ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾಪಿಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು (School) ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯನ್ನು ಉದ್ಘಾಟಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅವರು ಶಾಲಾ ಮಕ್ಕಳಿಗೆ ಪಾಠ ಮಾಡಿದ್ದಾರೆ. ಇವರು ಪಾಠ ಮಾಡಿದ ವಿಡಿಯೋ ತುಣುಕೊಂದು ಲಭ್ಯವಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಿಬ್ಬನ್ ಕತ್ತರಿಸಿ ಒಳ ನಡೆದ ಮಾಜಿ ಸ್ಪೀಕರ್ ಏನು ಮಾಡಿದ್ರು ಎಂಬ ಮಾಹಿತಿ ಇಲ್ಲಿದೆ ನೋಡಿ.
ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾಪಿಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಮೇಶ್ ಕುಮಾರ್ ಪಾಠ ಮಾಡಿದ್ದಾರೆ ಎಂಬ ಸಂಗತಿ ವಿಡಿಯೋ ತುಣುಕಿನ ಮೂಲಕ ವೈರಲ್ ಆಗ್ತಿದೆ. ನೀವು ಈ ದೃಷ್ಯವನ್ನು ನೋಡಬಹುದು.
ಶಾಲಾ ಆವರಣದಲ್ಲಿ ನೂತನ ಕೊಠಡಿ ಉದ್ಘಾಟಿಸಿ, ಪೂಜೆ ನೆರವೇರಿಸಿ ಮಕ್ಕಳಿಗೆ ಪಾಠ ಮಾಡಿದ ಮಾಜಿ ಸ್ಪೀಕರ್ ನಂತರ ಮಕ್ಕಳನ್ನು ಮಾತನಾಡಿಸಿದಿದ್ದಾರೆ. ಮಕ್ಕಳನ್ನು ಮಾತನಾಡಿಸುತ್ತಾ ಕಪ್ಪು ಹಲಿಗೆ ಮೇಲೆ ಕೆಲವು ಸಂಖ್ಯೆಗಳನ್ನು ಅವರು ಬರೆದಿರುವುದನ್ನು ನೀವು ಕಾಣ ಬಹುದು. ಅವರು ಹಾಗೆ ಮಾಡುತ್ತಿದ್ದಂತೆ ಪಕ್ಕದಲ್ಲಿದ್ದ ಮಕ್ಕಳ ಬಳಿ ಇದು ಎಷ್ಟು ಎಂಬ ಪ್ರಶ್ನೆಯನ್ನು ಮಾಡುತ್ತಾರೆ. ಅಲ್ಲೇ ಹತ್ತಿರ ನಿಂತಿದ್ದ ವಿದ್ಯಾರ್ಥಿಗಳು ಬೋರ್ಡ್ ಮೇಲೆ ಬರೆದಿರುವ ಸಂಖ್ಯೆಗಳನ್ನು ಗಮನಿಸಿ ಆ ಸಂಖ್ಯೆಗಳನ್ನು ಗುರುತಿಸುತ್ತಾರೆ.
ಇದನ್ನು ಅಲ್ಲೇ ಇರುವ ಯಾರೊ ಒಬ್ಬರು ಚಿಕ್ಕ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂಖ್ಯೆಗಳನ್ನ ಬರೆದು, ಇದು ಎಷ್ಟು ಹೇಳಿ ಎಂದು ವಿಧ್ಯಾರ್ಥಿಗಳಿಗೆ ಪ್ರಶ್ನೆಹಾಕಿದ ರಮೇಶ್ ಕುಮಾರ್ ಮಕ್ಕಳನ್ನು ಹತ್ತಿರ ಕರೆಯುತ್ತಾರೆ.
ಸಂಖ್ಯೆಗಳನ್ನ ಸರಿಯಾಗಿ ಹೇಳಿದ ಮಕ್ಕಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬೋರ್ಡ್ ಮೇಲೆ ಚಾಕ್ಪೀಸ್ ನಿಂದ ಸಂಖ್ಯೆಗಳನ್ನ ಬರೆದ ರಮೇಶ್ ಕುಮಾರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅದರ ಲಿಂಕ್ ಕೂಡಾ ನಾವಿಲ್ಲಿ ನೀಡಿದ್ದೇವೆ. ನೀವೂ ಇದನ್ನು ಗಮನಿಸಬಹುದು.
ವಿದ್ಯಾರ್ಥಿಯ ಕಷ್ಟಕ್ಕೆ ಸ್ಪಂದಿಸಿದ ಶಿಕ್ಷಣ ಸಚಿವರು; ರಾತ್ರೋ ರಾತ್ರಿ ಬಿ ಸಿ ನಾಗೇಶ್ ಸಹಾಯ ಹಸ್ತ
ಸಚಿವರೊಬ್ಬರ ಒಳ್ಳೆಯ ನಡೆ 17 ವರ್ಷದ ಬಾಲಕನ ಬದುಕಿನ ದಿಕ್ಕನ್ನೇ ಬದಲಿಸಿದ ಕಥೆ ಇದು. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಮಾಡಿದ ಒಂದು ಕರೆಯಿಂದ ಬಾಲಕನ ಬದುಕೇ ಬದಲಾಯಿತು. ಹಾಗಾದ್ರೆ ಆದದ್ದೇನು? ಒಬ್ಬ ವಿದ್ಯಾರ್ಥಿಯ ಬದಕನ್ನ ಬದಲಿಸುವ ಕೆಲವನ್ನು ಶಿಕ್ಷಣ ಸಚಿವರು ಏನು ಮಾಡಿದರು ಎಂಬ ಮಾಹಿತಿ ಇಲ್ಲಿದೆ ಗಮನಿಸಿ. ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಒಬ್ಬ ಕಾಮನ್ ಮ್ಯಾನ್ ಅವರಿಗೆ ಕರೆ ಮಾಡುತ್ತಾನೆ. ಆತ ತುಂಬಾ ಗೊಂದಲದಲ್ಲಿರುತ್ತಾನೆ. ಆಗ ಅವರು ಬೇಡಿಕೆ ಇಡುತ್ತಾರೆ. ಅದು ದ್ವಿತೀಯ ಪಿಯುಸಿ ಒಬ್ಬ ವಿಶೇಷ ಚೇತನನಿಗೆ ಸಂಬಂಧಪಟ್ಟ ಸಂಗತಿಯಾಗಿದೆ.
ಅದೇನೆಂದರೆ, ದೃಷ್ಟಿ ವಿಕಲಚೇತನ ವಿದ್ಯಾರ್ಥಿಯೊಬ್ಬನ ಲಿಪಿಕಾರ ಅಂದರೆ ಈ ವಿದ್ಯಾರ್ಥಿ ಹೇಳಿದ್ದನ್ನು ಬರೆಯುವ ವ್ಯಕ್ತಿಯೊಬ್ಬರ ಮನೆಯಲ್ಲಿ 22 ವರ್ಷದ ಮಹಿಳೆಯೊಬ್ಬರಿಗೆ ಗರ್ಪಪಾತವಾಗಿದೆ ಎಂಬ ವಿಷಯ ತಿಳಿದು ಬಂತು ಆಕಾರಣದಿಂದ ಲಿಪಿಕಾರ ಪರೀಕ್ಷೆ ಬರೆಯಲು ಬರುವುದಿಲ್ಲ ಎಂದು ತಿಳಿದುಬಂತು. ಇದರಿಂದಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಭಿನವ್ ಪರೀಕ್ಷೆ ಬರೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಯ್ತು ಆಗ ಖುದ್ದಾಗಿ ಇವರೇ ರಾತ್ರೋ ರಾತ್ರಿ ಇಲ್ಲೊಬ್ಬ ಲಿಪಿಕಾರನಿಗೆ ಪರೀಕ್ಷೆ ನಡೆಸಿ ಮರುದಿನ ಪರೀಕ್ಷೆ ಬರೆಯಲು ನೆರವಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ