ಪ್ರತಿಯೊಬ್ಬ ವ್ಯಕ್ತಿಯು ತನ್ನ ಕನಸುಗಳನ್ನು (Dream) ಸಾಧಿಸಲು ಅತ್ಯುತ್ತಮ ಶಿಕ್ಷಣವನ್ನು ಪಡೆಯಲು ಬಯಸುತ್ತಾನೆ. ಆ ವಿದ್ಯಾರ್ಥಿಯ ಕನಸು ನನಸಾಗಬೇಕು ಎಂದಾದರೆ ಕೆಲವು ಸಹಾಯದ ಅವಶ್ಯಕತೆ ಇರುತ್ತದೆ. ಸ್ವ ಪ್ರಯತ್ನದಿಂದ ಏನನ್ನಾದರೂ ಸಾಧಿಸುವ ಛಲ ಇದ್ದ ವಿದ್ಯಾರ್ಥಿಗಳಿಗೆ (Students) ಸಹಾಯವಾಗುವಂತ ಹಲವಾರು ಆ್ಯಪ್ಗಳು ಆನ್ಲೈನ್ನಲ್ಲಿ ನಿಮಗೆ ಲಭ್ಯವಿದೆ. ಅದೇ ರೀತಿ ನಾವಿಲ್ಲಿ ನೀಡಿರುವ ಆ್ಯಪ್ಗಳು ಕೂಡಾ ನಿಮಗೆ ಉತ್ತಮ ಶಿಕ್ಷಣ (Education) ಪಡೆದುಕೊಳ್ಳುವಲ್ಲಿ ಖಂಡಿತ ಉಪಯೋಗಕ್ಕೆ ಬರುತ್ತವೆ ಎಂದೇ ಹೇಳಬಹುದು.
ಹಾಗಾದರೆ ಉತ್ತಮ ಶಿಕ್ಷಣ ನೀಡುವ ಹೊಸದೊಂದು ಆ್ಯಪ್ಅನ್ನು ನೀವು ಸರ್ಚ್ ಮಾಡುತ್ತಿದ್ದರೆ ನೀವು ಮತ್ತೆಲ್ಲೂ ಹುಡಕಾಟ ನಡೆಸುವುದು ಬೇಡ. ನಾವಿಲ್ಲಿ ನೀಡುವ ಮಾಹಿತಿಯನ್ನೇ ಅನುಸರಿಸಿ ಅಭ್ಯಾಸ ಆರಂಭಿಸಿ. ಇನ್ನು ಕೆಲವು ಆ್ಯಪ್ಗಳು ನಿಮಗೆ ಶಿಕ್ಷಣ ನೀಡಲು ಮುಂದಾಗುತ್ತದೆ. ಆದರೆ ಪ್ರತಿಯೊಂದು ಆ್ಯಪ್ ಕೂಡಾ ತುಂಬಾ ದುಬಾರಿ ಬೆಲೆಯ ಶುಲ್ಕವನ್ನು ನಿಗದಿಪಡಿಸಿರುತ್ತದೆ.
ಆದರೆ ಇಲ್ಲಿ ನೀಡಿರುವ ಆ್ಯಪ್ಗಳು ಹಾಗಲ್ಲ. ನಿಮಗೆ ಉಚಿತ ಶಿಕ್ಷಣವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ನೀಲಿ ಕಾಲರ್ ಉದ್ಯೋಗಗಳನ್ನು ನೀವು ಬಯಸುವುದಾದರೆ ಖಂಡಿತ ಆನ್‌ಲೈನ್ ಮೂಲಕ ನೀವು ಅದಕ್ಕೆ ಬೇಕಾದ ಕೌಶಲ್ಯಗಳನ್ನು ನೀವು ಪಡೆದುಕೊಳ್ಳಬಹುದು.
ಇದನ್ನೂ ಓದಿ: Special Day: ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಏಕೆ ಆಚರಿಸುತ್ತಾರೆ? ಇಲ್ಲಿದೆ ಮಾಹಿತಿ
ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸದ ಎಷ್ಟೋ ಜನ ವಿದ್ಯಾರ್ಥಿಗಳು ಆಗಾಗ ಬೇರೆ ಬೇರೆ ಚಿಕ್ಕ ಪುಟ್ಟ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಲು ಇಷ್ಟಪಡುತ್ತಾರೆ. ಆದರೆ ಯಾವ ಕೋರ್ಸ್ ಮಾಡಬೇಕು ಎಂಬ ಗೊಂದಲದ ಜೊತೆ ಯಾವ ಆ್ಯಪ್ ಉತ್ತಮವಾಗಿದೆ ಎಂಬುದನ್ನು ಸರ್ಚ್ ಮಾಡುತ್ತಿರುತ್ತಾರೆ.
ಇಂಟರ್ನೆಟ್ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಆನ್‌ಲೈನ್ ಶಿಕ್ಷಣ ಪಡೆಯಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಇದರಿಂದ ಹಲವಾರು ಪ್ರಯೋಜನಗಳನ್ನು ಸಹ ಹೊಂದಿದ್ದಾರೆ. ಉದ್ಯೋಗ ಮಾರುಕಟ್ಟೆಯು ನಮ್ಮ ಪದವಿಗಿಂತ ಹೆಚ್ಚಾಗಿ ನಮ್ಮ ಕೌಶಲ್ಯವನ್ನು ಆಧರಿಸಿರುವುದರಿಂದ ಆನ್‌ಲೈನ್ ಶಿಕ್ಷಣವು ಅವರರವರ ಕೌಶಲ್ಯಕ್ಕೆ ತಕ್ಕಂತೆ ಅವರವರು ಕಲಿಯಬಹುದು.
1. EdX: edx.org: ಇದು ನಿಮಗೆ ಸಿಗುವ ಒಂದು ಉತ್ತಮ ಫ್ರೀ ಎಜುಕೇಶನ್ ಆ್ಯಪ್ ಆಗಿದೆ. 2012 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು MI ಸ್ಥಾಪಿಸಿದ ವೆಬ್‌ಸೈಟ್ ಇದಾಗಿದೆ. ಆದ್ದರಿಂದ ತುಂಬಾ ವಿಶ್ವಾಸಾರ್ಹವಾದ ಆ್ಯಪ್ ಕೂಡಾ ಇದಾಗಿದೆ. EdX ಆನ್‌ಲೈನ್ ಕಲಿಕೆಯ ತಾಣವಾಗಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಇದರಲ್ಲಿ ಕಲಿತಿದ್ದಾರೆ.
2) academicearth.org: ಅವರು ಅಕೌಂಟಿಂಗ್ ಮತ್ತು ಅರ್ಥಶಾಸ್ತ್ರದಿಂದ ಎಂಜಿನಿಯರಿಂಗ್‌ವರೆಗೆ ಆನ್‌ಲೈನ್ ಪದವಿ ಕೋರ್ಸ್‌ಗಳನ್ನು ನಿಮಗೆ ನೀಡುತ್ತಾರೆ. ನೀವು ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೆ ಖಂಡಿತ ಈ ಆ್ಯಪ್ನ ಪ್ರಯೋಜನ ಪಡೆದುಕೊಳ್ಳಬಹುದು.
3). archive.org: ಇಂಟರ್ನೆಟ್ ಆರ್ಕೈವ್ ಹಲವಾರು ದೊಡ್ಡ ವೆಬ್‌ಸೈಟ್‌ಗಳಿಂದ ಮೂಲಗಳನ್ನು ಸಂಗ್ರಹಿಸುವ ಅಧಿಕೃತ ವೆಬ್‌ಸೈಟ್ ಆಗಿದೆ.ದಾಹರಣೆಗೆ, ಅಮೇರಿಕನ್ ಲೈಬ್ರರಿಗಳು ಕಾಲೇಜು ಗ್ರಂಥಾಲಯಗಳ ವೆಬ್‌ಸೈಟ್‌ಗಳೊಂದಿಗೆ ನೇರವಾಗಿ ಮಾಹಿತಿಯನ್ನು ಪಡೆಯುತ್ತದೆ. ನೀವು ಇಲ್ಲಿ ಇರುವ ಸ್ಟಡಿ ಮಟಿರಿಯಲ್ಗಳನ್ನು ಬಳಸಿ ಅಧ್ಯಯನ ನಡೆಸಬಹುದು.
4). bigthink.com: ಬಿಗ್ ಥಿಂಕ್ 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅದಕ್ಕೆ ಅನುಗುಣವಾಗಿ ಶಿಕ್ಷಕರನ್ನು ಹೊಂದಿದೆ. ಈ ತಜ್ಞರು ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣಕ್ಕೆ ಬೇಕಾದ ಮಾರ್ಗದರ್ಶನವನ್ನು ನೀಡುತ್ತಾರೆ. ಭಾರತವು ಕಳೆದ ಕೆಲವು ದಶಕಗಳಲ್ಲಿ ತಾಂತ್ರಿಕ ಪ್ರಗತಿ ಕಾಣುತ್ತಿದೆ ಇದಕ್ಕೆ ಕಾರಣ ವಿದ್ಯಾರ್ಥಿಗಳೂ ಸಹ ಈ ಕ್ಷೇತ್ರದಲ್ಲಿ ಆಸಕ್ತಿ ತೋರುತ್ತಿರುವುದು. ನಂತರವ ತಮ್ಮ ಆಸಕ್ತಿಯನ್ನು ಇನ್ನಷ್ಟು ಬೆಳೆಸುತ್ತಾ ಹೋದಂತೆ ಈ ಕ್ಷೇತ್ರ ಬೆಳೆಯುತ್ತಾ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ