಲವಾಗಿ ನೆಲೆಯೂರಿದೆ. ಇದು ಸಾಕಷ್ಟು ಪ್ರಕರಣಗಳಲ್ಲಿ ಸತ್ಯವೂ ಕೂಡ ಆಗಿದೆ.


ಆದರೆ ಭಾರತದಂತಹ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಮಧ್ಯಮ ವರ್ಗದ ಕುಟುಂಬಗಳ ಮನೆಯಲ್ಲಿರುವ ವಿದ್ಯಾರ್ಥಿಗಳು ಆರ್ಥಿಕ ಪರಿಸ್ಥಿತಿಗಳಿಂದಾಗಿ ವಿದೇಶದಲ್ಲಿ ವ್ಯಾಸಂಗ ಮಾಡಬಹುದಾದ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಶಕ್ತರಾಗಿಲ್ಲ.


ಹಲವು ರಾಜ್ಯಗಳಲ್ಲಿ ಹಲವು ಯೋಜನೆ
ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ಆರ್ಥಿಕ ಪರಿಸ್ಥಿತಿಯಿಂದಾಗಿ ತಮ್ಮ ಕನಸನ್ನು ಭಗ್ನ ಮಾಡಿಕೊಳ್ಳಬಾರದೆಂಬ ದೃಷ್ಟಿಕೋನದಿಂದ ದೇಶದಲ್ಲಿರುವ ಹಲವು ರಾಜ್ಯಸರ್ಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಮಕ್ಕಳಿಗೆ ಒಳಿತು ಮಾಡುವ ದೃಷ್ಟಿಯಿಂದ ಹಲವಾರು ಶಿಕ್ಷಣ ಸಂಬಂಧಿತ ಯೋಜನೆಗಳನ್ನು ಹೊಂದಿರುತ್ತವೆ.


ರಾಜೀವ್ ಗಾಂಧಿ ಸ್ಕಾಲರ್ಶಿಪ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್ ಯೋಜನೆ
ಇದೀಗ ಈ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರವು ಸಹ ಒಂದು ಹೆಜ್ಜೆ ಮುಂದಿಟ್ಟಿದೆ. ತನ್ನ ಪ್ರತಿಭಾವಂತ ವಿದ್ಯಾರ್ಥಿಗಳು ಯಾವುದೇ ಹಣದ ಸಮಸ್ಯೆಗಳಿಲ್ಲದೆ ವಿದೇಶದಲ್ಲಿ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವಂತೆ ರಾಜೀವ್ ಗಾಂಧಿ ಸ್ಕಾಲರ್ಶಿಪ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್ ಯೋಜನೆಯನ್ನು ಹೊರತಂದಿದೆ.


65 ಕೋಟಿ ಅನುದಾನ
ಈ ನೂತನ ಯೋಜನೆಗೆಂದೇ ರಾಜಸ್ಥಾನ ಸರ್ಕಾರವು ತನ್ನ ಆಯವ್ಯಯದಲ್ಲಿ ಹೆಚ್ಚುವರಿ 65 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟಿದೆ. ಇದೀಗ ಅದಕ್ಕೆ ಅನುಮೋದನೆ ನೀಡಿರುವುದಾಗಿ ತಿಳಿದುಬಂದಿದೆ. ಇನ್ನು ಮುಂದೆ ಈ ಯೋಜನೆಯ ಫಲವಾಗಿ ವಿದೇಶದಲ್ಲಿ ಶಿಕ್ಷಣ ಪಡೆಯಬೇಕೆಂದ ಅದಮ್ಯ ಕನಸನ್ನು ಹೊಂದಿರುವ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದಾಗಿದೆ.


200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಈ ಯೋಜನೆಯು ಪ್ರತಿ ವರ್ಷ ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಗುರಿ ಹೊಂದಿದೆ. ಇದರಲ್ಲಿ 30 ಪ್ರತಿಶತದಷ್ಟು ಸೀಟುಗಳನ್ನು ಹೆಣ್ಣು ವಿದ್ಯಾರ್ಥಿಗಳಿಗಾಗಿ ಮೀಸಲಿರಿಸಲಾಗಿದೆ.


ಈ ಯೋಜನೆಯಡಿಯಲ್ಲಿ, ಪ್ರತಿಷ್ಠಿತ ಆಕ್ಸ್ ಫರ್ಡ್, ಸ್ಟ್ಯಾನ್ಫರ್ಡ್, ಹಾರ್ವರ್ಡ್ ಹಾಗೂ ಕ್ಯಾಲಿಫೋರ್ನಿಯಾ ವಿವಿ ಸೇರಿದಂತೆ ಜಗತ್ತಿನ ಒಟ್ಟು 150 ವಿದ್ಯಾ ಸಂಸ್ಥೆಗಳಲ್ಲಿ ರಾಜಸ್ಥಾನದ ಪ್ರತಿಭಾವಂತ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಪಡೆಯಲಿದ್ದಾರೆ.


25 ಲಕ್ಷ ಆದಾಯ ಇದ್ರೂ ಅರ್ಜಿ ಸಲ್ಲಿಸಿ
ಅಲ್ಲದೆ ಈ ಯೋಜನೆಯಲ್ಲಿ ಎಂಟು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನವಿರುವ ಕುಟುಂಬಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಾರ್ಷಿಕ ಆದಾಯ 25 ಲಕ್ಷ ರೂಪಾಯಿಗಳಷ್ಟಿರುವ ಕುಟುಂಬಗಳ ವಿದ್ಯಾರ್ಥಿಗಳೂ ಸಹ ಈ ಯೋಜನೆಯಡಿಯಲ್ಲಿ ಸ್ಕಾಲರ್ಶಿಪ್​ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: Golden Opportunity: ಫೇಲ್ ಆದ್ರೂ ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆಯೋಕೆ ಸಖತ್ ಚಾನ್ಸ್!


ರಾಜಸ್ಥಾನ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು "ರಾಜೀವ್ ಗಾಂಧಿ ಸ್ಕಾಲರ್ಶಿಪ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್" ವಿದ್ಯಾರ್ಥಿವೇತನ ಯೋಜನೆಯನ್ನು ಸ್ಥಾಪಿಸಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಅವರು ಬಯಸುವಂತಹ ವಿದೇಶಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಅನುವಾಗಲು ಧನಸಹಾಯ ಒದಗಿಸಲಿದೆ.


ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣ, ಸ್ನಾತಕೊತ್ತರ, ಡಾಕ್ಟರಲ್ ಅಥವಾ ಪೋಸ್ಟ್ ಡಾಕ್ಟರಲ್, ಸಂಶೋಧನೆ ಹೀಗೆ ಶಿಕ್ಷಣದ ವಿವಿಧ ವಲಯಗಳಲ್ಲಿ ತಮ್ಮನ್ನು ತಾವು ನೋದಾಯಿಸಿಕೊಳ್ಳ ಬಯಸುವ ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆಂದು ಇಲಾಖೆಯು ತಿಳಿಸಿದೆ.


ಇದನ್ನೂ ಓದಿ: Play Ground: ದೇಶದ ಇಷ್ಟೊಂದು ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ! ಕರ್ನಾಟಕದಲ್ಲೆಷ್ಟಿದೆ?


ಕೊನೆಯದಾಗಿ, ರಾಜಸ್ಥಾನ ಸರ್ಕಾರದಿಂದ ತೆಗೆದುಕೊಳ್ಳಲಾದ ಇದೊಂದು ಉತ್ತಮ ಯೋಜನೆಯಾಗಿದೆ. ಈ ಮೂಲಕ ನೂರಾರು ಮಧ್ಯಮ ವರ್ಗದ ಕುಟುಂಬಗಳಿಗೆ ಅವರ ಮಕ್ಕಳನ್ನು ವಿದೇಶದಲ್ಲಿ ಕಲಿಸಬೇಕೆಂಬ ಕನಸಿಗೆ ನೀರೆರೆದಂತಾಗಿದೆ.  ಇನ್ನೊಂದೆಡೆ ಓದಿನಲ್ಲಿ ಸಾಕಷ್ಟು ಚುರುಕಾಗಿದ್ದು ವಿದೇಶಗಳಲ್ಲಿ ಹೆಚ್ಚಿನ ವಿದ್ಯಾರ್ಜನೆಗಾಗಿ ಹಣದ ಸಮಸ್ಯೆಯನ್ನು ಎದುರಿಸುವ ವಿದ್ಯಾರ್ಥಿಗಳ ಪಾಲಿಗೆ ಇದು ಒಂದು ರೀತಿಯ ಸಂಜೀವಿನಿಯಂತಾಗಿದೆ ಎಂದಷ್ಟೇ ಹೇಳಬಹುದು.

First published: